Poetry Reading Challenge: ಕುವೆಂಪುರ ಕವನ ಓದಿದ ಅನಿಲ್​ ಕುಂಬ್ಳೆ: ಪುನೀತ್​, ಕಿಚ್ಚ ಸುದೀಪ್​, ವಿಜಯ್​ ಪ್ರಕಾಶ್​ಗೆ ಸವಾಲು ಹಾಕಿದ ಜಂಬೋ..!

Poetry Reading Challenge: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಟ್ಟಿಕೊಂಡಿರುವ ಈ ಚಾಲೆಂಜ್​ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವಿತೆ ಹಾಗೂ ಕವನಗಳ ಕಂಪನ್ನು ಹರಡುತ್ತಿದೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅವರು ಈ ಕವನ ಓದುವ ಸವಾಲನ್ನು ಅನಿಲ್​ ಕುಂಬ್ಳೆ ಅವರಿಗೆ ನೀಡಿದ್ದರು. ಅದನ್ನು ಸ್ವೀಕರಿಸಿರುವ ಅನಿಲ್​ ಕುಂಬ್ಳೆ, ಕುವೆಂಪು ಅವರ ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕವನವನ್ನು ಬಹಳ ಸುಂದರವಾಗಿ ಓದಿದ್ದಾರೆ.

Anitha E | news18-kannada
Updated:November 16, 2019, 9:04 AM IST
Poetry Reading Challenge: ಕುವೆಂಪುರ ಕವನ ಓದಿದ ಅನಿಲ್​ ಕುಂಬ್ಳೆ: ಪುನೀತ್​, ಕಿಚ್ಚ ಸುದೀಪ್​, ವಿಜಯ್​ ಪ್ರಕಾಶ್​ಗೆ ಸವಾಲು ಹಾಕಿದ ಜಂಬೋ..!
Poetry Reading Challenge: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಟ್ಟಿಕೊಂಡಿರುವ ಈ ಚಾಲೆಂಜ್​ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವಿತೆ ಹಾಗೂ ಕವನಗಳ ಕಂಪನ್ನು ಹರಡುತ್ತಿದೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅವರು ಈ ಕವನ ಓದುವ ಸವಾಲನ್ನು ಅನಿಲ್​ ಕುಂಬ್ಳೆ ಅವರಿಗೆ ನೀಡಿದ್ದರು. ಅದನ್ನು ಸ್ವೀಕರಿಸಿರುವ ಅನಿಲ್​ ಕುಂಬ್ಳೆ, ಕುವೆಂಪು ಅವರ ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕವನವನ್ನು ಬಹಳ ಸುಂದರವಾಗಿ ಓದಿದ್ದಾರೆ.
  • Share this:
ಸಾಮಾಜಿಕ ಜಾಲತಾಣದಲ್ಲಿ ಈಗ ಕನ್ನಡದ ಕವನ ವಾಚನ ಅಂದರೆ #PoetryReadingChallenge ನಡೆಯುತ್ತಿದೆ. ಇದು ಕೇವಲ ಸಾಮಾನ್ಯರು ಹಾಗೂ ಸಾಹಿತ್ಯಾಸಕ್ತರ ವಲಯದಲ್ಲಿ ಮಾತ್ರವಲ್ಲದೆ ಸ್ಯಾಂಡಲ್​ವುಡ್​ ಹಾಗೂ ಕ್ರೀಡಾ ವಲಯಕ್ಕೂ ಕಾಲಿಟ್ಟಿದೆ.

ಹೌದು, ಕನ್ನಡ ರಾಜ್ಯೋತ್ಸವದ ಅಂಗವಾಗಿ ಹುಟ್ಟಿಕೊಂಡಿರುವ ಈ ಚಾಲೆಂಜ್​ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವಿತೆ ಹಾಗೂ ಕವನಗಳ ಕಂಪನ್ನು ಹರಡುತ್ತಿದೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅವರು ಈ ಕವನ ಓದುವ ಸವಾಲನ್ನು ಅನಿಲ್​ ಕುಂಬ್ಳೆ ಅವರಿಗೆ ನೀಡಿದ್ದರು. ಅದನ್ನು ಸ್ವೀಕರಿಸಿರುವ ಅನಿಲ್​ ಕುಂಬ್ಳೆ, ಕುವೆಂಪು ಅವರ 'ಎಲ್ಲಾದರೂ ಇರು ಎಂಥಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು' ಕವನವನ್ನು ಬಹಳ ಸುಂದರವಾಗಿ ಓದಿದ್ದಾರೆ.ಜತೆಗೆ ಕನ್ನಡದ ಪವರ್​ ಸ್ಟಾರ್​ ಪುನೀತ್​, ಕಿಚ್ಚ ಸುದೀಪ್​ ಹಾಗೂ ಗಾಯಕ ವಿಜಯ್​ ಪ್ರಕಾಶ್​ ಅವರಿಗೆ ಈ ಸವಾಲನ್ನು ಕುಂಬ್ಳೆ ನೀಡಿದ್ದಾರೆ. ಅದರಲ್ಲೂ ಇದನ್ನು ಹಾಡಿನ ಮೂಲಕ ಮಾಡುವಂತೆ ವಿಜಯ್​ ಪ್ರಕಾಶ್​ ಅವರಿಗೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಪುನೀತ್​: 'ಮಾಯಾಬಜಾರ್​ 2016' ಟೀಸರ್​ ಔಟ್​..!

ಅನಿಲ್​ ಕುಂಬ್ಳೆ ಅವರ ಸವಾಲನ್ನು ಸ್ವೀಕರಿಸಿರುವ ಕಿಚ್ಚ, ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸುವುದಾಗಿ ರೀ ಟ್ವೀಟ್​ ಮಾಡಿದ್ದಾರೆ.ಇನ್ನೂ ಗೋಲ್ಡನ್​ ಸ್ಟಾರ್​ ಗಣೇಶ್​ ಅವರೂ ಸಹ ದ.ರಾ ಬೇಂದ್ರೆಯವರ 'ನೀ ಹಿಂಗ ನೋಡ ಬೇಡ ಎನ್ನ...' ಕವನವನ್ನು ಓದಿದ್ದಾರೆ. ಇದು ಅವರಿಗೆ ತುಂಬಾ ಇಷ್ಟವಾದ ಕವನವೆಂದು ಗಣೇಶ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.ನಂತರ ಈ ಕವನ ವಾಚನ ಸವಾಲನ್ನು ಮಂತ್ರಾಲಯದ ಸುಬುದೇಂದ್ರ ತೀರ್ಥ ಸ್ವಾಮೀಜಿ, ರಮೇಶ್​ ಅರವಿಂದ್​ ಹಾಗೂ ಅನಿಲ್​ ಕುಂಬ್ಳೆ ಅವರಿಗೆ ನೀಡಿದ್ದರು. ಇನ್ನು ಈ ಸವಾಲು ಮತ್ತಾವ ಸೆಲೆಬ್ರಿಟಿಗಳ ಕದ ತಟ್ಟಲಿದೆ ಹಾಗೂ ಯಾರು ಯಾವ ಯಾವ ಕವನ ವಾಚನ ಮಾಡಲಿದ್ದಾರೆ ಎಂದು ಕಾದು ನೋಡಬೇಕು.

Shruti Hassan: ಸಿನಿಮಾಗಳಿಗೆ ವಿದಾಯ ಹೇಳಲಿದ್ದಾರಂತೆ ಶ್ರುತಿ ಹಾಸನ್​..!

First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading