• Home
  • »
  • News
  • »
  • entertainment
  • »
  • Dhruva Sarja: ಅನಿಲ್​-ಉದಯ್​​ ಕಣ್ಮರೆಯಾಗಿ ಕಳೆದೇ ಹೋಯ್ತು 6 ವರ್ಷ! ಸಮಾಧಿಗೆ ಪೂಜೆ ಸಲ್ಲಿಸಿದ ಧ್ರುವ ಸರ್ಜಾ!

Dhruva Sarja: ಅನಿಲ್​-ಉದಯ್​​ ಕಣ್ಮರೆಯಾಗಿ ಕಳೆದೇ ಹೋಯ್ತು 6 ವರ್ಷ! ಸಮಾಧಿಗೆ ಪೂಜೆ ಸಲ್ಲಿಸಿದ ಧ್ರುವ ಸರ್ಜಾ!

ಅನಿಲ್, ಉದಯ್​

ಅನಿಲ್, ಉದಯ್​

ಅನಿಲ್ ಮತ್ತು ಉದಯ್ ಅವರ ದುರಂತ ಸಾವಿಗೆ ನವೆಂಬರ್​ 7ರಂದು 6 ವರ್ಷವಾದ ಹಿನ್ನೆಲೆಯಲ್ಲಿ ಸ್ನೇಹಿತರು ಕುಟುಂಬಸ್ಥರು ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಕೂಡ ಇಬ್ಬರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

2016ರ ನವೆಂಬರ್ 7ರಂದು ಭಾರತೀಯ ಚಿತ್ರರಂಗಕ್ಕೆ ಒಂದು ರೀತಿಯ ಸೂತಕದ ದಿನ. ಯಾಕೆಂದರೆ, ಅಂದು ದುನಿಯಾ ವಿಜಯ್ (Duniya Vijay) ನಟನೆಯ 'ಮಾಸ್ತಿಗುಡಿ' (Mastigudi) ಚಿತ್ರದ ಕ್ಲೈಮ್ಯಾಕ್ಸ್ ಫೈಟ್​ ಸೀನ್ (Climax Fight Scene)​ ಶೂಟಿಂಗ್​ ನಡೀತಿತ್ತು. ಈ ವೇಳೆ ಅಲ್ಲಿ ಘನಘೋರ ದುರಂತವೊಂದು ನಡೆದುಹೋಗಿತ್ತು. ಇಂಥ ಕಹಿಘಟನೆಯೊಂದು ನಡೆದು 6 ವರ್ಷಗಳಾಗಿವೆ.  ಅನಿಲ್​ ಹಾಗೂ ಉದಯ್​ (Anil Uday) ಇಬ್ಬರು ಕನ್ನಡ ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಚಿತ್ರತಂಡದ ಬೇಜವಾಬ್ದಾರಿಗೆ ಇಬ್ಬರೂ ಪ್ರಾಣಬಿಟ್ಟಿದ್ದರು. ಕಟ್ಟು ಮಸ್ತಾದ ದೇಹ, ಅಜಾನುಬಾಹು, 6 ಅಡಿ ಎತ್ತರ ಅಬ್ಬಬ್ಬಾ ಅನಿಲ್​, ಉದಯ್​ ಅವರನ್ನು ನೋಡುತ್ತಿದ್ದರೆ ಹೆದರಿಕೆಯಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ತಾವೂ ದೊಡ್ಡ ಖಳನಟರಾಗಬೇಕೆಂದು ಕನಸು ಕಂಡಿದ್ದರು.


ಮಾಸ್ತಿಗುಡಿ ದುರಂತಕ್ಕೆ 6 ವರ್ಷ!


'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಸಾಹಸ ದೃಶ್ಯಕ್ಕಾಗಿ ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹೆಲಿಕಾಪ್ಟರ್‌ನಿಂದ ಕೆರೆಗೆ ಹಾರುವ ದೃಶ್ಯದಲ್ಲಿ ಅನಿಲ್ ಮತ್ತು ಉದಯ್‌ ಪಾಲ್ಗೊಂಡಿದ್ದರು. ಆದರೆ, ಕೆರೆಗೆ ಹಾರಿದ ಅವರು ಮರಳಿ ಬರಲೇ ಇಲ್ಲ. ಇಂಥ ಕಹಿಘಟನೆಯೊಂದು ನಡೆದು ನವೆಂಬರ್​ 7ಕ್ಕೆ 6 ವರ್ಷಗಳಾಗಿವೆ.  ಸತತ ಒಂದು ದಿನಗಳ ಶೋಧ ಕಾರ್ಯದ ಬಳಿಕ ಇಬ್ಬರ ಶವ ಪತ್ತೆಯಾಗಿತ್ತು. ನಿರ್ದೇಶಕ ನಾಗಶೇಖರ್​ ಹಾಗೂ ಸಾಹಸ  ನಿರ್ದೇಶಕ ರವಿವರ್ಮ ಜೈಲಿಗೆ ಶಿಕ್ಷೆ ಕೂಡ ಅನುಭವಿಸಿದ್ದರು.


ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಧ್ರುವ ಸರ್ಜಾ!


ಅನಿಲ್ ಮತ್ತು ಉದಯ್ ಅವರ ದುರಂತ ಸಾವಿಗೆ ನವೆಂಬರ್​ 7ರಂದು 6 ವರ್ಷವಾದ ಹಿನ್ನೆಲೆಯಲ್ಲಿ ಸ್ನೇಹಿತರು ಕುಟುಂಬಸ್ಥರು ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ವಿಶೇಷ ಅಂದರೆ ಸ್ಯಾಂಡಲ್​ವುಡ್​ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಕೂಡ ಇಬ್ಬರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಮಿಸ್​ ಯೂ ಗೆಳೆಯ ಅಂತ ಬರೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅನಿಲ್​-ಉದಯ್-ಧ್ರುವ ಸರ್ಜಾ ಒಂದು ಕಾಲದಲ್ಲಿ ಒಟ್ಟಿಗೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದರು.


ಇದನ್ನೂ ಓದಿ: ಹೃದಯ ಸಮಸ್ಯೆ, ಕಿಡ್ನಿ ಫೇಲ್ಯೂರ್, ಕಣ್ಣಿನ ತೊಂದರೆ! ಬಾಲ್ಯದಿಂದಲೂ ರಾಣಾಗೆ ಅನಾರೋಗ್ಯ


ಸಿನಿಮಾಗಳ ಮೂಲಕ ಇಬ್ಬರೂ ಇನ್ನೂ ಜೀವಂತ!


'ಶ್ರೀಕಂಠ', 'ರಾಜಕುಮಾರ', 'ಭರ್ಜರಿ' ಸೇರಿದಂತೆ ಸಾಕಷ್ಟು ಚಿತ್ರಗಳು ಅವರ ನಿಧನದ ನಂತರ ಬಿಡುಗಡೆಯಾಗಿತ್ತು. ಇನ್ನು ಉದಯ್ ಅಭಿನಯದ 'ಕಾಣದಂತೆ ಮಾಯವಾದನು' ಮತ್ತು ಅನಿಲ್ ನಟನೆಯ 'ಮೂಕಹಕ್ಕಿ' ಚಿತ್ರಗಳು ಇನ್ನೂ ರಿಲೀಸ್ ಆಗಿತ್ತು. ಮುಂದೊಂದು ದಿನ ಕನ್ನಡ ಚಿತ್ರರಂಗದಲ್ಲಿ ಯಾರೂ ಊಹಿಸಲಾಗದ ಮಟ್ಟಕ್ಕೆ ಇಬ್ಬರು ಬೆಳೆಯುತ್ತಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.


ನಿರ್ಮಾಪಕ ಸುಂದರ್ ಪಿ.ಗೌಡ ತಮ್ಮ ಗೆಳೆಯರಾದ ಅನಿಲ್, ಉದಯ್ ಹೆಸರಿನಲ್ಲಿ 'ಅನಿಲ್ ಉದಯ್ ಚಾರಿಟಬಲ್ ಟ್ರಸ್ಟ್' ಪ್ರಾರಂಭ ಮಾಡಿದ್ದರು. ಈ ಟ್ರಸ್ಟ್ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸುಂದರ್ ನಿರ್ಧಾರ ಮಾಡಿದ್ದರು. ಇಂದಿಗೂ ಆ ಕಾರ್ಯಗಳು ನಡೆಯುತ್ತಿವೆ.


ಇದನ್ನೂ ಓದಿ: ಅಡಿ ಕಟೌಟ್​-ಅಜಾನುಬಾಹು ಅನಿಲ್​ ಹುಟ್ಟುಹಬ್ಬ! ನೀವ್​ ಇರಬೇಕಿತ್ತು ಗುರೂ, ಮಿಸ್​ ಯೂ ಎಂದ ಫ್ಯಾನ್ಸ್​


ಮಿಂಚುವ ಮುನ್ನವೇ ಮರೆಯಾದ ತಾರೆಗಳು!


ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ನಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗೆ ಹಾರಿದ ಈ ಇಬ್ಬರು ಸ್ನೇಹಿತರು ಶವವಾಗಿ ಪತ್ತೆಯಾದರು. ಇನ್ನು ಅನಿಲ್ ಮತ್ತು ಉದಯ್ ಇಂದು ಇದ್ದಿದ್ದರೆ ಕನ್ನಡದ ಟಾಪ್ ಖಳನಟರಾಗುತ್ತಿದ್ದರು. ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದರು. ಇಂದಿಗೂ ಅವರನ್ನು ನೆನೆದು ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಾರೆ.

Published by:ವಾಸುದೇವ್ ಎಂ
First published: