Urfi Javed: ತನ್ನ ಬಟ್ಟೆ ಬಗ್ಗೆ ಮಾತಾಡೋರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ಉರ್ಫಿ ಜಾವೇದ್!

ನೀವು  ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಲು ಬಯಸಿದರೆ, ನಿಮ್ಮ ಮನೆಯಲ್ಲಿರೋ ತಾಯಿ, ಅಕ್ಕ-ತಂಗಿ ಅಥವಾ ಗೆಳತಿಗೆ ಹೋಗಿ ಮಾಡಿ, ಇನ್ನು ಮುಂದೆ ನನ್ನ ಬಟ್ಟೆಗಳ ಬಗ್ಗೆ ಕಾಮೆಂಟ್ ಮಾಡಬೇಡಿ ಎಂದು ಉರ್ಫಿ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಹಿಂದಿ ಬಿಗ್ ಬಾಸ್ OTT (Big boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ತನ್ನ ವಿಚಿತ್ರ ಫ್ಯಾಷನ್ (fashion) ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಉರ್ಫಿ ತನ್ನ ಫ್ಯಾಷನ್​ನಿಂದ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಅದೇನೇ ಮಾಡಿದ್ರೂ ನೆಟ್ಟಿಗರು ಇವರನ್ನು ಬಿಡುವ ಲಕ್ಷಣಗಳೇ ಕಾಣ್ತಿಲ್ಲ. ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ (Troll) ಮಾಡುತ್ತಾರೆ. ಉರ್ಫಿ ಈಗ ಫ್ಯಾಷನ್ ಐಕಾನ್ ಎಂದು ಕರೆಸಿಕೊಳ್ತಿದ್ದಾರೆ. ಪ್ರತಿ ಬಾರಿಯೂ ಉರ್ಫಿ ಹೊಸ ಹೊಸ ಲುಕ್​ನಲ್ಲಿ ಮಿಂಚುತ್ತಿದ್ದಾರೆ. ತನ್ನ ಉಡುಗೆ ಬಗ್ಗೆ ಮಾಧ್ಯಮಗಳ ಕಾಮೆಂಟ್ ಕೇಳಿ, ಉರ್ಫಿ ಫುಲ್ ಗರಂ ಆಗಿದ್ದಾರೆ. 

ಉರ್ಫಿ ಫುಲ್​ ಗರಂ

ಪ್ರತಿ ಬಾರಿ ಮಾಧ್ಯಮಗಳು ಕೇಳೋ ಪ್ರಶ್ನೆಗೆ ನಗುತ್ತಲೇ ಉತ್ತರ ಕೊಡ್ತಿದ್ದ ಉರ್ಫಿ ಈ ಬಾರಿ ಫುಲ್​ ಗರಂ ಆಗಿದ್ರು. ತನ್ನ ಡ್ರೆಸ್​ ಬಗ್ಗೆ ಮಾತಾಡೋರಿಗೆ ತಿರುಗೇಟು ನೀಡಿದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಉರ್ಫಿ ರೆಡ್ ಕಾರ್ಪೆಟ್‌ನಲ್ಲಿ ನಿಂತು ಮಾಧ್ಯಮವನ್ನೇ  ಪ್ರಶ್ನಿಸಿದರು. ನಾನು ನಿಮ್ಮನ್ನು ಗೌರವಿಸುವುದಿಲ್ಲವೇ, ನಾನು ನಿಮಗೆ ಸಾಕಷ್ಟು ಗೌರವವನ್ನು ನೀಡಿದ್ದೇನೆ ಆದ್ರೆ ನೀವು ಎಂದು ಉರ್ಫಿ ಪ್ರಶ್ನೆ ಮಾಡಿದ್ದಾರೆ.










View this post on Instagram






A post shared by Uorfi (@urf7i)






ನಿಮ್ಮ ತಾಯಿ ತಂಗಿ ಬಟ್ಟೆ ಬಗ್ಗೆ ಕಾಮೆಂಟ್​ ಮಾಡಿ

ನೀವು  ಬಟ್ಟೆಯ ಬಗ್ಗೆ ಕಾಮೆಂಟ್ ಮಾಡಲು ಬಯಸಿದರೆ, ನಿಮ್ಮ ಮನೆಯಲ್ಲಿರೋ ತಾಯಿ, ಅಕ್ಕ-ತಂಗಿ ಅಥವಾ ಗೆಳತಿಗೆ ಹೋಗಿ ಮಾಡಿ, ಇನ್ನು ಮುಂದೆ ನನ್ನ ಬಟ್ಟೆಗಳ ಬಗ್ಗೆ ಕಾಮೆಂಟ್ ಮಾಡಬೇಡಿ. ನಾನು ನಿಮಗೆ ತುಂಬಾ ಗೌರವವನ್ನು ನೀಡುತ್ತೇನೆ. ದಯವಿಟ್ಟು! ಮೇ ಯಾಹಿ ಬೋಲ್ನೆ ಆಯಿ ಥಿ. ಎಂದು ಉರ್ಫಿ ಗರಂ ಆಗಿ ನುಡಿದಿದ್ದಾರೆ.










View this post on Instagram






A post shared by ETimes TV (@etimes_tv)






ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದ್ರೆ ಹುಷಾರ್​

ನನ್ನ ಬಟ್ಟೆಯ ಬಗ್ಗೆ ಮಾತನಾಡಬೇಡಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮತ್ತೆ ಹೀಗೆ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್​ ಕೊಟ್ಟು ಕಾರ್ಯಕ್ರಮಕ್ಕೆ ತೆರಳಿದ್ರು ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಿಂದೆ ಕಾಮೆಂಟ್​ಗಳೇ ಸ್ಫೂರ್ತಿ ಎಂದಿದ್ದ ಉರ್ಫಿ

ವೀಡಿಯೊವನ್ನು ಹಂಚಿಕೊಂಡ ಉರ್ಫಿ ಈ ರೀತಿ ಬರೆದುಕೊಂಡಿದ್ದಾರೆ. 'ನಿಮ್ಮ ಕಾಮೆಂಟ್​​ಗಳೇ ನಾನು ಈ ರೀತಿ ಡ್ರೆಸ್ ಮಾಡಲು ಸ್ಫೂರ್ತಿ ಎಂದಿದ್ದಾರೆ.. ಸದ್ಯ ಈಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರ ಗಮನ ಸೆಳೆಯುತ್ತಿದೆ. ಉರ್ಫಿ ಅವರ ಹೊಸ ವೀಡಿಯೋಗೂ ಹಲವು ಕಾಮೆಂಟ್‌ಗಳು ಬಂದಿದೆ.  ಕೆಲವರು ಜೀನಿಯಸ್ ಅಂದಿದ್ದಾರೆ. ಆದ್ರೆ ಕೆಲವರು ಬಂಡೆಗಲ್ಲು, ಕಲ್ಲುಗಳಿಂದ ಹೊಡೆಯಬೇಕು ಎಂದು ಹೇಳುತ್ತಾರೆ. ಅಸಾಧಾರಣ ಎಂದು ಅನೇಕ ಒಳ್ಳೆಯ ಮತ್ತು ಕೆಟ್ಟ ಕಾಮೆಂಟ್‌ಗಳು ವೀಡಿಯೊದಲ್ಲಿ ಬರುತ್ತಿವೆ.

ಉರ್ಫಿ ಕೂಡ ಪ್ರಸಿದ್ಧ ಟಿವಿ ನಟಿ

ಉರ್ಫಿ ಕೂಡ ಪ್ರಸಿದ್ಧ ಟಿವಿ ಕಾರ್ಯಕ್ರಮದ ನಟಿ. ಆಕೆಯ ಡ್ರೆಸ್ಸಿಂಗ್ ಸೆನ್ಸ್‌ ನ ಬಗ್ಗೆ  ಹೆಚ್ಚು ಚರ್ಚೆ ಆಗುತ್ತಿದೆ. ಉರ್ಫಿ ಕೂಡ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.
Published by:Pavana HS
First published: