• Home
  • »
  • News
  • »
  • entertainment
  • »
  • Kantara: ದೈವ ವೇಷಧಾರಿಯಾದ ತಹಸೀಲ್ದಾರ್! ಸೆಲ್ಫೀ ತಗೊಂಡ ಡಿಸಿ

Kantara: ದೈವ ವೇಷಧಾರಿಯಾದ ತಹಸೀಲ್ದಾರ್! ಸೆಲ್ಫೀ ತಗೊಂಡ ಡಿಸಿ

ಕಾಂತಾರ ಗೆಟಪ್​ನಲ್ಲಿ ತಹಸೀಲ್ದಾರ್

ಕಾಂತಾರ ಗೆಟಪ್​ನಲ್ಲಿ ತಹಸೀಲ್ದಾರ್

ಆಂಧ್ರಪ್ರದೇಶದ ತಹಸೀಲ್ದಾರ್ ಒಬ್ಬರು ಕಾಂತಾರ ವೇಷ ಧರಿಸಿಕೊಂಡು ಬಂದಿದ್ದಾರೆ. ಇದನ್ನು ನೋಡಿ ಮೆಚ್ಚಿದ ಜಿಲ್ಲಾಧಿಕಾರಿ ತಹಸೀಲ್ದಾರ್ ಜೊತೆ ಸೆಲ್ಫೀ ತೆಗೆದುಕೊಂಡಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಕಾಂತಾರದ (Kantara) ಕ್ರೇಜ್ ಎಲ್ಲೆಡೆ ಸುದ್ದಿಯಾಗಿದೆ. ವಿದೇಶದಲ್ಲಿಯೂ ಕಾಂತಾರ ಹವಾ ಜೋರಾಗಿದೆ. ವಿಶೇಷವಾಗಿ ಕಾಂತಾರ ಕನ್ನಡ ಹಾಗೂ ತೆಲುಗಿನಲ್ಲಿ ದೊಡ್ಡ ಕಮಾಲ್ ಮಾಡಿದೆ. ಕನ್ನಡದಲ್ಲಿ ಇರುವಂತೆ ತೆಲುಗಿನಲ್ಲಿಯೂ (Telugu) ದೊಡ್ಡ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿಯೂ ಸಕ್ಸಸ್​ಫುಲ್ ಆಗಿ ಕಲೆಕ್ಷನ್ ಮಾಡಿರುವ ಸಿನಿಮಾ ತೆಲುಗು ಮಂದಿಯನ್ನು ಮೋಡಿ ಮಾಡಿದೆ. ಇದೀಗ ಆಂಧ್ರಪ್ರದೇಶದ ತಹಸೀಲ್ದಾರ್ ಒಬ್ಬರು ಕಾಂತಾರ ವೇಷ (Costume) ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ (Viral) ಆಗಿದೆ.


ಸ್ಯಾಂಡಲ್​ವುಡ್ ನಿರ್ದೇಶಕ, ನಟ, ನಿರ್ಮಾಪಕ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಮೋಡಿ ಎಲ್ಲರಿಗೂ ಗೊತ್ತಿದೆ. ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ತೆಲುಗು ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಗಳಿಗೆ ಡಬ್ ಆಗಿತ್ತು.
ಈಗ ಬೇರೆ ಭಾಷೆಗಳಲ್ಲಿಯೂ ಜನರು ಈ ಸಿನಿಮಾದಿಂದ ಪ್ರಭಾವಿತರಾಗುತ್ತಿದ್ದಾರೆ. ಆಂಧ್ರಪ್ರದೇಶದ ತಹಸೀಲ್ದಾರ್ ಒಬ್ಬರು ‘ಕಾಂತಾರ’ ಸಿನಿಮಾದ ರೀತಿಯ ಗೆಟಪ್ ಹಾಕಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.


ಅವರು ಆಂಧ್ರಪ್ರದೇಶದ ತಹಸೀಲ್ದಾರ್


ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ಆಂಧ್ರಪ್ರದೇಶ ಕಂದಾಯ ಇಲಾಖೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಶೇಷ ದೃಶ್ಯ ಕಂಡು ಬಂದಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಕೋಟವಾಲಸ್‌ನ ತಹಸೀಲ್ದಾರ್ ಪ್ರಸಾದ್ ರಾವ್ ಅವರು ‘ಕಾಂತಾರ’ ಚಿತ್ರದಲ್ಲಿ ನಾಯಕನ ಗೆಟಪ್‌ನಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ  ಬಿಂದುವಾದರು.


ಪ್ರಸಾದ್ ರಾವ್ ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹಾಗಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಕಾಂತಾರ’ ಸಿನಿಮಾ ಹೀರೋನಂತೆ ಕಂಗೊಳಿಸಿದ್ದರು. ನೆರೆದಿದ್ದ ಜನರು ಪ್ರಸಾದ್ ರಾವ್ ಅವರ ಈ ಗೆಟಪ್ ನೋಡಿ ಬೆರಗಾದರು.


ಇದನ್ನೂ ಓದಿ: Kantara Movie: ಸಿಂಗಾರ ಸಿರಿ ಹಾಡನ್ನು ಪೂರ್ತಿ ಹಾಡ್ತಾನೆ ರಿಷಬ್ ಶೆಟ್ಟಿ ಮಗ!


ಸ್ವತಃ ಗುಂಟೂರು ಜಿಲ್ಲಾಧಿಕಾರಿ ಪ್ರಸಾದ್ ರಾವ್ ಅವರನ್ನು ನೋಡಿ ಅಚ್ಚರಿಪಟ್ಟರು. ಪ್ರಸಾದ್ ಅವರ ಕಲಾಪ್ರೇಮವನ್ನು ಮೆಚ್ಚಿದ ಜಿಲ್ಲಾಧಿಕಾರಿ ಅವರೊಂದಿಗೆ ಸೆಲ್ಫಿ ಕೂಡಾ ಕ್ಲಿಕ್ಕಿಸಿಕೊಂಡರು.


ಕಾಂತಾರ ಕಲೆಕ್ಷನ್


ಕನ್ನಡದ ‘ಕಾಂತಾರ’ ತೆಲುಗಿಗೆ ಡಬ್ ಆಗಿ 30 ದಿನಗಳಾಗಿವೆ. ಇಲ್ಲಿಯವರೆಗೆ ಕಾಂತಾರ ತೆಲುಗು ಆವೃತ್ತಿ ಸುಮಾರು 50 ಕೋಟಿ ರೂ ಗಳಿಸಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ತಮ್ಮ ಗೀತಾ ಆರ್ಟ್ಸ್ ಮೂಲಕ ಕಾಂತಾರವನ್ನು ತೆಲುಗು ರಾಜ್ಯಗಳಲ್ಲಿ ವಿತರಿಸಿದ್ದಾರೆ. ಸಿನಿಮಾ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದೆ.


Kantara Film Successful Collection was Continued in third weekend
ಬಾಲಿವುಡ್​ನಲ್ಲಿ 3 ವಾರಗಳ ಹಿಂದೆ ಕಾಂತಾರ ರಿಲೀಸ್


ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡಂ ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್ ರೈ, ಮಾನಸಿ ಸುಧೀರ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಈ ಸಿನಿಮಾ ಇದುವರೆಗೆ ವಿಶ್ವದಾದ್ಯಂತ 365 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.


ದೈವ, ಅರಣ್ಯ ಅತಿಕ್ರಮಣ, ಕಾನೂನು, ಕಾಡು ಜನರ ನಡುವಿನ ಸಂಘರ್ಷ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜಾನಪದ ಶೈಲಿಯ ದೈವದ ಆರಾಧನೆಯನ್ನು ಅದ್ಭುತವಾಗಿ ತೋರಿಸಲಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಸಕ್ಸಸ್​ಫುಲ್ ಆಗಿ ರನ್ ಆಗುತ್ತಿದ್ದು ಸಿನಿ ಗಣ್ಯರಿಂದ ಮೆಚ್ಚುಗೆ ಗಳಿಸಿಕೊಂಡಿದೆ.

Published by:Divya D
First published: