ಮಳೆಗಾಲಕ್ಕೆ ಬರ್ತಿದೆ ರಿಫ್ರೆಶಿಂಗ್ ಲವ್ ಸಿನಿಮಾ ಅಂದವಾದ; ರಿಲೀಸ್​ ಆಯ್ತು ಆಶಿಕಾ ಸಹೋದರಿಯ ರೊಮ್ಯಾಂಟಿಕ್ ಹಾಡು

ಈಗಾಗಲೇ ಎರಡು ಬ್ಯೂಟಿಫುಲ್ ಲಿರಿಕಲ್ ವಿಡಿಯೋಗಳನ್ನು ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಅಂದವಾದ ಟೈಟಲ್ ಹಾಡಿನ ವಿಡಿಯೋ ವರ್ಶನ್ ರಿಲೀಸ್ ಮಾಡಿದೆ.

Latha CG | news18
Updated:June 25, 2019, 3:41 PM IST
ಮಳೆಗಾಲಕ್ಕೆ ಬರ್ತಿದೆ ರಿಫ್ರೆಶಿಂಗ್ ಲವ್ ಸಿನಿಮಾ ಅಂದವಾದ; ರಿಲೀಸ್​ ಆಯ್ತು ಆಶಿಕಾ ಸಹೋದರಿಯ ರೊಮ್ಯಾಂಟಿಕ್ ಹಾಡು
ಅನುಷಾ ರಂಗನಾಥ್​-ಜೈ
  • News18
  • Last Updated: June 25, 2019, 3:41 PM IST
  • Share this:
ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೆ ಹೊಸಬರ ಪ್ರಯತ್ನಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹೊಸಬರು ಪರಿಶುದ್ಧ ಪ್ರೀತಿ, ಪ್ರೇಮದ ಕಥೆಗಳನ್ನು ಮಾಡಿ ಗೆಲ್ಲುವ ದಾರಿಯನ್ನು ಹುಡುಕುತ್ತಿದ್ದಾರೆ. ಕನ್ನಡದಲ್ಲಿ ಯಾವಾಗಲೂ ಹೊಸಬರು ಗೆದ್ದಿರುವ ಲವ್​ ಥೀಮ್​​ ಫಾಲೋ ಮಾಡಿಕೊಂಡು ಇಲ್ಲೊಬ್ಬ ಹೊಸ ನಾಯಕ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ.

ಜೈ.. ಜೈ ಅಂತ ಹೆಸರಿಟ್ಟುಕೊಂಡಿರೋ ಈ ಹುಡುಗ ಚೊಚ್ಚಲ ಚಿತ್ರದಲ್ಲೇ “ಅಂದವಾದ” ಅಂತ ರೊಮ್ಯಾಂಟಿಕ್ ಆಗಿ ಫೀಲ್ಡಿಗೆ ಇಳಿದಿದ್ದಾರೆ.  ಇವರಿಗೆ ಕನ್ನಡ ಚಿತ್ರರಂಗ ಖ್ಯಾತ ನಟಿ ಅಶಿಕಾ ರಂಗನಾಥ್ ಅವರ ಸಹೋದರಿ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಅನುಷಾ ಈ ಹಿಂದೆ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ' ಚಿತ್ರದಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: AYRA: ರಾಕಿಂಗ್ ದಂಪತಿಯ ಮುದ್ದಿನ ಮಗಳ ಹೆಸರಿನ ಅರ್ಥವೇನು ಗೊತ್ತೆ?

ಟ್ಯಾಲೆಂಟೆಡ್ ಡೈರೆಕ್ಟರ್ ಚಲ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಅಂದವಾದ' ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ ಸಂಯೋಜಿಸಿದ್ದು, ಹರೀಶ್ ಎನ್ ಸೊಂಡೆಕೊಪ್ಪ ಛಾಯಾಗ್ರಹಣವಿದೆ. ಈಗಾಗಲೇ ಎರಡು ಬ್ಯೂಟಿಫುಲ್ ಲಿರಿಕಲ್ ವಿಡಿಯೋಗಳನ್ನು ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಅಂದವಾದ ಟೈಟಲ್ ಹಾಡಿನ ವಿಡಿಯೋ ವರ್ಶನ್ ರಿಲೀಸ್ ಮಾಡಿದೆ.

ವಿಜಯ್ ಪ್ರಕಾಶ್ ಧನಿಯಾಗಿರೋ ಈ ಹಾಡು ಕೇಳೋದಕ್ಕೆ ಸಖತ್ ಮೆಲೋಡಿಯಾಗಿದೆ.  ಅನುಷಾ ಮತ್ತು ಜೈ ಕೆಮಿಸ್ಟ್ರಿ ಹಾಡಿನ ಹೈಲೈಟ್ ಗಳಲ್ಲೊಂದಾಗಿದೆ. ಕರ್ನಾಟಕದ ರಮಣೀಯ ತಾಣಗಳಲ್ಲಿ ಚಿತ್ರಿಸಿರುವ ಈ ಹಾಡು ಅಂದವಾದ ಸಿನಿಮಾದ ಗುಣಮಟ್ಟವನ್ನು ತೋರಿಸುತ್ತಿದೆ. ಜೊತೆಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದೆ.
First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ