Coffee Nadu Chandu: ಕಾಫಿ ನಾಡು ಚಂದು ಕೈಗೆ ಟೈಟಾನ್ ವಾಚ್ ಕಟ್ಟಿದ ಆ್ಯಂಕರ್ ಅನುಶ್ರೀ

ಆ್ಯಂಕರ್ ಅನುಶ್ರೀ ಕಾಫಿ ನಾಡು ಚಂದು ಕೈಗೆ ಟೈಟಾನ್ ವಾಚ್ ಕಟ್ಟಿದ್ದಾರೆ. ಈ ವಿಡಿಯೋವನ್ನು ಚಂದು ತಮ್ಮ ಇನ್​​ಸ್ಟಾಗ್ರಾಮ್​ ವಾಲ್​ನಲ್ಲಿ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಫಿ ನಾಡು ಚಂದು (Coffee Nadu Chandu) ಈಗ ಎಲ್ಲಾ ಕಡೆಗಳಲ್ಲಿಯೂ ಫೇಮಸ್ ಆಗಿರುವ ಸೋಷಿಯಲ್ ಮೀಡಿಯಾ ಸ್ಟಾರ್. ಇನ್​ಸ್ಟಾಗ್ರಾಮ್ ಸ್ಟಾರ್  (Instagram Star) ಶಿವಣ್ಣ, ಪುನೀತಣ್ಣನ ಅಭಿಮಾನಿ ಎನ್ನುತ್ತಲೇ ಕರ್ನಾಟಕ (Karnataka) ಮಾತ್ರವಲ್ಲದೆ ಹೊರ ಪ್ರದೇಶಗಳಲ್ಲಿಯೂ ಫೇಮಸ್ (Famous) ಆಗಿದ್ದಾರೆ. ತಮ್ಮ ಯುನಿಕ್ ಇನ್​ಸ್ಟಾಗ್ರಾಮ್ (Instagram) ವಿಡಿಯೋಗಳ (Video) ಮೂಲಕ ವೈರಲ್ (Viral) ಆಗುತ್ತಿರುವ ಕಾಫಿ ನಾಡು ಚಂದು ತಮ್ಮ ಆಸೆಯಂತೆ ಶಿವ ರಾಜ್​ಕುಮಾರ್ (Shiva Rajkumar) ಅವರನ್ನು ಭೇಟಿ ಕೂಡಾ ಮಾಡಿದ್ದಾರೆ. ತಮ್ಮ ಡಿಫರೆಂಟ್ ಇನ್​ಸ್ಟಾಗ್ರಾಮ್ ರೀಲ್ಸ್ (Reels) ಮೂಲಕ ಜನರನ್ನು ರಂಜಿಸುತ್ತಿರುವ ಕಾಫಿ ನಾಡು ಚಂದು ಈಗ ಸಖತ್ ಫೇಮಸ್. ಅವರ ವಿಡಿಯೋಗಳಿಗಾಗಿ ಜನರು ಕಾಯುತ್ತಿರುತ್ತಾರೆ. ಅವರ ವಿಡಿಯೋಗಳನ್ನು ಫಾಲೋ ಮಾಡಿ ಶೇರ್ ಮಾಡಿ ಲೈಕ್ಸ್ ಮಾಡುತ್ತಿದ್ದಾರೆ.

ಕಾಫಿ ನಾಡು ಚಂದು ಕೈಗೆ ಬಂತು ಟೈಟಾನ್ ವಾಚ್

ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಿತ್ರಿಸಲಾಗಿರುವಂತೆ ಕಾಣುವ ವಿಡಿಯೋವನ್ನು ಚಂದು ಶೇರ್ ಮಾಡಿದ್ದಾರೆ. ಇದರಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟುವುದನ್ನು ಕಾಣಬಹುದು.

ವಾಚ್ ಕಟ್ಟಿದ ಅನುಶ್ರೀ

ಆ್ಯಂಕರ್ ಅನುಶ್ರೀ ಅವರು ಕಾಫಿ ನಾಡು ಚಂದು ಅವರ ಕೈಗೆ ಟೈಟಾನ್ ವಾಚ್ ಕಟ್ಟಿದ್ದು, ಈ ವಿಡಿಯೋವನ್ನು ಚಂದು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಚೆನ್ನಾಗಿ ಹಾಡಿ, ಇನ್ನೂ ನಾಲ್ಕೈದು ಜನಕ್ಕೆ ನೀವು ಸಹಾಯ ಮಾಡಬೇಕು ಎಂದು ಅನುಶ್ರೀ ಹೇಳಿದ್ದಾರೆ. ವಿಡಿಯೋ ಮಾಡುತ್ತಿದ್ದ ಯುವತಿ ಆ್ಯಂಕರ್ ಅನುಶ್ರೀ ಅವರಲ್ಲಿ ವಾಚ್ ಕಟ್ಟುವಂತೆ ಹೇಳಿದ್​ದು ಅನುಶ್ರೀ ಚಂದು ಕೈಗೆ ವಾಚ್ ಕಟ್ಟಿದ್ದಾರೆ. ಆಲ್​ ದಿ ಬೆಸ್ಟ್ ಚೆನ್ನಾಗಿ ಹಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ.






ಹಳೆ ವಾಚ್ ಬಿಚ್ಚಿದ ಚಂದು

ಅನುಶ್ರೀ ಅವರು ಹೊಸ ವಾಚ್ ಹೊರತೆಗೆಯುತ್ತಿದ್ದಂತೆ ಚಂದು ತಮ್ಮ ಕೈಯಲ್ಲಿರುವ ಹಳೆ ವಾಚ್ ಕಳಚುವುದನ್ನು ಕಾಣಬಹುದು. ನಂತರ ಹೊಸ ವಾಚ್ ಧರಿಸಿ ಚಂದು ಶೈನ್ ಮಾಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವಿಡಿಯೋ ನೋಡಿದ ಜನರು ಬೆಂಕಿ ಗುರು ನೀನು, ಅಬ್ಬಬ್ಬಾ ಲಾಟರಿ ಎಂದು ವಿಧ ವಿಧವಾಗಿ ಕಮೆಂಟ್ ಮಾಡಿದ್ದಾರೆ. ಈ ಪೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು ಜನರು ಈಗಲೂ ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Coffee Nadu Chandu: ಕಾಫಿನಾಡಿನಲ್ಲೇ ಚಂದುಗೆ ಜನರಿಂದ ಧಮ್ಕಿ! ಅಪಾಯಿಂಟ್ಮೆಂಟ್​ ಫಿಕ್ಸ್ ಮಾಡಿ ಅಣ್ಣನ್ನ ಭೇಟಿ ಮಾಡ್ಬೇಕಂತೆ

ಶಿವಣ್ಣನ ಭೇಟಿಯಾದ ಕಾಫಿ ನಾಡಿನ ಚಂದು!

ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್​ ಮಾಡಲೇ ಬೇಕು ಎಂದು ಕಾಫಿ ನಾಡಿನ ಚಂದು ಹಾಡಿದ್ದರು. ಆ್ಯಂಕರ್​ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್​ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್​ಕುಮಾರ್​​​ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ‘ಜೀ ಕನ್ನಡ’ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​ ಶೋಗೆ ಚಂದು ಅವರನ್ನು ಕರೆಸಲಾಗಿದೆ.

Coffee Nadu Chandu: ಅಪ್ಪು ಕುರಿತು ಸೆಲ್ಫೀ ವಿಡಿಯೋ, ಗಳಗಳನೆ ಅತ್ತ ಕಾಫಿ ನಾಡು ಚಂದು

ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!

ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ರಂಜಿಸಿದ್ದಾರೆ. ಈ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಕೆಲ ವಿಡಿಯೋ ತುಣುಕುಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ತನ್ನದೇ ಶೈಲಿಯಲ್ಲಿ ಶಿವಣ್ಣನ ಎದುರು ಹಾಡು ಹೇಳಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಆಗಸ್ಟ್​ 18ರಂದು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೂಟಿಂಗ್​ ಆಗಿದೆ. ಈ ವೇದಿಕೆಯಲ್ಲಿ ಶಿವರಾಜ್​ಕುಮಾರ್​ ಮುಂದೆ ಹಾಡು ಹೇಳಲು ಚಂದುಗೆ ಅವಕಾಶ ಸಿಕ್ಕಿದೆ.
Published by:Divya D
First published: