ಸಿನಿಮಾದಿಂದ ಸ್ಫೂರ್ತಿ ಪಡೆದು ಕನ್ನಡ ಶಾಲೆಯನ್ನೇ ದತ್ತು ಪಡೆದ 'ನಾನ್ ಕನ್ನಡಿಗ' ಅಕುಲ್ ಬಾಲಾಜಿ

ಇಲ್ಲಿ 66 ವಿದ್ಯಾರ್ಥಿಗಳು ಓದುತ್ತಿದ್ದು, ಕೇವಲ 2 ಟೀಚರ್​ಗಳಿದ್ದಾರೆ. ಮಕ್ಕಳಿಗೆ ಟಾಯ್ಲೆಟ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರೆತೆಯಿದೆ.

zahir
Updated:March 18, 2019, 7:56 PM IST
ಸಿನಿಮಾದಿಂದ ಸ್ಫೂರ್ತಿ ಪಡೆದು ಕನ್ನಡ ಶಾಲೆಯನ್ನೇ ದತ್ತು ಪಡೆದ 'ನಾನ್ ಕನ್ನಡಿಗ' ಅಕುಲ್ ಬಾಲಾಜಿ
@AkulBajali Insta
zahir
Updated: March 18, 2019, 7:56 PM IST
ರಿಷಭ್ ಶೆಟ್ಟಿ ನಿರ್ದೇಶಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾ ಅನೇಕರನ್ನು ಕನ್ನಡ ಶಾಲೆಯತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಪಟ್ಟಿಗೆ ಹೊಸ ಸೇರ್ಪಡೆ ನಟ ನಿರೂಪಕ ಅಕುಲ್ ಬಾಲಾಜಿ. ತಮ್ಮ ಮಾತಿನ ಮೋಡಿ ಮೂಲಕ ಪ್ರೇಕ್ಷಕರನ್ನು ರಂಜಿಸುವ ಅಕುಲ್ ಈಗ ಕನ್ನಡ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.

ಒಂದೆಡೆ ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ವಹಿಸುತ್ತಿರುವ ನಿರ್ಲಕ್ಷ್ಯ. ಮತ್ತೊಂದೆಡೆ ಇಂತಹ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಕುಲ್ ಬಾಲಾಜಿ ತಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರೊಂದಿಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಗಟ್ಟಿ ಉತ್ತಮ ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ನಗರದ ಹೊರವಲಯದಲ್ಲಿರುವ ಲಗುಮೇನಹಳ್ಳಿಯಲ್ಲಿರುವ ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. ಈ ಶಾಲೆ ಹತ್ತಿರದಲ್ಲೇ ಇರುವುದರಿಂದ ಈ ಸರ್ಕಾರಿ ಸ್ಕೂಲ್​ ಅನ್ನು ಅಭಿವೃದ್ಧಿ ಪಡಿಸಲು ಯೋಜನೆ ಹಾಕಿಕೊಂಡಿದ್ದಾರೆ.

ಶಾಲೆಗೆ ಭೇಟಿ ನೀಡಿದ ಅಕುಲ್ ಬಾಲಾಜಿ


'ಇಂತಹದೊಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಲು ರಿಷಭ್ ಶೆಟ್ಟಿ ಅವರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾವೇ ಸ್ಫೂರ್ತಿ. ಲಗುಮೇನಹಳ್ಳಿ ನನಗೆ ಹತ್ತಿರವಿರುವುದರಿಂದ ಆಗಾಗ ಶಾಲೆಯತ್ತ ಹೋಗಲು ಸಹಕಾರಿಯಾಗುತ್ತದೆ. ಇದರಿಂದ ಶಾಲೆಯ ಅಭಿವೃದ್ಧಿಯತ್ತ ಗಮನ ನೀಡಲು ಸುಲಭವಾಗಲಿದೆ. ಈ ಕಾರಣದಿಂದ ಲಗುಮೇನಹಳ್ಳಿ ಶಾಲೆಯನ್ನು ಆರಿಸಿಕೊಂಡಿರುವುದಾಗಿ' ಅಕುಲ್ ತಿಳಿಸಿದ್ದಾರೆ.


ಇಲ್ಲಿ 66 ವಿದ್ಯಾರ್ಥಿಗಳು ಓದುತ್ತಿದ್ದು, ಕೇವಲ 2 ಟೀಚರ್​ಗಳಿದ್ದಾರೆ. ಮಕ್ಕಳಿಗೆ ಟಾಯ್ಲೆಟ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರೆತೆಯಿದ್ದು, ಅದೆಲ್ಲವನ್ನು ಒದಗಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅಕುಲ್ ಬಾಲಾಜಿ ತಿಳಿಸಿದ್ದಾರೆ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಕುಲ್ ಅವರ ಕನ್ನಡ ಪ್ರೇಮವನ್ನು ಪ್ರಶ್ನಿಸಿ ಹಲವರು ಟ್ರೋಲ್ ಮಾಡಿದ್ದರು. ಅಲ್ಲದೆ ಬಿಗ್​ಬಾಸ್​ ಸಂದರ್ಭದಲ್ಲಿ ಅವರನ್ನು ಹೊರಗಿನವರು ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸಲಾಗಿತ್ತು. ಆದರೆ ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಅಕುಲ್ ಈಗ ಮತ್ತೊಮ್ಮೆ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

ಈ ಹಿಂದೆ ನಟ ಪುನೀತ್ ರಾಜ್ ಕುಮಾರ್,  ನಟಿ ಪ್ರಣೀತಾ ಸುಬಾಷ್ ಸೇರಿದಂತೆ ಹಲವರು ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದು ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದರು.
First published:March 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ