ಅಬ್ರಾಂ ಖಾನ್​ಗಿರುವ ಮುದ್ದಾದ ಅಡ್ಡ ಹೆಸರನ್ನು ರಿವೀಲ್​ ಮಾಡಿದ ಅನನ್ಯಾ ಪಾಂಡೆ..!

ಅನನ್ಯಾ ಪಾಂಡೆ ಅಬ್ರಾಂಗೆ ಹುಟ್ಟುಹಬ್ಬದ ಶುಭ ಕೋರಿದ್ದು,  'ಜನ್ಮದಿನದ ಶುಭಾಶಯಗಳು ಬೇಬಿ ಬ್ರಾಮ್' ಎಂದು ಹೇಳುವ ಮೂಲಕ ಅವರ ನಿಕ್​ ನೇಮ್​ ಅನ್ನು ರಿವೀಲ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಹಾಗೂ ಅಬ್ರಾಂ ಖಾನ್​

ಅನನ್ಯಾ ಪಾಂಡೆ ಹಾಗೂ ಅಬ್ರಾಂ ಖಾನ್​

  • Share this:
ಶಾರುಖ್​ ಖಾನ್  ಹಾಗೂ ಗೌರಿ ಖಾನ್​ ಅವರ ಮೂರನೇ ಮಗ ಅಬ್ರಾಂ ಖಾನ್​ ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 8ನೇ ವರ್ಷಕ್ಕೆ ಕಾಲಿಟ್ಟ ಅಬ್ರಾಂಗೆ ಸ್ಟಾರ್ ಕಿಡ್ಸ್​ ಸೇರಿದಂತೆ ಹಲವಾರು ಮಂದಿ ಶುಭ ಕೋರಿದ್ದಾರೆ.  ಅಕ್ಕ ಸುಹಾನಾ ಖಾನ್​ ಸಹ ತಮ್ಮನ ಜೊತೆಗಿನ ಕ್ಯೂಟ್​ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶ್​ ಮಾಡಿದ್ದರು. ಜತೆಗೆ ಸುಹಾನಾ ಖಾನ್​ ಅವರ ಬಾಲ್ಯದ ಗೆಳತಿ ಅನನ್ಯಾ ಪಾಂಡೆ ಸಹ  ಇನ್​ಸ್ಟಾಗ್ರಾಂನಲ್ಲಿ ವಿಶೇಷವಾಗಿ ಪೋಸ್ಟ್​ ಮಾಡುವ ಮೂಲಕ ವಿಶ್​ ಮಾಡಿದ್ದಾರೆ.  ಈ ಬಾರಿ, ಬಾಲಿವುಡ್ ನಟಿ ಪುಟ್ಟ ಅಬ್ರಾಂ ಅವರ ಜನ್ಮದಿನದಂದು 'ಥ್ರೋಬ್ಯಾಕ್' ಚಿತ್ರವನ್ನು ಅಂದರೆ ಹಳೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಹಳೆಯ ಚಿತ್ರದಲ್ಲಿ ಅಬ್ರಾಮ್ ಸೂಪರ್ ಹೀರೋ ಸ್ಪೈಡರ್ ಮ್ಯಾನ್ ಸೂಟ್ ಧರಿಸಿರುವುದು ವಿಶೇಷ. ಅನನ್ಯಾ ಆ ಪುಟ್ಟ ಸೂಪರ್ ಹೀರೋ ಪಕ್ಕದ ದಿಂಬಿನ ಮೇಲೆ ವಾಲಿದ್ದು, ಮೊಬೈಲ್​ನಲ್ಲಿ ಏನನ್ನೋ ನೋಡುತ್ತಿದ್ದಾರೆ. 

ಅನನ್ಯಾ ಮಾಡಿರುವ ಪೋಸ್ಟ್​ನಲ್ಲಿರುವ ಫೋಟೋ ಸದ್ಯ ವೈರಲ್​ ಆಗುತ್ತಿದೆ. ಈ ಫೋಟೋದಲ್ಲಿ ಅಬ್ರಾಂ ಖಾನ್​ ಸ್ಪೈಡರ್​ ಮ್ಯಾನ್​ ಸೂಟ್​ ಧರಿಸಿದ್ದು, ಅಬ್ರಾಂ ಮುಖ ಕಾಣಿಸುತ್ತಿಲ್ಲ. ಅನನ್ಯಾ ಟ್ಯೂಬ್ ಟಾಪ್ ಮತ್ತು ಡೆನಿಮ್ ಪ್ಯಾಂಟ್​​ ಧರಿಸಿದ್ದಾರೆ. ಈ ಪೋಸ್ಟ್​ ಜೊತೆಗೆ ಅನನ್ಯಾ ಪಾಂಡೆ, ಅಬ್ರಾಂ ಅವರ ನಿಕ್ ನೇಮ್​ ಅಂದರೆ ಅಡ್ಡ ಹೆಸರನ್ನು ಬಹಿರಂಗ ಮಾಡಿದ್ದಾರೆ.

ಅಬ್ರಾಮ್, ಶಾರುಖ್ ಖಾನ್, ಅನನ್ಯಾ, ಸುಹಾನಾ, Shah Rukh, AbRam, Ananya, Suhana Khan, Ananya Panday shared a throwback photo with a sweet birthday note for Abram stg ae
ಅಬ್ರಾಂ ಹುಟ್ಟುಹಬ್ಬಕ್ಕೆ ವಿಶ್​ ಮಾಡಿದ ಅನನ್ಯಾ ಪಾಂಡೆ


ಅನನ್ಯಾ ಪಾಂಡೆ ಅಬ್ರಾಂಗೆ ಹುಟ್ಟುಹಬ್ಬದ ಶುಭ ಕೋರಿದ್ದು,  'ಜನ್ಮದಿನದ ಶುಭಾಶಯಗಳು ಬೇಬಿ ಬ್ರಾಮ್' ಎಂದು ಹೇಳುವ ಮೂಲಕ ಅವರ ನಿಕ್​ ನೇಮ್​ ಅನ್ನು ರಿವೀಲ್ ಮಾಡಿದ್ದಾರೆ. ಅನನ್ಯಾ ಅಬ್ರಾಂ ಅವರನ್ನು ಬ್ರಾಮ್​ ಎಂದು ಕರೆಯುತ್ತಾರೆ.

ಇದನ್ನೂ ಓದಿ: Kajal Aggarwal: ಲಾಕ್​ಡೌನ್​ನಲ್ಲಿ ರೊಮ್ಯಾನ್ಸ್​: ಗಂಡನ ಜೊತೆಗಿನ ಫೋಟೋ ಶೇರ್ ಮಾಡಿದ ಕಾಜಲ್​ ಅಗರ್ವಾಲ್​

ಅಬ್ರಾಂ ಅವರ ಅಕ್ಕ ಸುಹಾನಾ ಖಾನ್​ ಸಹ ನಿನ್ನೆ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅಬ್ರಾಮ್ ಮತ್ತು ಸುಹಾನಾ ಮೊಬೈಲ್​ನಲ್ಲಿ ವಿಡಿಯೋ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಜನ್ಮ ದಿನದ ಹುಡುಗ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಸುಹಾನಾ ಖಾನ್​ ಸಹ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗಲೂ ಸಹ ಅನನ್ಯಾ ತನ್ನ ಮತ್ತು ಸುಹಾನಾ ಅವರ ಜೊತೆಗೆ ತೆಗೆದಿದ್ದ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದರು. ಹಳೆಯ ಫೋಟೋದಲ್ಲಿ, ಸುಹಾನಾ ಮತ್ತು ಅನನ್ಯಾ ಪರಸ್ಪರ ಅಪ್ಪಿಕೊಂಡು ನಗುವಿನೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಬ್ರೈಡಲ್​ ಲುಕ್​ನಲ್ಲಿ ಸ್ನೇಹಾ ಉಲ್ಲಾಳ್​: ಮತ್ತೆ ಐಶ್ವರ್ಯಾ ರೈ ಜತೆ ಹೋಲಿಕೆ ಮಾಡುತ್ತಿರುವ ನೆಟ್ಟಿಗರು

ಬಾಲಿವುಡ್ ಬಾದ್ ಶಾ ಮಗನ ಹುಟ್ಟುಹಬ್ಬದ ದಿನದಂದು ಅಬ್ರಾಂ ಸೈಡರ್ ಮ್ಯಾನ್ ವೇಷದಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಬ್ರಾಂ ಹಾಗೂ ಸುಹಾನಾರ ಕೆಮಿಷ್ಟ್ರಿ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಅಬ್ರಾಂ ಆಗಾಗ ಅಪ್ಪ-ಅಮ್ಮ ಹಾಗೂ ಅಕ್ಕ ಸುಹಾನಾರ ಇನ್​ಸ್ಟಾಗ್ರಾಂ ಪೋಸ್ಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಅಬ್ರಾಂ ಖಾನ್​ ಅಪ್ಪ ಶಾರುಖ್​ ಖಾನ್​ ಜೊತೆ ಅದಾಗಲೇ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಫರಾ ಖಾನ್​ ನಿರ್ದೇಶನದ ಹ್ಯಾಪಿ ನ್ಯೂ ಇಯರ್​ ಸಿನಿಮಾದಲ್ಲಿ ಅಬ್ರಾಂ ಖಾನ್​ ಅವರನ್ನು ಪರಿಚಯಿಸಲಾಗಿದೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಅಬ್ರಾಂಗೆ ಎರಡೂವರೆ ವರ್ಷ. ಅಬ್ರಾಂ ಖಾನ್​ ಅವರನ್ನು ಸಿನಿಮಾದಲ್ಲಿ ಪರಿಚಯಿಸುವ ನಿರ್ಧಾರ ಪ್ಲಾನ್​ ಮಾಡಿಕೊಂಡು ಮಾಡಿದ್ದಲ್ಲ ಎಂದು ಗೌರಿ ಖಾನ್​ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
Published by:Anitha E
First published: