ಕಾಂತಾರ ಸಿನಿಮಾದಲ್ಲಿ ಟೂ ವೀಲ್ಹರ್ (Two wheeler) ಪ್ರಿಯರ ಗಮನ ಸೆಳೆಯುವುದು ಹೀರೋ ಶಿವ (Shiva) ಓಡಿಸೋ ಆರ್ಎಕ್ಸ್ 100 (RX100) ಬೈಕ್ (Bike). ಪ್ರೇಯಸಿ ಲೀಲಾಳನ್ನು ಕೂರಿಸಿಕೊಂಡು ಬೈಕ್ ಹತ್ತಿ ಜುಮ್ ಅಂತ ಊರು ಸುತ್ತೋ ಶಿವನ ಲುಕ್ ಯಾರು ತಾನೇ ಮರೆಯೋಕೆ ಸಾಧ್ಯ? ಸ್ಟೈಲಿಷ್ ಆಗಿರೋ ಆರ್ಎಕ್ಸ್100 ಬೈಕ್ ರಿಷಬ್ ಶೆಟ್ಟಿ ಅವರಿಗೆ ಎಲ್ಲಿಂದ ಸಿಕ್ಕಿತು? ಹಳೆಯ ಮಾಡೆಲ್ (Model) ಬೈಕ್ಗಳು ಅಷ್ಟು ಬೇಗನೆ ಎಲ್ಲಿಯೂ ಸಿಗುವುದಿಲ್ಲ. ಇಟ್ಟುಕೊಂಡವರು ಅಷ್ಟೇ ಪ್ರೀತಿಯಿಂದ ಆಸಕ್ತಿಯಿಂದ ಇಟ್ಟುಕೊಂಡಿರುವುದರಿಂದ ಮೂರನೇ ವ್ಯಕ್ತಿಗೆ ಮುಟ್ಟೋಕೂ ಬಿಡೋದು ಕಷ್ಟ. ಹಾಗಿರುವಾಗ ಕಾಂತಾರ (Kantara) ಸಿನಿಮಾಗೆ ಸರಿಯಾಗಿ ಈ ಬೈಕ್ ಹೇಗೆ ಸಿಕ್ಕಿತು ಎನ್ನುವ ಡೌಟ್ ಎಲ್ಲರಲ್ಲೂ ಇರಬಹುದು. ವಿಶೇಷವಾಗಿ ಇದು 90ರ ದಶಕದ ಸಿನಿಮಾ ಆದ ಕಾರಣ ಇದರಲ್ಲಿ ಅದೇ ರೀತಿಯ ಹಳೆಯ ಮಾಡೆಲ್ ಬೈಕ್ ಬಳಸುವುದು ಕೂಡಾ ಅವಶ್ಯಕತವಾಗಿತ್ತು.
ಬೈಕ್ ಹುಡುಕ್ತಿದ್ರು ಶೆಟ್ರು
ರಿಷಬ್ ಶೆಟ್ಟಿ ತಮ್ಮ ಸಿನಿಮಾ ಕಾಂತಾರಗೋಸ್ಕರ ಬೈಕ್ ಹುಡುಕುತ್ತಿದ್ದರು. ಅಂದಿನ ಕಾಲಕ್ಕೆ ಹೊಂದಿಕೆಯಾಗುವಂತೆ ಸಾಮಾನ್ಯ ಹಳ್ಳಿಯ ಯುವಕ ಇಟ್ಟುಕೊಳ್ಳಬಹುದಾದ ಬೈಕ್ ಅಗತ್ಯವಿತ್ತು. ಹೀಗೆ ಬೈಕ್ ಹುಡುಕುವಾಗ ರಿಷಬ್ ಅವರಿಗೆ ಅನಂತ್ ಕಾಮತ್ ಅವರ ಬಗ್ಗೆ ಪರಿಚಯದವರು ಯಾರೋ ಮಾಹಿತಿ ಕೊಟ್ಟಿದ್ದರು.
94 ಮಾಡೆಲ್ ಬೈಕ್. ಅವರದ್ದು 90 ದಶಕದ ಸಿನಿಮಾ ಆದ ಕಾರಣ ಈ ಬೈಕ್ ಅದಕ್ಕೆ ಸರಿಯಾಗಿತ್ತು. ಅವರು ಬೈಕ್ ಹುಡುಕುತ್ತಿದ್ದರು. ರಿಷಬ್ ಅವರಿಗೆ ಯಾರೋ ಬೈಕ್ ಬಗ್ಗೆ ಹೇಳಿದ್ದರು. ಅವರು ಬಂದು ಬೈಕ್ ನೋಡಿ ನಮ್ಮ ಸ್ಕ್ರಿಪ್ಟ್ಗೆ ಸರಿಯಾಗುತ್ತೆ ಎಂದು ಸೆಲೆಕ್ಟ್ ಮಾಡಿದ್ದರಂತೆ ರಿಷಬ್ ಶೆಟ್ಟಿ.
ಇದನ್ನೂ ಓದಿ: Kantara Movie: ಜೈಲಲ್ಲಿ ಕುಳಿತು ದೈವ ಅಳುವ ದೃಶ್ಯ ನೆನಪಿದೆಯಾ? ಆ ಅಳು ಫೇಕ್ ಅಲ್ಲ
ಫ್ರೆಂಡ್ಸ್ ಕೇಳಿದ್ರು ಬೈಕ್ ಮಾತ್ರ ಕೊಡಲ್ಲ ಅನಂತ್ ಅವರು
ಬೈಕ್ ಎಂದರೆ ಸಿಕ್ಕಾಪಟ್ಟೆ ಪ್ರೀತಿ ಇಟ್ಟುಕೊಂಡಿರುವ ಅನಂತ್ ಕಾಮತ್ ಅವರು ಅದನ್ನು ತುಂಬಾ ಕಂಡೀಷನ್ನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಯಾವುದೇ ಚಿಕ್ಕ ಸಮಸ್ಯೆಯಾದರೂ ಅದನ್ನು ತಕ್ಷಣ ಸರಿ ಮಾಡಿಕೊಳ್ಳುತ್ತಾರೆ ಅನಂತ್ ಕಾಮತ್. ಅವರನ್ನು ತಿಳಿದವರು ಅಯ್ಯೋ ಅವರು ಬೈಕ್ ಕೊಡಲ್ಲ ಎಂದು ಆರೋಪಿಸುತ್ತಾರೆ. ಆದರೆ ಏನೇ ಹೇಳಿದರೂ ಅನಂತ್ ಅವರು ಬೈಕ್ ಮಾತ್ರ ಯಾರ ಕೈಗೂ ಕೊಡಲ್ಲ.
ರಿಷಬ್ ಅವರೇ ಬಂದು ಬೈಕ್ ಕೇಳಿದ್ರು
ರಿಷಬ್ ಅವರು ಬೈಕ್ ಹುಡುಕಿಕೊಂಡು ಅನಂತ್ ಅವರ ಮನೆಗೆ ಬಂದಿದ್ದರು. ಆದರೆ ರಿಷಬ್ ಬಂದಾಗ ಅವರ ಪರಿಚಯವೇ ಸಿಕ್ಕಿರಲಿಲ್ಲ ಅನಂತ್ ಅವರಿಗೆ. ಯಾರು ಎಂದು ಪರಿಚಯ ಕೇಳಿ ನಂತರ ಬೈಕ್ ಓಕೆ ಆಗಿ ಕೊಡಲು ಒಪ್ಪಿದ್ದರು.
ಬೇರೆ ಸಿನಿಮಾದ ಆಪರ್ ಬರ್ತಿದ್ಯಾ?
ಸದ್ಯ ಬೇರೆ ಸಿನಿಮಾದಿಂದ ಬೈಕ್ ಬೇಡಿಕೆ ಬಂದಿಲ್ಲ ಎನ್ನುವುದನ್ನು ಅನಂತ್ ಅವರು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಅವರ ಬೈಕ್ ಕಂಡೀಷನ್ನಲ್ಲಿದ್ದು ಈಗ ಅದರ ಬಗ್ಗೆ ಬಹಳಷ್ಟು ಮಂದಿ ವಿಚಾರಿಸುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Actor Chetan: ದೈವಾರಾಧನೆ ಬಗ್ಗೆ ವಿವಾದಾತ್ಮಕ ಹೇಳಿಕೆ ತಂದ ಸಂಕಷ್ಟ, ನಟ ಚೇತನ್ ವಿರುದ್ಧ ಎಫ್ಐಆರ್ ದಾಖಲು
ಸಿಂಗಾರ ಸಿರಿಯೇ ಎನ್ನುವ ರೊಮ್ಯಾಂಟಿಕ್ ಸಾಂಗ್ನಲ್ಲಿ ಈ ಬೈಕ್ನ ರಿಯಲ್ ಲುಕ್ ಪ್ರೇಕ್ಷರಿಗೆ ಸಿಗುತ್ತದೆ. ಲೀಲಾಳನ್ನು ಕೂರಿಸಿಕೊಂಡು ಊರಲ್ಲಿ ಬೈಕ್ ರೈಡ್ ಮಾಡೋ ಸೀನ್ ಸಖತ್ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ