Rudraprayag: ಹಿಟ್ ಚಿತ್ರ ನೀಡಿದ್ದ ಅನಂತ್​ನಾಗ್- ರಿಷಬ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ

Rudraprayag Movie: ರುದ್ರಪ್ರಯಾಗ ಸಿನಿಮಾದಲ್ಲಿ ಮತ್ತೊಮ್ಮೆ ಅನಂತ್​ನಾಗ್- ರಿಷಬ್ ಶೆಟ್ಟಿ ಜೋಡಿ ಒಂದಾಗಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಅನಂತಪದ್ಮನಾಭ ಎಂಬ ವಕೀಲರ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರರಂಗದ ಶ್ರೇಷ್ಟ ನಟ ಅನಂತ್​ನಾಗ್ ಮತ್ತೊಮ್ಮೆ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

Sushma Chakre | news18-kannada
Updated:September 10, 2019, 9:46 PM IST
Rudraprayag: ಹಿಟ್ ಚಿತ್ರ ನೀಡಿದ್ದ ಅನಂತ್​ನಾಗ್- ರಿಷಬ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ
ಅನಂತ್​ನಾಗ್- ರಿಷಬ್ ಶೆಟ್ಟಿ
Sushma Chakre | news18-kannada
Updated: September 10, 2019, 9:46 PM IST
ಕಳೆದ ವರ್ಷ ಆಗಸ್ಟ್​ನಲ್ಲಿ ತೆರೆಕಂಡಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ಸ.ಹಿ.ಪ್ರಾ. ಶಾಲೆ ಕಾಸರಗೋಡು' ಕನ್ನಡದ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಂಡಿತ್ತು. 'ರಿಕ್ಕಿ', 'ಕಿರಿಕ್ ಪಾರ್ಟಿ' ಸಿನಿಮಾಗಳ ಸಿನಿಮಾ ನಿರ್ದೇಶಿಸಿದ್ದ ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾ ಮತ್ತೊಂದು ಯಶಸ್ಸನ್ನು ತಂದುಕೊಟ್ಟಿತ್ತು. ಸದ್ಯಕ್ಕೆ ಅವರು 'ಕಥಾಸಂಗಮ' ಸಿನಿಮಾ ಕೈಗೆತ್ತಿಕೊಂಡಿದ್ದು, ಅದರ ಜೊತೆಜೊತೆಗೇ 'ರುದ್ರಪ್ರಯಾಗ' ಸಿನಿಮಾ ಪೋಸ್ಟರ್​ ಕೂಡ ಹೊರಬಿಟ್ಟಿದ್ದಾರೆ. 

ಅಂದಹಾಗೆ, ಈ 'ರುದ್ರಪ್ರಯಾಗ' ಸಿನಿಮಾದಲ್ಲಿ ಮತ್ತೊಮ್ಮೆ ಅನಂತ್​ನಾಗ್- ರಿಷಬ್ ಶೆಟ್ಟಿ ಜೋಡಿ ಒಂದಾಗಲಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಅನಂತಪದ್ಮನಾಭ ಎಂಬ ವಕೀಲರ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರರಂಗದ ಶ್ರೇಷ್ಟ ನಟ ಅನಂತ್​ನಾಗ್ ಮತ್ತೊಮ್ಮೆ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ರಿಷಬ್ ಶೆಟ್ಟಿ ಅವರ 'ಸ.ಹಿ.ಪ್ರಾ. ಶಾಲೆ ಕಾಸರಗೋಡು' ಸಿನಿಮಾ ಈ ವರ್ಷದ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿತ್ತು.

ಡೈರೆಕ್ಷನ್​ಗೆ ಮರಳಿದ ರಿಷಭ್ ಶೆಟ್ಟಿ: ಟೈಟಲ್​ ಮೂಲಕವೇ ತಲೆಗೆ ಹುಳಬಿಟ್ಟ ಕಿರಿಕ್​ ಪಾರ್ಟಿ ನಿರ್ದೇಶಕ..!

ತಮ್ಮ ಹೊಸ ಸಿನಿಮಾದಲ್ಲಿ ಅನಂತ್​ನಾಗ್ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಬಗ್ಗೆ ಖುದ್ದು ರಿಷಬ್ ಶೆಟ್ಟಿಯವರೇ ಟ್ವಿಟ್ಟರ್​ ಮೂಲಕ ಬಹಿರಂಗಪಡಿಸಿದ್ದಾರೆ. 2 ತಿಂಗಳ ಹಿಂದೆಯೇ ರುದ್ರಪ್ರಯಾಗದ ಪೋಸ್ಟರ್ ಬಿಡುಗಡೆ ಮಾಡಿದ್ದ ರಿಷಬ್ ಶೆಟ್ಟಿ ಹೆಚ್ಚಿನ ಮಾಹಿತಿಯನ್ನೇನೂ ನೀಡಿರಲಿಲ್ಲ. ಬೆಲ್​ ಬಾಟಂ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ರಿಷಬ್ ಮತ್ತೊಮ್ಮೆ ನಿರ್ದೇಶನದತ್ತ ಮರಳುತ್ತಿದ್ದಾರೆ.

Loading...



'ಅನಂತ್​ನಾಗ್​ ಎಂತಹ ಮಹಾನ್​ ನಟ ಎಂಬುದನ್ನು ಹೊಸತಾಗಿ ಹೇಳಬೇಕಾಗಿಲ್ಲ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ನನಗೆ ಸ.ಹಿ.ಪ್ರಾ. ಶಾಲೆ ಕಾಸರಗೋಡು ಸಿನಿಮಾದಲ್ಲಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು.'



'ಅವರು ಅನಂತಪದ್ಮನಾಭ ಪಿ. ಪಾತ್ರಕ್ಕೆ ಜೀವತುಂಬಿ ಮಕ್ಕಳೊಡನೆ ಮಕ್ಕಳಾಗಿ ಆ ಚಿತ್ರದ ನೆನಪುಗಳಿನ್ನೂ ಹಸಿರಾಗಿರುವಾಗಲೇ ನನ್ನ ಮುಂದಿನ ಸಿನಿಮಾ ‘ರುದ್ರಪ್ರಯಾಗ’ದಲ್ಲೂ ಅನಂತ್ ಸರ್ ಗೆ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದೇನೆ. ಅನಂತ್​ನಾಗ್ ಅವರು ನನ್ನ ಮುಂದಿನ ಸಿನಿಮಾ 'ರುದ್ರಪ್ರಯಾಗದ'ಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ' ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

'ರುದ್ರಪ್ರಯಾಗ' ಸಿನಿಮಾದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಆರಂಭವಾಗಲಿದೆ. ಈಗಾಗಲೇ ಕೆಲವು ಶೂಟಿಂಗ್ ಸ್ಪಾಟ್​ಗಳನ್ನು ರಿಷಬ್ ಶೆಟ್ಟಿ ಹುಡುಕಿಟ್ಟಿದ್ದಾರೆ.

 

First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...