• Home
  • »
  • News
  • »
  • entertainment
  • »
  • Krishna Death: ತೆಲುಗು ಸಿನಿರಂಗಕ್ಕೆ ಅಪ್ರತಿಮ ಕೊಡುಗೆ ನೀಡಿದ 'ಸೂಪರ್‌ ಸ್ಟಾರ್‌'

Krishna Death: ತೆಲುಗು ಸಿನಿರಂಗಕ್ಕೆ ಅಪ್ರತಿಮ ಕೊಡುಗೆ ನೀಡಿದ 'ಸೂಪರ್‌ ಸ್ಟಾರ್‌'

ನಟ ಕೃಷ್ಣ

ನಟ ಕೃಷ್ಣ

ಕೃಷ್ಣ ಅವರು ಐದು ದಶಕಗಳ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ, ತೆಲುಗು ಚಿತ್ರರಂಗದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ಸಿನಿ ಕೊಡುಗೆ ಅಪ್ರತಿಮವಾಗಿದೆ. ಈ ಹಿರಿಯ ನಟ ಮಂಗಳವಾರ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಡೀ ಸಿನಿ ರಂಗವೇ ಕಂಬನಿ ಮಿಡಿದಿದೆ.

  • Share this:

ಸೂಪರ್ ಸ್ಟಾರ್ ʼಕೃಷ್ಣʼ (Krishna) ಅವರ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಸುವರ್ಣ ಯುಗ ಅಂತ್ಯವಾದಂತಾಗಿದೆ. ಡಾ ರಾಜ್‌ಕುಮಾರ್, ಎನ್‌ಟಿಆರ್, ಎಎನ್‌ಆರ್, ಎಂಜಿಆರ್, ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಜೊತೆ ಜೊತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ (Indian Cinema Industry) ಸುವರ್ಣಯುಗಕ್ಕೆ ಕಾರಣವಾಗಿದ್ದ ನಟರಾಗಿದ್ದರು ಕೃಷ್ಣ. ಅವರುಗಳ ಸಾಲಿನಲ್ಲೇ ನಿಂತಿದ್ದವರು ಸೂಪರ್ ಸ್ಟಾರ್ ಕೃಷ್ಣ. ಈಗ ಕೃಷ್ಣ ಅವರ ನಿಧನದ ಮೂಲಕ ತೆಲುಗಿನ ಸುವರ್ಣಯುಗ ಅಂತ್ಯವಾದಂತಾಗಿದೆ.


ತೆಲುಗು ಸಿನಿ ರಂಗಕ್ಕೆ ಕೃಷ್ಣ ಅವರ ಕೊಡುಗೆ ಅಪ್ರತಿಮ


ಕೃಷ್ಣ ಅವರು ಐದು ದಶಕಗಳ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ, ತೆಲುಗು ಚಿತ್ರರಂಗದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅವರ ಸಿನಿ ಕೊಡುಗೆ ಅಪ್ರತಿಮವಾಗಿದೆ. ಈ ಹಿರಿಯ ನಟ ಮಂಗಳವಾರ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಡೀ ಸಿನಿ ರಂಗವೇ ಕಂಬನಿ ಮಿಡಿದಿದೆ.


ಹೃದಯ ಸ್ತಂಭನದಿಂದ ನಿಧನರಾದ ಕೃಷ್ಣ


ಹೃದಯ ಸ್ತಂಭನಕ್ಕೆ ಒಳಗಾಗಿದ್ದ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಿನ್ಸ್ ಮಹೇಶ್ ಬಾಬು ಅವರ ತಂದೆಯೇ ಈ ಹಿರಿಯ ನಟ ಕೃಷ್ಣ.


ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 20 ನಿಮಿಷಗಳ ಸಿಪಿಆರ್ ನಂತರ ಖಾಸಗಿ ಆಸ್ಪತ್ರೆಯಲ್ಲಿ ಅವರು ಮತ್ತೆ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ, ಅವರ ಸ್ಥಿತಿ ಚಿಂತಾಜನಕವಾಗಿತ್ತು. ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದರು.


ಕೃಷ್ಣ ಅವರ ಹಿನ್ನೆಲೆ


ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬುರ್ರಿಪಾಲೆಂನಲ್ಲಿ ಘಟ್ಟಮನೇನಿ ಶಿವರಾಮ ಕೃಷ್ಣ ಎಂದು ಜನಿಸಿದ ಕೃಷ್ಣ, 1960 ರ ದಶಕದ ಆರಂಭದಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅವರು 1965 ರಲ್ಲಿ ನಿರ್ದೇಶಕ ಅಧುರ್ತಿ ಸುಬ್ಬಾ ರಾವ್ ಅವರ ಪ್ರಣಯ ನಾಟಕ ತೇನೆ ಮನಸುಲು ನಲ್ಲಿ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.


ಕೃಷ್ಣ ಅವರು ಕೇವಲ ತೆಲುಗು ಚಿತ್ರ ಪ್ರೇಕ್ಷಕರ ಹೃದಯವನ್ನಷ್ಟೇ ಗೆದ್ದಿಲ್ಲ, ಇವರಿಗೆ ದೇಶದೆಲ್ಲೆಡೆ ಅಭಿಮಾನಿಗಳು ಇದ್ದಾರೆ. ತೆಲುಗು ಚಿತ್ರರಂಗದ ಗಡಿಗಳನ್ನು ಮೀರಿ ಸಿನಿ ರಂಗದಲ್ಲಿ ಬೆಳೆದಿದ್ದಾರೆ. ಇವರ ಹೊಸ ಸಿನಿಮಾ ಕಲ್ಪನೆಗಳು, ಥೀಮ್‌ಗಳು, ತಂತ್ರಜ್ಞಾನ ಮತ್ತು ದೃಶ್ಯ ಶೈಲಿಗಳನ್ನು ಅನ್ವೇಷಿಸುವಾಗ ಅವರು ತಮ್ಮ ಸಮಯಕ್ಕಿಂತ ಮುಂದಿದ್ದರು ಎಂದು ಸಿನಿ ವಿಮರ್ಶಕರು ಆಗಾಗ ಹೇಳುತ್ತಲೇ ಇದ್ದರು.


ತೆಲುಗು ಸಿನಿಮಾದ ಮೊದಲ ಜೇಮ್ಸ್‌ ಬಾಂಡ್‌


ಕೃಷ್ಣ ಅವರ ಮೂರನೇ ಚಿತ್ರ ಗುಡಾಚಾರಿ 116 (ಏಜೆಂಟ್ 116). ಇದು ತೆಲುಗು ಸಿನಿಮಾದ ಮೊದಲ ಜೇಮ್ಸ್ ಬಾಂಡ್-ಎಸ್ಕ್ಯೂ ಬೇಹುಗಾರಿಕೆ ಥ್ರಿಲ್ಲರ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇಂತಹ ಹೆಗ್ಗಳಿಕೆಗೆ ಕೃಷ್ಣ ಸದಾ ಮುಂದಿದ್ದ ಜೀವವಾಗಿದ್ದರು.


1965 ರಲ್ಲಿ ನಾಯಕ ನಟನಾದ ಕೃಷ್ಣ, 1967 ರಲ್ಲಿ ಬರೋಬ್ಬರಿ 7 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. 1968 ರಲ್ಲಿ 11 ಸಿನಿಮಾಗಳಲ್ಲಿ ನಟಿಸಿ ಹಿಟ್ ಎನಿಸಿಕೊಂಡರು. ಆ ನಂತರ ಕೃಷ್ಣ ಅವರನ್ನು ತಡೆದವರು ಯಾರೂ ಇಲ್ಲ.


ನಿರ್ದೇಶಕರಾಗಿ ಕೃಷ್ಣ


ನಟನೆಯ ಜೊತೆಗೆ, ಕೃಷ್ಣ ಅವರು ತಮ್ಮ ಹೋಮ್ ಪ್ರೊಡಕ್ಷನ್ ಬ್ಯಾನರ್ ಪದ್ಮಾಲಯ ಸ್ಟುಡಿಯೋಸ್ ಅಡಿಯಲ್ಲಿ ಹಲವಾರು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನಿರ್ದೇಶಿಸಿದರು ಮತ್ತು ನಿರ್ಮಿಸಿದರು.


ಅವರು ಸಿಂಹಾಸನಂ (1984) ಚಿತ್ರದ ಮೂಲಕ ನಿರ್ದೇಶನವನ್ನು ಪ್ರಾರಂಭಿಸಿದರು, ಇದು ಅವರ ವೃತ್ತಿಜೀವನದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿತ್ತು. ನಂತರ ಅವರು ಈ ಚಿತ್ರವನ್ನು ಹಿಂದಿಯಲ್ಲಿ ಜೀತೇಂದ್ರ ಪ್ರಮುಖ ಪಾತ್ರದಲ್ಲಿ ಸಿಂಗಾಸನ್ ಎಂದು ಮರುನಿರ್ಮಾಣ ಮಾಡಿದರು. ಹಿಂದಿ ರಿಮೇಕ್ ಕೂಡ ದೊಡ್ಡ ಹಿಟ್ ಆಗಿತ್ತು.


Tollywood Superstar Mahesh Babu Father Krishna passed away due to heart attack
ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ


ನಿರ್ದೇಶಕರಾಗಿ, ಅವರು ಮುಗ್ಗುರು ಕೊಡುಕುಲು, ಕೊಡುಕು ದಿಡ್ಡಿನ ಕಾಪುರಂ, ಅಣ್ಣ ತಮ್ಮುಡು, ಮತ್ತು ಬಾಲ ಚಂದ್ರುಡು ಮುಂತಾದ ಕೆಲವು ಸೂಪರ್‌ಹಿಟ್‌ಗಳನ್ನು ಒಳಗೊಂಡಂತೆ ಒಟ್ಟು 17 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.


ಅವರು ತಮ್ಮ ವೃತ್ತಿಜೀವನದ ನಂತರದ ವರ್ಷಗಳಲ್ಲಿ, ಕಂಠಸ್ವಾಮಿ, ಬಲದೂರ್, ವಂಶಿ, ರಾಜ ಕುಮಾರುಡು, ಮತ್ತು ಒಸೆ ರಾಮುಲಮ್ಮ ಮುಂತಾದ ಚಲನಚಿತ್ರಗಳಲ್ಲಿ ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ಹೊಸ ಸಿನಿ ಪ್ರಯೋಗಗಳಿಗೆ ಸದಾ ಮುಂದಿದ್ದ ಕೃಷ್ಣ


ತೆಲುಗು ಚಿತ್ರರಂಗದಲ್ಲಿ ಹಲವಾರು ಅತ್ಯಾಧುನಿಕ ಚಲನಚಿತ್ರ ನಿರ್ಮಾಣ ತಂತ್ರಜ್ಞಾನಗಳನ್ನು ಪರಿಚಯಿಸುವಲ್ಲಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು. ಅವರ ಬ್ಲಾಕ್‌ಬಸ್ಟರ್ ಚಿತ್ರ ಅಲ್ಲೂರಿ ಸೀತಾರಾಮ ರಾಜು ತೆಲುಗಿನಲ್ಲಿ ಸಿನಿಮಾಸ್ಕೋಪ್‌ನಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರವಾಗಿದೆ.


ಇದನ್ನೂ ಓದಿ: Mahesh Babu’s Father Krishna Death: ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ: ಅಮ್ಮನ ಸಾವಿನ ಬೆನ್ನಲ್ಲೇ ನಟನಿಗೆ ಶಾಕ್


ಅವರ ನಿರ್ದೇಶನದ ಚೊಚ್ಚಲ ಚಿತ್ರ ಸಿಂಹಾಸನಂ 70 ಎಂಎಂ ಚಲನಚಿತ್ರದಲ್ಲಿ ತಯಾರಾದ ಮೊದಲ ತೆಲುಗು ಚಲನಚಿತ್ರವಾಗಿದೆ.


ಅವರ 200ನೇ ಚಿತ್ರ ಈನಾಡು ತೆಲುಗಿನ ಮೊದಲ ಈಸ್ಟ್‌ಮನ್ ಕಲರ್ ಸಿನಿಮಾ. ಮತ್ತು ಅವರು ತೆಲುಗು ವೀರ ಲೇವರದೊಂದಿಗೆ DTS ಧ್ವನಿಯನ್ನು ತೆಲುಗು ಪ್ರೇಕ್ಷಕರಿಗೆ ಪರಿಚಯಿಸಿದರು.


ಕೃಷ್ಣ ಅವರ ಕಲಾ ಕ್ಷೇತ್ರಕ್ಕೆ ಸಂದ ಪದ್ಮಭೂಷಣ ಪ್ರಶಸ್ತಿ


ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ, ತೆಲುಗು ಚಿತ್ರರಂಗದ ಬೆಳವಣಿಗೆಗೆ ಕೃಷ್ಣ ಅವರ ಕೊಡುಗೆ ಅಪ್ರತಿಮವಾಗಿದೆ. 2009 ರಲ್ಲಿ, ಭಾರತ ಸರ್ಕಾರವು ಕಲಾ ಕ್ಷೇತ್ರಕ್ಕೆ ಅವರ ಅಪಾರ ಕೊಡುಗೆಗಳಿಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

Published by:Divya D
First published: