ಪ್ರೇಮ್ ನಿರ್ದೇಶನದ 'ವಿಲನ್' ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದ ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಎಂಗೇಜ್ ಆಗಿದ್ದಾರಾ? ಹೀಗೊಂದು ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ.
ಹೊಸ ವರ್ಷದ ಸಂಭ್ರಮಾಚರಣೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಆ್ಯಮಿ ಜಾಕ್ಸನ್ ಪ್ರಿಯಕರಜಾರ್ಜ್ ಪನಯೊಟೋ ಜೊತೆಗೆ ರೊಮ್ಯಾಂಟಿಕ್ ಆಗಿರುವ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಳೆದ ವಾರ ಕ್ರಿಸ್ಮಸ್ ಆಚರಣೆಯ ವೇಳೆಯೂ ಇದೇ ರೀತಿಯ ಫೋಟೋ ಹಾಕಿ ವಿಷ್ ಮಾಡಿದ್ದರು. ಆ್ಯಮಿ ಜಾಕ್ಸನ್ ಎಂಗೇಜ್ ಆಗಿರುವುದು ಪಕ್ಕಾ ಎಂದು ಅವರ ಫೋಟೋಗಳೇ ಹೇಳುತ್ತಿವೆ. ಹಾಗೇ, ಹೊಸ ವರ್ಷದ ದಿನ ಆ್ಯಮಿ ಜಾಕ್ಸನ್ ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರ ಬೆರಳಲ್ಲಿ ಇರುವ ಉಂಗುರವನ್ನು ನೋಡಿದವರು ಆ್ಯಮಿ ಜಾಕ್ಸನ್ ಗುಟ್ಟಾಗಿ ಎಂಜೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ.
ನಿನ್ನೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ, 'ನಮ್ಮ ಜೀವನಕ್ಕೆ ಹೊಸ ಆರಂಭ ಸಿಕ್ಕಿದೆ. ನಾನು ಈ ಜಗತ್ತಿನ ಅತ್ಯಂತ ಖುಷಿಯ ಹುಡುಗಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನೀನು. ಅದಕ್ಕಾಗಿ ಥ್ಯಾಂಕ್ಯೂ.. ಐ ಲವ್ ಯೂ' ಎಂದು ಬರೆದುಕೊಂಡಿದ್ದಾರೆ. ಹಾಗಾಗಿ, 2019ರಲ್ಲಿ ಆ್ಯಮಿ ಜಾಕ್ಸನ್ ಮದುವೆಯಾಗುವುದು ಬಹುತೇಕ ಖಚಿತ. 2018ರಲ್ಲಿ ಬಾಲಿವುಡ್ನ ಅನೇಕ ಸ್ಟಾರ್ಗಳು ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಕೂಡ ಈ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಡಿವೆ. ಆ ಸಾಲಿಗೆ ಈಗ ಆ್ಯಮಿ ಜಾಕ್ಸನ್- ಜಾರ್ಜ್ ಕೂಡ ಸೇರಿದ್ದಾರೆ.
ಇದನ್ನೂ ಓದಿ: ಕುಂಬಳಕಾಯಿ ಒಡೆಯುವ ಖುಷಿಯಲ್ಲಿ 'ಯಜಮಾನ'; ಶೀಘ್ರ ತೆರೆಗೆ ಬರಲಿದೆ ದರ್ಶನ್ ಸಿನಿಮಾ
ಬ್ರಿಟನ್ ಮೂಲದ ಆ್ಯಮಿ ಜಾಕ್ಸನ್ ರೂಪದರ್ಶಿಯಾಗಿ ಹೆಸರು ಮಾಡಿದವರು. ಬಳಿಕ, ಸಿನಿಮಾ ನಟಿಯಾಗಿಯೂ ಗುರುತಿಸಿಕೊಂಡ ಇವರು ಹಿಂದಿ, ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಮದ್ರಾಸಪಟ್ಟಣಂ ಸಿನಿಮಾ ಮೂಲಕ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದರು. ತಮಿಳಿನ ಐ, 2.0 ಸಿನಿಮಾಗಳು ಹೆಚ್ಚು ಪ್ರಸಿದ್ಧಿ ತಂದುಕೊಟ್ಟವು. ಕನ್ನಡದ ವಿಲನ್ನಲ್ಲಿ ಸುದೀಪ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಜೊತೆಗೆ ಡೇಟಿಂಗ್ ಮಾಡಿದ್ದ ಆ್ಯಮಿ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಕೆಲ ವರ್ಷಗಳಿಂದ ಬ್ರಿಟನ್ ಮೂಲದ ಪ್ರಾಪರ್ಟಿ ಡೆವಲಪರ್ ಮಗನಾದ ಜಾರ್ಜ್ ಕುಟುಂಬ ಹಲವಾರು ಲಕ್ಸುರಿ ಹೋಟೆಲ್ಗಳನ್ನೂ ನಡೆಸುತ್ತಿದೆ.