ಈ ನಟಿ ಆರು ತಿಂಗಳ ಗರ್ಭಿಣಿ, ಆದರೂ ಕಾರ್​ನಲ್ಲೇ ಯುರೋಪ್ ಪ್ರವಾಸಕ್ಕೆ ಹೊರಟಳು; ಯಾಕೆ ಗೊತ್ತೇ?

ಆ್ಯಮಿ ಜಾಕ್ಸನ್ ಕೇವಲ ಸಿನಿಮಾ ನಟಿ ಮಾತ್ರವಲ್ಲ. ಸದ್ದಿಲ್ಲದೆ ಅನೇಕ ಸಾಮಾಜಿಕ ಕೆಲಸದಲ್ಲೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಪ್ರಯಾಣಿಸುವ ಮೂಲಕ ಹಿಂದುಳಿದ ಮಹಿಳೆಯರ ಅಭಿವೃದ್ಧಿಗಾಗಿ ಸಹಾಯ ಮಾಡುವುದು ಹಾಗೂ ಮಹಿಳೆಯರ ಕುರಿತ ಸಾಮಾಜಿಕ ಜಾಗೃತಿ ಮೂಡಿಸುವುದು ಆ್ಯಮಿ ಜಾಕ್ಸನ್ ಉದ್ದೇಶ.

MAshok Kumar | news18
Updated:June 12, 2019, 5:03 PM IST
ಈ ನಟಿ ಆರು ತಿಂಗಳ ಗರ್ಭಿಣಿ, ಆದರೂ ಕಾರ್​ನಲ್ಲೇ ಯುರೋಪ್ ಪ್ರವಾಸಕ್ಕೆ ಹೊರಟಳು; ಯಾಕೆ ಗೊತ್ತೇ?
ಆ್ಯಮಿ ಜಾಕ್ಸನ್​.
MAshok Kumar | news18
Updated: June 12, 2019, 5:03 PM IST
ನಮ್ಮಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ಮನೆಯಿಂದ ಹೊರಬರಬಾರದು, ವೇಗವಾಗಿ ನಡೆಯಬಾರದು ಎಂದು ನಾನಾ ಷರತ್ತುಗಳಿರುತ್ತವೆ. ಇನ್ನೂ ನಟಿಯರಂತೂ ಗರ್ಭೀಣಿಯಾದರೆ ಮುಗಿದೇ ಹೋಯಿತು ಅವರು ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೂ ಸಹ ಹಿಂದೇಟು ಹಾಕುತ್ತಾರೆ. ಆದರೆ, ಇಲ್ಲೋರ್ವ ಬಾಲಿವುಡ್ ನಟಿ ಇದೆಲ್ಲದಕ್ಕೂ ಅಪವಾದದಂತಿದ್ಧಾರೆ. 6 ತಿಂಗಳ ಗರ್ಭಿಣಿಯಾದ ಈಕೆ ಇಡೀ ಯುರೋಪ್ ಖಂಡವನ್ನು ಕಾರ್​ನಲ್ಲೇ ತಿರುಗುತ್ತಾ ಸದ್ದು ಮಾಡುತ್ತಿದ್ದಾಳೆ. ಅಂದಹಾಗೆ ಈಕೆಯ ಹೆಸರು ಆ್ಯಮಿ ಜಾಕ್ಸನ್.

ತಮಿಳಿನ ಮದ್ರಾಸಪಟ್ಟಿಣಂ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ  ಪಾದಾರ್ಪಣೆ ಮಾಡಿದ ಆ್ಯಮಿ ಜಾಕ್ಸನ್ ನಂತರ ತೆಲುಗು, ಹಿಂದಿ, ಕನ್ನಡ ಸೇರಿದಂತೆ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು. ಅಲ್ಲದೆ ಇತ್ತೀಚೆಗೆ ತಮಿಳಿನಲ್ಲಿ ರಜಿನಿ ಜೊತೆಗೆ ಅವರು ನಟಿಸಿದ್ದ ರೋಬೋ 2.0 ಚಿತ್ರ ಸುಮಾರು 700 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿತ್ತು. ಇಂತಿಪ್ಪ ಆ್ಯಮಿ ಜಾಕ್ಸನ್ ಇದೀಗ 6 ತಿಂಗಳ ಗರ್ಭಿಣಿ. ಈ ಸಂದರ್ಭದಲ್ಲಿ ಮನೆಯಲ್ಲಿ ಸುರಕ್ಷಿತವಾಗಿರಬೇಕಾದ ಆ್ಯಮಿ ರಸ್ತೆಗಿಳಿದಿದ್ದಾರೆ. ಅಲ್ಲದೆ ಕಾರ್​ನಲ್ಲೇ ಯುರೋಪ್ ಟ್ರಿಪ್ ಮಾಡುತ್ತಿದ್ದಾರೆ.

https://www.instagram.com/p/BykolaxpFpe/?utm_source=ig_embed

ಆ್ಯಮಿ ಜಾಕ್ಸನ್ ಕೇವಲ ಸಿನಿಮಾ ನಟಿ ಮಾತ್ರವಲ್ಲ. ಸದ್ದಿಲ್ಲದೆ ಅನೇಕ ಸಾಮಾಜಿಕ ಕೆಲಸದಲ್ಲೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಪ್ರಯಾಣಿಸುವ ಮೂಲಕ ಹಿಂದುಳಿದ ಮಹಿಳೆಯರ ಅಭಿವೃದ್ಧಿಗಾಗಿ ಸಹಾಯ ಮಾಡುವುದು ಹಾಗೂ ಮಹಿಳೆಯರ ಕುರಿತ ಸಾಮಾಜಿಕ ಜಾಗೃತಿ ಮೂಡಿಸುವುದು ಆ್ಯಮಿ ಜಾಕ್ಸನ್ ಉದ್ದೇಶ.

https://www.instagram.com/p/BykEDdJJhrG/?utm_source=ig_embed

ಇದೇ ಉದ್ದೇಶದಿಂದ ಇಡೀ ಯುರೋಪ್ ಸುತ್ತು ಹಾಕುತ್ತಿರುವ ಆ್ಯಮಿ ತಮ್ಮ ಛಾಯಾಚಿತ್ರವನ್ನು ಇನ್ಸ್​ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಛಾಯಾಚಿತ್ರದ ಜೊತೆಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, “ನನಗೆ ಸುತ್ತಾಡುವುದೆಂದರೆ ಬಹಳ ಇಷ್ಟ. ನಾನು ಖುಷಿ ಪಡುವುದರೊಂದಿಗೆ ನನ್ನ ಮಗು ಕೂಡ ಸಂಸತಪಡೆಬೇಕು ಎಂಬ ಕಾರಣಕ್ಕೆ ಈ ಸಂದರ್ಭದಲ್ಲಿ ಯುರೋಪ್ ಟ್ರಿಪ್ ಮಾಡುತ್ತಿದ್ದೇನೆ.

https://www.instagram.com/p/ByiNULypLXn/?utm_source=ig_embed

ಅಲ್ಲದೆ ಈ ಪ್ರಯಾಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿರುತ್ತಾರೊ ಅಂತವರಿಗೆ ನಾನು ಸಹಾಯ ಮಾಡುತ್ತೇನೆ. ನಾನು ತಾಯಿ ಆಗುವುದರ ಜೊತೆಗೆ ಬೇರೆ ತಾಯಂದಿರು ಮತ್ತು ಅವರ ಮಕ್ಕಳಿಗೂ ಸಹಾಯ ಮಾಡುವ ಪ್ರತಿಯೊಂದು ಕ್ಷಣಗಳನ್ನು ನಾನು ಆನಂದಿಸುತ್ತೇನೆ. ಈ ಪ್ರಯಾಣದಲ್ಲಿ ನನಗೆ ಒಳ್ಳೆಯ ಹೊಸ ಗೆಳೆತಿಯರ ಪರಿಚಯವೂ ಆಗಿದೆ. ಇಂತಹ ಕ್ಷಣಗಳನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ನಟಿ ಆ್ಯಮಿ ಜಾಕ್ಸನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Bharat Movie: ‘ಭಾರತ್’ ಸಿನಿಮಾ ನೋಡದವರನ್ನು ದೇಶದ್ರೋಹಿ ಎಂದ ಸಲ್ಮಾನ್ ಖಾನ್!

First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...