Hitler Kalyana ಧಾರಾವಾಹಿಯಲ್ಲಿ ಮೇಜರ್​ ಟ್ವಿಸ್ಟ್​: ಕಿರುತೆರೆಗೆ `ಅಮೃತವರ್ಷಿಣಿ’ ರಜಿನಿ ರೀ ಎಂಟ್ರಿ!

ಇದೇ ಪಾತ್ರದ ಮೂಲಕ ರಜನಿ ಕಿರುತೆರೆಗೆ ಮರಳಿದ್ದಾರೆ. ‘ಅಂತರ’ ಪಾತ್ರದಲ್ಲಿ ರಜನಿ ಎಂಟ್ರಿಕೊಡುತ್ತಿದ್ದ ಹಾಗೆಯೇ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ. ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ರಜಿನಿ ನಟಿಸಿದ್ದರು. ಬಳಿಕ ಹಾರರ್ ಥ್ರಿಲ್ಲರ್ ಸೀರಿಯಲ್ ‘ಆತ್ಮ ಬಂಧನ’ದಲ್ಲಿ ರಜಿನಿ ಅಭಿನಯಿಸಿದ್ದರು.

ದಿಲೀಪ್​ ರಾಜ್​, ರಜಿನಿ

ದಿಲೀಪ್​ ರಾಜ್​, ರಜಿನಿ

  • Share this:
ಜೊತೆ ಜೊತೆಯಲಿ (Jothe Jotehyali) ಧಾರವಾಹಿ ಸಾಕಷ್ಟು ಮನ್ನಣೆ ಪಡೆದುಕೊಂಡಿದೆ. ಇದೇ ಜಾನರ್​​ನಲ್ಲಿ ಬಂದ ಹಿಟ್ಲರ್ ಕಲ್ಯಾಣ (Hitler Kalyana) ಕೂಡ ಮನೆ ಮಾತಾಗಿದೆ. ಅದ್ಭುತವಾದ ಕಥೆ ಹೊಂದಿರುವ ಈ ಸೀರಿಯಲ್​ (Serial) ಹೆಂಗಳೆಯರ ಅಚ್ಚುಮೆಚ್ಚು. ಎಲ್ಲೆ ಇದ್ದರೂ, ಏನೇ ಕೆಲಸ ಮಾಡುತ್ತಿದ್ದರು ಹಿಟ್ಲರ್​​ ಕಲ್ಯಾಣ ಸೀರಿಯಲ್​ ಸ್ಟಾರ್ಟ್ ಆಯ್ತು ಎಂದರೇ ಸಾಕು ಎಲ್ಲ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಟಿವಿ ಮುಂದೆ ಬಂದು ಕೂರುತ್ತಾರೆ. ಪ್ರತಿದಿನ ಈ ಸೀರಿಯಲ್​ನಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಟಿ.ಆರ್.ಪಿ(TRP) ಹೊಂದಿರುವ ಧಾರಾವಾಹಿಗಳ ಪೈಕಿ ‘ಹಿಟ್ಲರ್ ಕಲ್ಯಾಣ’ ಕೂಡ ಒಂದು. ತ್ರಿಶೂಲ್ (Thrishool) ಅವರು ನಿರ್ದೇಶನ ಮಾಡುತ್ತಿರುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ‘ಮಿಸ್ಟರ್ ಪರ್ಫೆಕ್ಟ್’ ಎಜೆ ಅಭಿರಾಮ್ ಜಯಶಂಕರ್ ಪಾತ್ರದಲ್ಲಿ ದಿಲೀಪ್ ರಾಜ್ (Dileep Raj) ತುಂಬಾ ಅದ್ಭುತವಾಗಿ ನಟಿಸಿ ಎಲ್ಲರ ಮನ ಗೆದ್ದಿದ್ದಾರೆ. ಎಡವಟ್ಟು ಲೀಲಾ ಪಾತ್ರದಲ್ಲಿ ಮಲೈಕಾ ವಸುಪಾಲ್ (Malaika T Vasupal) ಅಭಿನಯಿಸುತ್ತಿದ್ದಾರೆ. ಇವರಿಬ್ಬರ ಜುಗಲ್​ಬಂದಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ. ಈಗ ಹೊಸ ವಿಚಾರ ಏನಪ್ಪಾ ಅಂದರೆ, ಈ ಸೀರಿಯಲ್​ಗೆ  ಮೇಜರ್​ ಟ್ವಿಸ್ಟ್​ ಸಿಕ್ಕಿದೆ. ಅದೇನಪ್ಪಾ? ಅಂತೀರಾ ಮುಂದೆ ಇದೆ ನೋಡಿ. 

‘ಹಿಟ್ಲರ್​ ಕಲ್ಯಾಣ’ ಮೂಲಕ ರಜಿನಿ ರೀ ಎಂಟ್ರಿ

ಸದ್ಯ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಜೆ ಹಾಗೂ ಲೀಲಾ ಪಾತ್ರಗಳ ಅವರ ಕಲ್ಯಾಣ ನೆರವೇರಿದೆ. ಎಜೆ ಕಡೆಯಿಂದ ಪತ್ನಿ ಲೀಲಾಗೆ ಶಿಕ್ಷೆ ಆಗುತ್ತಲೇ ಇದೆ. ಹೀಗಿರುವಾಗಲೇ, ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ನಟಿ ರಜಿನಿ ಎಂಟ್ರಿ ಕೊಡಲಿದ್ದಾರೆ. ಹೌದು, ಅಮೃತವರ್ಷಿಣಿ ಧಾರಾವಾಹಿ ಮೂಲಕ ಮನೆಮಾತಗಿದ್ದ ರಜಿನಿ ಮತ್ತೆ ಕಿರುತೆರೆಗೆ ಮರಳಿದ್ದಾರೆ, ಕೆಲ ತಿಂಗಳಿನಿಂದ ರಜಿನಿ ಕಣ್ಮರೆಯಾಗಿದ್ದರು. ಇದೀಗ ಹಿಟ್ಲರ್​ ಕಲ್ಯಾಣ ಸೀರಿಯಲ್​ ಮೂಲಕ ಮತ್ತೆ ಕಿರುತೆರೆಗೆ ರೀ ಎಂಟ್ರಿಯಾಗುತ್ತಿದ್ದಾರೆ.ಈ ಸೀರಿಯಲ್​ ಕಥೆಗೆ ತಿರುವು ನೀಡೋದಕ್ಕೆ ‘ಅಂತರ’ ಪಾತ್ರ ಎಂಟ್ರಿಯಾಗುತ್ತಿದೆ.

ಇದನ್ನು ಓದಿ : ಆಸ್ಪತ್ರೆಗೆ ದಾಖಲಾದ ರಚಿತಾ ರಾಮ್​ ಡಿಸ್ಚಾರ್ಜ್: ಪ್ರಚಾರದ ಭರಾಟೆಯಲ್ಲಿ ತಿನ್ನುವುದನ್ನೇ ಮರೆತ್ರಾ ಡಿಂಪಲ್ ಕ್ವೀನ್​?

ಎಜೆ ಮೊದಲನೇ ಹೆಂಡತಿ ಪಾತ್ರದಲ್ಲಿ ರಜಿನಿ!

ಹೌದು, ಶಾಕ್​ ಆಯ್ತಾ? ಹಿಟ್ಲರ್​ ಕಲ್ಯಾಣ ಸೀರಿಯಲ್​ ನೋಡುವವರಿಗೆ ಇದನ್ನು ಕೇಳಿ ಶಾಕ್​ ಆಗಿರುವುದು ಪಕ್ಕಾ. ಯಾಕೆಂದರೆ ಈ ಸೀರಿಯಲ್​ನಲ್ಲಿ ಎಜೆ ಪಾತ್ರದ ಮೊದಲನೇ ಹೆಂಡತಿ ಮೃತಪಟ್ಟಿರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಇದೇ ಪಾತ್ರದ ಮೂಲಕ ರಜನಿ ಕಿರುತೆರೆಗೆ ಮರಳಿದ್ದಾರೆ. ‘ಅಂತರ’ ಪಾತ್ರದಲ್ಲಿ ರಜನಿ ಎಂಟ್ರಿಕೊಡುತ್ತಿದ್ದ ಹಾಗೆಯೇ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಗೆ ಹೊಸ ತಿರುವು ಸಿಗಲಿದೆ. ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ರಜಿನಿ ನಟಿಸಿದ್ದರು. ಬಳಿಕ ಹಾರರ್ ಥ್ರಿಲ್ಲರ್ ಸೀರಿಯಲ್ ‘ಆತ್ಮ ಬಂಧನ’ದಲ್ಲಿ ರಜಿನಿ ಅಭಿನಯಿಸಿದ್ದರು.

ಇದನ್ನು ಓದಿ : Kannadathi Serial ಮೂಲಕ ಮನೆಮಾತಾಗಿದ್ದ ರಮೋಲಾ: ಸೀರಿಯಲ್​ ಬಿಟ್ಟು ಏನ್​ ಮಾಡ್ತಿದ್ದಾರೆ ನೋಡಿ..

ಈ ಹಿಂದೆ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದ ರಜಿನಿ!

ಕೆಲವು ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಅಮೃತವರ್ಷಿಣಿ' ಧಾರಾವಾಹಿ ಪ್ರಸಾರವಾಗುತ್ತಿತ್ತು. ಅನಕ್ಷರಸ್ತ ಸೊಸೆ ಅಮೃತಾಗೆ ಅತ್ತೆ ಶಕುಂತಲಾ ವಿದ್ಯೆ ಕಲಿಸಿ ಒಳ್ಳೆಯ ಗೃಹಿಣಿ, ಬುದ್ಧಿವಂತೆಯನ್ನಾಗಿ ಮಾಡುವ ಕಥೆಯನ್ನು ಇದು ಹೊಂದಿತ್ತು. ಅನೇಕರು ಈ ಧಾರಾವಾಹಿಯನ್ನು ಇಷ್ಟಪಟ್ಟಿದ್ದರು. 6 ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು.  ಧಾರಾವಾಹಿಯ ಲೀಡ್ ಪಾತ್ರದಲ್ಲಿ ರಜಿನಿ ಕಾಣಿಸಿಕೊಂಡಿದ್ದರು. ಇವರ ಮೂಗು ದಪ್ಪ ಎಂದು ಎಲ್ಲರೂ ಹೇಳುತ್ತಿದ್ದರಂತೆ. ಹೀಗಾಗಿ ತಮ್ಮ ಮೂಗಿಗೆ ಸರ್ಜರಿ ಮಾಡಿಸಿದ್ದರಂತೆ ಕಿರುತೆರೆ ನಟಿ ರಜಿನಿ.
Published by:Vasudeva M
First published: