ರಿಲೀಸ್‍ಗೆ ರೆಡಿಯಾಗಿದೆ Amruth Apartments: ಹೀಗೊಂದು ವಿಭಿನ್ನ ಮರ್ಡರ್ ಮಿಸ್ಟರಿ! 

ಬಹು ಸಂಸ್ಕೃತಿ ಹಿನ್ನೆಲೆಯುಳ್ಳ ಮತ್ತು ಬಹು ಭಾಷೆಯ ಬಳಕೆಯುಳ್ಳ ಇಂದಿನ ಬೆಂಗಳೂರಿನಲ್ಲಿ ನಡೆಯುವಂತಹ ಕಥೆಯನ್ನು ಅಮೃತ್ ಅಪಾರ್ಟ್‍ಮೆಂಟ್ಸ್ ಸಿನಿಮಾ ಒಳಗೊಂಡಿದೆ.

ಅಮೃತ್​ ಅಪಾರ್ಟ್​ಮೆಂಟ್​ ಸಿನಿಮಾ ಪೋಸ್ಟರ್​

ಅಮೃತ್​ ಅಪಾರ್ಟ್​ಮೆಂಟ್​ ಸಿನಿಮಾ ಪೋಸ್ಟರ್​

  • Share this:
ಸಿನಿಮಾ ಮಾಧ್ಯಮ ಸಮಾಜದ ಕನ್ನಡಿ ಇದ್ದಂತೆ. ಬಹುತೇಕ ಸಿನಿಮಾಗಳಿಗೆ ಸಮಾಜದಲ್ಲಿ ನಡೆದಿರುವ ಘಟನೆಗಳೇ ಸ್ಫೂರ್ತಿಯಾಗಿರುತ್ತವೆ. ಬಯೋಪಿಕ್‍ಗಳು ಒಂದೆಡೆಯಾದರೆ ನೈಜ ಘಟನೆಗಳನ್ನು ಆಧರಿಸಿ, ಅದಕ್ಕೆ ಉಪ್ಪು, ಹುಳಿ, ಮಸಾಲೆ, ಸಿಹಿ ಮಿಶ್ರಣ ಮಾಡಿ, ಸಿನಿಮಾ ರೂಪದಲ್ಲಿ ಉಣಬಡಿಸುವ ಪ್ರಯತ್ನಗಳು ಮತ್ತೊಂದೆಡೆ. ಹೀಗೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣವಾದ ಚಿತ್ರ ಅಮೃತ ಅಪಾರ್ಟ್‍ಮೆಂಟ್ಸ್ (Amruth Apartments). ಅಪಾರ್ಟ್‍ಮೆಂಟ್ ಜೀವನವೇ ಒಂದು ರೀತಿ. ಅದರಲ್ಲಂತೂ ಒಂದೊಂದು ಅಪಾರ್ಟ್‍ಮೆಂಟ್ ಕೂಡ ಒಂದೊಂದು ಊರು ಇದ್ದಂತೆ. 100ರಿಂದ 2000 ಫ್ಲ್ಯಾಟ್‍ಗಳವರೆಗೂ ಇರುವ ಅಪಾರ್ಟ್‍ಮೆಂಟ್‍ಗಳು ಬೆಂಗಳೂರಿನಲ್ಲಿವೆ. ಒಂದು ಊರಿನಂತೆಯೇ ಎಲ್ಲ ರೀತಿಯ ಜನರೂ ಅಪಾರ್ಟ್‍ಮೆಂಟ್‍ಗಳಲ್ಲೂ ಸಿಗುತ್ತಾರೆ. ಬಹು ಸಂಸ್ಕೃತಿ ಹಿನ್ನೆಲೆಯುಳ್ಳ ಮತ್ತು ಬಹು ಭಾಷೆಯ ಬಳಕೆಯುಳ್ಳ ಇಂದಿನ ಬೆಂಗಳೂರಿನಲ್ಲಿ ನಡೆಯುವಂತಹ ಕಥೆಯನ್ನು ಅಮೃತ್ ಅಪಾರ್ಟ್‍ಮೆಂಟ್ಸ್ ಸಿನಿಮಾ ಒಳಗೊಂಡಿದೆ.

ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ಅದನ್ನು ಹಲವು ಟ್ವಿಸ್ಟ್ ಮತ್ತು ಟರ್ನ್‍ಗಳೊಂದಿಗೆ ನಿರ್ದೇಶಕರು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಅಮೃತ ಅಪಾರ್ಟ್‍ಮೆಂಟ್ಸ್ ಚಿತ್ರವನ್ನು ಗುರುರಾಜ ಬಿ. ಕುಲಕರ್ಣಿ (ನಾಡಗೌಡ) ಅವರೇ ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಹಿಂದೆ ಆಕ್ಸಿಡೆಂಟ್ ಹಾಗೂ ಲಾಸ್ಟ್ ಬಸ್ ಸಿನಿಮಾಗಳನ್ನು ನಿರ್ಮಿಸಿರುವ ಅನುಭವಗಳೊಂದಿಗೆ ಮತ್ತೊಂದು ಹೊಸ ಚಿತ್ರದೊಂದಿಗೆ ತೆರೆ ಬರಲು ಸಿದ್ಧತೆ ನಡೆಸಿದ್ದಾರೆ.



ಸದ್ಯ ಚಿತ್ರೀಕರಣ, ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲ ಕೆಲಸಗಳನ್ನೂ ಪೂರ್ಣಗೊಂಡಿದ್ದು, ಸಿನಿಮಾ ರಿಲೀಸ್‍ಗೆ ಎದುರು ನೋಡುತ್ತಿದೆ. ಹಿರಿಯ ನಿರ್ಮಾಪಕ ದಿವಂಗತ ಕೆಸಿಎನ್ ಚಂದ್ರಶೇಖರ್ ಅವರು ಅಮೃತ ಅಪಾರ್ಟ್‍ಮೆಂಟ್ಸ್ ಟೀಸರ್ ರಿಲೀಸ್ ಮಾಡಿದ್ದು, ನಿರ್ಮಾಪಕಿ ಕಮ್ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಗ್ಲಾಮರಸ್​ ಗೊಂಬೆ Ramya ಲೆಟೆಸ್ಟ್​ ಫೋಟೋಗಳಿಗೆ ಅಭಿಮಾನಿಗಳು ಫಿದಾ..!

ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಕುತೂಹಲಕಾರಿ ಅಂಶಗಳನ್ನು ಚಿತ್ರ ಒಳಗೊಂಡಿದ್ದು, ಈಗಾಗಲೇ ಟೀಸರ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟು ಮಾತ್ರವಲ್ಲ ಖುದ್ದು ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ ಸದಸ್ಯರೂ ಸಹ ಅಮೃತ ಅಪಾರ್ಟ್‍ಮೆಂಟ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪದೇ ಪದೇ ಕ್ಷಮೆ ಕೇಳಿದ ನಟಿ Rashmika Mandanna: ಕಾರಣ ಏನು ಗೊತ್ತಾ..?

ಚಿತ್ರದಲ್ಲಿ ಕೆಜಿಎಫ್ ಚಾಪ್ಟರ್ 1, ಯುವರತ್ನ ಸೇರಿದಂತೆ ಸದ್ಯ ರಿಲೀಸ್‍ಗೆ ರೆಡಿಯಿರುವ ಬಹುನಿರೀಕ್ಷಿತ ಸಿನಿಮಾಗಳಾದ ಕೆಜಿಎಫ್ ಚಾಪ್ಟರ್ 2 ಹಾಗೂ ಕೋಟಿಗೊಬ್ಬ 3 ಚಿತ್ರಗಳಲ್ಲಿ ನಟಿಸಿರುವ ತಾರಕ್ ಪೊನ್ನಪ್ಪ ನಾಯಕನಾಗಿದ್ದಾರೆ. ಅವರಿಗೆ ನಾಯಕಿಯಾಗುವ ಮೂಲಕ ಊರ್ವಶಿ ಗೋವರ್ಧನ್ ಸ್ಯಾಂಡಲ್‍ವುಡ್‍ಗೆ ಡೆಬ್ಯೂ ಮಾಡುತ್ತಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಸಂಪತ್ ಕುಮಾರ್, ಮಾನಸ ಜೋಶಿ, ಸೀತಾ ಕೋಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೃತ ಅಪಾರ್ಟ್‍ಮೆಂಟ್ಸ್‍ಗೆ ಎ. ಎಂ. ಶಾ ಹಿನ್ನೆಲೆ ಸಂಗೀತ ನೀಡಿದ್ದು, ಎಸ್ ಡಿ ಅರವಿಂದ್ ರವರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹಿರಿಯ ಸಂಕಲನಕಾರ ಬಿ ಎಸ್ ಕೆಂಪರಾಜು ಸಂಕಲನ ಹಾಗೂ ಅರ್ಜುನ್ ಅಜಿತ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: Release Date: ಅಕ್ಟೋಬರ್​ನಲ್ಲಿ ಕನ್ನಡ-ಮಲಯಾಳಂನಲ್ಲಿ ತೆರೆ ಕಾಣಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ಈ ಸಿನಿಮಾ..!

ಕೊರೋನಾ ಲಾಕ್‍ಡೌನ್ ಅಂತ ಹೆದರಿ ಕೂತರೆ ಆಗೋದಿಲ್ಲ, ಸಿನಿಪ್ರಿಯರಲ್ಲೂ ಧೈರ್ಯ ತುಂಬಿ ಮತ್ತೆ ಥಿಯೇಟರ್​ಗಳಿಗೆ, ಮಲ್ಟಿಪ್ಲೆಕ್ಸ್‍ಗಳಿಗೆ ವಾಪಸ್ ಕರೆತರುವ ಕೆಲಸ ಮಾಡಬೇಕಿದೆ ಎಂದು ಮನಸ್ಸು ಮಾಡಿರುವ ಅಮೃತ ಅಪಾರ್ಟ್‍ಮೆಂಟ್ಸ್ ಚಿತ್ರತಂಡ, ಶೇಕಡಾ 50ರಷ್ಟು ನಿರ್ಬಂಧದ ನಡುವೆಯೇ ರಿಲೀಸ್‍ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
Published by:Anitha E
First published: