ಬಾಲಿವುಡ್ನಲ್ಲಿ (Bollywood) ಮದುವೆಗಳ (Marriage) ಅಬ್ಬರ ಜೋರಾಗಿದೆ. ಸ್ಟಾರ್ ನಟ-ನಟಿಯರು (Actors) ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಸ್ಟಾರ್ ನಟ-ನಟಿಯರ ಮದುವೆಗಳು ಹಳೆಯ ಅರಮನೆಗಳಲ್ಲಿ, ಸ್ಟಾರ್ ಹೋಟೆಲ್ಗಳಲ್ಲಿ (Star Hotels) ನಡೆಯುತ್ತವೆ. ಇದೀಗ ನಟಿಯೊಬ್ಬರು (Actress) ಭಾರೀ ಕಡಿಮೆ ಬಜೆಟ್ನಲ್ಲಿ ಮದುವೆಯಾಗಿ ಎಲ್ಲರ ಹುಬ್ಬೇರಿಸಿದ್ದಾರೆ. ಸೆಲೆಬ್ರಿಟಿಗಳನ್ನು ಹೊರತುಪಡಿಸಿ ಜನ ಸಾಮಾನ್ಯರು ದುಬಾರಿ ವಿವಾಹಗಳತ್ತ (Marriages) ಮುಖ ಮಾಡುತ್ತಿರುವ ಸಂದರ್ಭದಲ್ಲಿ ಈ ನಟಿ ತುಂಬಾ ಸರಳವಾಗಿ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಅವರ ಮದುವೆ ವಿಚಾರವೇ ಈಗ ಎಲ್ಲಾ ಕಡೆ ವೈರಲ್ ಆಗಿದೆ.
ಅಮೃತಾ ರಾವ್ ಹಾಗೂ ಅವರ ಪತಿ ಆರ್ಜೆ ಅನ್ಮೋಲ್ ತಮ್ಮ ಮದುವೆಯ ಕುರಿತು ಕೆಲವು ಶಾಕಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ಇತ್ತೀಚಿನ ಯೂಟ್ಯೂಬ್ ವ್ಲಾಗ್ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡ ಜೋಡಿ ತಮ್ಮ ಮದುವೆ ಖರ್ಚಿನ ಬಗ್ಗೆ ಮಾತನಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಆ್ಯನಿವರ್ಸರಿ ಸ್ಪೆಷಲ್ ವಿಡಿಯೋನಲ್ಲಿ ಮಾತನಾಡಿದ ಜೋಡಿ ಮುಂಬೈಯಿಂದ ಪುಣೆಯ ಜರ್ನಿ ತೋರಿಸಿದ್ದಾರೆ.
ಮದುವೆ ಖರ್ಚು ರಿವೀಲ್ ಮಾಡಿದ ಜೋಡಿ
ಇಸ್ಕಾನ್ ದೇವಾಲಯದಲ್ಲಿ ಮದುವೆಯಾದ ವಿಚಾರವನ್ನು ಶೇರ್ ಮಾಡಿದ್ದಾರೆ. 9 ವರ್ಷಗಳ ಹಿಂದೆ ನಡೆದ ಮದುವೆ ಬಗ್ಗೆ ವಿವರಿಸಿದ್ದಾರೆ. ಅಮೃತಾ ಹಾಗೂ ಅನ್ಮೋಲ್ ಒಟ್ಟಾಗಿ 1.5 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿದ್ದಾರೆ ತಿಳಿಸಿದ್ದಾರೆ. ಇದರಲ್ಲಿಯೇ ಮದುವೆಯ ಎಲ್ಲಾ ಖರ್ಚು ಸೇರಿತ್ತು.
ಇದನ್ನೂ ಓದಿ: Raveena Tondon: ಅಕ್ಷಯ್ ಜೊತೆ ಬ್ರೇಕಪ್, ಇಂಟರ್ವ್ಯೂನಲ್ಲಿ ಕಣ್ಣೀರಿಟ್ಟ KGF ನಟಿ!
ಮೇ ಹೂ ನಾ, ಇಶ್ಕ್ ವಿಶ್ಕ್, ಜಾಲಿ ಎಲ್ಎಲ್ಬಿ, ಥ್ಯಾಕರೆ ಸಿನಿಮಾಗಳಲ್ಲಿ ನಟಿಸಿದ ಅಮೃತಾ ಅವರು ತಮ್ಮ ಮದುವೆಗೆ ತಾವು ಡಿಸೈನರ್ ಸೀರೆ ಉಡಲು ಬಯಸಿರಲಿಲ್ಲ ಎಂದಿದ್ದಾರೆ. ತಾವು ಸಾಂಪ್ರದಾಯಿಕವಾಗಿ ಕಾಣಿಸಲು ಇಷ್ಟಪಟ್ಟಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಮದುವೆಯಲ್ಲಿ 3 ಸಾವಿರ ಬೆಲೆಯ ಸೀರೆ ಉಟ್ಟಿದ್ದಾಗಿ ನಟಿ ಹೇಳಿದ್ದಾರೆ. ಅನ್ಮೋಲ್ ಅವರ ಮದುವೆ ಡ್ರೆಸ್ ಕೂಡಾ ಬಹುತೇಕ ಇದೇ ಬೆಲೆಯದ್ದಾಗಿತ್ತು ಎಂದು ಅವರು ರಿವೀಲ್ ಮಾಡಿದ್ದಾರೆ. ಮದುವೆಯ ಸ್ಥಳಕ್ಕೆ 11 ಸಾವಿರ ಖರ್ಚಾಗಿತ್ತು ಎಂದು ಹೇಳಿದ್ದಾರೆ.
ಡಿಸೈನರ್ ಬಟ್ಟೆ ಬದಲು ಸಿಂಪಲ್ ಸೀರೆ
ನನಗೆ ಸಾಂಪ್ರದಾಯಿಕ ಉಡುಗೆ ಬೇಕಿತ್ತು. ನನಗೆ ಡಿಸೈನರ್ ಬಟ್ಟೆ ಧರಿಸಲು ಇಷ್ಟವಿರಲಿಲ್ಲ. ನಾನು ಆರ್ಟಿಫಿಶಿಯಲ್ ಆಭರಣಗಳನ್ನು ಧರಿಸಿದ್ದೆ. ನನ್ನ ಕರಿಮಣಿ ಸರ 18 ಸಾವಿರ ಬೆಲೆಯದ್ದು. ಮದುವೆ ಎಂದರೆ ಪ್ರೇಮ ಎಂದು ನಾವು ನಂಬುತ್ತೇವೆ. ನಾವು ಮದುವೆಗೆ ನಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರನ್ನಷ್ಟೇ ಆಹ್ವಾನಿಸಿದ್ದೆವು. ನಾವು ಮದುವೆಗಾಗಿ ಜಾಸ್ತಿ ಖರ್ಚು ಮಾಡಲಿಲ್ಲ. ಆದರೆ ಮದುವೆಯನ್ನು ಎಂಜಾಯ್ ಮಾಡಿದೆವು ಎಂದಿದ್ದಾರೆ.
ನಮ್ಮ ಮದುವೆ ನಮ್ಮ ವ್ಯಕ್ತಿತ್ವದ ಪ್ರತಿಫಲನ. ನಮ್ಮ ಮದುವೆ ಜನರಿಗೆ ಪ್ರೇರಣೆಯಾದರೆ ಅದುವೇ ಖುಷಿ. ಜನರು ತಮ್ಮ ಲಿಮಿಟ್ನಲ್ಲಿಯೇ ಮದುವೆಯಾಗಲು ಪ್ರೋತ್ಸಾಹಿಸಿದಂತಾಗುತ್ತದೆ ಎಂದಿದ್ದಾರೆ. ಅಮೃತಾ ಹಾಗೂ ಆರ್ಜೆ ಅನ್ಮೋಲ್ ಅವರ ವಿವಾಹ ನೆಟ್ಟಿಗರನ್ನು ಅಚ್ಚರಿಗೊಳಿಸಿತು. ಬಜೆಟ್ ಫ್ರೆಂಡ್ಲೀ ಮದುವೆ ವಿಧಾನ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರೂ ಅವರನ್ನು ಅಭಿನಂದಿಸಿದರು.
ನೆಟ್ಟಿಗರ ರಿಯಾಕ್ಷನ್
ನಿಮ್ಮ ಮದುವೆ ಬೆಸ್ಟ್ ಆಗಿದೆ. ನೀವು ಎಲ್ಲರಿಗೂ ಪ್ರೇರಣೆ. ತುಂಬಾ ಸಿಂಪಲ್ ಆಗಿದ್ದೀರಿ. ನೀವು ಈಗಿನ ಯುವ ಜನರಿಗೆ ಮಾದರಿಯಾಗಿದ್ದೀರಿ ಎಂದಿದ್ದಾರೆ ನೆಟ್ಟಿಗರು. ಇದು ಬೆಸ್ಟ್ ವಿಧಾನ. ಸುಮ್ಮನೆ ಇತರರಿಗೆ ತೋರಿಸಲು ಹಣ ವೇಸ್ಟ್ ಮಾಡುವುದೇಕೆ ಎಂದಿದ್ದಾರೆ ಇನ್ನೊಬ್ಬರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ