Kala Chashma: 'ಕಾಲಾ ಚಶ್ಮಾ' ಹಾಡು ಬರೆದವರು ಯಾರು ಗೊತ್ತಾ? ಇವರನ್ನು ನೀವು ನೋಡಿರಲು ಸಾಧ್ಯವೇ ಇಲ್ಲ

ಸಾಮಾಜಿಕ ಜಾಲತಾಣದಲ್ಲಿ ಹಿಂದಿಯ ʼಕಾಲಾ ಚಶ್ಮಾʼ ಹಾಡು ಬಿಡುಗಡೆಯಾದ ಆರು ವರ್ಷಗಳ ನಂತರ ಸಕತ್‌ ವೈರಲ್‌ ಆಗುತ್ತಿದ್ದು, ಹವಾ ಮಾಡುತ್ತಿದೆ. ಪಾಪ್ ಸ್ಟಾರ್‌ ಡೆಮಿ ಲೊವಾಟೊ, ಭಾರತೀಯ ಕ್ರಿಕೆಟ್‌ ಟೀಂನಿಂದ ಹಿಡಿದು ಮೊನ್ನೆ ನಾರ್ವೇಜಿಯನ್‌ ನೃತ್ಯ ತಂಡ ಈ ಹಾಡಿಗೆ ಸ್ಟೆಪ್‌ ಹಾಕುವಷ್ಟು ಈ ಹಾಡು ವೈರಲ್‌ ಆಗಿದೆ. ಅಷ್ಟಕ್ಕೂ ಈ ಹಾಡು ಬರೆದವರು ಯಾರು ಗೊತ್ತಾ? ಈ ಸ್ಟೋರಿ ಓದಿ ಗೊತ್ತಾಗುತ್ತೆ

ಕಾಲಾ ಚಶ್ಮಾ ಹಾಡು ಬರೆದ ಅಮ್ರಿಕ್ ಸಿಂಗ್ ಶೇರಾ

ಕಾಲಾ ಚಶ್ಮಾ ಹಾಡು ಬರೆದ ಅಮ್ರಿಕ್ ಸಿಂಗ್ ಶೇರಾ

  • Share this:
ಒಂದು ಹಾಡು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆಗೋಕೆ ಈಗ ಹೆಚ್ಚು ಹೊತ್ತು ಬೇಕಿಲ್ಲ, ಎಷ್ಟೇ ಹಳೇ ಹಾಡುಗಳಾದರೂ (Old Songs) ಈಗಿನ ರೀಲ್ಸ್‌ (Reels), ಸೋಶಿಯಲ್‌ ಮೀಡಿಯಾಗಳಿಂದ ಬೇಗ ಟ್ರೆಂಡ್‌ ಆಗಿಬಿಡುತ್ತವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಿಂದಿಯ ʼಕಾಲಾ ಚಶ್ಮಾʼ ಹಾಡು (Kala Chashma Song) ಬಿಡುಗಡೆಯಾದ ಆರು ವರ್ಷಗಳ ನಂತರ ಸಕತ್‌ ವೈರಲ್‌ ಆಗುತ್ತಿದ್ದು, ಹವಾ ಮಾಡುತ್ತಿದೆ. ಪಾಪ್ ಸ್ಟಾರ್‌ ಡೆಮಿ ಲೊವಾಟೊ, ಭಾರತೀಯ ಕ್ರಿಕೆಟ್‌ ಟೀಂನಿಂದ ಹಿಡಿದು ಮೊನ್ನೆ ನಾರ್ವೇಜಿಯನ್‌ ನೃತ್ಯ ತಂಡ ಈ ಹಾಡಿಗೆ ಸ್ಟೆಪ್‌ ಹಾಕುವಷ್ಟು ಈ ಹಾಡು ವೈರಲ್‌ (Viral) ಆಗಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕತ್ರಿನಾ ಕೈಫ್ ಅಭಿನಯದ ʼಬಾರ್ ಬಾರ್ ದೇಖೋʼ ಹಿಂದಿ ಸಿನಿಮಾದ ಈ ಹಾಡಿಗೆ ಎಲ್ಲರೂ ಮನಸೋತಿದ್ದು, ಪ್ರಪಂಚದಾದ್ಯಂತ ಜನರು ಬಾದ್‌ಶಾನ ಹಾಡಿನ ಬೀಟ್‌ಗಳಿಗೆ ನೃತ್ಯ ಮಾಡುತ್ತಿದ್ದಾರೆ.

ಈ ಫೇಮಸ್ ಹಾಡು ಬರೆದಿದ್ದು ಯಾರು?

ಇಷ್ಟೆಲ್ಲಾ ವೈರಲ್‌ ಆಗುತ್ತಿರುವ ಹಾಡನ್ನು ಬರೆದಿದ್ದು ಯಾರು ಅಂತಾ ನಿಮಗೆ ತಿಳಿದರೆ ಖಂಡಿತ ಆಶ್ಚರ್ಯವಾಗಬಹುದು. ಹೌದು, ಈ ಹಾಡಿನ ಮೂಲ ಸಹ 90ರ ದಶಕದ ಹಿಂದಿನದ್ದಾಗಿದ್ದು, ಮೂಲತಃ ಪ್ರೇಮ್ ಹರ್ದೀಪ್ ಮತ್ತು ಕಾಮ್ ಧಿಲ್ಲೋನ್ ಅವರು ಈ ಹಾಡನ್ನು ಸಂಯೋಜಿಸಿದ್ದಾರೆ, 1991ರಲ್ಲಿಯೇ ಬರೆದಿದ್ದ ಈ ಹಿಟ್ ಹಾಡನ್ನು ಅಮರ್ ಅರ್ಶಿ ಹಾಡಿದ್ದಾರೆ.

ಒಂಬತ್ತನೇ ತರಗತಿಯಲ್ಲಿದ್ದಾಗಲೇ ಹಾಡು ಬರೆದ ಅಮ್ರಿಕ್‌ ಸಿಂಗ್


ಕುತೂಹಲಕಾರಿಯಾಗಿ, ಈ ಹಾಡಿನ ಸಾಹಿತ್ಯವನ್ನು ಪಂಜಾಬ್‌ನ ಅಮ್ರಿಕ್ ಸಿಂಗ್ ಶೇರಾ ಎಂಬುವವರು ಅವರ 15 ನೇ ವಯಸ್ಸಿನಲ್ಲಿ ಬರೆದಿದ್ದಾರೆ. ಅಮ್ರಿಕ್‌ ಅವರು ಕಪುರ್ತಲಾದಲ್ಲಿ ಪಂಜಾಬ್ ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರು ಒಂಬತ್ತನೇ ತರಗತಿಯಲ್ಲಿದ್ದಾಗಲೇ ಈ ಹಾಡನ್ನು ಬರೆದು ಇಟ್ಟಿದ್ದರಂತೆ. ನಂತರ ಈ ಹಾಡಿಗೆ ಸಂಗೀತ ಸಂಯೋಜಿಸುವಂತೆ ಹಲವಾರು ಜನರನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ: Rashmika Mandanna: ಸಿನಿಮಾ ಆಯ್ಕೆಯಲ್ಲಿ ಎಡವಿದಳಾ ಕೊಡಗಿನ ಕುವರಿ? ರಶ್ಮಿಕಾ ಬಾಲಿವುಡ್‌ ಸಿನಿಮಾ ಅರ್ಧಕ್ಕೆ ನಿಂತಿದ್ದೇಕೆ?

"ಈ ಹಾಡಿನ ಗಾಯಕ ­ಅಮರ್ ಅರ್ಶಿ ನಂತರ 'ಕಾಲಾ ಚಶ್ಮಾ' ಹಾಡನ್ನು ತೆಗೆದುಕೊಂಡು ಅದನ್ನು ಇಂಗ್ಲೆಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರದರ್ಶಿಸಿದರು. ಅಲ್ಲಿನ ಕಂಪನಿಯೊಂದು ಈ ಹಾಡನ್ನು ಇಂಗ್ಲೆಂಡಿನಲ್ಲಿ ಬಿಡುಗಡೆ ಮಾಡಿತು ನಂತರ ಅಲ್ಲಿ ಕೂಡ ಈ ಹಾಡು ಭಾರೀ ಹಿಟ್ ಆಯಿತು. ನಂತರ, ಚಂಡೀಗಢ ಮೂಲದ ಕಂಪನಿಯು ಪಂಜಾಬ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಿತು ಮತ್ತು ಅದು ಇಲ್ಲಿ ಜನಪ್ರಿಯವಾಯಿತು” ಎಂದು ಈ ಹಾಡನ್ನು ಬರೆದ ಅಮ್ರಿಕ್ ಸಿಂಗ್ ಹೇಳಿದರು.

"ಈ ಹಾಡನ್ನು ಸಿನಿಮಾಗೆ ತೆಗೆದುಕೊಂಡಿದ್ದು ಗೊತ್ತೇ ಇಲ್ಲ"
ವರದಿಗಳ ಪ್ರಕಾರ, ಹಾಡಿನ ಒಪ್ಪಂದಕ್ಕೆ ಸಹಿ ಹಾಕಿದಾಗ, ಅವರು ಹಾಡಿಗೆ 11,000 ರೂಪಾಯಿಗಳನ್ನು ಪಡೆದಿದ್ದಾರಂತೆ. ಮತ್ತು ಈ ಹಾಡನ್ನು ಸಿನಿಮಾದಲ್ಲಿ ಹಾಕಿ ಕೊಳ್ಳುತ್ತಾರೆ ಎಂಬುವುದುದರ ಬಗ್ಗೆ ಅವರಿಗೆ ತಿಳಿದಿರಲಿಲ್ಲವಂತೆ. “ಚಿತ್ರದ ಸಂಗೀತ ಬಿಡುಗಡೆ ಸಮಯದಲ್ಲಿ ಚಿತ್ರರಂಗದ ಯಾರೂ ನನ್ನನ್ನು ಮುಂಬೈಗೆ ಕರೆದಿರಲಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:  Bollywood: ಏನಿಲ್ಲ ಏನಿಲ್ಲ ಟೈಗರ್​ ಶ್ರಾಫ್​- ದಿಶಾ ಪಾಟ್ನಿ ನಡುವೆ ಏನಿಲ್ಲ! ಶಾಕಿಂಗ್​ ಹೇಳಿಕೆ ಕೊಟ್ಟ ಕೃಷ್ಣ ಶ್ರಾಫ್​

ಈಗ ಜಾಗತಿಕವಾಗಿ ಟ್ರೆಂಡಿಂಗ್‌ ಆಗುತ್ತಿರುವ ಈ ಹಾಡಿನ ಮೂಲಕ ಅಮ್ರಿಕ್ ಅವರು ತಮ್ಮ ಹಳ್ಳಿಗೆ ಗೌರವ ಸಲ್ಲಿಸಿದ್ದಾರೆ. “ನೀವು ಕಾಲಾ ಚಷ್ಮಾವನ್ನು ಸರಿಯಾಗಿ ಆಲಿಸಿದರೆ, ಕೊನೆಯ ಚರಣದಲ್ಲಿ ನಾನು ನನ್ನ ಹಳ್ಳಿಯ ತಲ್ವಂಡಿ ಚೌದ್ರಿಯನ ಹೆಸರನ್ನು ಉಲ್ಲೇಖಿಸಿರುವುದು ನಿಮಗೆ ತಿಳಿಯುತ್ತದೆ" ಎಂದು ಈ ಬಗ್ಗೆ ತಿಳಿಸಿದ್ದಾರೆ.

ಈ ಹಾಡಲ್ಲಿ ಸಖತ್‌ ಆಗಿ ಕಾಣಲು ಐಸ್‌ ಕ್ಯೂಬ್‌ ತಿನ್ನುತ್ತಿದ್ದ ಕತ್ರಿನಾ
ಇತ್ತೀಚೆಗೆ ಕಾಫಿ ವಿತ್ ಕರಣ್‌ನಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಕೂಡ ವೈರಲ್‌ ಆಗುತ್ತಿರುವ ಈ ಹಾಡಿನ ಚಿತ್ರೀಕರಣದ ಬಗ್ಗೆ ಮಾತನಾಡಿದರು. ಹಾಡಿನಲ್ಲಿ ಮಲ್ಹೋತ್ರಾಗೆ ಜೋಡಿಯಾಗಿ ನಟಿಸಿರುವ ಹಾಟ್‌ ಬೆಡಗಿ ಕತ್ರಿನಾ ಕೈಫ್‌ ಬಗ್ಗೆ ಅವರು ಹೇಗೆ ನಟಿ ಆ ಹಾಡಿನಲ್ಲಿ ನಟಿಸಲು ಶ್ರಮ ಪಟ್ಟಿದ್ದಾರೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹಾಡಿನ ಚಿತ್ರೀಕರಣದ ಸಮಯದಲ್ಲಿ ಕತ್ರಿನಾ ಜೀರೋ ಸೈಜ್‌ ಕಾಪಾಡಿಕೊಳ್ಳಲು ಐಸ್ ಕ್ಯೂಬ್‌ಗಳನ್ನು ತಿನ್ನುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.
Published by:Ashwini Prabhu
First published: