• Home
 • »
 • News
 • »
 • entertainment
 • »
 • Amitabh Bachchan: ಪರ್ಮಿಷನ್ ಇಲ್ಲದೆ ಅಮಿತಾಭ್ ಫೋಟೋ, ಧ್ವನಿ ಬಳಸುವಂತಿಲ್ಲ

Amitabh Bachchan: ಪರ್ಮಿಷನ್ ಇಲ್ಲದೆ ಅಮಿತಾಭ್ ಫೋಟೋ, ಧ್ವನಿ ಬಳಸುವಂತಿಲ್ಲ

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರ ಫೋಟೋ, ಧ್ವನಿಯನ್ನು ಅವರ ಅನುಮತಿ ಇಲ್ಲದೆ ಬಳಸುವಂತಿಲ್ಲ. ಈ ಬಗ್ಗೆ ನಟ ಮೊಕದ್ದಮೆ ಹೂಡಿದ್ದು ಅವರ ಪರವಾಗಿ ತೀರ್ಪು ಬಂದಿದೆ.

 • Trending Desk
 • Last Updated :
 • Bangalore, India
 • Share this:

  ಬಾಲಿವುಡ್ (Bollywood) ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಅವರ ವ್ಯಕ್ತಿತ್ವ ಹಕ್ಕು ಉಲ್ಲಂಘನೆ ಮಾಡದಂತೆ ದೆಹಲಿ (Delhi) ಹೈಕೋರ್ಟ್  (High court) ಶುಕ್ರವಾರ ಮಧ್ಯಂತರ ಆದೇಶವನ್ನು ನೀಡಿದೆ. ಬಿಗ್‌ ಬಿ ಎಂದೇ ಜನಪ್ರಿಯವಾಗಿ ಕರೆಯಲಾದ 80 ರ ಹರೆಯದ ಅಮಿತಾಭ್ ತಮ್ಮ ಹೆಸರು, ಚಿತ್ರ, ಧ್ವನಿ ಹಾಗೂ ವ್ಯಕ್ತಿತ್ವದ ಗುಣಲಕ್ಷಣಗಳ ರಕ್ಷಣೆಯನ್ನು ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅಮಿತಾಭ್ ಬಚ್ಚನ್ ಪರವಾಗಿ ನ್ಯಾಯಾಲಯದಲ್ಲಿ ಖ್ಯಾತ ವಕೀಲರಾದ ಹರೀಶ್ ಸಾಳ್ವೆ ಹಾಜರಾಗಿದ್ದರು.


  ಬಚ್ಚನ್ ಹೆಸರಿನಲ್ಲಿ ಟೀಶರ್ಟ್ ಮಾರಾಟ


  ಬಚ್ಚನ್ ಪರವಾಗಿ ವಾದ ಮಂಡಿಸಿದ ಹರೀಶ್ ಸಾಳ್ವೆ ಜಗತ್ತಿನಲ್ಲಿ ಅಮಿತಾಭ್ ಅವರ ಹೆಸರು ಹಾಗೂ ಚಿತ್ರಗಳನ್ನು ಬಳಸಿಕೊಂಡು ಏನು ನಡೆಯುತ್ತಿದೆ ಎಂಬುದರ ಕಿರು ಚಿತ್ರಣವನ್ನು ನೀಡುತ್ತಿದ್ದೇನೆ. ಅವರ ಭಾವಚಿತ್ರ ಇಲ್ಲವೇ ಹೆಸರಿರುವ ಟಿಶರ್ಟ್‌ಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಅವರ ಪೋಸ್ಟರ್‌ಗಳನ್ನು ಮಾರುತ್ತಾರೆ. ಇನ್ನು ಕೆಲವರು ಅವರ ಹೆಸರಿನಲ್ಲಿ amitabhbachchan.com ಎಂಬ ಡೊಮೇನ್ ಆರಂಭಿಸಿದ್ದಾರೆ. ಆದ್ದರಿಂದ ಇಂತಹ ಕೃತ್ಯಗಳಿಂದ ರಕ್ಷಣೆಯನ್ನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿರುವುದಾಗಿ ವಕೀಲರಾದ ಹರೀಶ್ ಸಾಳ್ವೆ ತಿಳಿಸಿದ್ದಾರೆ.
  ಪುಸ್ತಕ ಪ್ರಕಾಶಕರು, ಟಿ-ಶರ್ಟ್ ಮಾರಾಟಗಾರರು ಮತ್ತು ಇತರ ಹಲವಾರು ವ್ಯವಹಾರಗಳ ವಿರುದ್ಧ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ತಡೆಯಾಜ್ಞೆ ಕೋರಿದ್ದಾರೆ.


  ಹೆಸರನ್ನು ಕೆಡಿಸಬಹುದು


  ಫಿರ್ಯಾದಿಯು ಸರಿಪಡಿಸಲಾಗದೇ ಇರುವ ನಷ್ಟ ಹಾಗೂ ಹಾನಿಗೆ ಒಳಪಡುವ ಸಾಧ್ಯತೆ ಇದ್ದು, ಕೆಲವೊಂದು ಚಟುವಟಿಕೆಗಳು ಫಿರ್ಯಾದುದಾರರ ಹೆಸರನ್ನು ಕೆಡಿಸಬಹುದು. ಹೀಗಾಗಿ ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಹಿತಾಸಕ್ತಿಯಿಂದ ಮಧ್ಯಂತರ ಆದೇಶವನ್ನು ಅಂಗೀಕರಿಸಲಾಗಿದೆ ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ತಿಳಿಸಿದ್ದಾರೆ.
  ಅಮಿತಾಭ್ ಬಚ್ಚನ್ ಸುಪ್ರಸಿದ್ಧ ವ್ಯಕ್ತಿಯಾಗಿದ್ದು ಬೇರೆ ಬೇರೆ ಜಾಹೀರಾತುಗಳಲ್ಲಿ ಪ್ರತನಿಧಿಸಲಾಗಿರುವುದರಿಂದ ಇದನ್ನು ಗಂಭೀರವಾಗಿ ಚರ್ಚೆ ನಡೆಸಲಾಗುವುದಿಲ್ಲ. ಅವರ ಅನುಮತಿ ಹಾಗೂ ಅಪ್ಪಣೆ ಇಲ್ಲದೆ ತಮ್ಮ ಸರಕು ಹಾಗೂ ಸೇವೆಗಳನ್ನು ಪ್ರಚಾರಮಾಡಲು ನಟನ ಸ್ಥಾನಮಾನಗಳನ್ನು ಬಳಸಿಕೊಂಡಿರುವುದರಿಂದ ಆರೋಪಿಗಳ ಕೃತ್ಯದಿಂದ ನೊಂದಿದ್ದಾರೆ. ಮೊಕದ್ದಮೆಯನ್ನು ಪರಿಗಣಿಸಿದ ನಂತರ ಮೇಲ್ನೋಟಕ್ಕೆ ಕಾಣುವ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ


  ಲಾಟರಿ ವ್ಯಾಪಾರದಲ್ಲಿ ಅಮಿತಾಭ್ ಹೆಸರು


  ಕಾನೂನುಬಾಹಿರವಾಗಿ ಲಾಟರಿ ವ್ಯಾಪಾರ ನಡೆಸಲು ಅಮಿತಾಭ್ ಬಚ್ಚನ್ ಅವರ ಹೆಸರನ್ನು ಮೊಬೈಲ್ ಆ್ಯಪ್ ಡೆವಲಪರ್‌ಗಳು ಬಳಸುತ್ತಿದ್ದು, ಇನ್ನಿತರರು ಅವರ ಹೆಸರು ಚಿತ್ರವಿರುವ ಟಿ ಶರ್ಟ್‌ಗಳನ್ನು ಮಾರುತ್ತಿದ್ದಾರೆ ಎಂಬುದಾಗಿ ಮೊಕದ್ದಮೆಯಲ್ಲಿ ತಿಳಿಸಲಾಗಿದೆ.


  ಇದನ್ನೂ ಓದಿ: Bollywood Actresses: ಮಕ್ಕಳಿಗೆ ದೇವರ ಹೆಸರಿಟ್ಟ ಬಾಲಿವುಡ್ ನಟಿಯರು


  ಬಚ್ಚನ್ ಅವರ ಹೆಸರು ಹಾಗೂ ಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಬಳಸುತ್ತಿರುವುದು ಸ್ವಲ್ಪ ಸಮಯದಿಂದ ನಡೆದುಕೊಂಡು ಬರುತ್ತಿರುವ ಅಸಂಬದ್ಧತೆಯಾಗಿದೆ. ಗುಜರಾತ್‌ನಲ್ಲಿರುವ ಲಾಟರಿಯಲ್ಲಿ ಆರೋಪಿಯು ಅಮಿತಾಭ್ ಬಚ್ಚನ್ ಫೋಟೋ ಇರುವ ಕೆಬಿಸಿಯ ಲೋಗೋವನ್ನು ನಕಲು ಮಾಡಿದ್ದು, ಇದೊಂದು ಹಗರಣದಂತೆ ಕಾಣುತ್ತಿದೆ. ಏಕೆಂದರೆ ಇಲ್ಲಿ ಯಾವುದೇ ಲಾಟರಿ ಇಲ್ಲ ಹಾಗೂ ಯಾರೂ ಗೆದ್ದಂತಿಲ್ಲ ಎಂಬುದಾಗಿ ಸಾಳ್ವೆ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ.


  ಬಚ್ಚನ್ ಹೆಸರಿನಲ್ಲಿ ವಿಡಿಯೋ ಕರೆ ಅಪ್ಲಿಕೇಶನ್


  ಕೆಲವೊಬ್ಬರು ಆರೋಪಿಗಳು ಅಮಿತಾಭ್ ಬಚ್ಚನ್ ವಿಡಿಯೋ ಕರೆ ಅಪ್ಲಿಕೇಶನ್ ಅನ್ನು ನಡೆಸುತ್ತಿದ್ದು ಬಚ್ಚನ್‌ನಂತೆ ಅವರ ಧ್ವನಿಯನ್ನು ಅನುಕರಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಅಮಿತಾಭ್ ಬಚ್ಚನ್ ವಿಡಿಯೋ ಕಾಲ್ ಹೆಸರಿನ ಮೊಬೈಲ್ ಅಪ್ಲಿಕೇಶನ್‌ ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಇದೊಂದು ನಕಲಿ ವಿಡಿಯೋ ಕಾಲ್ ಅಪ್ಲಿಕೇಶನ್ ಆಗಿದ್ದರೂ ವಾಯ್ಸ್ ಚಾಟಿಂಗ್ ಮಾಡುತ್ತದೆ ಹಾಗೂ ತಮಾಷೆಯ ಕರೆಗಳನ್ನು ಮಾಡುತ್ತದೆ. ಆದರೆ ಬಾಲಿವುಡ್‌ನಲ್ಲಿ ಖ್ಯಾತ ವ್ಯಕ್ತಿಯಾಗಿರುವ ಅಮಿತಾಭ್ ಅವರ ಹೆಸರನ್ನು ಇಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಅವರ ಹೆಸರನ್ನು ಕೆಡಿಸುತ್ತದೆ ಎಂದು ತಿಳಿಸಿದ್ದಾರೆ.

  Published by:Divya D
  First published: