ಡಾರ್ಲಿಂಗ್ ಪ್ರಭಾಸ್ (Prabhas), ದೀಪಿಕಾ ಪಡುಕೋಣೆ (Deepika Padukone) ನಟಿಸುತ್ತಿರುವ ಪ್ರಾಜೆಕ್ಟ್ ಕೆ (Project K) ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ನಟಿಸುತ್ತಿದ್ದಾರೆ. ಈ ವಿಚಾರ ಎಲ್ಲರಿಗೂ ತಿಳಿದೆ ಇದೆ. ಇದರ ಮೊದಲ ಹಂತದ ಶೂಟಿಂಗ್ (Shooting) ಕೂಡ ಕಂಪ್ಲೀಟ್ (Complete) ಆಗಿದೆ. ಈ ವಿಚಾರವನ್ನು ಪ್ರಭಾಸ್ (Prabhas) ಟ್ವೀಟ್ (Tweet) ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇನ್ನೂ ನನ್ನ ಚಿಕ್ಕ ವಯಸ್ಸಿನ ಕನಸು ನನಸಾಯ್ತು, ಅಮಿತಾಭ್ ಬಚ್ಚನ್ ಅವರ ಜೊತೆ ನಟಿಸುವ ಆಸೆ ಈಡೇರಿತು ಎಂದು ಪ್ರಭಾಸ್ ಹೇಳಿದ್ದರು. ಇದೀಗ ಮತ್ತೊಂದು ವಿಚಾರ ಏನಪ್ಪ ಅಂದರೆ, ಪ್ರಭಾಸ್ರ ಮತ್ತೊಂದು ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಇರಲಿದ್ದಾರೆ. ಅರೇ...ಮತ್ತೆ ಇನ್ನೊಂದು ಸಿನಿಮಾ ಯಾವದಪ್ಪ? ಅಂತೀರಾ. ಬೇರೆ ಯಾವುದು ಅಲ್ಲ ರಿಲೀಸ್ (Release) ರೆಡಿಯಾಗಿರೋ ರಾಧೆ-ಶ್ಯಾಮ್ (Radhe Shyam) ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಇರಲಿದ್ದಾರೆ. ಆದರೆ, ಅಮಿತಾಭ್ ಬಚ್ಚನ್ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆದರೂ ಸಿನಿಮಾ ಪೂರ್ತಿ ಇರುತ್ತಾರೆ. ಇದು ಹೇಗೇ ಅಂತೀರಾ ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಅದಕ್ಕೆ ಉತ್ತರ ಮುಂದೆ ಇದೆ ನೋಡಿ..
ರಾಧೆ-ಶ್ಯಾಮ್ ಕಥೆ ಹೇಳಲಿದ್ದಾರೆ ಬಿಗ್ಬಿ
ಹೌದು, ರಾಧೆ-ಶ್ಯಾಮ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ವಾಯ್ಸ್ ಇರಲಿದೆ. ರಾಧೆ-ಶ್ಯಾಮ್ ಕಥೆಯನ್ನು ಅಮಿತಾಭ್ ಬಚ್ಚನ್ ಅವರೇ ವಿವರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಸಹ ಮಾಡಿದೆ. ಈ ವಿಚಾರ ತಿಳಿದ ಪ್ರಭಾಸ್ ಅಭಿಮಾನಿಗಳು ಮತ್ತಷ್ಟು ಥ್ರಿಲ್ ಆಗಿದ್ದಾರೆ. ರಾಧೆ-ಶ್ಯಾಮ್ ಸಿನಿಮಾದ ಮಾರ್ಚ್ 11ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.. ಈ ಚಿತ್ರದ ಕಥೆಯನ್ನು ಅಮಿತಾಭ್ ಬಚ್ಚನ್ ವಿವರಣೆ ನೀಡಲಿದ್ದಾರೆ. ಸಿನಿಮಾ ಆರಂಭದಿಂದ ಕೊನೆವರೆಗೂ ಅಮಿತಾಭ್ ಅವರ ಧ್ವನಿ ಇರಲಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿ ಯುವಿ ಕ್ರಿಯೇಷನ್ಸ್ ಮಾಹಿತಿ ತಿಳಿಸಿದ್ದಾರೆ.
ಬಿಗ್ಬಿಗೆ ಧನ್ಯವಾದ ತಿಳಿಸಿದ ಯುವಿ ಕ್ರಿಯೇಷನ್ಸ್!
ಅಮಿತಾಭ್ ಬಚ್ಚನ್ ಅವರು ರಾಧೆ ಶ್ಯಾಮ್ ಸಿನಿಮಾಗೆ ಧ್ವನಿ ನೀಡಿರುವುದಕ್ಕೆ ಚಿತ್ರತಂಡ ಅಮಿತಾಭ್ ಅವರಿಗೆ ಧನ್ಯವಾದ ತಿಳಿಸಿದೆ. ನಿಮ್ಮ ವಾಯ್ಸ್ ನಮ್ಮ ಚಿತ್ರಕ್ಕೆ ಧನ್ಯವಾದ ಎಂದು ಬರೆದುಕೊಂಡು ಅಮಿತಾಭ್ ಪೋಟೋ ಇರುವ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಪೋಸ್ಟ್ ಮಾಡಿದೆ.
ಇದನ್ನೂ ಓದಿ : ಒಂದೇ ಸಿನಿಮಾದಲ್ಲಿ ಬಿಗ್ಬಿ-ಡಿಪ್ಪಿ-ಪ್ರಭಾಸ್, ಯಪ್ಪೋ.. ಬಜೆಟ್ ಎಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ!
ಭವಿಷ್ಯ ಹೇಳುವ ಪಾತ್ರದಲ್ಲಿ ಪ್ರಭಾಸ್!
ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್ನಲ್ಲಿ ನೋಡಬಹುದು. ಟ್ರೈಲರ್ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ. ಈ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಈ ಟ್ರೈಲರ್ ಅದ್ಭುತ ಭಾವನೆಗಳ ಮಿಶ್ರಣವಾಗಿದ್ದು, ಇದರಲ್ಲಿ ಪ್ರೀತಿ ಪ್ರೇಮವಿದೆ, ಒಂದು ದುರಂತವಿದೆ, ಉತ್ತಮ ಸಂಗೀತವಿದೆ.
ಇದನ್ನೂ ಓದಿ: ಈ ವಿಲ್ಲಾದ 1 ದಿನದ ರೆಂಟ್ ಎಷ್ಟು ಗೊತ್ತಾ? ಬೆಂಗ್ಳೂರಲ್ಲಿ 3 ತಿಂಗಳು ಮನೆ ಬಾಡಿಗೆ ಕಟ್ಬಹುದು!
ಒಂದೇ ಸಿನಿಮಾದಲ್ಲಿ ಬಿಗ್ಬಿ-ಡಿಪ್ಪಿ-ಪ್ರಭಾಸ್!
ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಕೂಡ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಕೂಡ ಪ್ರಸ್ತುತ ವೇಳಾಪಟ್ಟಿಯ ಭಾಗವಾಗಿದ್ದಾರೆ ಎಂದು ಹೇಳಲಾಗಿದೆ. ಚಿತ್ರದ ಶೂಟಿಂಗ್ ವೇಳಾಪಟ್ಟಿಯಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಒಳಗೊಂಡ ಸಿನಿಮಾದ ಕೆಲವು ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ