'ನಡೆದಾಡುವ ದೇವರು' Siddaganga Sri ಪಾತ್ರದಲ್ಲಿ ಅಭಿನಯಿಸುತ್ತಾರಾ ಅಮಿತಾಭ್ ಬಚ್ಚನ್?

ಸಿದ್ದಗಂಗಾ ಶ್ರೀಗಳ ಜೀವನವೇ ಒಂದು ಸ್ಫೂರ್ತಿದಾಯಕ ಕಥೆ. ಈ ಕಥೆ ಇದೀಗ ಸಿನಿ ಮಿನಿ ಸೀರಿಸ್ ರೂಪದಲ್ಲಿ ಬರಲಿದೆ. ಬಾಲಿವುಡ್ ದಂತಕಥೆ, ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರೇ ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಹೀಗೊಂದು ವಿಚಾರ ಇದೀಗ ಚರ್ಚೆಯಾಗುತ್ತಿದ್ದು, ಸಮಸ್ತ ಕನ್ನಡಿಗರು ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು ಸಂತಸದಲ್ಲಿ ತೇಲಾಡುತ್ತಿದ್ದಾರೆ.

ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಬ್ ಬಚ್ಚನ್?

ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಬ್ ಬಚ್ಚನ್?

  • Share this:
‘ಕರುನಾಡಿನ ಕಾಮಧೇನು’, ‘ನಡೆದಾಡುವ ದೇವರು’, ‘ತ್ರಿವಿಧ ದಾಸೋಹಿ’, ‘ಕಾಯಕಯೋಗಿ’ ಅಂತ ಹೆಸರಾದವರು ಶ್ರೀ ಸಿದ್ಧಗಂಗಾ ಶ್ರೀಗಳು (Sri Siddaganga Sri). ‘ಕಲ್ಪತರು ನಾಡು’ ತುಮಕೂರಿನ (Tumkur) ಸಿದ್ದಗಂಗಾ ಮಠದ (Siddaganga Math) ಡಾ. ಶ್ರೀ ಶಿವಕುಮಾರ ಸ್ವಾಮೀಜಿ (Dr. Sri Shivakumar Swamiji) ಲಿಂಗೈಕ್ಯರಾಗಿ 3 ವರ್ಷಗಳಾಯ್ತು. ಆದರೆ ಅವರ ನೆನಪು ಸದಾ ಅಮರ, ಕನ್ನಡಿಗರಷ್ಟೇ ಅಲ್ಲ ಭಾರತೀಯರ ಮನದಲ್ಲಿ ಶ್ರೀಗಳ ಸ್ಮರಣೆ, ನೆನಪು ಸದಾ ಹಸಿರಾಗೇ ಇರುತ್ತದೆ. ಅವರ ಜೀವನವೇ ಒಂದು ಸ್ಫೂರ್ತಿದಾಯಕ ಕಥೆ. ಈ ಕಥೆ ಇದೀಗ ಸಿನಿ ಮಿನಿ ಸೀರಿಸ್ (Cine Mini Series) ರೂಪದಲ್ಲಿ ತೆರೆಗೆ ಬರಲಿದೆ. ಬಾಲಿವುಡ್ (Bollywood) ದಂತಕಥೆ, ‘ಬಿಗ್ ಬಿ’ (Big B) ಅಮಿತಾಭ್ ಬಚ್ಚನ್ (Amitabh Bachchan) ಅವರೇ ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ (Character) ಬಣ್ಣ ಹಚ್ಚಲಿದ್ದಾರಂತೆ. ಹೀಗೊಂದು ವಿಚಾರ ಇದೀಗ ಚರ್ಚೆಯಾಗುತ್ತಿದ್ದು, ಕನ್ನಡಿಗರು ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು (Fans) ಸಂತಸದಲ್ಲಿ ತೇಲಾಡುತ್ತಿದ್ದಾರೆ.

ತೆರೆಗೆ ಬರಲಿದೆ ಸಿದ್ದಗಂಗಾ ಶ್ರೀಗಳ ಜೀವನಗಾಥೆ

111 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಸಿದ್ಧಗಂಗಾ ಶ್ರೀಗಳದ್ದು ಆಧ್ಮಾತ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ದೊಡ್ಡ ಹೆಸರು, ಅವರ ಜೀವನವೇ ಅನೇಕರಿಗೆ ಸ್ಫೂರ್ತಿ. ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ತಾಯಿಯೇ ಆದ ಶ್ರೀಗಳ ಜೀವನಗಾಥೆ ಸಿನಿ ಮಿನಿ ರೂಪದಲ್ಲಿ ಬರಲಿದೆ.

ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್?

ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಶಯ. ಈ ಕಾರಣಕ್ಕೆ ಅವರ ಕಾಲ್​ಶೀಟ್​ ಅನ್ನು ಕೇಳಲಾಗಿದೆ. ‘ಅಮಿತಾಭ್ ಬಚ್ಚನ್ ಅವರು ಸಿದ್ದಗಂಗಾ ಶ್ರೀಗಳ ಪಾತ್ರವನ್ನ ಮಾಡಲು ಈಗಾಗಲೇ ಅಪ್ರೋಚ್ ಮಾಡಲಾಗಿದೆ. ಅವರು ಕಥೆಯನ್ನು ಕೇಳಿದ್ದಾರೆ. ಆದರೆ, ಸದ್ಯ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ಏರುಪೇರಾಗಿರೋ ಕಾರಣ ಗ್ರೀನ್ ಸಿಗ್ನಲ್​ಗಾಗಿ ಕಾಯುತ್ತಿದ್ದೇವೆ’ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಇದನ್ನೂ ಓದಿ: 'KGF' ಯಶಸ್ಸಿನ ಹಿಂದೆ ಇರುವುದು ಮೂವರು 'ಮಹಿಳೆ'ಯರಂತೆ! 'ಸ್ತ್ರೀ ಶಕ್ತಿ' ಬಗ್ಗೆ ನಿರ್ಮಾಪಕರು ಹೇಳಿದ್ದೇನು?

 ಶ್ರೀಗಳ 115ನೇ ಜನ್ಮದಿನಾಚರಣೆ ಹಿನ್ನೆಲೆ ಸಿನಿ ಮಿನಿ ಸಿರೀಸ್

ಏಪ್ರಿಲ್ 1 ಸಿದ್ದಗಂಗಾ ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಡಾ. ಹಂಸಲೇಖ ಅವರುಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್​​ಗಳನ್ನು ಸಿರೀಸ್​​ಗಳನ್ನಾಗಿ ಮಾಡಲಾಗುತ್ತಿದೆ.

6 ಭಾಷೆಗಳಲ್ಲಿ 52 ಎಪಿಸೋಡ್‌ಗಳಲ್ಲಿ ಮಿನಿ ಸಿರೀಸ್

ಸಿದ್ದಗಂಗಾ ಶ್ರೀಗಳ ಜೀವನ ಚರಿತ್ರೆಯನ್ನು ಒಟ್ಟು 52 ಎಪಿಸೋಡ್​​ಗಳನ್ನು ಒಳಗೊಂಡ ಮಿನಿ ಸಿರೀಸ್​​ಗಳನ್ನಾಗಿ ಮಾಡಲಾಗುತ್ತಿದೆ. ದೊಡ್ಡ ಮೊತ್ತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಹಾಗೂ ಸಂಸ್ಕೃತ  ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದೆ. ಏಳಕ್ಕೂ ಹೆಚ್ಚು ತಂಡಗಳಲ್ಲಿ, 300 ಅಧಿಕ ತಂತ್ರಜ್ಞರು ಈ ಮಿನಿ ಸೀರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Puri Jagannadh​ ಜೊತೆ Vijay Deverakonda ಮತ್ತೊಂದು ಸಿನಿಮಾ! ಟೈಟಲ್​ನಲ್ಲೇ ಸಖತ್​ ಕಿಕ್​ ಇದೆ

ಅಮಿತ್ ಶಾ ಅವರಿಂದ ಉದ್ಙಾಟನೆ

ಶ್ರೀಗಳ ಬಗ್ಗೆ ಬರ್ತಿರುವ ಸೀರಿಸ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಷಾ ಉದ್ಘಾಟನೆ ಮಾಡುತ್ತಿದ್ದಾರೆ. ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಮಿತ್ ಶಾ ಅವತ್ತೇ ಮಿನಿ ಸೀರಿಸ್ ಅನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ 115 ಜನ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರೆ. ಅಮಿತ್ ಷಾ ಜೊತೆಗೆ ರಾಜ್ಯದ ನಾಯಕರು ಇರಲಿದ್ದಾರೆ.
Published by:Annappa Achari
First published: