ಮುಂಬರುವ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಗೇಮ್ ಶೋ ‘ಕೌನ್ ಬನೇಗಾ ಕರೋಡ್‌ಪತಿ 14ರ (Kaun Banega Crorepati 14 )ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಆಮಿರ್ ಖಾನ್ (Amir Khan) ಅವರಿಗೆ ಗೇಮ್ ಶೋ ನಡೆಸಿಕೊಡುವ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan )ಅವರು ಗೇಲಿ ಮಾಡಿದ್ದಾರೆ ನೋಡಿ. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ, ನಟ ಆಮಿರ್ ಖಾನ್ ಕಾರ್ಯಕ್ರಮದ ನಿರೂಪಕರಾಗಿರುವ ಅಮಿತಾಭ್ ಎದುರು ಹಾಟ್ ಸೀಟ್ ನಲ್ಲಿ ಕುಳಿತು ತಮ್ಮ ಸಹ-ಸ್ಪರ್ಧಿಯೊಂದಿಗೆ ಮಾತನಾಡುತ್ತಾ "ಅಮಿತ್ ಅವರೇ ನನಗೆ ಈಗಂತೂ ಏನನ್ನೂ ಟ್ವೀಟ್ (Tweet) ಮಾಡಲು ಸಾಧ್ಯವಾಗುತ್ತಿಲ್ಲ, ಯಾರಾದರೂ ಟ್ವೀಟ್ ಮಾಡಿದರೆ ನಾನು ಅವರಿಗೆ ಧನ್ಯವಾದಗಳು ಅಂತ ಟ್ವೀಟ್ ಮಾಡುತ್ತೇನೆ” ಅಂತ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದ ಬಗ್ಗೆ ಏನಂದ್ರು ನಟ ಆಮಿರ್ ಖಾನ್
ಅಮಿತಾಭ್ ಇದನ್ನು ಕೇಳುತ್ತಾ ನಸುನಗುತ್ತಿದ್ದರು ಮತ್ತು ಆಮಿರ್ ಹಾಗೆಯೇ ತಮ್ಮ ಮಾತುಗಳನ್ನು ಮುಂದುವರೆಸಿ "ನನ್ನ ಸ್ನೇಹಿತರ ಚಿತ್ರಗಳು ಬಿಡುಗಡೆಯಾದಾಗ, ನಾನು ಅವರ ಚಲನಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಪ್ರಚಾರ ಮಾಡುತ್ತೇನೆ. ಅದನ್ನು ಬಿಟ್ಟು ನಾನು ಆ ಸಾಮಾಜಿಕ ವೇದಿಕೆಯ ಮೇಲೆ ಬೇರೆ ಏನನ್ನೂ ಮಾಡುವುದಿಲ್ಲ” ಅಂತ ಹೇಳಿದರು.
ಒಂದು ಪ್ರಶ್ನೆಯಿಂದ ಮುಜುಗರಕ್ಕೊಳಗಾದ ಖಾನ್
ಅದಕ್ಕೆ ಅಮಿತಾಭ್ ತಕ್ಷಣವೇ ಆಮಿರ್ ಅವರಿಗೆ "ನೀವು ಟ್ವಿಟ್ಟರ್ ನಲ್ಲಿ ಅನೇಕ ಚಲನಚಿತ್ರಗಳನ್ನು ಪ್ರಮೋಟ್ ಮಾಡುತ್ತೀರಿ ಆದರೆ ನಮ್ಮ ಕೆಬಿಸಿ ಅನ್ನು ಎಂದಿಗೂ ಪ್ರಮೋಟ್ ಮಾಡಿಲ್ಲ ಅಲ್ಲ" ಅಂತ ಕೇಳಿಯೇ ಬಿಟ್ಟರು. ಆಮಿರ್ ಮುಜುಗರಕ್ಕೊಳಗಾಗಿ ಒಂದು ಕ್ಷಣ ತಲೆ ತಗ್ಗಿಸಿದರು. ನಂತರ ಅವರು ಜಾಣ್ಮೆಯಿಂದ "ಕೆಬಿಸಿ ಗೆ ಯಾವುದೇ ಪ್ರಚಾರದ ಅಗತ್ಯವಿಲ್ಲ" ಎಂದು ಹೇಳಿದರು. ಇದನ್ನು ಕೇಳಿದ ಅಮಿತಾಭ್ ಅವರು ಜೋರಾಗಿ ನಗುತ್ತಾ ಚಪ್ಪಾಳೆ ತಟ್ಟಿದರು. "ಆಮಿರ್ ಖಾನ್ ಅವರ ಪ್ರೀತಿಯೇ ನಮಗೆ ಪ್ರಚಾರವಿದ್ದಂತೆ” ಎಂಬ ಶೀರ್ಷಿಕೆಯೊಂದಿಗೆ ಈ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.
ಇದೇ ಶೋ ನ ಮತ್ತೊಂದು ಪ್ರೋಮೋ ಕ್ಲಿಪ್ ನಲ್ಲಿ ಅಮಿತಾಭ್ ಹಿಂದಿಯಲ್ಲಿ ಆಮಿರ್ ಅವರಿಗೆ "ಇದು ವಿಡಿಯೋ ಪ್ರಶ್ನೆಯಾಗಿದ್ದು, ನಾವು ನಿಮಗೆ ಒಂದು ವಿಡಿಯೋವನ್ನು ತೋರಿಸುತ್ತೇವೆ. ವಿಡಿಯೋ ನೋಡಿ" ಎಂದು ಅಮಿತಾಭ್ ಹೇಳಿದರು. ಅದನ್ನು ತೆರೆಯ ಮೇಲೆ ತೋರಿಸಿದ ನಂತರ ಅಮಿತಾಭ್ ಅದನ್ನು ನೋಡಿದ್ದೀರಾ ಎಂದು ಆಮಿರ್ ಅವರನ್ನು ಕೇಳಿದರು, ಅದಕ್ಕೆ ಅವರು ಅದನ್ನು ಮತ್ತೆ ನೋಡಲು ಬಯಸುತ್ತಾರೆ ಎಂದು ಉತ್ತರಿಸಿದರು. ಅದಕ್ಕೆ ಅಮಿತಾಭ್ ಅವರು ಒಂದು ಪ್ರಶ್ನೆಯನ್ನು ಕೇಳಲು ಹೊರಟಿದ್ದಾಗ ಅಮೀರ್ ವಿಡಿಯೋವನ್ನು ಮತ್ತೊಮ್ಮೆ ನೋಡಬಹುದೇ ಎಂದು ವಿನಂತಿಸಿದರು.
View this post on Instagram
ಮಿಸ್ಟರ್ ಪರ್ಫೆಕ್ಷನಿಸ್ಟ್
ಈ ಸಮಯದಲ್ಲಿ, ಆಮಿರ್ ತಮ್ಮ ಆಸನದಿಂದ ಎದ್ದು ಅದನ್ನು ಎಚ್ಚರಿಕೆಯಿಂದ ನೋಡಲು ಬಯಸುತ್ತೇನೆ ಎಂದು ಪರದೆಯ ಬಳಿ ಹೋಗಿ ನೋಡಿ ಬರುತ್ತಾರೆ. "ಪರ್ಫೆಕ್ಟ್ ಆಗಿ ಅರ್ಥವಾಗುವವರೆಗೂ ಅವರು ತೃಪ್ತನಾಗುವುದಿಲ್ಲ ಎಂದು ಅಮಿತಾಭ್ ಅವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೆ ಕರೆಯುವ ನಟ ಅಮೀರ್ ಖಾನ್ ಅವರಿಗೆ ಲೇವಡಿ ಮಾಡಿದರು. ಆಮಿರ್ ರ್ ತನ್ನ ಆಸನಕ್ಕೆ ಹಿಂತಿರುಗಿ ತನ್ನ ಸಹ ಸ್ಪರ್ಧಿಗೆ ಪ್ರಶ್ನೆ ನೋಡೋಣ ಅಂತ ಹೇಳುವುದರೊಂದಿಗೆ ಈ ಕ್ಲಿಪ್ ಕೊನೆಗೊಂಡಿದ್ದನ್ನು ಇಲ್ಲಿ ನಾವು ನೋಡಬಹುದು.
ಇದನ್ನೂ ಓದಿ: Ram Charan: RRR ಚಿತ್ರವನ್ನೂ ಮೀರಿಸಲಿದ್ಯಾ ರಾಮ್ ಚರಣ್ ಸಿನಿಮಾ? ಬಜೆಟ್ ಕೇಳಿ ಶಾಕ್ ಆದ ಟಾಲಿವುಡ್!
"ನಮ್ಮ ಆಮಿರ್ ಖಾನ್ ಮಿಸ್ಟರ್ ಪರ್ಫೆಕ್ಷನಿಸ್ಟ್, ಆದ್ದರಿಂದ ಎಲ್ಲವೂ ಪರಿಪೂರ್ಣವಾಗಿರಬೇಕು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ‘ಕೌನ್ ಬನೇಗಾ ಕರೋಡ್‌ಪತಿ - ಆಜಾದಿ ಕೆ ಗರ್ವ್ ಕಾ ಮಹಾಪರ್ವ್’ ವಿಶೇಷವಾದ ಸಂಚಿಕೆಯು ಇದೇ ಆಗಸ್ಟ್ 7 ರಂದು ರಾತ್ರಿ 9 ಗಂಟೆಗೆ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ