Amitabh Bachchan: ‘ಅಮಿತಾಭ್​ ಬಚ್ಚನ್​ ನಿವೃತ್ತಿ ಹೊಂದಬೇಕು‘; ಹೀಗೆ ಅಂದಿದ್ಯಾಕೆ ಸಲ್ಮಾನ್​ ಖಾನ್​ ತಂದೆ?

ಸಲ್ಮಾನ್​ ಖಾನ್(Salman Khan)​ ತಂದೆ ಸಲೀಂ ಖಾನ್ (Salim Khan)​ ಅಮಿತಾಭ್​ ಬಚ್ಚನ್​ ಈಗ ನಿವೃತ್ತಿ(Retire) ಹೊಂದಬೇಕು ಎಂದು ಹೇಳಿರುವುದು ಸಾಮಾಜಿಕ ಜಾಲತಾಣ(Social Media) ದಲ್ಲಿ ಸಖತ್​ ವೈರಲ್​ ಆಗಿದೆ.

ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​- ಅಮಿತಾಬ್​ ಬಚ್ಚನ್

ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​- ಅಮಿತಾಬ್​ ಬಚ್ಚನ್

  • Share this:
    ಭಾರತ(India) ಚಿತ್ರರಂಗ ಕಂಡ ದಂತಕಥೆ(Legend), ಆಂಗ್ರಿ ಯಂಗ್​ ಮ್ಯಾನ್​ (Angry young man) ಅಮಿತಾಭ್​ ಬಚ್ಚನ್ (Amitabh Bachchan)​. ನಟನೆಯಲ್ಲಿ ಅವರಿಗೆ ಅವರೇ ಸಾಟಿ. ಒಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಹದೋ ಅದೆಲ್ಲವನ್ನೋ ಬಿಗ್​ ಬಿ ಮಾಡಿದ್ದಾರೆ.  ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಅವರು ಅಕ್ಟೊಬರ್​ 11ರಂದು 79ನೇ ಜನ್ಮದಿನ(Birthday) ಆಚರಿಸಿಕೊಂಡಿದ್ದರು. ದಣಿಯರಿಯದ ಚಿರಯುವಕನಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ಶುಭಾಶಯ ಕೋರಿದ್ದದರು. ಈ ವಯಸ್ಸಿನಲ್ಲೂ ಹದಿಹರೆಯದ ಯುವಕನಂತೆ ಆಕ್ಟೀವ್​ ಆಗಿದ್ದಾರೆ ಅಮಿತಾಭ್​ ಬಚ್ಚನ್​. ಈಗಲೂ ಅವರಿಗೆ ಒಂದು ರೇಂಜ್​ ಇದೆ. ಈಗಲೂ ಬಹುಬೇಡಿಕೆ ನಟ, ಹೊಸ ಹೀರೋಗಳಿಗೆ ಸವಾಲೊಡ್ಡುವ ಚಾರ್ಮ್(Charm)​ ಅಮಿತಾಬ್​ನಲ್ಲಿದೆ. ಆದರೆ ಸಲ್ಮಾನ್​ ಖಾನ್(Salman Khan)​ ತಂದೆ ಸಲೀಂ ಖಾನ್ (Salim Khan)​ ಅಮಿತಾಭ್​ ಬಚ್ಚನ್​ ಈಗ ನಿವೃತ್ತಿ(Retire) ಹೊಂದಬೇಕು ಎಂದು ಹೇಳಿರುವುದು ಸಾಮಾಜಿಕ ಜಾಲತಾಣ(Social Media) ದಲ್ಲಿ ಸಖತ್​ ವೈರಲ್​ ಆಗಿದೆ. ಮೊದಲಿಗೆ ಯಾಕೆ ಹೀಗೆ ಹೇಳಿದ್ದಾರೆ ಅಂತ ಅಭಿಮಾನಿಗಳು ಶಾಕ್​ ಆಗಿದ್ರು. ಬಳಿಕ ಸಲೀಂ ಖಾನ್​ ಕೊಟ್ಟ ವಿವರಣೆ ಕಂಡು ಸುಮ್ಮನಾಗಿದ್ದಾರೆ.

    ಅವರಿಗಾಗಿ ಸಮಯ ನೀಡಲಿ

    ಅಮಿತಾಭ್ ಬಚ್ಚನ್​ ಅವರ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು ಎಂದು ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್ ಹೇಳಿದ್ದಾರೆ. ಅಮಿತಾಭ್​ ಬಚ್ಚನ್​ ತುಂಬಾ ಸಾಧಿಸಿದ್ದಾರೆ. ಚಿತ್ರರಂಗದಿಂದ ಈಗ ಅವರು ನಿವೃತ್ತಿಯಾಗಲಿ.  ಈಗ ಅಮಿತಾಭ್​ ಬಚ್ಚನ್​ ಚಿತ್ರರಂಗದ ಓಟದಿಂದ ಹಿಂದೆ ಸರಿಯಬೇಕು, ನಿವೃತ್ತಿ ಹೊಂದಬೇಕು ಎಂದು ಸಲೀಂ ಖಾನ್​ ಅಭಿಪ್ರಾಯ ಪಟ್ಟಿದ್ದಾರೆ.

    ನಿವೃತ್ತಿ ವ್ಯವಸ್ಥೆ ಇರುವುದು ಅದಕ್ಕಾಗಿ

    ಜೀವನದಲ್ಲಿ ನಿವೃತ್ತಿ ಎಂಬ ವ್ಯವಸ್ಥೆ ಇರುವುದು ಅದಕ್ಕಾಗಿ. ಅಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತನ್ನ ಇಷ್ಟದಂತೆ ಕಳೆಯಬೇಕು. ಬದುಕಿನ ಏಳು, ಬೀಳುಗಳನ್ನ ಕಂಡು, ಅದರಿಂದ ಕಲಿತು ಜೀವನ ನಡೆಸಿರುತ್ತಾರೆ. ಹೀಗಾಗಿ ವ್ಯಕ್ತಿ ತನ್ನ ಜೀವನದಲ್ಲಿ ನಿವೃತ್ತಿ ಸಮಯವನ್ನು ಅವನಿಗೆ ಇಷ್ಟ ಬಂದಂತೆ ಕಳೆಯಬೇಕು. ಜೀವನದ ಮೊದಲ ವರ್ಷಗಳು ಕಲಿಯುವಿಕೆ, ಅಧ್ಯಯನದಲ್ಲಿ ಕಳೆದುಹೋಗುತ್ತದೆ. ನಂತರ ನಿಮಗೆ ಜವಾಬ್ದಾರಿಗಳು ಬರುತ್ತವೆ. ಉದಾಹರಣೆಗೆ, ನನ್ನ ಜೀವನ ಈಗ ಸೀಮಿತವಾಗಿದೆ. ನನ್ನ ಜೊತೆಗೆ ಈಗ ಹೆಜ್ಜೆ ಹಾಕುತ್ತಿರುವವರು ಎಲ್ಲರೂ ಸಿನಿಮೇತರ ಹಿನ್ನೆಲೆಯವರಾಗಿದ್ದಾರೆ ಎಂದು ಸಲೀಂ ಖಾನ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:Happy Birthday Amitabh Bachchan: ಇಳಿವಯಸ್ಸಿನಲ್ಲೂ ಯುವಕನಂತೆ ಆರ್ಭಟಿಸುವ ನಟ ಬಿಗ್ ಬಿ ಬಗ್ಗೆ ತಿಳಿಯದ ಕುತೂಹಲಕಾರಿ ಸಂಗತಿಗಳು!

    ಅಮಿತಾಭ್​ಗೆ ತಕ್ಕಂತಹ ಕತೆಗಳಿಲ್ಲ

    ಸಲೀಂ ಹಾಗೂ ಅಮಿತಾಭ್ ಬಚ್ಚನ್ ಸುಮಾರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಬಲ್ಲ ನಟರಾಗಿದ್ದಾರೆ. ಆದರೆ ಈಗ ಅವರಿಗೆ ತಕ್ಕಂತಹ ಕತೆಗಳು ಸಿಗುವುದಿಲ್ಲ, ನಮ್ಮ ಚಿತ್ರರಂಗ ತುಂಬಾ ಅಭಿವೃದ್ಧಿ ಹೊಂದಿದೆ. ಆದರೆ ನಮ್ಮ ಬಳಿಯೇ ಒಳ್ಳೆಯ ಸ್ಕ್ರಿಪ್ಟ್​ ಇಲ್ಲ ಅಂತ ಸಲೀಂ ಖಾನ್​ ಹೇಳಿದ್ದಾರೆ.

    1973ರಲ್ಲಿ ಸಲೀಂ ಖಾನ್​ ಜಂಜೀರ್​ ಸಿನಿಮಾದ ಮೂಲಕ ಅಮಿತಾಭ್​ ಬಚ್ಚನ್​ ಜತೆಗೆ ಕೆಲಸ ಮಾಡಿದ್ದಾರೆ. ಶೋಲೆ, ದೀವಾರ್​, ಮಜ್​ಬೂರ್​, ಡಾನ್​, ದೋಸ್ತಾನ, ಕಾಲ ಪತ್ತರ್​ ಅಂತಹ ಫೇಮಸ್​ ಚಿತ್ರಗಳಲ್ಲಿ ಸಲೀಂ ಖಾನ್​ ಹಾಗೂ ಅಮಿತಾಭ್​ ಬಚ್ಚನ್​ ಜೊತೆಯಾಗಿ ಕೆಲಸ ಮಾಡಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಲೀಂ ಖಾನ್​ ಹೇಳಿಕೆ ಪರ, ಹಾಗೂ ವಿರೋಧ ಚರ್ಚೆಯಾಗುತ್ತಿವೆ. ನೀವು ನಿವೃತ್ತಿಯಾಗಿ ಎಂದಿದ್ದು ಸರಿ, ಆದರೆ ಒಳ್ಳೆಯ ಸ್ಕ್ರಿಪ್ಟ್​ ಇಲ್ಲ ಎಂದು ಬಾಲಿವುಡ್​ ಕಡೆ ಬೆರಳು ಮಾಡಿ ತೋರಿಸಬೇಡಿ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

    ವರದಿ - ವಾಸುದೇವ್​. ಎಂ
    Published by:Latha CG
    First published: