ಅಪರೂಪದ ಫೋಟೋ ಹಂಚಿಕೊಂಡ ಅಮಿತಾಭ್​ ಬಚ್ಚನ್​; ಬಿಗ್​ಬಿ ಜೊತೆಯಿರೋ ಸ್ಟಾರ್​ಗಳು ಯಾರು ಗೊತ್ತಾ?

ಬಿಗ್​ಬಿ ಹಂಚಿಕೊಂಡಿರುವ ಬ್ಲಾಕ್​ ಆ್ಯಂಡ್​ ವೈಟ್​ ಫೋಟೋದಲ್ಲಿ ಬಾಲಿವುಡ್​ನ ನಾಲ್ವರು ಪ್ರಸಿದ್ಧ ನಟರು ಒಂದೇ ಫ್ರೇಮ್​ನಲ್ಲಿ ಸೆರೆಸಿಕ್ಕಿದ್ದಾರೆ. ಈ ಫೋಟೋದಲ್ಲಿರುವ ಸಲ್ಮಾನ್​ ಖಾನ್​ ಎಕ್ಸ್​​ಪ್ರೆಷನ್​ ನೋಡಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಗ್ಯಾರಂಟಿ!

sushma chakre | news18
Updated:February 6, 2019, 10:58 PM IST
ಅಪರೂಪದ ಫೋಟೋ ಹಂಚಿಕೊಂಡ ಅಮಿತಾಭ್​ ಬಚ್ಚನ್​; ಬಿಗ್​ಬಿ ಜೊತೆಯಿರೋ ಸ್ಟಾರ್​ಗಳು ಯಾರು ಗೊತ್ತಾ?
ಅಮಿತಾಭ್​, ಸಲ್ಮಾನ್​, ಆಮೀರ್​, ಶ್ರೀದೇವಿ
sushma chakre | news18
Updated: February 6, 2019, 10:58 PM IST
ಕೆಲವು ಹಳೆಯ ಫೋಟೋಗಳು ಕಳೆದ ದಿನಗಳನ್ನು ಮತ್ತೆ ನೆನಪಿಸುವಂತೆ ಮಾಡುತ್ತವೆ. ಅವು ಕೇವಲ ಫೋಟೋ ಆಗಿರುವುದಿಲ್ಲ. ಅದರೊಂದಿಗೆ ಆ ಕಾಲದ ಘಟನೆಗಳೂ ತಳುಕುಹಾಕಿಕೊಂಡಿರುತ್ತದೆ. ಅದರಲ್ಲೂ ಸಿನಿಮಾರಂಗದ ದಿಗ್ಗಜರ ಹಳೆಯ ಫೋಟೋಗಳನ್ನು ನೋಡುವುದೇ ಒಂದು ರೀತಿಯ ಖುಷಿ.

ಅಂಥದ್ದೊಂದು ಅಪರೂಪದ ಫೋಟೋವನ್ನು ಬಿಗ್​ಬಿ ಅಮಿತಾಭ್​ ಬಚ್ಚನ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾರೂ ನೋಡಿರಲು ಸಾಧ್ಯವಿಲ್ಲದ ಅಪರೂಪದ ಫೋಟೋ ಇದಾಗಿದ್ದು, ಅಮಿತಾಭ್​ ಬಚ್ಚನ್​ ಜೊತೆಗೆ ಬಾಲಿವುಡ್​ ಸ್ಟಾರ್​ಗಳಾದ ಸಲ್ಮಾನ್​ ಖಾನ್​, ಆಮೀರ್​ ಖಾನ್​ ಮತ್ತು ಶ್ರೀದೇವಿ ಇರುವ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಮಿತಾಭ್​ ಬಚ್ಚನ್​ ಸಾಮಾಜಿಕ ಜಾಲತಾಣದಲ್ಲಿ ಬಹಳ ಆ್ಯಕ್ಟೀವ್​ ಆಗಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ 1.14 ಕೋಟಿ ಫಾಲೋವರ್​ಗಳನ್ನು ಹೊಂದಿರುವ ಅಮಿತಾಭ್​ ಬಚ್ಚನ್​ ಒಂದು ಫೋಟೋ ಹಾಕಿದರೂ ಅದು ಲಕ್ಷಾಂತರ ಶೇರ್​ ಆಗುತ್ತದೆ.
 

Loading...
View this post on Instagram
 

MY concert at Wembley Stadium .. first ever by Indian .. I took Sridevi , Aamir and SALMAN for their first concert .. 70,000 people .. historic !! This is the Wembley Stadium before it was rebuilt and altered .. you see the altered now often on Premier League Football..


A post shared by Amitabh Bachchan (@amitabhbachchan) on


ಲಂಡನ್​ನ ವೆಂಬ್ಲಿ ಸ್ಟೇಡಿಯಂನಲ್ಲಿ ಕಾರ್ಯಕ್ರಮವೊಂದಕ್ಕೆ ಆಮೀರ್​ ಖಾನ್​, ಸಲ್ಮಾನ್​ ಖಾನ್​, ಶ್ರೀದೇವಿ ಅವರನ್ನು ಕರೆದುಕೊಂಡು ಹೋಗಿದ್ದಾಗ ತೆಗೆದ ಬ್ಲಾಕ್​ ಆ್ಯಂಡ್​ ವೈಟ್​ ಫೋಟೋವೊಂದನ್ನು ಅಮಿತಾಭ್​ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿನ ಸಲ್ಮಾನ್​ ಖಾನ್​ ಪೋಸ್​ಗೆ ಭಾರೀ ಮೆಚ್ಚುಗೆಯ ಕಾಮೆಂಟ್​ಗಳು ಬರುತ್ತಿವೆ. ಅಂದಹಾಗೆ. ಆ ಕಾನ್ಸರ್ಟ್​ ಆಮೀರ್​, ಸಲ್ಮಾನ್​, ಶ್ರೀದೇವಿಗೆ ಮೊದಲ ಕಾನ್ಸರ್ಟ್​ ಆಗಿತ್ತು ಎಂದು ಬರೆದುಕೊಂಡಿರುವ ಅಮಿತಾಭ್​, ಆ ಕಾರ್ಯಕ್ರಮದಲ್ಲಿ 70 ಸಾವಿರ ಜನರು ಸೇರಿದ್ದರು. ಅದೊಂದು ಐತಿಹಾಸಿಕ ಕಾರ್ಯಕ್ರಮವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಈಗ ವೆಂಬ್ಲಿ ಸ್ಟೇಡಿಯಂ ಅನ್ನು ನವೀಕರಣಗೊಳಿಸಲಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಲ್ಲಿ ಫುಟ್​ಬಾಲ್ ಪಂದ್ಯಾವಳಿಗಳು ನಡೆಯುತ್ತವೆ.

'ನಟಸಾರ್ವಭೌಮ'ನ ಅಬ್ಬರ ಶುರುವಾಯ್ತು; ಮೊದಲ ಪ್ರದರ್ಶನವೇ ಹೌಸ್​ಫುಲ್​!

ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿರುವ ಅಮಿತಾಭ್​ ಬಚ್ಚನ್​ ಈ ಮೂವರು ನಟರೊಂದಿಗೂ ತೆರೆ ಹಂಚಿಕೊಂಡಿದ್ದಾರೆ ಎಂಬುದು ವಿಶೇಷ. ಶ್ರೀದೇವಿಯೊಂದಿಗೆ ಖುದಾ ಗವಾಹ್​, ಆಖ್ರೀ ರಸ್ತಾ, ಇನ್​ಕ್ವಿಲಾಬ್​, ಇಂಗ್ಲಿಷ್​ ವಿಂಗ್ಲಿಷ್​ ಸಿನಿಮಾಗಳಲ್ಲಿ ಬಿಗ್​ ಬಿ ನಟಿಸಿದ್ದಾರೆ. ಸಲ್ಮಾನ್​ ಖಾನ್​ ಜೊತೆಗೆ ಬಾಗ್​ಬನ್​, ಬಾಬುಲ್, ಗಾಡ್​ ತುಸ್ಸಿ ಗ್ರೇಟ್​ ಹೋ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಗೇ, ಆಮೀರ್​ ಖಾನ್​ ಜೊತೆಗೆ ಇತ್ತೀಚಿನ ಥಗ್ಸ್​ ಆಫ್​ ಹಿಂದುಸ್ತಾನ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

First published:February 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...