Kaun Banega Crorepati 13: ಮನೆಯಲ್ಲಿ ಶವರ್ ಇಲ್ಲದ ದಿನಗಳನ್ನು ನೆನಪಿಸಿಕೊಂಡ Amitabh Bachchan

ತಾನು ಚಿಕ್ಕವನಿದ್ದಾಗ, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬಹಳಷ್ಟು ಸೌಕರ್ಯಗಳು ಇರಲಿಲ್ಲ , ಹಾಗಾಗಿ ಅವರು ತಮ್ಮ ಮನೆಯಲ್ಲಿ ಶವರ್ ಮಾಡಲು ಸಾಧ್ಯವಾಗಿಲ್ಲ. ಆದರೆ, ತಮ್ಮ ಸ್ನೇಹಿತನ ಮನೆಯಲ್ಲಿ ಇದ್ದ ಟ್ಯೂಬ್‍ವೆಲ್ ಕೆಳಗೆ ಸ್ನಾನ ಮಾಡಿರುವೆ ಎಂದು ಅಮಿತಾಭ್ ಬಚ್ಚನ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ನಟ ಅಮಿತಾಬ್​​ ಬಚ್ಚನ್​​

ನಟ ಅಮಿತಾಬ್​​ ಬಚ್ಚನ್​​

  • Share this:
ಅಮಿತಾಭ್ ಬಚ್ಚನ್  (Amitabh Bachchan) ನಿರೂಪಣೆಯ ಕೌನ್ ಬನೇಗ ಕರೋಡ್‍ಪತಿ 13 ( Kaun Banega Crorepati 13 ) ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಈ ಸೀಸನ್ ಮತ್ತೆ ಮರಳಿದೆ ಹಾಗೂ ಬಿಗ್ ಬಿ ಪ್ರತಿ ವಾರ ಒಬ್ಬ ಸೆಲೆಬ್ರಿಟಿಯ ಜೊತೆಗೆ ಹಾಟ್‍ಸೀಟನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಕೆಲವೇ ಕೆಲವು ಸ್ಪರ್ಧಿಗಳು 1 ಕೋಟಿ ರೂಪಾಯಿಯ ಪ್ರಶ್ನೆ ತಲುಪಲು ಸಾಧ್ಯವಾಗಿದ್ದು, ಕೇವಲ ಇಬ್ಬರು ಸ್ಪರ್ಧಿಗಳಿಗೆ.  1 ಕೋಟಿ ರೂಪಾಯಿ ಮೊತ್ತವನ್ನು ಗೆಲ್ಲಲು ಸಾಧ್ಯವಾಗಿದ್ದು ಮಾತ್ರ ಒಬ್ಬ ಸ್ಪರ್ಧಿಗೆ. ಆ ಸ್ಪರ್ಧಿ ಮಾತ್ರ 7 ಕೋಟಿ ರೂಪಾಯಿ ಮೊತ್ತದ ಬಹುಮಾನವನ್ನು ಗೆದ್ದಿದ್ದಾರೆ. ಇದೊಂದು ರಸಪ್ರಶ್ನೆಯ ಗಂಭೀರ ಕಾರ್ಯಕ್ರಮದ್ದರೂ, ಮನರಂಜನೆಗೂ ಕೊರತೆ ಇಲ್ಲ. ಏಕೆಂದರೆ, ಸ್ಪರ್ಧಿಗಳ ಜೊತೆಗಿನ ಪ್ರಶ್ನೋತ್ತರದ ಮಧ್ಯೆ ಮಧ್ಯೆ ಬಿಗ್‍ಬಿ ತಮ್ಮ ಜೀವನದ ಕುರಿತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ತಮ್ಮ ಕಷ್ಟದ ದಿನಗಳಿಂದ ಹಿಡಿದು ಶಾಲಾ ದಿನಗಳವರೆಗಿನ ಕುರಿತ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಅಮಿತಾಭ್ ಬಚ್ಚನ್​ ಕಾರ್ಯಕ್ರಮದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇಂದಿನ ಸಂಚಿಕೆಯಲ್ಲಿ, ಮಹಾರಾಷ್ಟ್ರದ ಉದ್ಯಮಿ , ಸ್ಪರ್ಧಿ ಹುಸೇನ್ ವೊಹ್ರಾ ಹಾಟ್ ಸೀಟ್‍ನಲ್ಲಿ ಕುಳಿತಿದ್ದಾರೆ. ಹುಸೈನ್ ಅವರು , ತಮ್ಮ ವೃತ್ತಿಯ ಬಗ್ಗೆ ಮಾತನಾಡುತ್ತಾ, ತಾವು ಹಾರ್ಡ್‍ವೇರ್ ಉದ್ಯಮ ಮಾಡುತ್ತಿರುವುದಾಗಿ ಈ ಸಂಚಿಕೆಯಲ್ಲಿ ಹೇಳಿಕೊಂಡಿದ್ದಾರೆ.






ಅವರು ತಮ್ಮ ಉದ್ಯಮದ ಅಮಿತಾಭ್ ಬಚ್ಚನ್ ಅವರಿಗೆ ಬಗ್ಗೆ ವಿವರಿಸುತ್ತಾ, ತಾನು ಹಲವಾರು ರೀತಿಯ ಕಿಚನ್‍ವೇರ್, ಬಾತ್‍ರೂಮ್‍ವೇರ್​ ವ್ಯವಹಾರ ನಡೆಸುತ್ತಿದ್ದು, ವಿಶೇಷ ಸ್ಪ್ರೇ ತಂತ್ರಜ್ಞಾನ ಉಳ್ಳ ವಿಶೇಷ ಶಾವರ್ ಬಗ್ಗೆ ಮಾತನಾಡಿ, ಅದರ ಕೆಳಗೆ ನಿಂತವರಿಗೆ ಜಲಪಾತದ ಕೆಳಗೆ ನಿಂತ ಹಾಗೆ ಅನುಭವ ಆಗುತ್ತದೆ ಎಂದು ಹೇಳಿದ್ದಾರೆ.

ಅವರು ಸೆನ್ಸಾರ್ ಆಧಾರಿತ ನಲ್ಲಿಗಳ ಬಗ್ಗೆ ಮಾತನಾಡಿ, ಅಮಿತಾಭ್ ಬಚ್ಚನ್ ಅವರು ಬಯಸಿದರೆ, ಅವರಿಗೆ ತಾನು ರಿಯಾಯಿತಿ ದರದಲ್ಲಿ ಆ ಎಲ್ಲಾ ಸಾಧನಗಳನ್ನು ಹಾಕಿಕೊಡುವೆ ಎಂದು ತಮಾಷೆಯ ಧಾಟಿಯಲ್ಲಿ ನುಡಿದಿದ್ದಾರೆ. ಅದನ್ನು ಕೇಳಿ ನಕ್ಕ ಬಿಗ್‍-ಬಿ, ತಾನು ಚಿಕ್ಕವನಿದ್ದಾಗ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬಹಳಷ್ಟು ಸೌಕರ್ಯಗಳು ಇರಲಿಲ್ಲ. ಹಾಗಾಗಿ ಅವರು ತಮ್ಮ ಮನೆಯಲ್ಲಿ ಶವರ್ ಮಾಡಲು ಸಾಧ್ಯವಾಗಿಲ್ಲ. ಆದರೆ, ತಮ್ಮ ಸ್ನೇಹಿತನ ಮನೆಯಲ್ಲಿ ಇದ್ದ ಟ್ಯೂಬ್‍ವೆಲ್ ಕೆಳಗೆ ಸ್ನಾನ ಮಾಡಿರುವೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದಾರೆ.

ಇದನ್ನೂ ಓದಿ: Kaun Banega Crorepati 13: ಸಿನಿಮಾದ ಸೆಟ್​ನಲ್ಲಿ ಅಮಿತಾಭ್ ಬಚ್ಚನ್ ಮೇಲೆ ರೇಗಿದ್ದ ಫರಾ ಖಾನ್.!

“ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಟ್ಯೂಬ್‍ ವೆಲ್ ಇತ್ತು. ನೀರಿನ ಒಂದು ದೊಡ್ಡ ಟ್ಯಾಂಕ್ ಮಾಡಿದ್ದರು ಮತ್ತು ಅದರ ಮೇಲಿಂದ ಒಂದು ಪೈಪ್ ಹಾಕಿದ್ದರು. ಅದರಿಂದ ತುಂಬಾ ರಭಸವಾಗಿ ನೀರು ಹೊರ ಬರುತ್ತಿತ್ತು. ಅದು ಶವರ್‌ನಂತೆ ಅನಿಸುತ್ತಿತ್ತು, ಅಲ್ಲೇ ಹೋಗಿ ಸ್ನಾನ ಮಾಡುತ್ತಿದ್ದೆವು” ಎಂದು ಬಿಗ್ ಬಿ ನೆನಪಿಸಿಕೊಂಡಿದ್ದಾರೆ.

ಹುಸೇನ್ ವೊಹ್ರಾ ಅವರು 1 ಕೋಟಿ ರೂಪಾಯಿಯ ಪ್ರಶ್ನೆಯನ್ನು ಉತ್ತರಿಸಲು ಪ್ರಯತ್ನಿಸಿದರು, ಆದರೆ ಅವರಿಂದ ಸಾಧ್ಯ ಆಗಲಿಲ್ಲ. ಅಲ್ಲದೇ, ಅಷ್ಟು ಹೊತ್ತಿಗಾಗಲೇ ಅವರು ತಮ್ಮೆಲ್ಲ ಲೈಫ್‍ಲೈನ್ ಬಳಸಿ ಆಗಿತ್ತು. ಹಾಗಾಗಿ ಅವರು ಆಟವನ್ನು ಅಲ್ಲಿಗೆ ಬಿಡಬೇಕಾಗಿ ಬಂತು.

ಹುಸೇನ್ ವೊಹ್ರಾ ಅವರಿಗೆ ಕೇಳಿದ ಪ್ರಶ್ನೆ ಹೀಗಿದೆ: ಎಂಟನೇ ಸಾವಿರ ಎಂದು ಕರೆಯಲ್ಪಡುವ ಶಿಖರಗಳಲ್ಲಿ, ಇದು ಎತ್ತರದಲ್ಲಿ ಕಡಿಮೆ ಆದರೆ ಯಶಸ್ವಿಯಾಗಿ ಏರಿದ ಎಂಟನೇ ಶಿಖರ ಯಾವುದು?
ಎ. ನಂಗ ಪ್ರಭಾತ್
ಬಿ. ಅನ್ನಪೂರ್ಣ
ಸಿ. ಗ್ಯಾಶೆರ್‍ಬ್ರಮ್ ಐ
ಡಿ. ಶೀಶಪಂಗಾಮ
ಉತ್ತರ : ಶೀಶಪಂಗಾಮ
Published by:Anitha E
First published: