Amitabh Bachchan ಬಾಡಿಗಾರ್ಡ್​ಗೆ ಇರುವಷ್ಟು ಸಂಬಳ ಅದೆಷ್ಟೋ ಕಂಪೆನಿಗಳ ಸಿಇಒಗಳಿಗೂ ಇಲ್ಲ ಬಿಡಿ.. ಎಷ್ಟು ಹೇಳಿ?

Big B Bodyguard: ತಮ್ಮದೇ ಒಂದು ಸ್ವಂತ ಸೆಕ್ಯುರಿಟಿ ಸಂಸ್ಥೆ ನಡೆಸುತ್ತಾರೆ ಜಿತೇಂದ್ರ ಶಿಂಧೆ. ಆದ್ರೆ ಅಮಿತಾಭ್ ಬಚ್ಚನ್ ಗೆ ಮಾತ್ರ ಖುದ್ದು ತಾವೇ ಆಪ್ತರಕ್ಷಕರಾಗಿ ಕೆಲಸ ಮಾಡ್ತಾರೆ. ಇಷ್ಟೆಲ್ಲಾ ನಂಬಿಕಸ್ಥರಾಗಿರೋ ಶಿಂಧೆಯ ವೇತನ ಕೇಳಿದ್ರೆ ನಿಮಗೆ ಶಾಕ್ ಆಗೋದು ಖಂಡಿತಾ.

ಆಪ್ತರಕ್ಷಕ ಶಿಂಧೆ ಜೊತೆ ಬಿಗ್ ಬಿ

ಆಪ್ತರಕ್ಷಕ ಶಿಂಧೆ ಜೊತೆ ಬಿಗ್ ಬಿ

  • Share this:
    ಬಿಗ್ ಬಿ ಅಮಿತಾಭ್ ಬಚ್ಚನ್ (Big B Amitabh Bachchan) ಮನೆಯಿಂದ ಹೊರಗೆ ಕಾಲಿಟ್ರೆ ಸಾಕು, ಸದಾ ಅವರ ನೆರಳಿನಂತೆ ಒಬ್ಬ ವ್ಯಕ್ತಿ ಜೊತೆಗೇ ಇರುತ್ತಾನೆ. ನೀವು ಗಮನಿಸಿದ್ದರೆ ಅಮಿತಾಭ್ ಬಚ್ಚನ್​ರ ಎಲ್ಲಾ ಸಾರ್ವಜನಿಕ ಚಿತ್ರಗಳಲ್ಲೂ ಆತ ಇದ್ದೇ ಇರುತ್ತಾನೆ. ಬಿಗ್ ಬಿ ಮುಂಬೈಯಲ್ಲಿಇರಲಿ, ದೇಶದ ಯಾವುದೇ ಮೂಲೆಯಲ್ಲಿರಲಿ ಅಥವಾ ವಿದೇಶದ ಶೂಟಿಂಗ್ ನಲ್ಲೇ ಇರಲಿ.. ಎಲ್ಲೇ ಇದ್ದರೂ ಈ ಕಟ್ಟುಮಸ್ತಾದ ಆಳು ಮಾತ್ರ ಅವರ ಪಕ್ಕ ಬಿಟ್ಟು ಕದಲುವುದಿಲ್ಲ. ಅಂದ್ಹಾಗೆ ಈತನ ಹೆಸರು ಜಿತೇಂದ್ರ ಶಿಂದೆ. ಈತ ಅಮಿತಾಭ್ ಬಚ್ಚನ್​ರ ಪರ್ಸನಲ್ ಬಾಡಿಗಾರ್ಡ್(Bodyguard). ಅನೇಕ ವರ್ಷಗಳಿಂದ ಅಮಿತಾಭ್ ಬಚ್ಚನ್​ರನ್ನು ಜನರ ಗುಂಪಿನ ನೂಕುನುಗ್ಗಲಿನಿಂದ ಕಾಪಾಡುತ್ತಾ ಇದ್ದಾನೆ. ತನ್ನನ್ನು ಸದಾ ಜೋಪಾನ ಮಾಡುವ ಈ ನಂಬಿಕಸ್ತ ಬಾಡಿಗಾರ್ಡ್ ಗೆ ಬಿಗ್ ಬಿ ದೊಡ್ಡ ಸಂಬಳವನ್ನೇ ಕೊಡ್ತಾರೆ. ಈ ಬಾಡಿಗಾರ್ಡ್ ಪಡೆಯುವ ಸಂಬಳ ಭಾರತದ ಅನೇಕ ಕಂಪೆನಿಗಳ ಸಿಇಒಗಳು ಕೂಡಾ ಪಡೆಯೋದಿಲ್ಲ.

    ಜಿತೇಂದ್ರ ಶಿಂಧೆ ತಮ್ಮದೇ ಒಂದು ಸ್ವಂತ ಸೆಕ್ಯುರಿಟಿ ಸಂಸ್ಥೆ ನಡೆಸುತ್ತಾರೆ. ಆದ್ರೆ ಅಮಿತಾಭ್ ಬಚ್ಚನ್ ಗೆ ಮಾತ್ರ ಖುದ್ದು ತಾವೇ ಆಪ್ತರಕ್ಷಕರಾಗಿ ಕೆಲಸ ಮಾಡ್ತಾರೆ. ಇಷ್ಟೆಲ್ಲಾ ನಂಬಿಕಸ್ಥರಾಗಿರೋ ಶಿಂಧೆಯ ವೇತನ ಕೇಳಿದ್ರೆ ನಿಮಗೆ ಶಾಕ್ ಆಗೋದು ಖಂಡಿತಾ. ಯಾಕಂದ್ರೆ ತಮ್ಮ ಜೀವ ಮತ್ತು ಭದ್ರತೆ ಎರಡನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಜಿತೇಂದ್ರ ಶಿಂಧೆಗೆ ಬಿಗ್ ಬಿ ಅಮಿತಾಭ್ ಬಚ್ಚನ್ ವಾರ್ಷಿಕ ಒಂದೂವರೆ ಕೋಟಿ ರೂಪಾಯಿ ವೇತನ ನೀಡುತ್ತಾರೆ ಎನ್ನಲಾಗಿದೆ.

    ಟೈಮ್ಸ್ ನೌ ವರದಿಯ ಪ್ರಕಾರ ಶಿಂಧೆ ಒಂದೂವರೆ ಕೋಟಿ ವೇತನ ಪಡೆಯುತ್ತಿದ್ದಾರೆ. ಇದು ಅನೇಕ ಸಂಸ್ಥೆಗಳ ಸಿಇಒಗಳ ಸಂಬಳಕ್ಕಿಂತಲೂ ಬಹಳ ಹೆಚ್ಚೇ ಇದೆ. ಆ ಕಾರಣದಿಂದ ಅನೇಕರ ಹುಬ್ಬೇರುವಂತೆ ಮಾಡಿದೆ. ಆದ್ರೆ ಖ್ಯಾತನಾಮರು ತಮ್ಮ ಅಂಗರಕ್ಷಕರಿಗೆ ಭಾರೀ ಮೊತ್ತದ ವೇತನ ನೀಡಿ ಅವರನ್ನು ಖುಷಿಯಾಗಿಡುವುದು ಹೊಸಾ ವಿಚಾರವೇನಲ್ಲ.

    ಇದನ್ನೂ ಓದಿ: House For Sale: ಮನೆ ಮಾರಾಟಕ್ಕಿದೆ, ಒಂದು ಮನೆಗೆ ಬರೀ 87 ರೂಪಾಯಿ! ಎಲ್ಲಿ ಈ ಮನೆ? ಕೊಳ್ಳೋದು ಹೇಗೆ? ಏನೆಲ್ಲಾ ದಾಖಲೆಗಳು ಕೊಡ್ಬೇಕು..ಫುಲ್ ಡೀಟೆಲ್ಸ್

    ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡಾ ಸೋನು ಎನ್ನುವ ಖಾಸಗಿ ಬಾಡಿಗಾರ್ಡ್ ಹೊಂದಿದ್ದಾರೆ. ಪ್ರಕಾಶ್ ಸಿಂಗ್ ಅಲಿಯಾಸ್ ಸೋನುಗೆ ಭಾರೀ ಮೊತ್ತದ ಸಂಬಳ ನೀಡುತ್ತಾರೆ ಎನ್ನಲಾಗಿದೆ. ಕೇವಲ ಅಮಿತಾಭ್ ಬಚ್ಚನ್ ಮಾತ್ರವಲ್ಲದೇ ಜಿತೇಂದ್ರ ಶಿಂಧೆ ಮಾಲೀಕತ್ವದ ಸಂಸ್ಥೆ ಭಾರತಕ್ಕೆ ಬರುವ ಅನೇಕ ಪಾಶ್ಚಾತ್ಯ ತಾರೆಯರಿಗೂ ಭದ್ರತೆ ಒದಗಿಸಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Soumya KN
    First published: