Amitabh Bachchan: ಜಯಾ ಜೊತೆ ಅಮಿತಾಭ್​ ಮದುವೆ ನಡೆಯಲು ಇದೇ ಕಾರಣವಂತೆ: ವಿವಾಹ ವಾರ್ಷಿಕೋತ್ಸವದಂದು ಗುಟ್ಟು ರಟ್ಟು ಮಾಡಿದ ಬಿಗ್​-ಬಿ..!

Amitabh-Jaya 47th Wedding Anniversary: ಜಯಾ ಬಚ್ಚನ್ ಹಾಗೂ ಅಮಿತಾಭ್​ ಇಂದು ತಮ್ಮ 47ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಬಿಗ್​-ಬಿ ತಮ್ಮ ಅಭಿಮಾನಿಗಳೊಂದಿಗೆ  ಗುಟ್ಟೊಂದನ್ನು ಹಂಚಿಕೊಂಡಿದ್ದಾರೆ.

47ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅಮಿತಾಭ್​ ಹಾಗೂ ಜಯಾ ಬಚ್ಚನ್​

47ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅಮಿತಾಭ್​ ಹಾಗೂ ಜಯಾ ಬಚ್ಚನ್​

  • Share this:
ಅಮಿತಾಭ್​ ಹಾಗೂ ಜಯಾ ಬಚ್ಚನ್​ ಅವರ ಲವ್​ ಸ್ಟೋರಿ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. ಈ ಸೆಲೆಬ್ರಿಟಿ ದಂಪತಿ ಬಾಲಿವುಡ್​ನ ಎವರ್​ ಗ್ರೀನ್​ ಜೋಡಿಗಳಲ್ಲಿ ಒಂದು. ಇವರ ವಿವಾಹವಾದಾಗ ಬಹಳ ಚರ್ಚೆಯಲ್ಲಿದ್ದ ವಿಷಯವಾಗಿತ್ತು. 

ಜಯಾ ಬಚ್ಚನ್ ಹಾಗೂ ಅಮಿತಾಭ್​ ಇಂದು ತಮ್ಮ 47ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಬಿಗ್​-ಬಿ ತಮ್ಮ ಅಭಿಮಾನಿಗಳೊಂದಿಗೆ  ಗುಟ್ಟೊಂದನ್ನು ಹಂಚಿಕೊಂಡಿದ್ದಾರೆ.

amitabh bachchan shared sholay premiere photo with ma babuji and jaya bachchan
ಶೋಲೆ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಅಪ್ಪ-ಅಮ್ಮ ಹಾಗೂ ಜಯಾ ಅವರೊಂದಿಗೆ ಅಮಿತಾಭ್​.


ಅಮಿತಾಭ್​ ಹಾಗೂ ಜಯಾ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಯಶಸ್ವೀ ಜೋಡಿಯಾಗಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಹಿಟ್​ ಜೋಡಿಯಾಗಿದ್ದ ಇವರನ್ನು ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಮುಗಿ ಬೀಳುತ್ತಿದ್ದರು. ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದ ಅಮಿತಾಭ್​ -ಜಯಾ ಸಾಕಷ್ಟು ಹಿಟ್ ಚಿತ್ರಗಳನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: Karnam Malleswari Biopic: ಕರಣಂ ಮಲ್ಲೇಶ್ವರಿ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಬಾಲಿವುಡ್​ ನಟಿ..!

ದೀರ್ಘಕಾಲ ಡೇಟಿಂಗ್​ ಮಾಡುತ್ತಿದ್ದ ಅಮಿತಾಭ್​ ಹಾಗೂ ಜಯಾ ಅವರ ಲವ್​ ಸ್ಟೋರಿ ಆಗಲೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿತ್ತು. ಆಗ ಈ ಜೋಡಿಯ ವಿವಾಹವಾಗಲು ಒಂದೇ ಒಂದು ಮಾತು ಕಾರಣವಾಗಿತ್ತಂತೆ.

Abhishek Bachchan Celebrates Birthday with Family, Aishwarya Posts Pics with Amitabh, Jaya Aaradhya
ಕುಟುಂಬದೊಂದಿಗೆ ಅಮಿತಾಭ್​ ಹಾಗೂ ಜಯಾ ಬಚ್ಚನ್​


ಅಮಿತಾಭ್ ತಮ್ಮ ಸಿನಿಮಾ 'ಜಂಜೀರ್'​ ಹಿಟ್ ಆದರೆ ಕೆಲ ಸ್ನೇಹಿತರೊಂದಿಗೆ ಮೊದಲ ಬಾರಿಗೆ ಲಂಡನ್​ಗೆ ಹೋಗಲು ಪ್ಲಾನ್​ ಮಾಡಿದ್ದರಂತೆ. ತಮ್ಮ ಪ್ಲಾನ್​ ಬಗ್ಗೆ ಬಿಗ್​-ಬಿ ಮನೆಯಲ್ಲಿ ಅಪ್ಪ ಹರಿವಂಶ್​ ರಾಯ್​ ಬಚ್ಚನ್​ ಬಳಿ ಹೇಳಿದರಂತೆ. ಆಗ ಅವರು ನೀನು ಲಂಡನ್​ಗೆ ಹೋಗುವುದಾದರೆ ಮೊದಲು ಮದುವೆಯಾಗು. ಇಲ್ಲವಾದರೆ ಹೋಗಬೇಡ ಎಂದಿದ್ದರಂತೆ.

ಇದನ್ನೂ ಓದಿ: ಹೊಸ ಫಿಟ್ನೆಸ್​ ವಿಡಿಯೋ ಹಂಚಿಕೊಂಡ ಪುನೀತ್ ರಾಜ್​ಕುಮಾರ್​..!

ಅಪ್ಪನ ಈ ಒಂದು ಮಾತಿಗೆ ಕಟ್ಟುಬಿದ್ದ ಅಮಿತಾಭ್​ ಲಂಡನ್​ಗೆ ಹೋಗುವ ಮೊದಲು ಜಯಾ ಅವರನ್ನು ವಿವಾಹವಾದರಂತೆ. ಈ ವಿಷಯವನ್ನು ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಅಮಿತಾಭ್​.
ತಮ್ಮ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಅಮಿತಾಭ್​ ಮದುವೆಯಾಗಲು ಕಾರಣ ಏನೆಂದು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ನಟ ಅಮಿತಾಭ್​. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಷಯಗಳ ಕುರಿತಾಗಿ ಸಂದರ್ಭಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

 

Alia Bhatt: ಹೊಸ ಕಚೇರಿಗಾಗಿ ಇಂಟೀರಿಯರ್​ ಡಿಸೈನರ್​ ಆದ ಆಲಿಯಾ ಭಟ್​..!

First published: