ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಆಸ್ತಿಯ ಲೆಕ್ಕಾಚಾರ ಕೋಟಿಗಟ್ಟಲೆ. ಇದರಲ್ಲಿ ಕೆಲವನ್ನು ಬಾಡಿಗೆಗೆ ನೀಡಿದರೆ ಇನ್ನು ಕೆಲವನ್ನು ಸ್ವಂತಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಬಾಡಿಗೆಯ ಆದಾಯವೇ ಲಕ್ಷಕ್ಕಿಂತ ಮಿಗಿಲು ಎಂದರೆ ತಪ್ಪಾಗಲಾರದು. ಇದರಲ್ಲಿ ಬಾಲಿವುಡ್ ಶಾಹೆನ್ಶಾ ಅಮಿತಾಬ್ ಬಚ್ಚನ್ ಅಂಧೇರಿ(Andheri)ಯಲ್ಲಿರುವ ತಮ್ಮ ಡ್ಯುಪ್ಲೆಕ್ಸ್ (Duplex home)ಮನೆಯನ್ನು ನಟಿ ಕೃತಿ ಸನೋನ್ಗೆ (Kriti Sanon) ಬಾಡಿಗೆಗೆ(Rented) ನೀಡಿದ್ದಾರೆ. ಕೃತಿ ಸನೋನ್ ಅವರು ಬಿಗ್ ಬಿ ಮನೆಗೆ ತಿಂಗಳಿಗೆ ಕೊಡಲಿರುವ ಮೊತ್ತ( lakh every month) ಲಕ್ಷಗಟ್ಟಲೆ ಇದೆ..
ಬಿಗ್ ಬಿ ಒಡೆತನದ ಫ್ಲಾಟ್ 27 ಮತ್ತು 28ನೇ ಮಹಡಿಯಲ್ಲಿದ್ದು, ಇದಕ್ಕಾಗಿ ಕೃತಿ ಪ್ರತಿ ತಿಂಗಳು 10 ಲಕ್ಷ ರೂ. ಬಾಡಿಗೆ ನೀಡುತ್ತಿದ್ದಾರೆ. ಇನ್ನು ಅಮಿತಾಬ್ ಬಚ್ಚನ್ ಅವರ ಭದ್ರತೆಗಾಗಿ ಪ್ರತಿ ತಿಂಗಳು 60 ಲಕ್ಷ ವ್ಯಯಿಸುತ್ತಿದ್ದಾರೆ ಎಂದು ಇಂಡೆಕ್ಸ್ ಟ್ಯಾಪ್ ಡಾಟ್ ಕಾಂ ವರದಿ ಮಾಡಿದೆ.
ಅಮಿತಾಬ್ ಅವರು ತಮ್ಮ ಮನೆಯನ್ನು ಕೃತಿ ಸನೋನ್ ಅವರಿಗೆ ಬಾಡಿಗೆ ನೀಡಿರುವ ಬಗ್ಗೆ ಮನಿಕಂಟ್ರೋಲ್ ಡಾಟ್ ಕಾಂ ತಿಳಿಸಿದೆ. ಆದರೆ ಕೃತಿ ಕೃತಿ ಸನನ್ ಎರಡು ವರ್ಷಗಳಿಂದ ಆ ಮನೆಯಲ್ಲಿ ಇಲ್ಲ. ಆದರೂ ಬಾಡಿಗೆ ಮಾತ್ರ ನೀಡುತ್ತಿದ್ದಾರೆ.
ಅಲ್ಲದೆ, ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಕೂಡ ಜುಹುದಲ್ಲಿರುವ ತಮ್ಮ ಆಸ್ತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ಬಿಐ) ನೀಡಿದ್ದಾರೆ. ಪತ್ರಿಕೆಗಳ ಪ್ರಕಾರ, ಬಚ್ಚನ್ ಆಸ್ತಿಯನ್ನು 15 ವರ್ಷಗಳ ಕಾಲ ಎಸ್ಬಿಐಗೆ ಗುತ್ತಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
3150 ಚದರ ಅಡಿ ವಿಸ್ತೀರ್ಣದ ಈ ಆಸ್ತಿಯ ಬಾಡಿಗೆ ಪ್ರತಿ 5 ವರ್ಷಗಳಿಗೊಮ್ಮೆ 25% ದಷ್ಟು ಹೆಚ್ಚಾಗುತ್ತದೆ. ಮಾಹಿತಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಮುಂಗಡ ಬಾಡಿಗೆಯನ್ನು ಪಾವತಿಸಿದೆ.
ಬಿಗ್ ಬಿ ಅವರಂತೆಯೇ, ಅನೇಕ ಬಾಲಿವುಡ್ ತಾರೆಯರು ತಮ್ಮ ಆಸ್ತಿಯನ್ನು ದೊಡ್ಡ ಮೊತ್ತದಲ್ಲಿ ಬಾಡಿಗೆಗೆ ನೀಡಿದ್ದಾರೆ. ಸಲ್ಮಾನ್ ಖಾನ್ ಅವರು ಬಾಂದ್ರಾದಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ ಮತ್ತು ಈ ಹೊಸ ಮನೆಗೆ 8.25 ಲಕ್ಷ ರೂಪಾಯಿ ಪಾವತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಿವುಡ್ ತಾರೆಯರು ಸಾಮಾನ್ಯ ಜನರಿಗಿಂತ ಹೆಚ್ಚು ಭಿನ್ನವಾಗಿಲ್ಲ ಎಂದು ತೋರುತ್ತಿದೆ. ಏಕೆಂದರೆ ಅವರು ಕೂಡ ಮನೆಯನ್ನು ಬಾಡಿಗೆ ಕೊಡುವುದು ಮತ್ತು ಹೊಸ ಮನೆಗೆ ಬಾಡಿಗೆಗೆ ತೆರಳುವುದು ಮಾಮೂಲಿಯಾಗಿದೆ. ಕೆಲವರಿಗೆ ಇಂತಹದ್ದೇ ಸ್ಥಳದಲ್ಲೇ ಮನೆ ಇದ್ದರೆ ಚೆನ್ನಾಗಿರುತ್ತದೆ ಎಂದೆನಿಸುತ್ತದೆ. ಆಗ ಅವರು ತಾವು ವಾಸವಿರುವ ಸ್ವಂತದ ಮನೆಯನ್ನು ಬಾಡಿಗೆಗೆ ನೀಡಿ ತಾವು ಅಂದುಕೊಂಡ ಸ್ಥಳದಲ್ಲಿ ಮನೆಯನ್ನು ಬಾಡಿಗೆ ಪಡೆದು ವಾಸಿಸುವುದುಂಟು.
ಸಾಮಾನ್ಯವಾಗಿ ತಾರೆಯರು ತಮ್ಮ ಆದಾಯಕ್ಕೆ ಅನುಗುಣವಾಗಿ ಅವರಿಗೆ ಇಷ್ಟವಾದ ಸ್ಥಳಗಳಲ್ಲಿ ಮನೆಗಳನ್ನು, ಫ್ಲ್ಯಾಟ್ಗಳನ್ನು ಖರೀದಿಸುತ್ತಲೇ ಇರುತ್ತಾರೆ. ಸ್ಯಾಂಡಲ್ವುಡ್ ತಾರೆಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ