• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Amitabh Bachchan: ಆಲ್ಕೋಹಾಲ್ ಮತ್ತು ಸಿಗರೇಟ್ ಬಿಟ್ಟಿದ್ದು ಹೇಗೆ ಬಿಗ್ ಬಿ! ಚಟದಿಂದ ಮುಕ್ತರಾಗಲು ಅಮಿತಾಭ್ ಕೊಟ್ರು ಟಿಪ್ಸ್​

Amitabh Bachchan: ಆಲ್ಕೋಹಾಲ್ ಮತ್ತು ಸಿಗರೇಟ್ ಬಿಟ್ಟಿದ್ದು ಹೇಗೆ ಬಿಗ್ ಬಿ! ಚಟದಿಂದ ಮುಕ್ತರಾಗಲು ಅಮಿತಾಭ್ ಕೊಟ್ರು ಟಿಪ್ಸ್​

ಧೂಮಪಾನ-ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಧೂಮಪಾನ-ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಸಿಗರೇಟ್ ಮತ್ತು ಆಲ್ಕೋಹಾಲ್ ಬಿಡಲು ಒಂದು ಒಳ್ಳೆಯ ದಾರಿಯಿದೆ ಎಂದು ಬಾಲಿವುಡ್ ನಟ ಅಮಿತಾಭ್ ಹಂಚಿಕೊಂಡರು.

 • Trending Desk
 • 3-MIN READ
 • Last Updated :
 • Karnataka, India
 • Share this:

ಕೆಲವರಿಗೆ  ಒಮ್ಮೆ ಈ ಚಟಗಳು ಅಂಟಿಕೊಂಡರೆ ಸಾಕು, ಅವುಗಳನ್ನು ಸಂಪೂರ್ಣವಾಗಿ ಬಿಟ್ಟು ಬಿಡುವುದು ತುಂಬಾನೇ ಕಷ್ಟವಾಗುತ್ತದೆ. ಅದರಲ್ಲೂ ಈ ಚಿತ್ರೋದ್ಯಮದಲ್ಲಿರುವ ಮಂದಿಗೆ ಬಹುತೇಕರಿಗೆ ಈ ತಡ ರಾತ್ರಿ ಪಾರ್ಟಿಗಳು (Night Party), ಹೊಸ ಹೊಸ ಜನರನ್ನು ಭೇಟಿ ಮಾಡುವುದು ಮತ್ತು ಶೂಟಿಂಗ್‌ಗೆ ಹೋದಾಗ ತಡವಾಗಿ ಅಲ್ಲಿಯೇ ಡಿನ್ನರ್ ಮತ್ತು ಆಲ್ಕೋಹಾಲ್ ಪಾರ್ಟಿಗಳನ್ನು ಮುಗಿಸಿಕೊಂಡು ಮನೆಗೆ ಮಧ್ಯರಾತ್ರಿಗೆ ಬರುವ ಅಭ್ಯಾಸವಿರುತ್ತದೆ.  ಈ ಮದ್ಯಪಾನ (Drinking Alcohol) ಮತ್ತು ಸಿಗರೇಟ್ (Cigarette) ಚಟಗಳನ್ನು ಶುರು ಮಾಡಿದರೆ ಸಾಕು, ಮತ್ತೆ ಅವುಗಳನ್ನು ಬಿಡುವುದು ಅನೇಕರಿಗೆ ಅಸಾಧ್ಯವಾದ ಮಾತಾಗಿರುತ್ತದೆ ಅಂತ ಹೇಳಬಹುದು. ಆದರೆ ಇನ್ನೂ ಕೆಲವರು ತಾವು ಒಮ್ಮೆ ಈ ಎಲ್ಲಾ ಚಟಗಳನ್ನು ಬಿಡಬೇಕು ಅಂತ ದೃಢವಾಗಿ ನಿಶ್ಚಯ ಮಾಡಿದರೆ, ಅವರು ಎಂತಹದೇ ಸಂದರ್ಭ ಬಂದರೂ ಮತ್ತೆ ಅವುಗಳಿಗೆ ದಾಸರಾಗುವುದಿಲ್ಲ ಅಂತ ಹೇಳಬಹುದು.


ಮದ್ಯಪಾನ ಮತ್ತು ಸಿಗರೇಟ್ ಸೇದುವ ಚಟವನ್ನ ಒಟ್ಟಿಗೆ ಬಿಟ್ರಂತೆ ಬಿಗ್ ಬಿ


ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಹಿಂದೆ ಆಲ್ಕೋಹಾಲ್ ಕುಡಿತ್ತಿದ್ರಂತೆ ಮತ್ತು ಸಿಗರೇಟ್ ಸಹ ಸೇದುತ್ತಿದ್ರಂತೆ. ಆದರೆ ಬಿಗ್ ಬಿ ಇವೆರಡೂ ಚಟಗಳನ್ನು ಒಟ್ಟಿಗೆ ಬಿಟ್ಟವರು, ಇಂದಿಗೂ ಸಹ ಅವುಗಳ ಹತ್ತಿರಕ್ಕೂ ಹೋಗಿಲ್ವಂತೆ ಅಂತ ಅವರೇ ಖುದ್ದಾಗಿ ಹೇಳುತ್ತಿದ್ದಾರೆ ನೋಡಿ.


ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಗಾಯಗೊಂಡ ಸಮಯದಲ್ಲಿ ಮನೆಯಿಂದ ಹೊರಗೆ ಬಂದಿರಲಿಲ್ಲ. ಈಗ ಮತ್ತೆ ಅವರು ತಮ್ಮ ಮುಂಬೈ ಮನೆ ಜಲ್ಸಾದ ಹೊರಗೆ ಬಂದು ಅಭಿಮಾನಿಗಳಿಗೆ ಹಾಯ್ ಹೇಳುವ ತಮ್ಮ ಭಾನುವಾರದ ಅಭ್ಯಾಸವನ್ನು ಮತ್ತೆ ಶುರು ಮಾಡಿದರು. ಅಷ್ಟೇ ಅಲ್ಲದೆ ಅವರು ತಮ್ಮ ಬ್ಲಾಗ್ ನಲ್ಲಿ ಅವರು ಮದ್ಯಪಾನ ಮತ್ತು ಧೂಮಪಾನವನ್ನು ಒಟ್ಟಿಗೆ ಬಿಟ್ಟಿರುವ ತಮ್ಮ ಹಿಂದಿನ ನಿರ್ಧಾರದ ಬಗ್ಗೆ ಬರೆದುಕೊಂಡಿದ್ದಾರೆ ನೋಡಿ. ಅವರು ಒಂದು ದಿನ ಇವೆರಡೂ ಚಟಗಳನ್ನು ಒಟ್ಟಿಗೆ ಬಿಡಬೇಕು ಅಂತ ನಿರ್ಧಾರ ಮಾಡಿದ್ರಂತೆ. ಅವತ್ತು ಬಿಟ್ಟ ಈ ಎರಡು ಚಟಗಳನ್ನು ಇವತ್ತಿನವರೆಗೂ ಸಹ ಮತ್ತೆ ಅಂಟಿಸಿಕೊಳ್ಳಲಿಲ್ಲವಂತೆ ಅಂತ ಖುದ್ದು ಅವರೇ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದಾರೆ.


ತಮ್ಮ ಬ್ಲಾಗ್ ನಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಅಮಿತಾಭ್


ತಮ್ಮ ಬ್ಲಾಗ್ ನಲ್ಲಿ ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ಅಮಿತಾಭ್ ಅವರು "ಕಾಲೇಜಿನಲ್ಲಿ ಮಾಡಿದ ಪ್ರಾಯೋಗಿಕಗಳು ಆ ಹಳೆಯ ನೆನಪುಗಳನ್ನು ಮರಳಿ ತರುತ್ತವೆ, ವಿಜ್ಞಾನದ ಪ್ರಯೋಗಾಲಯಗಳಲ್ಲಿನ ಪ್ರಾಯೋಗಗಳು ರಸಾಯನಿಕಗಳನ್ನು ಬೆರೆಸುವುದು, ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಗ್ಯಾಜೆಟ್ ಗಳೊಂದಿಗೆ ಆಟವಾಡುವುದು... ಒಂದು ದಿನ ಪದವಿ ಶಿಕ್ಷಣದ ಕೊನೆಯ ಪತ್ರಿಕೆ ಬರೆದು ಮುಗಿಸಿದ ನಂತರ ಕೆಲವು ಸ್ನೇಹಿತರು ಪ್ರಯೋಗಾಲಯದಲ್ಲಿ ಇರಿಸಲಾದ ಶುದ್ಧ ಆಲ್ಕೋಹಾಲ್ ಕುಡಿದು ಸಂಭ್ರಮಿಸಿದ್ದು, ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು.. ಆಗಲೇ ನಮಗೆ ಈ ಆಲ್ಕೋಹಾಲ್ ನ ಪರಿಣಾಮಗಳು ಅಥವಾ ದುಷ್ಪರಿಣಾಮಗಳ ಬಗ್ಗೆ ಅರಿತುಕೊಂಡೆವು” ಅಂತ ಬರೆದಿದ್ದಾರೆ.


ಯೌವನದ ದಿನಗಳಲ್ಲಿ ಏನೆಲ್ಲಾ ಮಾಡಿದ್ರು ನೋಡಿ ಬಚ್ಚನ್..


ಹಿರಿಯ ನಟ ಇನ್ನೂ ತಮ್ಮ ಯೌವನಕ್ಕೆ ಕಾಲಿಟ್ಟಾಗ ಮದ್ಯಪಾನದ ಚಟ ತುಂಬಾನೇ ಜಾಸ್ತಿಯಾಯಿತಂತೆ. ಆಗ ಸ್ನೇಹಿತರ ಜೊತೆ ಕುಳಿತುಕೊಂಡು ಕುಡಿಯುವುದನ್ನು ಶುರು ಮಾಡಿಕೊಂಡ್ರಂತೆ. ಕಾಲೇಜಿನಲ್ಲಿದ್ದಾಗ ಕುಡಿದು ಮಾಡಿದ ಅವಾಂತರಗಳು ತುಂಬಾನೇ ಇದ್ದವು. ನಂತರ ಕೆಲಸಕ್ಕೆ ಅಂತ ಕೋಲ್ಕತ್ತಾಗೆ ಹೋದಾಗ ಅವರು ಸ್ನೇಹಿತರ ಜೊತೆಗೂಡಿ ಕುಡಿಯುವುದು ಸ್ವಲ್ಪ ಜಾಸ್ತಿಯಾಯಿತಂತೆ. ಆದರೆ ಒಂದು ದಿನ ಇದ್ದಕಿದ್ದಂತೆ ನನಗೆ ಇದನೆಲ್ಲವನ್ನು ಬಿಟ್ಟು ಬಿಡಬೇಕು ಅಂತ ಅನ್ನಿಸಿತು, ಆ ಕ್ಷಣವೇ ನಾನು ಇವೆರಡನ್ನು ಬಿಡಲು ನಿರ್ಧರಿಸಿದೆ” ಅಂತ ತಮ್ಮ ಬ್ಲಾಗ್ ನಲ್ಲಿ ಬರೆದು ಕೊಂಡಿದ್ದಾರಂತೆ ಹಿರಿಯ ನಟ.


ಎರಡು ಚಟಗಳಿಗೆ ಒಟ್ಟಿಗೆ ಗುಡ್ ಬೈ ಹೇಳಿದ್ರಂತೆ ಅಮಿತಾಭ್


ಎರಡೂ ಅಭ್ಯಾಸಗಳಿಗೆ ಒಟ್ಟಿಗೆ ಗುಡ್ ಬೈ ಹೇಳಿದ್ದರ ಬಗ್ಗೆ ಮಾತಾಡುತ್ತಾ ಅಮಿತಾಭ್ ಸಿಗರೇಟ್ ಮತ್ತು ಆಲ್ಕೋಹಾಲ್ ಬಿಡಲು ಒಂದು ಒಳ್ಳೆಯ ದಾರಿಯಿದೆ ಎಂದು ಹಂಚಿಕೊಂಡರು. "ಸಿಗರೇಟಿನಂತೆಯೇ ಮದ್ಯವನ್ನು ಬಿಡುವ ಮಾರ್ಗವು ನಿಜವಾಗಿಯೂ ತುಂಬಾ ಸರಳವಾಗಿದೆ. ಮಾದಕ ದ್ರವ್ಯದ ಆ ಲೋಟವನ್ನು ಮಧ್ಯದಲ್ಲಿ ಇರಿಸಿ ಮತ್ತು ಅದೇ ಸಮಯದಲ್ಲಿ ನಿಮ್ಮ ತುಟಿಗಳ ಮೇಲೆ ಇರಿಸಿಕೊಂಡು ಸಿಗರೇಟನ್ನು ಪುಡಿ ಮಾಡಿ ಮತ್ತು ಅದಕ್ಕೆ ಸಯೋನಾರಾ (ಜಪಾನೀಸ್ ಭಾಷೆಯಲ್ಲಿ ವಿದಾಯ) ಹೇಳಿ... ಮುಕ್ತಿ ಪಡೆಯಲು ಅತ್ಯುತ್ತಮ ಮಾರ್ಗ ಇದು. ಇದು ಕ್ಯಾನ್ಸರ್ ಅನ್ನು ಒಂದೇ ಬಾರಿಗೆ ತೊಡೆದು ಹಾಕುತ್ತದೆ” ಎಂದು ಬಿಗ್ ಬಿ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್ ಬಿ ಅವರ ಮುಂಬರುವ ಚಿತ್ರವಾದ ‘ಪ್ರಾಜೆಕ್ಟ್ ಕೆ’ ಸೆಟ್ ನಲ್ಲಿ ಸಂಭವಿಸಿದ ಅಪಘಾತದ ನಂತರ ಅಮಿತಾಭ್ ಅವರು ಗಾಯಗೊಂಡಿದ್ದರು. ಇವರು ಈಗ ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

First published: