Rashmika Mandanna Goodbye: ಅಮಿತಾಭ್​, ರಶ್ಮಿಕಾ ನಡುವೆ ಫ್ಯಾಮಿಲಿ ಫೈಟ್​! ಗುಡ್​ ಬೈ ಚಿತ್ರದ ಟ್ರೈಲರ್​ ಔಟ್​!

ಅಮಿತಾಬ್​ ಹಾಗೂ ರಶ್ಮಿಕಾ ಅಭಿಮಾನಿಗಳು ಗುಡ್​ ಬೈ ಚಿತ್ರವನ್ನು ತೆರೆ ಮೇಲೆ ನೋಡಲು ಕಾಯ್ತಿದ್ದಾರೆ. ಚಿತ್ರತಂಡ ಇದೀಗ ಟ್ರೈಲರ್​ ಬಿಡುಗಡೆ ಮಾಡಿದೆ. ಗುಡ್​ ಬೈ ಒಂದು ಫ್ಯಾಮಿಲಿ ಮೂವಿಯಾಗಿದ್ದು, ಈ ಟ್ರೈಲರ್​ ಸಿನಿಮಾ ಕುರಿತು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. 

ಗುಡ್​ ಬೈ ಚಿತ್ರ ಪೋಸ್ಟರ್

ಗುಡ್​ ಬೈ ಚಿತ್ರ ಪೋಸ್ಟರ್

  • Share this:
ಅಮಿತಾಭ್ ಬಚ್ಚನ್ (Amitabh Bachchan), ನೀನಾ ಗುಪ್ತಾ ಹಾಗೂ ರಶ್ಮಿಕಾ ಮಂದಣ್ಣ (Rashmika) ಅಭಿನಯದ ಗುಡ್ ಬೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್‌ಗೆ (Movie Trailer) ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೌತ್​ ನಟಿ ರಶ್ಮಿಕಾ ಮಂದಣ್ಣ ಗುಡ್​ ಬೈ (Good Bye) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸೌತ್ ನಂತರ ಇದೀಗ ಹಿಂದಿ ಚಿತ್ರಗಳಲ್ಲೂ ರಶ್ಮಿಕಾ  ತಮ್ಮ ಚಾಪು ಮೂಡಿಸಲಿದ್ದಾರೆ. ಬಾಲಿವುಡ್​ನಲ್ಲಿ ರಶ್ಮಿಕಾ ಮಿಷನ್ ಮಜ್ನು ಮತ್ತು ಗುಡ್ ಬೈ  ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಅಮಿತಾಭ್ ಬಚ್ಚನ್ ಮತ್ತು ನಟಿ ನೀನಾ ಗುಪ್ತಾ (Neena Gupta) ಅವರೊಂದಿಗೆ ಪರದೆ ಹಂಚಿಕೊಳ್ಳು ಮೂಲಕ ರಶ್ಮಿಕಾ ತಮ್ಮ ಫ್ರೇಮ್​ನನ್ನು ಮತ್ತಷ್ಟು ಹೆಚ್ಚಿಸಿಕೊಳ್ಳತ್ತಿದ್ದಾರೆ. 

ಹೇಗಿದೆ ಗುಡ್​ ಬೈ ಚಿತ್ರದ ಟ್ರೈಲರ್​!?

ಅಮಿತಾಭ್​ ಹಾಗೂ ರಶ್ಮಿಕಾ ಅಭಿಮಾನಿಗಳು ಗುಡ್​ ಬೈ ಚಿತ್ರವನ್ನು ತೆರೆ ಮೇಲೆ ನೋಡಲು ಕಾಯ್ತಿದ್ದಾರೆ. ಚಿತ್ರತಂಡ ಇದೀಗ ಟ್ರೈಲರ್​ ಬಿಡುಗಡೆ ಮಾಡಿದೆ. ಈ ಟ್ರೈಲರ್​ ಸಿನಿಮಾ ಕುರಿತು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.  ಗುಡ್​ ಬೈ ಒಂದು ಫ್ಯಾಮಿಲಿ ಮೂವಿಯಾಗಿದೆ. ನಟಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಅಮಿತಾಭ್ ಅವರ ಮಗಳಾಗಿ ಕಾಣಿಸಿಕೊಂಡಿದ್ದಾರೆ.  ಗುಡೈ ಚಿತ್ರ  ಪೂರ್ಣ ಪ್ರಮಾಣದ ಹಾಸ್ಯಮಯ ಚಿತ್ರದಂತೆ ಕಾಣಿಸುತ್ತಿದೆ. ಟ್ರೈಲರ್​​ನಲ್ಲಿಯೂ ಕಾಮಿಡಿ ತುಣುಕುಗಳನ್ನು ಕಾಣಬಹುದಾಗಿದೆ.



ಗುಡ್​ ಬೈ ಕಂಪ್ಲೀಟ್ ಫ್ಯಾಮಿಲಿ ಮೂವಿ

'ಗುಡ್ ಬೈ' ಚಿತ್ರ ಕಂಪ್ಲೀಟ್ ಫ್ಯಾಮಿಲಿ ಮೂವಿಯಾಗಿದೆ. ಟ್ರೈಲರ್ ವಿಡಿಯೋ ಬಗ್ಗೆ ಹೇಳೋದಾದ್ರೆ, ಕುಟುಂಬದ ಸದಸ್ಯರ ಜೊತೆ ಹೇಗೆಲ್ಲಾ ಗಲಾಟೆ, ಜಗಳಗಳು ನಡೆಯುತ್ತದೆ ಅನ್ನೋದನ್ನು ಟ್ರೈಲರ್​ನಲ್ಲಿ ಕಾಣಬಹುದು. ಪೋಷಕರು, ಮಕ್ಕಳು ಹಾಗೂ ಕುಟುಂಬ ಸದಸ್ಯರ ನಡುವಿನ ಜಗಳ ಮತ್ತು ಪರಸ್ಪರ ಬಾಂಧವ್ಯಗಳ ಕಥೆಯನ್ನು ಚಿತ್ರ ಒಳಗೊಂಡಿದೆ.

ಇದನ್ನೂ ಓದಿ: Samantha: ಹಾರರ್ ಸಿನಿಮಾದಲ್ಲಿ ಸಮಂತಾ! ಅಭಿಮಾನಿಗಳನ್ನು ಭಯಪಡಿಸಲು ಎರಡೆರಡು ಪಾತ್ರ!

ಅಮಿತಾಬ್, ರಶ್ಮಿಕಾ ನಡುವೆ ಫ್ಯಾಮಿಲಿ ಫೈಟ್​!

ಚಿತ್ರದಲ್ಲಿ ಅಮಿತಾಭ್ ಮತ್ತು ರಶ್ಮಿಕಾ ನಡುವಿನ ಫ್ಯಾಮಿಲಿ ಫೈಟ್​ ಹೈಲೆಟ್​ ಆಗಲಿದೆ.  ಟ್ರೈಲರ್​ನಲ್ಲಿ ಅಪ್ಪ ಜಗಳ ನಡುವೆ ಜಗಳಗಳೇ ನಡೆಯುತ್ತಿರುತ್ತವೆ. ಜೊತೆಗೆ ಭಾವನಾತ್ಮಕ ಸನ್ನಿವೇಶಗಳನ್ನು ಇಲ್ಲಿ ಕಾಣಬಹುದಾಗಿದೆ. ಇದೊಂದು ಪರಿಪೂರ್ಣ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಹಾಸ್ಯನಟ ಸುನಿಲ್ ಗ್ರೋವರ್ ಕೂಡ ಚಿತ್ರದಲ್ಲಿ ಮಸ್ತ್​ ಎಂಟ್ರಿ ಕೊಡಲಿದ್ದಾರೆ. ಅವರ ಪಾತ್ರವು ಜನರನ್ನು ನಗೆಗಡಲಿನಲ್ಲಿ ತೇಲಿಸಲಿದೆ. ಇದರ ಸಣ್ಣ ತುಣುಕನ್ನು ನೀವು ಚಿತ್ರದ ಟ್ರೈಲರ್‌ನಲ್ಲಿ ನೋಡಬಹುದಾಗಿದೆ.





ಚಿತ್ರದ ಟ್ರೇಲರ್ ವಿಡಿಯೋ ಹಂಚಿಕೊಂಡ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರೇ 'ಗುಡ್ ಬೈ' ಚಿತ್ರದ ಟ್ರೈಲರ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಟ್ರೇಲರ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಇದು ತುಂಬಾ ವಿಶೇಷವಾಗಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಗುಡ್ ಬೈ ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
Published by:Pavana HS
First published: