ಅಮಿತಾಭ್ ಬಚ್ಚನ್ ಕನ್ನಡಕ ಹುಡುಕಿದ 11 ತಾರೆಯರು: ಹೀಗೊಂದು ಅದ್ಭುತ ಪ್ರಯತ್ನ

ಈ ಕಿರುಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ವಹಿಸಿದರೆ, ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಂಜ್, ಕನ್ನಡದಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ, ತಮಿಳಿನಿಂದ ರಜನಿಕಾಂತ್, ಮಲಯಾಳಂನಿಂದ ಮೋಹನ್‍ಲಾಲ್ ಹಾಗೂ ಮಮ್ಮುಟಿ, ತೆಲುಗಿನಿಂದ ಚಿರಂಜೀವಿ, ಬೆಂಗಾಳಿಯಿಂದ ಪ್ರೊಸೆಂಜಿತ್ ಚಟರ್ಜಿ, ಮರಾಠಿಯಿಂದ ಸೋನಾಲಿ ಕುಲ್ಕರ್ಣಿಯವರು ನಟಿಸಿದ್ದಾರೆ.

shortfilm

shortfilm

  • Share this:
ಕೊರೋನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್​ಡೌನ್ ಹೇರಲಾಗಿದೆ. ಆದರೂ ಈ ಸಾಂಕ್ರಾಮಿಕ ಸೋಂಕಿನ ಬಗ್ಗೆ ನಿರ್ಲಕ್ಷ್ಯವಹಿಸಿ ಅನೇಕರು ಮನೆಯಿಂದ ಹೊರ ಬರುತ್ತಿದ್ದಾರೆ. ಜನರ ಬೇಜವಾಬ್ದಾರಿ ಬಗ್ಗೆ ಅತ್ಯುತ್ತಮವಾಗಿ ಹೇಗೆ ಜಾಗೃತಿ ಮೂಡಿಸಬಹುದು ಎಂಬುದನ್ನು ನಿರ್ದೇಶಕ ಪ್ರಸೂನ್ ಪಾಂಡೆ ತೋರಿಸಿಕೊಟ್ಟಿದ್ದಾರೆ.

ಹೌದು, ಲಾಕ್​​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಸ್ಟಾರ್ ನಟರುಗಳನ್ನೇ ಬಳಸಿ ನಿರ್ಮಿಸಿರುವ ಫ್ಯಾಮಿಲಿ ಎಂಬ ಕಿರುಚಿತ್ರ ಬಿಡುಗಡೆಯಾಗಿದೆ. ಈ ಶಾರ್ಟ್ ಫಿಲಂನ ಮೂಲ ಉದ್ದೇಶ ಕೊರೋನಾ ಬಗ್ಗೆ ಜಾಗೃತಿ. ಅದಕ್ಕಾಗಿ ಆರಿಸಿಕೊಂಡಿದ್ದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಕನ್ನಡಕ.

ಕೇವಲ ಕನ್ನಡಕ ಹುಡುಕುವ ಕಥೆಯಿಂದ ಪ್ರಾರಂಭವಾಗುವ ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ನಿಂದ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಹುಡುಕಾಟದ ಎಳೆಯನ್ನೇ ಇಟ್ಟುಕೊಂಡು ಇತರೆ ಕಲಾವಿದರು ಬಚ್ಚನ್ ಅವರ ಕನ್ನಡಕವನ್ನು ಹುಡುಕಲು ಮುಂದಾಗುತ್ತಾರೆ. ಇಲ್ಲಿ ಒಬ್ಬಬ್ಬರದು ಒಂದೊಂದು ಭಾಷೆ. ಆದರೆ ಹುಡುಕಾಟ ನಡೆಯುತ್ತಿರುವುದು ಒಂದೇ ಜಾಗದಲ್ಲಿ ಅನಿಸಿಬಿಡುತ್ತೆ. ಹಾಗೆಯೇ ಕಲಾವಿದರ ಹಾವಭಾವ, ಕ್ಯಾಮೆರಾ ಮೋಡಿ ಇದು ನಿಜ ಎಂಬಂತೆ ನಂಬಿಸಿ ಬಿಡುತ್ತೆ.

ಈ ಕಿರುಚಿತ್ರದಲ್ಲಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರ ವಹಿಸಿದರೆ, ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲ್ಜಿತ್ ದೋಸಂಜ್, ಕನ್ನಡದಿಂದ ಹ್ಯಾಟ್ರಿಕ್ ಹೀರೋ ಶಿವಣ್ಣ, ತಮಿಳಿನಿಂದ ರಜನಿಕಾಂತ್, ಮಲಯಾಳಂನಿಂದ ಮೋಹನ್‍ಲಾಲ್ ಹಾಗೂ ಮಮ್ಮುಟಿ, ತೆಲುಗಿನಿಂದ ಚಿರಂಜೀವಿ, ಬೆಂಗಾಳಿಯಿಂದ ಪ್ರೊಸೆಂಜಿತ್ ಚಟರ್ಜಿ, ಮರಾಠಿಯಿಂದ ಸೋನಾಲಿ ಕುಲ್ಕರ್ಣಿಯವರು ನಟಿಸಿದ್ದಾರೆ.

ಆದರೆ ಇವರೆಲ್ಲರೂ ನಟಿಸಿರುವುದು ಅವರವರ ಮನೆಯಿಂದ ಎಂಬುದು ವಿಶೇಷ. ಹಲವು ಸ್ಟಾರ್ ನಟರು ಒಂದೆಡೆ ಸೇರದೆ ತಮ್ಮ ತಮ್ಮ ಮನೆಗಳಿಂದಲೇ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಇದು ಸ್ವಲ್ಪವೂ ಗೊತ್ತಾಗದ್ದಂತೆ ಚಿತ್ರೀಕರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನು ಕೊನೆಯಲ್ಲಿ ಅಮಿತಾಭ್ ಬಚ್ಚನ್ ಮಾತನಾಡಿದ್ದು, ಚಿತ್ರರಂಗ ಯಾವತ್ತೂ ಒಂದೇ, ನಾವೆಲ್ಲರೂ ಒಂದೇ ಕುಟುಂಬದವರು. ನಮ್ಮ ಕುಟುಂಬದ ಹಿಂದೆ ಇನ್ನೊಂದು ದೊಡ್ಡದೊಂದು ಪರಿವಾರವಿದೆ. ಅವರು ನಮಗಾಗಿ ಕೆಲಸ ಮಾಡುತ್ತಿರುತ್ತಾರೆ. ಅವರೇ ಸಿನಿಮಾ ಮಂದಿ, ದಿನಗೂಲಿ ಕಾರ್ಮಿಕರು. ಲಾಕ್‍ಡೌನ್‍ನ ಈ ಸಮಯದಲ್ಲಿ ಅವರೆಲ್ಲ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ನಾವೆಲ್ಲರೂ ಸೇರಿ ಅವರೊಂದಿಗೆ ನಿಲ್ಲಬೇಕಿದೆ. ಅವರಿಗೂ ನಾವೆಲ್ಲರೂ ಸಹಾಯ ಮಾಡಬೇಕಿದೆ. ಯಾರೂ ಕೂಡ ಭಯಭೀತರಾಗಬೇಡಿ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಕೇಳಿಕೊಂಡಿದ್ದಾರೆ.
First published: