• Home
 • »
 • News
 • »
 • entertainment
 • »
 • Amitabh Bachchan NFT Collection: ಬಿಗ್ ಬಿ NFT ಸಂಗ್ರಹ ಲಾಂಚ್; ಕವಿತೆಗಳು & ಅನನ್ಯ ಕಲಾಕೃತಿಗಳ ರಸದೌತಣ!

Amitabh Bachchan NFT Collection: ಬಿಗ್ ಬಿ NFT ಸಂಗ್ರಹ ಲಾಂಚ್; ಕವಿತೆಗಳು & ಅನನ್ಯ ಕಲಾಕೃತಿಗಳ ರಸದೌತಣ!

ನಟ ಅಮಿತಾಬ್​​ ಬಚ್ಚನ್​​

ನಟ ಅಮಿತಾಬ್​​ ಬಚ್ಚನ್​​

Unique Artworks and Big B Father's Poems: ಮಾರಾಟಕ್ಕೆ ಇರುವ NFT ಗಳ ಸಂಗ್ರಹಗಳಲ್ಲಿ ಒಂದು ಮಧುಶಾಲಾ ಪುಸ್ತಕದ ಅಮಿತಾಬ್​​ ಬಚ್ಚನ್ ಕವಿತೆ ವಾಚನ ಕೂಡ ಒಳಗೊಂಡಿದೆ. ಅಮಿತಾಬ್ ಅವರ ಜೀವನದ ಪ್ರಮುಖ ಅಂಶಗಳನ್ನು ಈ NFTಯಲ್ಲಿದೆ.

 • Share this:

  ಬಾಲಿವುಡ್‌ ಬಿಗ್‌ಬಿ ಅಮಿತಾಬ್​​ ಬಚ್ಚನ್ ತಮ್ಮದೇ ಆದ NFT (ಗುತ್ತಿಗೆ ಪಡೆಯದ ಸರಕುಗಳ ಟೋಕನ್‌ಗಳು) ಗಳನ್ನು ಸ್ಥಾಪಿಸಿದ್ದು ಇದು ಅಮಿತಾಬ್​​​ ಅವರ ಬದುಕಿನ ಕುರಿತ ಅನನ್ಯವಾದ ಸೀಮಿತ ಕಲಾಕೃತಿಗಳನ್ನು ಒಳಗೊಂಡಿದೆ. ತಮ್ಮ ತಂದೆ ಹರಿವಂಶ್ ರಾಯ್ ಬಚ್ಚನ್‌ರ ಪ್ರಸಿದ್ಧ ಕವನ ಸಂಕಲನಗಳ ಮಧುಶಾಲಾ ಕವಿತೆಗಳ ವಾಚನಗೋಷ್ಠಿಯನ್ನು ಒಳಗೊಂಡಿದ್ದು ತಮ್ಮ ಜೀವನದ ವೃತ್ತಿಜೀವನದ ಉಪಖ್ಯಾನಗಳನ್ನು NFT ಯಲ್ಲಿ ಹಂಚಿಕೊಳ್ಳಲಿದ್ದಾರೆ.


  ಮಾರಾಟಕ್ಕೆ ಇರುವ NFT ಗಳ ಸಂಗ್ರಹಗಳಲ್ಲಿ ಒಂದು ಮಧುಶಾಲಾ ಪುಸ್ತಕದ ಅಮಿತಾಬ್​​ ಬಚ್ಚನ್ ಕವಿತೆ ವಾಚನ ಕೂಡ ಒಳಗೊಂಡಿದೆ. ಅಮಿತಾಬ್ ಅವರ ಜೀವನದ ಪ್ರಮುಖ ಅಂಶಗಳನ್ನು ಈ NFTಯಲ್ಲಿ ಸೇರಿಸಿದ್ದು ಇನ್ನೂ ಕೆಲವು ಬಹಿರಂಗಪಡಿಸದೇ ಇರುವ ಉಡುಗೊರೆಗಳು ಹಾಗೂ ಮಹತ್ವದ ಅಂಶಗಳನ್ನು ಈ ಸಂಗ್ರಹಣೆಗಳು ಒಳಗೊಂಡಿದೆ.


  ಅಮಿತಾಬ್ ಬಚ್ಚನ್ ತಮ್ಮ NFT ಸಂಗ್ರಹವನ್ನು BeyondLife.club ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. BeyondLife.club ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ NFT ಸಂಗ್ರಹವನ್ನು BeyondLife.club ಮೂಲಕ ಬಿಡುಗಡೆ ಮಾಡುತ್ತಿರುವ ಮೊದಲ ವ್ಯಕ್ತಿಯಾಗಿದ್ದಾರೆ. ಈ ಸಂಗ್ರಹಣೆಗಳು ಅವನ ಪೌರಾಣಿಕ ಸ್ಥಿತಿಯನ್ನು ಪ್ರತಿನಿಧಿಸುತ್ತವೆ ಮತ್ತು ಈ ಮೊದಲ NFT ಪ್ಲಾಟ್‌ಫಾರ್ಮ್ ಅನ್ನು ತೆರೆಯುತ್ತವೆ ಎಂದು ತಿಳಿಸಿದೆ.


  BeyondLife.club ವೆಬ್‌ಸೈಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ NFT ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ತದನಂತರ ಇದನ್ನು ಅಮಿತಾಬ್ ಅವರಿಗೆ ತಿಳಿಸಲಾಗುತ್ತದೆ. ಈ ವಿಚಾರಗಳು ಆಡಿಯೋ ಕ್ಲಿಪ್ ರೂಪದಲ್ಲಿ ಸಹಿ ಮಾಡಿದ ಪೋಸ್ಟರ್ ಅಥವಾ ಸಂಧಿಸಿ ಶುಭಾಶಯ ತಿಳಿಸುವ ಕಾರ್ಯಕ್ರಮವೇ ಆಗಿರಬಹುದು ಎಂದು ವೆಬ್‌ಸೈಟ್ ತಿಳಿಸಿದೆ.


  ರಿತಿ ಎಂಟರ್‌ಟೈನ್‌ಮೆಂಟ್ ಮತ್ತು ನೋ-ಕೋಡ್ NFT ವಿನಿಮಯ ಪ್ಲಾಟ್‌ಫಾರ್ಮ್, GuardianLink.io. ನಡುವೆ BeyondLife.club ಪಾಲುದಾರಿಕೆಯನ್ನು ಹೊಂದಿದೆ. ರಿತಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು ರಿತಿ ಎಂಟರ್‌ಟೈನ್‌ಮೆಂಟ್‌ನ ಸಹ ಸ್ಥಾಪಕರು ಸೌರವ್ ಬ್ಯಾನರ್ಜಿಯಾಗಿದ್ದಾರೆ.


  ಇದನ್ನೂ ಓದಿ: Shilpa Shetty Divorce?: ರಾಜ್ ಕುಂದ್ರಾಗೆ ವಿಚ್ಛೇದನ ನೀಡಲು ಮುಂದಾದ ಶಿಲ್ಪಾ ಶೆಟ್ಟಿ? ಮಕ್ಕಳಿಗಾಗಿ ಹೊಸ ಜೀವನ!

  NFT ಗಳನ್ನು ಬ್ಲಾಕ್‌ಚೈನ್‌ನಲ್ಲಿ ಸಂಗ್ರಹಿಸಲಾಗಿದೆ. ಡಿಜಿಟಲ್ ಸ್ವತ್ತುಗಳಿಗೆ ಅನನ್ಯ ಗುರುತು ನೀಡಿರುವ ಬ್ಲಾಕ್‌ಚೈನ್ ಕಾರಣ ಅವುಗಳನ್ನು ಪರಸ್ಪರ ಬದಲಾಯಿಸಲಾಗುವುದಿಲ್ಲ. ನೈಜ-ಜಗತ್ತಿನ ಸ್ವತ್ತುಗಳಾದ ವರ್ಣಚಿತ್ರಗಳು, ಗೇಮ್ಸ್, ಸಂಗೀತ ಆಲ್ಬಮ್‌ಗಳು, ಸಂಗ್ರಹವಾದ ಸ್ಪೋರ್ಟ್ಸ್ ಕಾರ್ಡ್‌ಗಳನ್ನು ಮತ್ತು ಮೇಮ್‌ಗಳನ್ನು NFT ಗಳಂತೆ ಪರಿವರ್ತಿಸಬಹುದಾಗಿದೆ. ಫೋಟೋಗಳು, ವೀಡಿಯೊಗಳು, ಆಡಿಯೋ ಮತ್ತು ಇತರ ರೀತಿಯ ಡಿಜಿಟಲ್ ಫೈಲ್‌ಗಳಂತಹ ವಸ್ತುಗಳನ್ನು ಪ್ರತಿನಿಧಿಸಲು NFT ಗಳನ್ನು ಬಳಸಬಹುದು.


  ನೀವು ಕೂಡ NFT ಗಳಲ್ಲಿ ನಿಮ್ಮ ಅಮೂಲ್ಯ ಕಲಾಸ್ವತ್ತುಗಳನ್ನು ಸಂಗ್ರಹಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಲು ಆನ್‌ಲೈನ್ ಕೋರ್ಸ್‌ಗಳಿವೆ. ಆನ್‌ಲೈನ್ ತರಬೇತಿಗಳನ್ನು ನಡೆಸುವ ಬ್ಲಾಕ್‌ಚೈನ್ ಕೌನ್ಸಿಲ್ ಸಂಸ್ಥೆಗಳು NFT ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಅಮಿತಾಭ್ ಬಚ್ಚನ್ ತಮ್ಮದೇ NFT ಸಂಗ್ರಹವನ್ನು ಮಾಡಿರುವ ಮೊದಲ ನಟರಾಗಿದ್ದಾರೆ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಅಮಿತಾಬ್ ಅವರು NFT ಗಳ ಸಂಗ್ರಹಣೆಯನ್ನು ಬಿಡುಗಡೆ ಮಾಡಿರುವ ಉದ್ದೇಶ ಕಲಾವಿದರು, ಕ್ರೀಡಾಪಟುಗಳು ಹಾಗೂ ಸೆಲೆಬ್ರಿಟಿಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಬಲೀಕರಣಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು