ಅಮಿತಾಭ್​​ ಕುಟುಂಬಕ್ಕೆ 14 ದಿನ ಹೋಂ ಕ್ವಾರಂಟೈನ್​; ಐಶ್ವರ್ಯಾ ರೈ, ಜಯಾ ಬಚ್ಚನ್​​ಗೆ ಕೊರೋನಾ ನೆಗೆಟಿವ್​

ಅಮಿತಾಭ್​ ಮನೆ ಸದಸ್ಯರು ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು 14 ದಿನ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸದ್ಯ ಬಚ್ಚನ್​ ಮನೆಯ ಹೊರ ಭಾಗದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

news18-kannada
Updated:July 12, 2020, 2:22 PM IST
ಅಮಿತಾಭ್​​ ಕುಟುಂಬಕ್ಕೆ 14 ದಿನ ಹೋಂ ಕ್ವಾರಂಟೈನ್​; ಐಶ್ವರ್ಯಾ ರೈ, ಜಯಾ ಬಚ್ಚನ್​​ಗೆ ಕೊರೋನಾ ನೆಗೆಟಿವ್​
ಬಚ್ಚನ್ ಕುಟುಂಬ
  • Share this:
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ಇಡೀ ಕುಟುಂಬಕ್ಕೆ ಕೊರೋನಾ ವೈರಸ್​ ಹರಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಕೊರೋನಾ ಪರೀಕ್ಷೆ ವೇಳೆ ಐಶ್ವರ್ಯಾ ರೈ ಬಚ್ಚನ್​, ಆರಾಧ್ಯಾ ಬಚ್ಚನ್​ ಹಾಗೂ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್​ ಬಂದಿದೆ ಎಂದು ಮುಂಬೈ ಮೇಯರ್​ ಕಿಶೋರ್ ಪಡ್ನೇಕರ್​ ಖಚಿತಪಡಿಸಿದ್ದಾರೆ. 

"ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿವರ್ಗದವರ ಪರೀಕ್ಷೆ ನಡೆಯುತ್ತಿದೆ. ಅದರ ಫಲಿತಾಂಶ ಬರಬೇಕಿದೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ,” ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್​ ತಮಗೂ ಕೊರೋನಾ ವೈರಸ್​ ಇರುವ ವಿಚಾರವನ್ನು ಒಪ್ಪಿಕೊಂಡಿದ್ದರು.

ನನಗೆ ಮತ್ತು ನನ್ನ ತಂದೆಗೆ ಕೊರೋನಾ ಪಾಸಿಟಿವ್​ ಇರುವುದು ದೃಢವಾಗಿದೆ. ನಾವು ಚಿಕಿತ್ಸೆ ಪಡೆಯುತ್ತಿದ್ದೇವೆ. ಹೀಗಾಗಿ ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೇಳಿದ್ದರು. ಈ ಬೆನ್ನಲ್ಲೇ ಐಶ್ವರ್ಯಾ, ಆರಾಧ್ಯಾ ಹಾಗೂ ಜಯಾ ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ನೆಗೆಟಿವ್​ ಬಂದಿದೆ.

ಬಚ್ಚನ್​ ಕುಟುಂಬಕ್ಕೆ ಕೊರೋನಾ ಕಂಟಕವಾಗಿರುವುದು ಅವರ ಅಭಿಮಾನಿ ಬಳಗಕ್ಕೆ ಆತಂಕ ತಂದೊಡ್ಡಿದೆ. ಕೊರೋನಾದಿಂದ ಬಚ್ಚನ್​ ಕುಟುಂಬ ಮುಕ್ತಿ ಪಡೆಯಲಿ ಎಂದು ಅನೇಕರು ಟ್ವೀಟ್​ ಮಾಡುತ್ತಿದ್ದಾರೆ. ಇನ್ನು, ಅಮಿತಾಭ್​ ಮನೆ ಸದಸ್ಯರು ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು 14 ದಿನ ಹೋಂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸದ್ಯ ಬಚ್ಚನ್​ ಮನೆಯ ಹೊರ ಭಾಗದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ಶೂಜಿತ್ ಸಿರ್ಕಾರ್ ಅವರ ‘ಗುಲಾಬೊ ಸಿಬಾಬೊ’ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ‘ಚೆಹರೆ’, ‘ಬ್ರಹ್ಮಾಸ್ತ್ರ’, ‘ಝಂಡ್’ ಅವರ ಮುಂಬರುವ ಸಿನಿಮಾಗಳಾಗಿವೆ. ಇದರ ಜೊತೆಗೆ ಬಿಗ್ ಬಿ ಅವರು ಕೌನ್ ಬನೇಗ ಕರೋಡ್​ಪತಿ ರಿಯಾಲಿಟಿ ಶೋನ 12ನೇ ಸೀಸನ್​ನಲ್ಲೂ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ನಟೆನೆಯ ‘ಬ್ರೆತ್​: ಇನ್​ ಟು ದಿ ಶ್ಯಾಡೊ’ ವೆಬ್​ ಸಿರೀಸ್​​ ಜುಲೈ 10ರಂದು ಅಮೆಜಾನ್​ ಪ್ರೈಮ್​ ನಲ್ಲಿ ಬಿಡುಗಡೆಯಾಗಿದೆ.
Published by: Rajesh Duggumane
First published: July 12, 2020, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading