ಪ್ರಧಾನಿ ಆಗ್ತೀರಾ..? ಕೇಳಿದ್ದಕ್ಕೆ ಅಮಿತಾಭ್​ ಬಚ್ಚನ್​ ಕೊಟ್ಟ ಉತ್ತರವೇನು ಗೊತ್ತಾ?

Amitabh Bachchan: ಅಮಿತಾಭ್​ ಬಚ್ಚನ್ 80ರ ದರಶಕದಲ್ಲೇ ರಾಜಕೀಯವನ್ನು ಕಂಡಿದ್ದರು. ಹಾಗಾಗಿ ಬಿಗ್​​​​ ಬಿಗೆ ಇದು ಹೊಸದೇನಲ್ಲ. 80ರ ದಶಕದಲ್ಲಿ ಸಂಸದರಾಗಿದ್ದರು. ನಂತರ  ವರ್ಷಗಳಲ್ಲಿ ರಾಜಕೀಯದಿಂದ ಹಿಂದೆ ಸರಿದರು.

ಅಮಿತಾಭ್​ ಬಚ್ಚನ್​

ಅಮಿತಾಭ್​ ಬಚ್ಚನ್​

  • Share this:
    ಬಾಲಿವುಡ್​ ಹಿರಿಯ ನಟ ಅಮಿತಾಭ್​​​ ಬಚ್ಚನ್​ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದರ ಜೊತೆಗೆ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಹೀಗಿರುವಾಗ ಅಭಿಮಾನಿಗಳು ಬಿಗ್​ ಬಿಗೆ ನಾನಾ ತರಹದ ಪ್ರಶ್ನೆಗಳನ್ನು ಕೇಳುವುದು. ಅವರಿಂದ ಉತ್ತರವನ್ನು ಅಪೇಕ್ಷೆ ಪಡುವುದು ಸಾಮಾನ್ಯ. ಇತ್ತೀಚೆಗೆ ಟ್ವಿಟ್ಟರ್​ನಲ್ಲಿ 12ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ಅಮಿತಾಭ್​​ ಬಚ್ಚನ್​ಗೆ ಅಭಿಮಾನಿಯೊಬ್ಬ ತರಲೆ ಪ್ರಶ್ನೆ ಕೇಳಿದ್ದಾನೆ. ಈ ದೇಶದ ಪ್ರಧಾನಿ ಆಗ್ತೀರಾ? ಎಂದಿದ್ದಾನೆ.

    ಆದರೆ ಅಭಿಮಾನಿ ಕೇಳಿದ  ಪ್ರಶ್ನೆಗೆ ಅಮಿತಾಭ್​ ಬಚ್ಚನ್​ ನಾಜೂಕಾಗಿ ಉತ್ತರ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಉತ್ತರಿಸಲು ಹೋಗುವುದಿಲ್ಲ. ಆದರೆ ಆಮಿತಾಭ್​ ಬಚ್ಚನ್​ ಮಾತ್ರ ‘ಬೆಳಿಗ್ಗೆ ಬೆಳ್ಳಿಗ್ಗೆ ಒಳ್ಳೇದು ಮಾತನಾಡಿ‘ ಎಂದು  ಹೇಳುವ ಮೂಲಕ ಅಭಿಮಾನಿಯ ಬಾಯಿ ಮುಚ್ಚಿಸಿದ್ದಾರೆ.



    ಅಮಿತಾಭ್​ ಬಚ್ಚನ್ 80ರ ದರಶಕದಲ್ಲೇ ರಾಜಕೀಯವನ್ನು ಕಂಡಿದ್ದರು. ಹಾಗಾಗಿ ಬಿಗ್​​​​ ಬಿಗೆ ಇದು ಹೊಸದೇನಲ್ಲ. 80ರ ದಶಕದಲ್ಲಿ ಸಂಸದರಾಗಿದ್ದರು. ನಂತರ  ವರ್ಷಗಳಲ್ಲಿ ರಾಜಕೀಯದಿಂದ ಹಿಂದೆ ಸರಿದರು.

    ಇದನ್ನೂ ಓದಿ: ಚಾಲೆಂಜ್​ ಮಾಡುವ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ಸ್ಯಾಂಡಲ್​ವುಡ್​ ನಟಿ!

    ಇದನ್ನೂ ಓದಿ: ‘ಒಂದಾಗೋಣ..ಒಗ್ಗಟ್ಟಲ್ಲೇ ಬಲವು’ ಎಂದ ಸ್ಯಾಂಡಲ್​ವುಡ್​​ ಸ್ಟಾರ್ಸ್​​; ಕೊರೋನಾ ಜಾಗೃತಿ ಹಾಡು ಕೇಳಲೇಬೇಕು

     
    First published: