• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಮುಂಬೈನ ಅಂಧೇರಿಯಲ್ಲಿ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಖರೀದಿಸಿದ ಅಮಿತಾಭ್‌ ಬಚ್ಚನ್‌: ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಮುಂಬೈನ ಅಂಧೇರಿಯಲ್ಲಿ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಖರೀದಿಸಿದ ಅಮಿತಾಭ್‌ ಬಚ್ಚನ್‌: ಬೆಲೆ ಕೇಳಿದ್ರೆ ದಂಗಾಗ್ತೀರಾ..!

ಅಮಿತಾಭ್ ಬಚ್ಚನ್​

ಅಮಿತಾಭ್ ಬಚ್ಚನ್​

ಅಮಿತಾಭ್‌ ಬಚ್ಚನ್ ಮುಂಬೈನ ಅಂಧೇರಿ ಸಬರ್ಬ್​ನಲ್ಲಿ ಖರೀದಿಸಿರುವ ಈ ಅಪಾರ್ಟ್‌ಮೆಂಟ್‌ನ ಬೆಲೆ ಬರೋಬ್ಬರಿ 31 ಕೋಟಿ ರೂ. ಅಲ್ಲದೆ, ಬಾಲಿವುಡ್ ನಟ 2021 ರ ಮಾರ್ಚ್ 31 ರವರೆಗೆ ಮಹಾರಾಷ್ಟ್ರ ಸರ್ಕಾರದ ಶೇಕಡಾ 2 ರಷ್ಟು ಸ್ಟ್ಯಾಂಪ್‌ ಡ್ಯೂಟಿ ಮನ್ನಾ ಘೋಷಣೆಯ ಲಾಭವನ್ನು ಪಡೆದಿದ್ದಾರೆ.

  • Share this:

ಬಾಲಿವುಡ್ ನಟ ಅಮಿತಾಭ್‌ ಬಚ್ಚನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಅವರು ಯಾವುದೋ ಹೊಸ ಚಿತ್ರಕ್ಕೆ ಸಹಿ ಹಾಕಿಲ್ಲ, ಅಥವಾ ಕೊರೋನಾ ವಿಚಾರಕ್ಕೂ ಅಲ್ಲ. ಬದಲಾಗಿ ಅಪಾರ್ಟ್‌ಮೆಂಟ್‌ ವಿಚಾರಕ್ಕೆ. ಹೌದು, ಅಮಿತಾಭ್‌ ಬಚ್ಚನ್‌ ಅವರು ಮಹಾರಾಷ್ಟ್ರ ರಾಜಧಾನಿ ಮುಂಬೈನ ಅಂಧೇರಿಯ  ಸಬರ್ಬ್​ನಲ್ಲಿ ಹೊಸದೊಂದು ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. ಈ ಐಷಾರಾಮಿ ಅಪಾರ್ಟ್‌ಮೆಂಟ್‌ನ ಬೆಲೆ ಕೇಳಿದ್ರೆ ನೀವು ಕೆಲ ಕ್ಷಣಗಳ ಕಾಲ ಶಾಕ್‌ ಆಗ್ತೀರಾ..! ನಿರ್ಮಾಣ ಹಂತದಲ್ಲಿರುವ ಅಟ್ಲಾಂಟಿಸ್‌ ಅಪಾರ್ಟ್‌ಮೆಂಟ್‌ನಲ್ಲಿ 5,184 ಚದರ ಅಡಿ ವಿಸ್ತೀರ್ಣದಲ್ಲಿ, ಒಪ್ಪಂದವನ್ನು ಡಿಸೆಂಬರ್‌ನಲ್ಲಿ ಅಂತಿಮಗೊಳಿಸಲಾಯಿತು ಮತ್ತು ನೋಂದಣಿ ಇತ್ತೀಚೆಗೆ ಪೂರ್ಣಗೊಂಡಿದೆ.


ಅಮಿತಾಭ್‌ ಬಚ್ಚನ್ ಮುಂಬೈನ ಅಂಧೇರಿ ಸಬರ್ಬ್​ನಲ್ಲಿ ಖರೀದಿಸಿರುವ ಈ ಅಪಾರ್ಟ್‌ಮೆಂಟ್‌ನ ಬೆಲೆ ಬರೋಬ್ಬರಿ 31 ಕೋಟಿ ರೂ. ಅಲ್ಲದೆ, ಬಾಲಿವುಡ್ ನಟ 2021 ರ ಮಾರ್ಚ್ 31 ರವರೆಗೆ ಮಹಾರಾಷ್ಟ್ರ ಸರ್ಕಾರದ ಶೇಕಡಾ 2 ರಷ್ಟು ಸ್ಟ್ಯಾಂಪ್‌ ಡ್ಯೂಟಿ ಮನ್ನಾ ಘೋಷಣೆಯ ಲಾಭವನ್ನು ಪಡೆದಿದ್ದಾರೆ. ಅಂದರೆ ಬಿಗ್‌ ಬಿ 31 ಕೋಟಿ ರೂ. ಗೆ ಶೇ. 2 ರಷ್ಟು ಸ್ಟಾಂಪ್ ಡ್ಯೂಟಿ ಮನ್ನಾದಿಂದ 62 ಲಕ್ಷ ರೂ. ಲಾಭ ಪಡೆದುಕೊಂಡಿದ್ದಾರೆ. ಅಂದ ಹಾಗೆ, ಈ ಬಹು ಮಹಡಿ ಐಷಾರಾಮಿ ಅಪಾರ್ಟ್‌ಮೆಂಟ್‌ನ 27 ಮತ್ತು 28 ನೇ ಮಹಡಿಯನ್ನು ಹಿರಿಯ ನಟ ಖರೀದಿಸಿದ್ದು, ಜತೆಗೆ 6 ಕಾರುಗಳನ್ನು ಪಾರ್ಕ್‌ ಮಾಡುವಷ್ಟು ಜಾಗವನ್ನೂ ತೆಗೆದುಕೊಂಡಿದ್ದಾರೆ. ಇನ್ನು, ಮನಿ ಕಂಟ್ರೋಲ್‌ ವರದಿಯ ಪ್ರಕಾರ, ಈ ಪ್ರದೇಶದ ಆಸ್ತಿಯ ಪ್ರತಿ ಚದರ ಅಡಿ ಮೌಲ್ಯವು ರೂ. 60,000 ಎಂದು ವರದಿಯಾಗಿದೆ.


ಅಮಿತಾಭ್​ ಬಚ್ಚನ್​


ಕೋವಿಡ್‌ - 19 ಸಾಂಕ್ರಾಮಿಕದ ಕಾರಣದಿಂದ ಮಹಾರಾಷ್ಟ್ರ ಸರ್ಕಾರ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಮಾರಾಟಕ್ಕೆ ಭಾರಿ ಉತ್ತೇಜನ ನೀಡಿದೆ. ಮತ್ತು ಬಹಳಷ್ಟು ಸೆಲೆಬ್ರಿಟಿಗಳು, ಉದ್ಯಮಿಗಳು, ವೃತ್ತಿಪರ CXOಗಳು ಈ ಪೈಕಿ ಹೆಚ್ಚಿನ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ಕೊರೋನಾ ಕಾರಣದಿಂದ ಬೆಲೆ ಕಡಿಮೆ ಮಾಡಿರುವುದು ಹಾಗೂ ಸ್ಟ್ಯಾಂಪ್‌ ಡ್ಯೂಟಿ ಕಡಿಮೆ ಮಾಡಿರುವುದರಿಂದ ಸುಲಭವಾಗಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ಸಹಾಯ ಮಾಡಿವೆ.


ಆಗಸ್ಟ್ 26, 2020 ರಂದು ಮಹಾರಾಷ್ಟ್ರ ಸರ್ಕಾರವು 2020 ರ ಡಿಸೆಂಬರ್ 31 ರವರೆಗೆ ವಸತಿ ರಿಯಲ್ ಎಸ್ಟೇಟ್ ಮೇಲಿನ ಸ್ಟ್ಯಾಂಪ್‌ ಸುಂಕವನ್ನು ಶೇ. 5ರಿಂದ ಶೇ. 2 ಕ್ಕೆ ಇಳಿಸುವುದಾಗಿ ಘೋಷಿಸಿತು. ಕೋವಿಡ್‌ - 19 ನಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ತೀವ್ರ ಹೊಡೆತ ಬಿದ್ದಿದ್ದು, ಈ ಹಿನ್ನೆಲೆ ಮಾರುಕಟ್ಟೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಯಿತು. ಅಲ್ಲದೆ, 2021 ರ ಜನವರಿ 1 ರಿಂದ ಮಾರ್ಚ್ 31 ರವರೆಗೆ ಸ್ಟ್ಯಾಂಪ್‌ ಡ್ಯೂಟಿಯನ್ನು ಶೇ. 3 ಕ್ಕೆ ಹೆಚ್ಚಿಸಲಾಯ್ತು.


ಇದನ್ನೂ ಓದಿ: Kajal Aggarwal: ಲಾಕ್​ಡೌನ್​ನಲ್ಲಿ ರೊಮ್ಯಾನ್ಸ್​: ಗಂಡನ ಜೊತೆಗಿನ ಫೋಟೋ ಶೇರ್ ಮಾಡಿದ ಕಾಜಲ್​ ಅಗರ್ವಾಲ್​


ಮಾರ್ಚ್ 31, 2021 ರ ನಂತರವೂ ಮಹಾರಾಷ್ಟ್ರ ಸರ್ಕಾರವು ಆಸ್ತಿ ನೋಂದಣಿಯ ಮೇಲಿನ ಮನ್ನಾವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿತು. ಮತ್ತು 2021-22ರ ಆರ್ಥಿಕ ವರ್ಷದಲ್ಲಿ ರೆಡಿ ರೆಕಾನರ್ ದರಗಳನ್ನು ತಡೆರಹಿತವಾಗಿರಿಸಿದೆ.


ಇನ್ನು, ಅಮಿತಾಭ್‌ ಬಚ್ಚನ್‌ ಮಾತ್ರ ಅಲ್ಲ.. ನಟಿ ಸನ್ನಿ ಲಿಯೋನ್, ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಆನಂದ್ ಎಲ್. ರಾಯ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಸ್ಟ್ಯಾಂಪ್‌ ಡ್ಯೂಟಿ ಮನ್ನಾದ ಲಾಭವನ್ನು ಪಡೆದುಕೊಂಡಿದ್ದಾರೆ. ಅಟ್ಲಾಂಟಿಸ್‌ ಪ್ರಾಜೆಕ್ಟ್‌ನಲ್ಲೇ ಸನ್ನಿ ಲಿಯೋನ್‌ 12 ನೇ ಮಹಡಿಯಲ್ಲಿ ಅಪಾರ್ಟ್‌ಮೆಂಟ್‌ ಅನ್ನು ನೋಂದಾಯಿಸಿದ್ದಾರೆ. ಇದಕ್ಕಾಗಿ ಮಾರ್ಚ್ 28 ರಂದು ನಟಿ 16 ಕೋಟಿ ರೂ. ಹಣ ನೀಡಿದ್ದರು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ತಮ್ಮೊಂದಿಗೆ ಕಾರಲ್ಲೇ ಇದ್ದ ನಟ ಅಶ್ವತ್​ಗೆ ಗದರಿಸಿದ್ದ ಅಂಬಿ​:ದಾರಿ ಮಧ್ಯೆ ಇಳಿದು ಬಸ್​ ಏರಿದ್ದ ಹಿರಿಯ ನಟ


ತನು ವೆಡ್ಸ್ ಮನು ಮತ್ತು ಝೀರೋ ಸೇರಿದಂತೆ ರೊಮ್ಯಾಂಟಿಕ್-ಹಾಸ್ಯ ಚಿತ್ರಗಳ ನಿರ್ದೇಶಕ-ನಿರ್ಮಾಪಕ, ಆನಂದ್ ಎಲ್ ರೈ ಕೂಡ ಇದೇ ಯೋಜನೆಯಲ್ಲಿ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. ರೈ‌ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು 25.3 ಕೋಟಿ ರೂ. ಗೆ ಖರೀದಿಸಿದ್ದಾರೆ. ಈ ವಸತಿ ಘಟಕಗಳು 27 ಮತ್ತು 28 ನೇ ಮಹಡಿಯಲ್ಲಿದ್ದು, ಪ್ರತಿ ಘಟಕವು 5,761 ಚದರ ಅಡಿ ವಿಸ್ತೀರ್ಣದಲ್ಲಿದೆ ಎನ್ನಲಾಗಿದೆ. ಅಲ್ಲದೆ, ಐದು ಯಾಂತ್ರೀಕೃತ ಕಾರ್ ಪಾರ್ಕಿಂಗ್ ಸ್ಲಾಟ್‌ಗಳೊಂದಿಗೆ ಬರುತ್ತದೆ. ಒಟ್ಟಿನಲ್ಲಿ, ಈ ಕೊರೋನಾ ಸಮಯದಲ್ಲೂ ಬಾಲಿವುಡ್‌ ಸೆಲೆಬ್ರಿಟಿಗಳು ಐಷಾರಾಮಿ ಆಪಾರ್ಟ್‌ಮೆಂಟ್‌ಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

top videos
    First published: