• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Aradhya: ಅಮಿತಾಭ್​ ಬಚ್ಚನ್ ಮೊಮ್ಮಗಳ ಬಗ್ಗೆ ಸುಳ್ಳು ಸುದ್ದಿ ವೈರಲ್, ಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ ​

Aradhya: ಅಮಿತಾಭ್​ ಬಚ್ಚನ್ ಮೊಮ್ಮಗಳ ಬಗ್ಗೆ ಸುಳ್ಳು ಸುದ್ದಿ ವೈರಲ್, ಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈ ಮಗಳು ಆರಾಧ್ಯ ​

ಅಮಿತಾಭ್​ ಫ್ಯಾಮಿಲಿ

ಅಮಿತಾಭ್​ ಫ್ಯಾಮಿಲಿ

ಅಮಿತಾಭ್​ ಬಚ್ಚನ್ ಮೊಮ್ಮಗಳು ಮಗಳು ಆರಾಧ್ಯ ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ

 • News18 Kannada
 • 4-MIN READ
 • Last Updated :
 • Karnataka, India
 • Share this:

ಅಮಿತಾಭ್​ ಬಚ್ಚನ್ (Amitabh Bachchan) ಅವರ ಮೊಮ್ಮಗಳು ಹಾಗೂ ಅಭಿಷೇಕ್ ಬಚ್ಚನ್ , ಐಶ್ವರ್ಯಾ ರೈ (Aishwarya Rai) ಬಚ್ಚನ್ ಮಗಳು ಆರಾಧ್ಯ (Aradhya) ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ  YT ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್‌ (Delhi High Court) ಮೊರೆ ಹೋಗಿದ್ದಾರೆ.  ತಮ್ಮ ಆರೋಗ್ಯದ ಬಗ್ಗೆ 'ನಕಲಿ ಸುದ್ದಿ' ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ (YouTube Tabloid) ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್ 20 ರಂದು ವಿಚಾರಣೆ ನಡೆಯಲಿದೆ.


ಯೂಟ್ಯೂಬ್ ಟ್ಯಾಬ್ಲಾಯ್ಡ್ ಬಚ್ಚನ್ ಮೊಮ್ಮಗಳು ಗರಂ


ಯೂಟ್ಯೂಬ್ ಟ್ಯಾಬ್ಲಾಯ್ಡ್  ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಮತ್ತು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಆರೋಗ್ಯ ಮತ್ತು ಜೀವನಕ್ಕೆ ಸಂಬಂಧಿಸಿದಂತೆ 'ನಕಲಿ ಸುದ್ದಿ' ವರದಿ ಮಾಡಿದೆಯಂತೆ. ಇದಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
11 ವರ್ಷದ ಬಾಲಕಿ ತಾನು ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ತನ್ನ ಬಗ್ಗೆ ಮಾಧ್ಯಮಗಳು ಇಂತಹ ವರದಿ ಮಾಡುವುದರ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ. ಇದರ ವಿಚಾರಣೆ ನಾಳೆ (ಏಪ್ರಿಲ್ 20) ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.


ಅಭಿಷೇಕ್ ಬಚ್ಚನ್ ಫುಲ್ ಗರಂ


ಆರಾಧ್ಯಾ ಮೇಲೆ ಬಗ್ಗೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಅಭಿಷೇಕ್ ಟ್ರೋಲ್‌ಗಳನ್ನು ಟೀಕಿಸಿದ್ರು. ಬಳಿಕ ಆರಾಧ್ಯ ಬಚ್ಚನ್ ಒಂದಲ್ಲ ಒಂದು ಕಾರಣಕ್ಕಾಗಿ ಟ್ರೋಲ್‌ಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಬಾಬ್ ಬಿಸ್ವಾಸ್ ಪ್ರಚಾರದ ಸಮಯದಲ್ಲಿ, ಕೋಪಗೊಂಡ ಅಭಿಷೇಕ್ ತನ್ನ ಮಗಳ ಮೇಲೆ ಬಗ್ಗೆ ಟ್ರೋಲ್ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದರು.


ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಹೇಗೆ ಸಾಕುತ್ತಾರೆ


ಬಾಲಿವುಡ್ ಖಾತ್ಯ ನಟಿ ಐಶ್ವರ್ಯಾ ರೈ ಅವರು ವಿಶ್ವದಾದ್ಯಂತ ಎಷ್ಟೇ ಫೇಮಸ್ ಆಗಿದ್ದರೂ, ಕೆಲಸದಲ್ಲಿ ಬ್ಯುಸಿಯಾಗಿದ್ದರೂ. ಮಿಸ್ ವರ್ಲ್ಡ್ ಆಗಿ ಫೇಮಸ್ ಆಗಿದ್ದರೂ ತಾಯಿಯ ಸ್ಥಾನಮಾನವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಹೇಗೆ ಸಾಕುತ್ತಾರೆ ಅನ್ನೋದು ಅನೇಕರ ಪ್ರಶ್ನೆಯಾಗಿರುತ್ತದೆ. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಏಕೈಕ ಪುತ್ರಿ ಆರಾಧ್ಯ ಬಚ್ಚನ್ ಅವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಫಾಲೋವರ್ಸ್ ಇದ್ದಾರೆ. ಐಶ್ವರ್ಯಾ ರೈ ಬಗೆಗಿನ ಕೆಲವು ಅದ್ಭುತ ವಿಷಯ ತಿಳಿದುಕೊಳ್ಳಿ.


top videos  First published: