ಸಾಮಾನ್ಯವಾಗಿ ನಾವು ಈ ಮುಂಬೈ (Mumbai) ಮತ್ತು ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಇದ್ದರೆ, ಅಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಸಮಸ್ಯೆಯಾಗುವುದನ್ನು ನಾವು ಪ್ರತಿದಿನ ನೋಡುತ್ತಾ ಇರುತ್ತೇವೆ. ಎಷ್ಟೋ ಬಾರಿ ನಾವು ಬೆಳಿಗ್ಗೆ ಆಫೀಸಿಗೆ ಹೋಗುವಾಗ ಮತ್ತು ಸಂಜೆ ಮನೆಗೆ ಬರುವಾಗ ಈ ಟ್ರಾಫಿಕ್ ಜಾಮ್ (traffic Jam) ಸಮಸ್ಯೆಯಿಂದ ನಾವು ತುಂಬಾನೇ ಪರದಾಡಿರುತ್ತೇವೆ. ಈ ಟ್ರಾಫಿಕ್ ಸಮಸ್ಯೆ ಅನ್ನೋದು ಯಾರನ್ನು ಬಿಟ್ಟಿಲ್ಲ ನೋಡಿ.
ಟ್ರಾಫಿಕ್ ಜಾಮ್ನಿಂದಾಗಿ ಏನ್ ಮಾಡಿದ್ರು ನೋಡಿ ನಟ ಅಮಿತಾಭ್ ಬಚ್ಚನ್?
ಮುಂಬೈಯಲ್ಲಿ ಇಂತಹದೇ ಟ್ರಾಫಿಕ್ ಜಾಮ್ ಎದುರಿಸುತ್ತಿರುವುದರಿಂದ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಇತ್ತೀಚೆಗೆ ತಮ್ಮ ಕೆಲಸದ ಸ್ಥಳವನ್ನು ತಲುಪಲು ಅಭಿಮಾನಿಯ ಸಹಾಯವನ್ನು ಪಡೆದರು ಮತ್ತು ತಮ್ಮ ಹೊಸ ಪೋಸ್ಟ್ ನಲ್ಲಿ ಅವರಿಗೆ ಧನ್ಯವಾದ ಸಹ ಹೇಳಿದರು.
ಭಾನುವಾರ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಟ ಅಮಿತಾಭ್ ಅವರು ವ್ಯಕ್ತಿಯೊಬ್ಬರೊಂದಿಗೆ ಲಿಫ್ಟ್ ಪಡೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಕಪ್ಪು ಟೀ ಶರ್ಟ್, ನೀಲಿ ಪ್ಯಾಂಟ್ ಮತ್ತು ಕಂದು ಬಣ್ಣದ ಬ್ಲೇಜರ್ ಧರಿಸಿ ಹಿಂಬದಿ ಸವಾರಿ ಮಾಡುತ್ತಿರುವುದು ಕಂಡು ಬಂದಿದೆ.
ಈ ಫೋಟೋವನ್ನು ಹಂಚಿಕೊಂಡ ಅಮಿತಾಭ್ "ಲಿಫ್ಟ್ ಕೊಟ್ಟ ಸ್ನೇಹಿತನಿಗೆ ಧನ್ಯವಾದಗಳು. ನಿಮಗೆ ಗೊತ್ತಿಲ್ಲ, ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ. ವೇಗವಾಗಿ ಮತ್ತು ಪರಿಹರಿಸಲಾಗದ ಟ್ರಾಫಿಕ್ ಜಾಮ್ನಿಂದ ನನ್ನನ್ನು ಇವತ್ತು ಪಾರು ಮಾಡಿದ್ದೀರಿ. ಟೋಪಿ, ಶಾರ್ಟ್ಸ್ ಮತ್ತು ಹಳದಿ ಬಣ್ಣದ ಟಿ-ಶರ್ಟ್ ಮಾಲೀಕರಿಗೆ ಧನ್ಯವಾದಗಳು” ಅಂತ ಬರೆದಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ 4 ತಿಂಗಳಿಗೆ ಮಗು! ಹೊಸ ಫೋಟೋಸ್ ವೈರಲ್
ಅಮಿತಾಭ್ ಅವರ ಫೋಟೋ ಪೋಸ್ಟ್ ಗೆ ಯಾರೆಲ್ಲಾ ಕಾಮೆಂಟ್ ಮಾಡಿದ್ದಾರೆ
ಅಮಿತಾಭ್ ಅವರ ಪೋಸ್ಟ್ ಅನ್ನು ನೋಡಿದ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ನಗುವ ಮತ್ತು ಕೆಂಪು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ರೋಹಿತ್ ಬೋಸ್ ರಾಯ್ ಸಹ ಇದಕ್ಕೆ ಪ್ರತಿಕ್ರಿಯಿಸಿ "ನೀವು ಈ ಭೂಮಿಯ ಮೇಲಿನ ಅತ್ಯಂತ ಒಳ್ಳೆಯ ವ್ಯಕ್ತಿ ಅಮಿತ್ ಜೀ! ನಿಮ್ಮ ಬಗ್ಗೆ ನಮಗೆ ತುಂಬಾನೇ ಪ್ರೀತಿ ಇದೆ" ಅಂತ ಕಾಮೆಂಟ್ ಮಾಡಿದ್ದಾರೆ.
View this post on Instagram
ಬಿಗ್ ಬಿ ಪೋಸ್ಟ್ ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತೇ?
"ನೀವು ಅಪರಿಚಿತರೊಬ್ಬರಿಂದ ಲಿಫ್ಟ್ ಪಡೆದಿದ್ದೀರಿ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿಲ್ಲ ಎಂದು ಇನ್ನೂ ಕೆಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. "ಸರ್ ಹೆಲ್ಮೆಟ್ ಧರಿಸದೆ ಇದ್ದರೆ ಹೇಗೆ? ನಿಮ್ಮ ಕೆಲಸದ ಸ್ಥಳವನ್ನು ತಲುಪುವ ತುರ್ತುಸ್ಥಿತಿಗೆ ಹೋಲಿಸಿದರೆ ಸುರಕ್ಷತೆಗೆ ಮೊದಲು ಆದ್ಯತೆ ನೀಡಬೇಕಲ್ಲವೇ?"ದಯವಿಟ್ಟು ಮುಂದಿನ ಸಲ ಬೈಕ್ ಹತ್ತಿದರೆ ಹೆಲ್ಮೆಟ್ ಧರಿಸಿ" ಎಂದು ಇನ್ನೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು ಬರೆದಿದ್ದಾರೆ.
ಅಮಿತಾಭ್ ತಮ್ಮ ಬ್ಲಾಗ್ ನಲ್ಲಿ ಇನ್ನೂ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ಈ ಟ್ರಾಫಿಕ್ ಸಮಸ್ಯೆ ಹೇಗೆಲ್ಲಾ ಕೆಲಸಕ್ಕೆ ಅಡ್ಡಿಯಾಗಬಹುದು ಮತ್ತು ಬೈಕ್ ರೈಡ್ ಮಾಡುವಾಗ ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು, ಸಿಗ್ನಲ್ ಲೈಟ್ ಗಳನ್ನು ನೋಡಿ ಅದಕ್ಕೆ ತಕ್ಕಂತೆ ವಾಹನ ಓಡಿಸುವುದು ಮತ್ತು ಮುಖ್ಯವಾಗಿ ಬೈಕ್ ರೈಡ್ ಮಾಡುವಾಗ ಹೆಲ್ಮೆಟ್ ಧರಿಸುವುದು ಮುಖ್ಯವಾಗುತ್ತದೆ ಅಂತ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ನಟಿಸಿರುವ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಅಮಿತಾಭ್ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ದ್ವಿಭಾಷಾ ಚಿತ್ರವಾಗಿದ್ದು, ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಅವರು ರಿಭು ದಾಸ್ ಗುಪ್ತಾ ಅವರ ಮುಂದಿನ ಕೋರ್ಟ್ ರೂಮ್ ಚಿತ್ರವಾದ ‘ಸೆಕ್ಷನ್ 84’ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ