Amitabh Bachchan: ಬಿಗ್​ ಬಿಯ ಆ ಒಂದು ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​! ಮಹತ್ವದ ಘೋಷಣೆ ಮಾಡಿದ ಅಮಿತಾಭ್​ ಬಚ್ಚನ್​

ಬಾಲಿವುಡ್‍(Bollywood)ನ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan), ಸಾಮಾಜಿಕ ಜಾಲತಾಣ(Social Media)ದಲ್ಲಿ ಸಕ್ರಿಯರಾಗಿರುತ್ತಾರೆ. ಸ್ವತಃ ಬರವಣಿಗೆಯಲ್ಲಿ ಅಭಿರುಚಿಯುಳ್ಳ ಬಚ್ಚನ್ ಸಾಹೇಬರು, ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ಪೋಸ್ಟ್(Post) ಹಾಕುತ್ತಲೇ ಇರುತ್ತಾರೆ.

ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್​

ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್​

  • Share this:
    ಬಾಲಿವುಡ್‍(Bollywood)ನ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan), ಸಾಮಾಜಿಕ ಜಾಲತಾಣ(Social Media)ದಲ್ಲಿ ಸಕ್ರಿಯರಾಗಿರುತ್ತಾರೆ. ಸ್ವತಃ ಬರವಣಿಗೆಯಲ್ಲಿ ಅಭಿರುಚಿಯುಳ್ಳ ಬಚ್ಚನ್ ಸಾಹೇಬರು, ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ಪೋಸ್ಟ್(Post) ಹಾಕುತ್ತಲೇ ಇರುತ್ತಾರೆ. ಇತರ ನೆಟ್ಟಿಗರ ಉತ್ತಮ ಕವನಗಳ ಅಥವಾ ಕುತೂಹಲಕಾರಿ, ಆಕರ್ಷಕ ಪೋಸ್ಟ್‌ಗಳಿಗೆ ಮೆಚ್ಚುಗೆ ಸೂಚಿಸುವಲ್ಲೂ ಬಿಗ್ ಬಿ(Big B) ಹಿಂದೆ ಬಿದ್ದಿಲ್ಲ. ಇದೀಗ ಅಮಿತಾಭ್ ಅವರು ಬುಧವಾರ ಬ್ಲಾಗ್‍ನಲ್ಲಿ ಹಾಕಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಏನಿತ್ತು ಅಂತೀರಾ? ಬಿಗ್‍ಬಿಯ ಉತ್ತರಾಧಿಕಾರಿ(Heir)ಯ ಘೋಷಣೆಯಿತ್ತು. ಹೌದು, ಆ ಪೋಸ್ಟ್‌ನಲ್ಲಿ ಬಚ್ಚನ್ ಸಾಹೇಬರು, ತಮ್ಮ ಮಗ, ನಟ ಅಭಿಷೇಕ್ ಬಚ್ಚನ್(Abhishek Bachachan) ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.

    ಅಭಿಷೇಕ್ ಬಚ್ಚನ್ ಉತ್ತರಾಧಿಕಾರಿ!

    ಬ್ಲಾಗ್ ಅನ್ನು ಆರಂಭಿಸಿರುವ ಅಮಿತಾಭ್ ಬಚ್ಚನ್ ಅವರು, ತಂದೆಗೆ ತನ್ನ ಮಕ್ಕಳ ಸಾಧನೆಗಳನ್ನು ವೀಕ್ಷಿಸುವುದು “ಅತ್ಯಂತ ದೊಡ್ಡ ಸಂತೋಷ ಸಂಗತಿ'' ಎಂದು ಹೇಳಿಕೊಂಡಿದ್ದಾರೆ. ಹಾಗೂ, “ವೈಭವವನ್ನು ಆಸ್ವಾದಿಸಲು , ಗುರುತಿಸುವುದಕ್ಕಾಗಿ ಅವರು ತಮ್ಮ ಹೆಸರನ್ನು ಹೇಳುತ್ತಾರೆ. ನನಗಾಗಿ ಅಭಿಷೇಕ್, ಅಭಿಷೇಕ್‍ನ ತಂದೆ ನಾನು ಎಂದು ಗುರುತಿಸಲ್ಪಡುವಂತೆ ಮಾಡಿದ್ದಾನೆ. ಮತ್ತು ಅತ್ಯಂತ ಹೆಮ್ಮೆಯಿಂದ ನಾನು ಅಭಿಷೇಕ್ ನನ್ನ “ಉತ್ತರಾಧಿಕಾರಿ” ಎಂದು ಹೇಳುತ್ತೇನೆ ಎಂದು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ ಅಮಿತಾಭ್ ಬಚ್ಚನ್.

    ಮಗನ ಸಾಧನೆ ಬಗ್ಗೆ ಹೊಗಳಿದ ಅಮಿತಾಭ್​ ಬಚ್ಚನ್!

    ತಮ್ಮ ಮಗನ ಸಾಧನೆಯನ್ನು ಶ್ಲಾಘಿಸುತ್ತಾ ಅಮಿತಾಭ್ ಬಚ್ಚನ್ ಅವರು, “ಅವನ ನಿರಂತರ ಪರಿಶ್ರಮ, ವಿಭಿನ್ನ ಪ್ರಯತ್ನಗಳನ್ನು ಮಾಡುವ ಮತ್ತು ಕಠಿಣ ಪಾತ್ರಗಳನ್ನು ನಿರ್ವಹಿಸುವ ಧೈರ್ಯ, ಕೇವಲ ಒಂದು ಸವಾಲು ಮಾತ್ರವಲ್ಲ, ಬದಲಿಗೆ ಒಬ್ಬ ನಟನ ರೂಪದಲ್ಲಿ ತನ್ನ ಕ್ಷಮತೆಯ ಕುರಿತು ಮತ್ತು ಅವನ ವಿಶ್ವಾಸಾರ್ಹತೆ ಹಾಗೂ ದೃಢತೆಯನ್ನು ಖಚಿತಪಡಿಸಿಕೊಳ್ಳಲು, ಜಾಗತಿಕ ಸಿನಿಮಾ ಕ್ಷೇತ್ರಕ್ಕೆ ತೋರಿಸಿರುವ ದರ್ಪಣವಾಗಿದೆ” ಎಂದು ಬರೆದುಕೊಂಡಿದ್ದಾರೆ.



    ಇದನ್ನೂ ಓದಿ: ತಮ್ಮನ್ನು ತಾವು ಮಹಿಳೆ ಎಂದು ಪರಿಗಣಿಸುವುದಿಲ್ಲವಂತೆ ಈ ಬಾಲಿವುಡ್ ನಟಿ! ಏನ್ ಹೇಳ್ತಿದ್ದಾರೆ ನೋಡಿ..!

    ದಾಸ್ವಿಯ ಸಿನಿಮಾದ ಟ್ರೈಲರ್​ ರಿಲೀಸ್​!

    ಅಭಿಷೇಕ್ ಬಚ್ಚನ್ ಅವರ ಹೊಸ ಸಿನಿಮಾ ದಾಸ್ವಿಯ ಟ್ರೇಲರ್ ಬಿಡುಗಡೆ ಆಗಿದೆ. ಆ ಟ್ರೇಲರ್ ಅನ್ನು ವೀಕ್ಷಿಸಿದ ಬಳಿಕ, ತಂದೆ ಅಮಿತಾಭ್‌ ಬಚ್ಚನ್ ಮಗ ಅಭಿಷೇಕ್ ಅವರನ್ನು ಮನಸಾರೆ ಶ್ಲಾಘಿಸಿದ್ದಾರೆ. “ತಂದೆಯ ಪಾಲಿಗೆ ಹೆಮ್ಮೆ.. ಸಿನಿಮಾದಿಂದ ಸಿನಿಮಾಗೆ ಅವನು ಸಂಪೂರ್ಣ ಭಿನ್ನವಾದ ಅತ್ಯದ್ಭುತ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಚ್ಚರಿಗೊಳಿಸುತ್ತಿದ್ದಾನೆ. ಅದನ್ನು ಇಷ್ಟೊಂದು ಅದ್ಭುತವಾಗಿ ಮಾಡಲು ಯಶಸ್ವಿಯಾಗಿರುವುದು ಅಭೂತಪೂರ್ವವಾಗಿದೆ” ಎಂದು ಅವರು ತಮ್ಮ ಮಗನ ಕುರಿತು ಹೊಗಳಿಕೆಯ ಮಾತುಗಳನ್ನು ಬರೆದಿದ್ದಾರೆ.

    ಏಪ್ರಿಲ್​ 7ರಂದು ರಿಲೀಸ್​ ಆಗ್ತಿದೆ ಬಿಗ್​ಬಿ ಸಿನಿಮಾ!

    ದಾಸ್ವಿ ಸಿನಿಮಾವನ್ನು ತುಷಾರ್ ಜಲೋಟ ನಿರ್ದೇಶಿಸಿದ್ದಾರೆ. ದಿನೇಶ್ ವಿಜಾನ್ ಅವರು, ಮ್ಯಾಡ್‍ಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 7 ರಂದು ನೆಟ್‍ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ದಾಸ್ವಿ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಯಾಮಿ ಗೌತಮ್ ಮತ್ತು ನಿಮ್ರತ್‌ ಕೌರ್ ಅಭಿನಯಿಸಿದ್ದಾರೆ.

    ಇದನ್ನೂ ಓದಿ: ಜನ್ಮದಿನದಂದೇ ವೈಷ್ಣೋ ದೇವಿ ದರ್ಶನ ಪಡೆದ ಕಂಗನಾ.. ದೇವರ ಬಳಿ ಇದನ್ನೇ ಕೇಳಿಕೊಂಡ್ರಂತೆ!

    ಚಿತ್ರರಂಗವನ್ನು ಪ್ರವೇಶಿಸಿದಾಗಿನಿಂದಲೂ ಅಭಿಷೇಕ್ ಬಚ್ಚನ್ ಅವರು ತಮ್ಮ ತಂದೆ ಅಮಿತಾಭ್ ಬಚ್ಚನ್ ಅವರಂತೆ ಅತ್ಯದ್ಭುತ ಯಶಸ್ಸನ್ನು ಪಡೆಯಲಿಲ್ಲವಾದರೂ, ಕೆಲವೊಂದು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಮತ್ತು ಬಾಲಿವುಡ್‍ನಲ್ಲಿ ಸ್ವಂತ ಪರಿಶ್ರಮದಿಂದ ತನ್ನದೇ ಆದ ಸ್ಥಾನವನ್ನು ಪಡೆದಿದ್ದಾರೆ. ಈ ಕೆಲವು ವರ್ಷಗಳಿಂದ ಹಲವಾರು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟನಾ ಜೀವನವನ್ನು ಮುನ್ನಡೆಸುತ್ತಿರುವ ಅಭಿಷೇಕ್ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
    Published by:Vasudeva M
    First published: