ಕಣ್ಮುಂದೆ ತಟ್ಟೆ ತುಂಬಾ ಅನೇಕ ರೀತಿಯ ಆಹಾರ ಪದಾರ್ಥಗಳು (Food Items) ಇದ್ದರೆ, ಅದನ್ನು ಕ್ಷಣ ಮಾತ್ರದಲ್ಲಿ ತಿಂದು ಮುಗಿಸುವವರು ನಮ್ಮ ನಡುವೆ ತುಂಬಾನೇ ಇರುತ್ತಾರೆ. ಅದೇ ಅದನ್ನೆಲ್ಲಾ ಅಡುಗೆ (Cooking) ಮಾಡಿ ಬಡಿಸಿ ಅಂದಾಗ ಬಹುತೇಕರು ತಮ್ಮ ನಾಲಿಗೆಯನ್ನು ಕಚ್ಚಿಕೊಂಡು ಒಂದು ಹೆಜ್ಜೆ ಹಿಂದಕ್ಕೆ ಸರಿಯುವವರನ್ನ ನಾವೆಲ್ಲಾ ನೋಡಿರುತ್ತೇವೆ. ಈ ಅಡುಗೆ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ ಬಿಡಿ, ಇದು ಸಹ ಒಂದು ಕಲೆ ಅಂತ ಹೇಳಬಹುದು. ಇದನ್ನು ಎಲ್ಲರಿಂದಲೂ ಸುಲಭವಾಗಿ ಕಲಿಯಲು ಸಾಧ್ಯವಾಗುವುದಿಲ್ಲ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಎಷ್ಟೋ ಜನರು ತಮ್ಮ ಮೊದಲ ಉದ್ಯೋಗವನ್ನು ಹುಡುಕುತ್ತಿರುವಾಗ ಒಂದು ಚಿಕ್ಕ ರೂಮ್ ಮಾಡಿಕೊಂಡು ತಮ್ಮ ಊಟದ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಬಾಲಿವುಡ್ ನಟರು ಸಹ ಹೊರತಾಗಿಲ್ಲ ಎಂದು ಹೇಳಬಹುದು. ತಮ್ಮ ವೃತ್ತಿಜೀವನದಲ್ಲಿ ಮೊದಲ ಚಿತ್ರ ಸಿಕ್ಕಿ ಅದರಿಂದ ದುಡ್ಡು ಬರೋವವರೆಗೂ ತಮ್ಮ ಅಡುಗೆಯನ್ನು ತಾವೇ ತಯಾರಿಸಿಕೊಂಡು ತಿಂದಿದ್ದಾರೆ ಎಂಬ ವಿಚಾರವನ್ನು ಅವರ ಬಾಯಿಂದಲೇ ನಾವು ತುಂಬಾ ಸಲ ಕೇಳಿರುತ್ತೇವೆ.
ಬಾಲಿವುಡ್ ನ ವಿಚಾರಕ್ಕೆ ಬಂದಾಗ, ಯಾವೆಲ್ಲಾ ನಟ-ನಟಿಯರಿಗೆ ಅಡುಗೆ ಮಾಡಲು ಬರುತ್ತದೆ ಅನ್ನೋ ವಿಚಾರ ಬಹುತೇಕರಿಗೆ ತಿಳಿದೇ ಇರುವುದಿಲ್ಲ. ತುಂಬಾ ಜನ ಅಮಿತಾಭ್ ಅವರನ್ನು ನೋಡಿ ಅವರಿಗೆ ಅಡುಗೆ ಮಾಡಲು ಬರುತ್ತೆ ಅಂತ ತಿಳಿದು ಕೊಂಡಿರುತ್ತಾರೆ. ಆದರೆ ಅಮಿತಾಭ್ ಗೆ ಅಡುಗೆ ಮಾಡೋದಕ್ಕೆ ಬರೋದಿಲ್ವಂತೆ. ಹೀಗಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ ನೋಡಿ.
ಅಡುಗೆ ಮಾಡೋದಕ್ಕೆ ಬರೋದಿಲ್ವಂತೆ ಬಿಗ್ ಬಿ ಗೆ..
ಸೂಪರ್ ಸ್ಟಾರ್ ಅಮಿತಾಭ್ ಅವರು ತಮ್ಮ ‘ಕೌನ್ ಬನೇಗಾ ಕರೋಡ್ಪತಿ’ ಗೇಮ್ ಶೋ ನಲ್ಲಿ ತಾನು ಕೇವಲ ನೀರನ್ನು ಬಿಸಿ ಮಾಡಿಕೊಳ್ಳಬಹುದಷ್ಟೇ ಎಂದು ಹೇಳಿಕೊಂಡಿದ್ದಾರೆ.
ಮೊಟ್ಟೆಯನ್ನು ಹೇಗೆ ಒಡೆಯಬೇಕು ಅಂತ ಕಲಿಯುವುದಕ್ಕೆ ಅವರು ಏಳು ದಿನಗಳನ್ನು ತೆಗೆದುಕೊಂಡರು ಎಂದು ಹೇಳಿಕೊಂಡರು. ಅಮಿತಾಭ್ ಅವರು ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರೊಂದಿಗೆ ಶೋನಲ್ಲಿ ಹೀಗೆ ಮಾತಾಡಿದ್ದಾರೆ.
ಶೋ ಗೆ ಬಂದ ನಟ ವಿಕ್ಕಿ ಮತ್ತು ನಟಿ ಕಿಯಾರಾಗೆ ಅಮಿತಾಭ್ ಕೇಳಿದ್ದೇನು?
ತಮ್ಮ ಶೋ ಗೆ ಬಂದ ನಟಿ ಕಿಯಾರಾ ಮತ್ತು ನಟ ವಿಕ್ಕಿಯನ್ನು ಅಮಿತಾಭ್ ಅವರು ಕಾರ್ಯಕ್ರಮದ ಮಧ್ಯದಲ್ಲಿ ಅಡುಗೆ ಮಾಡಲು ನಿಮ್ಮಿಬ್ಬರಲ್ಲಿ ಯಾರಿಗೆ ಚೆನ್ನಾಗಿ ಬರುತ್ತದೆ ಅಂತ ಕೇಳಿದರು.
ಇವರಿಬ್ಬರು ತಮ್ಮ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಚಿತ್ರ ‘ಗೋವಿಂದ ನಾಮ್ ಮೇರಾ’ ಪ್ರಚಾರಕ್ಕಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಸೋನಿ ಕೆಬಿಸಿ ಪ್ರೋಮೋವನ್ನು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, "ಅಮಿತಾಭ್ ಅವರೇ ನೀವು ಚೆನ್ನಾಗಿ ಅಡುಗೆ ಮಾಡುತ್ತೀರಿ ಅಂತ ನಾವು ಭಾವಿಸಿದ್ದೇವು, ಆದರೆ ನೀವು ಮತ್ತು ವಿಕ್ಕಿ ಇಬ್ಬರು ಈ ವಿಷಯದಲ್ಲಿ ಒಂದೇ ದೋಣಿಯ ಪ್ರಯಾಣಿಕರು ಅಂತ ಗೊತ್ತಾಯಿತು" ಎಂದು ಉಲ್ಲೇಖಿಸಲಾಗಿದೆ.
ಈ ಪ್ರದರ್ಶನವು ಪ್ರಸ್ತುತ ಈ ಸೀಸನ್ನಲ್ಲಿ ತನ್ನ ಅಂತಿಮ ವಾರದಲ್ಲಿ ನಡೆಯುತ್ತಿದೆ. ಕೆಬಿಸಿ ಪ್ರೋಮೋದಲ್ಲಿ, ಅಮಿತಾಭ್ ಕಿಯಾರಾಗೆ ಅಡುಗೆ ಮಾಡಬಹುದೇ ಎಂದು ಕೇಳುತ್ತಾರೆ. ಅದಕ್ಕೆ ಅವರು ಕೆಲವೊಮ್ಮೆ ಮಾಡುತ್ತೇನೆ ಎಂದು ಹೇಳಿದರೆ, ನಟ ವಿಕ್ಕಿ ಕೇವಲ ಚಹಾವನ್ನು ಮಾತ್ರ ಮಾಡಿಕೊಳ್ಳುವುದಕ್ಕೆ ಬರುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ.
ತಾನು ಮತ್ತು ವಿಕ್ಕಿ ಇಬ್ಬರು ಒಂದೇ ರೀತಿ ಅಂತ ಒಪ್ಪಿಕೊಂಡ ಅಮಿತಾಭ್
ತಾನು ಮತ್ತು ವಿಕ್ಕಿ ಒಂದೇ ರೀತಿಯಾಗಿದ್ದೇವೆ ಎಂದು ಅಮಿತಾಭ್ ಒಪ್ಪಿಕೊಂಡರು. "ನೀವು ಮತ್ತು ನಾನು ಒಂದೇ ರೀತಿಯಾಗಿದ್ದೇವೆ. ನಿಮಗೆ ಕನಿಷ್ಠ ಚಹಾವನ್ನು ಮಾಡಿಕೊಳ್ಳಲಾದರೂ ಬರುತ್ತದೆ, ನನಗೆ ನೀರನ್ನು ಬಿಸಿ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಬರುವುದಿಲ್ಲ.
ಇದನ್ನೂ ಓದಿ: Actor Abbas: ಟಾಯ್ಲೆಟ್ ಕ್ಲೀನರ್ ಜಾಹೀರಾತಿನಲ್ಲಿದ್ದ ನಟ ಅಬ್ಬಾಸ್, ವಿದೇಶದಲ್ಲಿ ಟಾಯ್ಲೆಟ್ ತೊಳೆದಿದ್ರಂತೆ!
ನಾನು ಒಮ್ಮೆ ವಿದೇಶಕ್ಕೆ ಹೋಗಿದ್ದೆ ಮತ್ತು ಅಲ್ಲಿ ಏಕಾಂಗಿಯಾಗಿರಬೇಕಾಯಿತು. ಮೊಟ್ಟೆಗಳನ್ನು ಹೇಗೆ ಬೇಯಿಸಬೇಕೆಂದು ಕಲಿಯಲು ಶುರು ಮಾಡಿದ ನನಗೆ ಆ ಮೊಟ್ಟೆಯನ್ನು ಸರಿಯಾಗಿ ಒಡೆಯೋದನ್ನು ಕಲಿಯಲು ಏಳು ದಿನಗಳು ಬೇಕಾಯಿತು.
ಒಡೆಯುವಾಗ ಮೊಟ್ಟೆಯ ಚಿಪ್ಪು ಬಾಣಲೆಗೆ ಬೀಳುತ್ತಿತ್ತು ಎಂದು ಹೇಳಿದರು. ವಿಕ್ಕಿ ಕೂಡ ಬಿಗ್ ಬಿ ಅವರ ಮಾತಿಗೆ ಒಪ್ಪಿ "ಹೌದು.. ಮೊಟ್ಟೆಯ ಚಿಪ್ಪು ಕೆಲವೊಮ್ಮೆ ಬಾಣಲೆಗೆ ಬೀಳುತ್ತದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ