KBC 14: ಮೊದಲ ಸ್ಪರ್ಧಿ ಧೂಳಿಚಂದ್‌ ಅವರ ಜ್ಞಾನಕ್ಕೆ ಮಾರುಹೋದ ಬಿಗ್‌ ಬಿ! ಏನ್ ಹೇಳಿದ್ರು ನೋಡಿ

ಅಮಿತಾಭ್‌ ಬಚ್ಚನ್‌ ಅವರ ಹಿಂದಿ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ಬಹಳಷ್ಟು ಚೆನ್ನಾಗಿ ನಡೆಸಿಕೊಡುತ್ತಾರೆ. ಇದರಲ್ಲಿ ಇತ್ತೀಚಿನ ಎಪಿಸೋಡ್‌ನಲ್ಲಿ, ಸ್ಪರ್ಧಿಯಾದ ಪ್ರೊಫೆಸರ್ ಧೂಳಿಚಂದ್ ಅಗರ್ವಾಲ್ ಅವರು ತಮ್ಮ ಅತ್ಯುತ್ತಮ ಆಟದಿಂದ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದ್ಧಾರೆ.

ಕೌನ್ ಬನೇಗಾ ಕರೋಡ್‌ಪತಿ ಸೀಸನ್‌ 14ರ  ಮೊದಲ ಸ್ಪರ್ಧಿ ಧೂಳಿಚಂದ್‌

ಕೌನ್ ಬನೇಗಾ ಕರೋಡ್‌ಪತಿ ಸೀಸನ್‌ 14ರ ಮೊದಲ ಸ್ಪರ್ಧಿ ಧೂಳಿಚಂದ್‌

  • Share this:
ಅಮಿತಾಭ್‌ ಬಚ್ಚನ್‌ (Amitabh Bachchan) ಅವರ ಹಿಂದಿ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸುತ್ತಿರುವ ಕೌನ್‌ ಬನೇಗಾ ಕರೋಡ್‌ಪತಿ (Kaun Banega Crorepati )ಕಾರ್ಯಕ್ರಮವನ್ನು ಬಹಳಷ್ಟು ಚೆನ್ನಾಗಿ ನಡೆಸಿಕೊಡುತ್ತಾರೆ. ಇದರಲ್ಲಿ ಇತ್ತೀಚಿನ ಎಪಿಸೋಡ್‌ನಲ್ಲಿ, ಸ್ಪರ್ಧಿಯಾದ ಪ್ರೊಫೆಸರ್ ಧೂಳಿಚಂದ್ ಅಗರ್ವಾಲ್ (Dhulichand Agarwal) ಅವರು ತಮ್ಮ ಅತ್ಯುತ್ತಮ ಆಟದಿಂದ ಎಲ್ಲರನ್ನು ನಿಬ್ಬೆರಗಾಗಿಸುವಂತೆ ಮಾಡಿದ್ಧಾರೆ. ಅವರು ಆಟಕ್ಕೂ (Game) ಮುಂಚೆ ಹಾಟ್‌ ಸೀಟ್‌ಗೆ ಬರಲು ಅತ್ಯಂತ ವೇಗವಾಗಿ ಉತ್ತರ ಕೊಡಲು, ಫಿಂಗರ್ಸ್‌ ರೌಂಡ್‌ ಎಂಬ ಮೊದಲ ಸುತ್ತಿನಲ್ಲಿ ಗೆದ್ದ ನಂತರ ಹಾಟ್‌ ಸೀಟ್‌ಗೆ (Hot Seat) ಹೋಗುವ ಅವಕಾಶ ಇರುತ್ತದೆ. ಅವರು ಈ ಸುತ್ತಿನಲ್ಲಿ ಅತ್ಯಂತ ವೇಗವಾಗಿ ಉತ್ತರ ನೀಡಿ ಹಾಟ್‌ ಸೀಟ್‌ಗೆ ಬಂದೇ ಬಿಡುತ್ತಾರೆ ಹಾಗೆಯೇ  ಮುಂದೇನು ಆಗಿದೆ ನೋಡಿ. 

ತಂಗಿಯ ಪರಿಶ್ರಮಕ್ಕೆ ಕೆಬಿಸಿ-14ಗೆ ಬಂದಿದ್ರಂತೆ ಧೂಳಿಚಂದ್‌
ಧೂಳಿಚಂದ್‌ ಅವರು “ಈ ಕೌನ್‌ ಬನೇಗಾ ಕರೋಡ್‌ಪತಿ ಸೆಟ್‌ ಒಂದು ವಿದ್ಯಾ ದೇಗುಲ ಇದ್ದಂತೆ. ನನ್ನ 21 ವರ್ಷಗಳ ಆಸೆ ಈಗ ಈಡೇರಿದೆ. ನನ್ನ ತಂಗಿಯ ಪರಿಶ್ರಮದಿಂದ ನಾನು ಇಲ್ಲಿದ್ದೇನೆ” ಎಂದು ಹೇಳಿದರು. ನಂತರ ಅವರು ತಮ್ಮ ತಂಗಿಯನ್ನು ಪರಿಚಯಿಸಿದರು. ಅವರ ತಂಗಿ ಅವರ ಮಾತಿಗೆ ಅಕ್ಷರಶಃ ಭಾವುಕರಾಗಿದ್ದರು. “ನನ್ನ ತಂಗಿ 21 ವರ್ಷದಿಂದ ದೇವಸ್ಥಾನಕ್ಕೆ ಹೋಗಿ ದೇವರ ಹತ್ತಿರ ನನ್ನ ಅಣ್ಣ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಬೇಕು ಮತ್ತು ಅದರಲ್ಲಿ ಗೆಲ್ಲಬೇಕು ಎಂದು ದಿನವೂ ಪ್ರಾರ್ಥಿಸುತ್ತಿದ್ದಳು” ಎಂದು ಭಾವುಕರಾಗಿ ಹೇಳಿದರು.

ಇದನ್ನೂ ಓದಿ: KBC 14: ಕೌನ್ ಬನೇಗಾ ಕರೋಡ್‌ಪತಿ ಶೋ ಗೆದ್ರೆ ಹಣದ ಜೊತೆ ಬಂಪರ್ ಬಹುಮಾನ!

ಕೌನ್‌ ಬನೇಗಾ ಕರೋಡ್‌ಪತಿ 14 ರ ಸೀಸನ್‌ನ  ಮೊದಲ ಸ್ಪರ್ಧಿ
ಧೂಳಿಚಂದ್‌ ಅವರು ಈ ಕೌನ್‌ ಬನೇಗಾ ಕರೋಡ್‌ಪತಿ 14 ರ ಸೀಸನ್‌ನಲ್ಲಿ ಮೊದಲ ಸ್ಪರ್ಧಿಯಾಗಿದ್ದಾರೆ ಮತ್ತು ಈ ಕಾರ್ಯಕ್ರಮದ ಹೋಸ್ಟ್‌ ಆದ ಅಮಿತಾಭ್‌ ಬಚ್ಚನ್‌ ಅವರ ಜೊತೆ ಶೋ ನಲ್ಲಿ ಅತ್ಯಂತ ವಿನೋದದಿಂದ ಸಂಭಾಷಣೆ ನಡೆಸಿದ್ದಾರೆ. ಹಾಗೆಯೇ ಸರ್‌ ನೀವು ನನ್ನನ್ನು DC ಎಂದು ಕರೆಯಿರಿ, ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ. ನಂತರದಲ್ಲಿ “ನನ್ನ ಕಾಲೇಜು ದಿನಗಳಲ್ಲಿ, ನನ್ನ ಸ್ನೇಹಿತರು ನನ್ನ ಹೆಸರು ಧೂಳಿಚಂದ್ ಆಗಿರುವುದರಿಂದ ಧೂಳಿ ಆಗುತ್ತಿಯಾ ಎಂದು ಹೇಳಿ ನನ್ನನ್ನು ಕೀಟಲೆ ಮಾಡುತ್ತಿದ್ದರು ಮತ್ತು ನಂತರ ನನ್ನ ಸ್ನೇಹಿತರೊಬ್ಬರು ನನ್ನ ಹೆಸರನ್ನು DC ಎಂದು ಬದಲಾಯಿಸಿ ಈ ಹೆಸರು ನಿಮಗೆ ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದ್ದರಿಂದ ದಯವಿಟ್ಟು ನನ್ನನ್ನು DC ಎಂದು ಕರೆಯಿರಿ” ಎಂದು ಹೇಳಿದರು.

ಅದಕ್ಕೆ ಪ್ರತಿಕ್ರಿಯೆಯಾಗಿ ಅಮಿತಾಭ್‌ ಬಚ್ಚನ್‌ ಅವರು “ನಿಮ್ಮ ಹೆಸರೂ ನಿಜಕ್ಕೂ ಚೆನ್ನಾಗಿದೆ ಹಾಗೆಯೇ ನೀವು ಮುಂದಿನ ಜೀವನದಲ್ಲಿ ಚೆನ್ನಾಗಿ ಬದುಕುತ್ತಿರಿ. ಆದರೆ ಈ ನಿಮ್ಮ DC ಹೆಸರು ನನಗೆ ಯಾವುದೋ ವಿದ್ಯುತ್‌ ಹೆಸರು ಕೇಳಿದಹಾಗೆ ಕೇಳಿಸುತ್ತದೆ. ಈ DC ಮತ್ತು AC ಗಳ ಬಗ್ಗೆ ನಿಮಗೆ ಗೊತ್ತಿರಬೇಕಲ್ವಾ” ಎಂದು ತಮಾಷೆಯಾಗಿ ಉತ್ತರಿಸಿದರು.

ಪತ್ನಿಯ ಬಗ್ಗೆ ಏನಂದ್ರು ಧೂಳಿಚಂದ್‌ 
ಆಗ ಅವರು “ಈ ಮುಂಚೆ ನನ್ನ ಹೆಂಡತಿ ಯಾವಾಗಲೂ ತನ್ನ ಅದೃಷ್ಟವನ್ನು ಹೀಯಾಳಿಸುತ್ತಾಳೆ. ಇದನ್ನು ಅವಳು ಅದೃಷ್ಟದ ಆಟ ಎಂದು ಭಾವಿಸುತ್ತಾಳೆ, ಆದರೆ ಇದನ್ನು ನಾನು ಜ್ಞಾನದ ಆಟ ಎಂದು ಭಾವಿಸುತ್ತೇನೆ. ಇದು ವಿಧಿಯ ಆಟ ಎಂದು ಅವಳು ಮರು ಹೇಳುತ್ತಾಳೆ, ಇದು ಅನುಭವದ ಆಟ ಎಂದು ನಾನು ಮರು ಉತ್ತರಿಸಿದ್ದೇನೆ. ನನ್ನ ಅನುಭವವು ನನ್ನನ್ನು ಹಾಟ್ ಸೀಟ್‌ಗೆ ತಂದಿದೆ. ಧೂಳಿಚಂದ್ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಹಲವು ವರ್ಷಗಳ ಕಾಲ ಸೋತಿದ್ದರು ಮತ್ತು ಅವರಿಗೆ ದುರಾದೃಷ್ಟವಿದೆ ಎಂದು ನನ್ನ ಹೆಂಡತಿ ಯಾವಾಗಲೂ ಹೀಯಾಳಿಸುತ್ತಿದ್ದರು” ಎಂದು ಅವರ ಪತ್ನಿಯ ಬಗ್ಗೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  Karan Johar: ನನಗೆ ರಣವೀರ್​ ಮೇಲೆ ಲವ್​ ಆಗಿದೆ ಎಂದ ಕರಣ್​ ಜೋಹರ್​! ಇದೇನು ಗುರು ಹಿಂಗದ್ರು!

ಧೂಳಿಚಂದ್ ರೂ. 50 ಲಕ್ಷ ಗೆಲ್ಲುವುದರೊಂದಿಗೆ ದಿನದ ಆಟ ಕೊನೆಗೊಳ್ಳುತ್ತದೆ. ಅವರು ರೋಲ್ಓವರ್ ಸ್ಪರ್ಧಿಯಾಗಿರುವುದರಿಂದ, ಅವರು ಈ ಆಟವನ್ನು ರೂ. 75 ಲಕ್ಷಗಳಿಗೆ ಮುಂದುವರಿಸುತ್ತಿದ್ದಾರೆ.
Published by:Ashwini Prabhu
First published: