ಭಾರತೀಯ ಚಿತ್ರರಂಗದ ಲೆಜೆಂಡ್ ಎಂದೇ ಕರೆಯಲಾಗುವ ಬಾಲಿವುಡ್ನ (Bollywood) ಶೆಹನ್ಶಾಹ್ ಅಮಿತಾಭ್ ಬಚ್ಚನ್ (Amitabh Bachchan) ಅವರು ತಾವು ಇತ್ತೀಚೆಗೆ ಮಾಡಿದ್ದ ಟ್ವೀಟ್ (Tweet) ನಿಂದಾಗಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸುಮಾರು 4-5 ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಅಭಿನಯ ಮಾಡುತ್ತಾ ಇಂದಿಗೂ ಅದ್ಭುತ ನಟ (Actor) ಎಂದೇ ಗುರುತಿಸಿಕೊಳ್ಳುವ ಅಮಿತಾಭ್ ಬಚ್ಚನ್ ಅಂದರೆ ಜಗತ್ತಿನ ಬಹುತೇಕ ಎಲ್ಲ ಸಿನಿ ರಸಿಕರಿಗೂ ಗೊತ್ತು. ಭಾರತದಲ್ಲೇ ಈ ಸ್ಟಾರ್ ನಟನ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಅಮಿತಾಭ್ ತಮ್ಮ ಈ ವಯಸ್ಸಿನಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ ಎಂದೇ ಹೇಳಬಹುದು. ಇಂತಹ ಹಿರಿಯ ವಯಸ್ಸಿನಲ್ಲೂ ಅವರು ಆನ್ಲೈನ್ ನಲ್ಲಿ ಅದರಲ್ಲೂ ವಿಶೇಷವಾಗಿ ಟ್ವಿಟರ್ ನಲ್ಲಿ ಸದಾ ಒಂದಿಲ್ಲ ಒಂದು ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇತ್ತೀಚಿಗಷ್ಟೇ ಅಮಿತಾಭ್ ತಮ್ಮ ಟ್ವೀಟ್ ಒಂದರಲ್ಲಿ ದೊಡ್ಡದಾದ ಪ್ರಮಾದವೊಂದನ್ನು ಮಾಡಿದ್ದರು. ಅದು ಅವರಿಗೆ ಗೊತ್ತಾಗುತ್ತಿದ್ದಂತೆಯೇ ಅದಕ್ಕಾಗಿ ಅವರು ಕ್ಷಮೆಯನ್ನೂ ಕೋರಿದ್ದರು. ಆದರೆ, ಈ ಸಾಮಾಜಿಕ ಮಾಧ್ಯಮವೇ ಹಾಗೆ, ಇಲ್ಲಿ ನಿಮ್ಮ ಕಾಲನ್ನೆಳೆಯುವ, ನಿಮ್ಮನ್ನು ಹೀನಾಯವಾವಾಗಿ ಟ್ರೋಲ್ ಮಾಡುವ ಬಳಕೆದಾರರ ಸಂಖ್ಯೆಗೆನೂ ಕಮ್ಮಿ ಇಲ್ಲ.
ಹಾಗಾಗಿ ತಮ್ಮ ದೋಷಪೂರಿತ ಟ್ವಿಟ್ ನಿಂದಾಗಿ ತದನಂತರ ಕೋರಿದ ಕ್ಷಮೆಗಾಗಿ ಅಮಿತಾಭ್ ಸದ್ಯ ಬಲು ಕೆಟ್ಟದಾಗಿ ಟ್ರೋಲ್ ಆಗುತ್ತಿದ್ದಾರೆನ್ನಬಹುದು. ಅಷ್ಟಕ್ಕೂ ಅವರು ಮಾಡಿದ ಪ್ರಮಾದವಾದರೂ ಏನು ಎಂಬ ಕುತೂಹಲ ನಿಮ್ಮಲ್ಲೂ ಮೂಡಿರಬೇಕಲ್ಲವೆ?
ಗಣಿತದಲ್ಲಿ ಒಂದು ಸಂಖ್ಯೆ ತಪ್ಪಾದರೂ ಆ ಪೂರ್ಣ ಲೆಕ್ಕವೇ ತಪ್ಪಿ ಹೋಗುತ್ತದೆ. ಇಲ್ಲಾಗಿದ್ದು ಅಷ್ಟೇ..! ಸಾಮಾನ್ಯವಾಗಿ ಅಮಿತಾಭ್ ಅವರು ಟ್ವಿಟ್ ಮಾಡುವಾಗ ಅದರ ಸಂಖೆಯನ್ನು ನಮೂದಿಸಿ ಟ್ವಿಟ್ ಮಾಡುತ್ತಾರೆ. ಅಂದರೆ ಇದು ಅವರ ಎಷ್ಟನೆ ಟ್ವಿಟ್ ಆಗಿದೆ ಎಂದು ತಿಳಿಸುತ್ತದೆ.
T 4515 - A HORRIBLE ERROR !
all my T numbers have gone wrong right from the last right one T 4514 ..( this is correct ) .. everything after is wrong ..
T 5424,5425,5426,4527, 5428, 5429, 5430 .. all wrong ..
they should be
T4515,4516,4517,4518,4519 4520,4521
APOLGIES !! 🙏
— Amitabh Bachchan (@SrBachchan) January 7, 2023
ಅಷ್ಟಕ್ಕೂ ಅವರು ಸಂಖ್ಯೆಗಳ ಏಣಿಸುವಿಕೆಯನ್ನು ತಪ್ಪಾಗಿ ನಮೂದಿಸಿದ್ದರು. ಹಾಗಾಗಿ ಆ ಬಗ್ಗೆ ತಮ್ಮ ಸ್ಪಷ್ಟನೆ ನೀಡುತ್ತ ವಿವರಣೆ ಹೇಳಿದ್ದರು. ಇನ್ನು, ಇದು ವೈರಲ್ ಆಗುತ್ತಿದ್ದಂತೆಯೇ ಟ್ರೋಲ್ ಹೈದರು ಸುಮ್ಮನಿರದೆ ವಿಧ ವಿಧವಾಗಿ ಅಮಿತಾಭ್ ಅವರನ್ನು ಮೆಮೆಗಳ ಹಾಗೂ ಕಾಲೆಳೆಯುವ ಮೂಲಕ ಟ್ರೋಲ್ ಮಾಡಿದ್ದಾರೆ.
ವಿವಿಧ ರೀತಿಯಲ್ಲಿ ಟ್ರೋಲ್
ಅಮಿತಾಭ್ ಅವರ ಈ ಟ್ವಿಟ್ ಅನ್ನು ನೋಡುತ್ತಿದ್ದಂತೆಯೇ ಸಕ್ರಿಯರಾದ ಕೆಲವು ಬಳಕೆದಾರರು ಅಮಿತಾಭ್ ಅವರ ಕಾಲನ್ನು ಎಳೆಯಲು ಪ್ರಾರಂಭಿಸಿದರು. ಒಬ್ಬ ಬಳಕೆದಾರರು, "ಇನ್ನು ದೊಡ್ಡ ತಪ್ಪು ನಿಮ್ಮಿಂದಾಗಿರುವುದು ಕಭೀ ಖುಶಿ ಕಭಿ ಘಮ್ ನಲ್ಲಿ ಎಸ್.ಆರ್.ಕೆ ಅವರು ಮದುವೆ ಮಾಡಿಕೊಂಡರೂ ಅವರನ್ನು ಈಗಲೂ ಸ್ವೀಕರಿಸದೆ ಇದ್ದುದು" ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು, "ಸರ್ ಇರಲಿ ಬಿಡಿ, ನಾವು ನಮ್ಮ ಎಕ್ಸೆಲ್ ಶೀಟ್ ಅನ್ನು ಅಪ್ಡೇಟ್ ಮಾಡಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಮಗದೊಬ್ಬರು ಟ್ವಿಟರ್ ಬಕೆದಾರರು ಅಮಿತಾಭ್ ಅವರ ಈ ಟ್ವಿಟ್ ಗೆ ಪ್ರತಿಕ್ರಯಿಸುತ್ತ, "ಸರ್ ನಿಮ್ಮ ಈ ತಪ್ಪಿನಿಂದಾಗಿ ಪ್ರಪಂಚದಾದ್ಯಂತೆ ವ್ಯಾಪಾರ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿದೆ. ಮುಂದಿನ ಬಾರಿ ಹೀಗಾಗದಂತೆ ಸಾಕಷ್ಟು ಎಚ್ಚರಿಕೆವಹಿಸಿ" ಎಂದು ಕಾಲೆಳೆದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಹಲವರು ವಿವಿಧ ಬಗೆಯ ಪೋಸ್ಟರ್ ಗಳನ್ನು ಲಗತ್ತಿಸುತ್ತ ಅಮಿತಾಭ್ ಅವರ ಕಾಲನ್ನು ಎಳೆದಿದ್ದಾರೆನ್ನಬಹುದು. ಒಟ್ಟಿನಲ್ಲಿ ಅಮಿತಾಭ್ ಅವರು ತಮ್ಮ ತಪ್ಪು ಸಂಖ್ಯೆಯ ನಮೂದನೆಯಿಂದಾಗಿ ಅದರಲ್ಲೂ ಆ ಬಗ್ಗೆ ಕ್ಷಮೆ ಕೋರಿದ್ದರಿಂದ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಂತೂ ನಿಜ ಎನ್ನಬಹುದು.
ಕೆಲಸದ ವಿಷಯ
ಇನ್ನು ಕೆಲಸದ ವಿಷಯಕ್ಕೆ ಬಂದರೆ ಅಮಿತಾಭ್ ಬಚ್ಚನ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ನಾಗ್ ಅಶ್ವಿನ್ ಅವರ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಸಹ ಬಣ್ಣ ಹಚ್ಚಲಿದ್ದಾರೆಂದು ತಿಳಿದುಬಂದಿದ್ದು ಈ ಚಿತ್ರವು ಭಾರತೀಯ ಚಿತ್ರರಂಗದ ಬಹು ಮೌಲ್ಯದ ಚಿತ್ರಗಳಲ್ಲಿ ಒಂದಾಗಲಿದೆ ಎನ್ನಲಾಗಿದೆ.
ಈ ಚಿತ್ರದ ಮೂಲಕ ದೀಪಿಕಾ ತೆಲುಗು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದು ಈ ಚಿತ್ರ 2024 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಅಮಿತಾಭ್ ಅವರು ಸೂರಜ್ ಬರ್ಜಾತ್ಯಾ ನಿರ್ದೇಶನದ "ಉಂಚಾಯಿ" ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ