Goodbye: ಅಮಿತಾಭ್‌ ಬಚ್ಚನ್, ರಶ್ಮಿಕಾ ಮಂದಣ್ಣ ಅಭಿನಯದ 'ಗುಡ್​ಬೈ' ಸಿನಿಮಾ ಫಸ್ಟ್​ ಲುಕ್ ಲೀಕ್..!

ರಶ್ಮಿಕಾ ಅಪ್ಪಟ ಮನೆ ಮಗಳಂತೆ ಸಾಮಾನ್ಯವಾದ ಬೂದು ಬಣ್ಣದ ಟಾಪ್ ಮತ್ತು ಇಳಿಬಿಟ್ಟ ಕೂದಲಿನಲ್ಲಿ ಕಂಗೊಳಿಸುತ್ತಿದ್ದಾರೆ. ನೀನಾ ಗುಪ್ತಾ ಅಮಿತಾಭ್‌ ಬಚ್ಚನ್ ಅವರಿಗೆ ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ.

ಅಮಿತಾಭ್​​​​ ಬಚ್ಚನ್​​- ರಶ್ಮಿಕಾ ಮಂದಣ್ಣ

ಅಮಿತಾಭ್​​​​ ಬಚ್ಚನ್​​- ರಶ್ಮಿಕಾ ಮಂದಣ್ಣ

  • Share this:

ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್ ಮತ್ತು ಕರ್ನಾಟಕದ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ವಿಕಾಸ್ ಬಹ್ಲ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುಡ್ ಬೈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅಮಿತಾಭ್‌ ಜೊತೆಗೆ ತಪ್ಪಡ್ ಸಿನಿಮಾ ಖ್ಯಾತಿಯ ಪಾವೈಲ್ ಗುಲಾಟಿ ಈ ಸಿನಿಮಾದಲ್ಲಿದ್ದಾರೆ. ಇನ್ನು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈ ತಂಡದೊಂದಿಗೆ ಕೆಲಸ ನಿರ್ವಹಿಸುತ್ತಿರುವುದು ದಕ್ಷಿಣ ಸಿನಿಮಾ ರಂಗದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.


ಮಂಗಳವಾರ ಈ ಸೆಟ್​​ನಿಂದ ಫೋಟೋವೊಂದು ಲೀಕ್ ಆಗಿದ್ದು, ಅಮಿತಾಭ್‌ ಬಚ್ಚನ್ ವಿಭಿನ್ನ ಅವತಾರವನ್ನು ರಿವೀಲ್ ಮಾಡಿದೆ. ಬಂದಗಲಾ ಕುರ್ತಾ ಮತ್ತು ಪೈಜಾಮವನ್ನು ಧರಿಸಿ ಸಾಲ್ಟ್ ಅಂಡ್​ ಪೆಪ್ಪರ್ ಲುಕ್​​ನಲ್ಲಿ ಕಂಡು ಬಂದಿದ್ದಾರೆ. ಇನ್ನು ರಶ್ಮಿಕಾ ಅಪ್ಪಟ ಮನೆ ಮಗಳಂತೆ ಸಾಮಾನ್ಯವಾದ ಬೂದು ಬಣ್ಣದ ಟಾಪ್ ಮತ್ತು ಇಳಿಬಿಟ್ಟ ಕೂದಲಿನಲ್ಲಿ ಕಂಗೊಳಿಸುತ್ತಿದ್ದಾರೆ. ನೀನಾ ಗುಪ್ತಾ ಅಮಿತಾಭ್‌ ಬಚ್ಚನ್ ಅವರಿಗೆ ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ.


ಇದನ್ನೂ ಓದಿ:US COVID-19: ಅಮೆರಿಕಾದಲ್ಲಿ ಮತ್ತೆ ಕೊರೋನಾ ಸ್ಫೋಟ; 3 ವಾರಗಳಲ್ಲಿ ಕೇಸ್ ಡಬಲ್

ಈಗಾಗಲೇ ದಕ್ಷಿಣದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ರಶ್ಮಿಕಾ ಮಂದಣ್ಣ ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್​​ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಶಂತನು ಬಾಗ್ವಿ ಹೆಲ್ಮಡ್ ಸ್ಪೈ ಥ್ರಿಲ್ಲರ್​​​ನಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ ಎಕ್ಸ್​​ಪ್ರೆಷನ್ ಕ್ವೀನ್ ಭರವಸೆ ಮೂಡಿಸಿದ್ದಾರೆ. ರಶ್ಮಿಕಾರ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆಗೂ ಮುನ್ನವೇ ಗುಡ್ ಬೈ ಚಿತ್ರದಲ್ಲಿ ನಟಿಸಿರುವುದು ಬಾಲಿವುಡ್​ನಲ್ಲಿ ರಶ್ಮಿಕಾ ಹವಾ ಜೋರಾಗಿರುವುದನ್ನು ತೋರಿಸುತ್ತಿದೆ.


25 ವರ್ಷದ ಸ್ಮೈಲ್ ಬ್ಯೂಟಿ ರಶ್ಮಿಕಾ ಏಪ್ರಿಲ್​​ನಲ್ಲಿ ತಾವು ಈ ತಂಡದ ಜೊತೆಗೆ ಭಾಗಿಯಾಗಿರುವ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಬಚ್ಚನ್ ಮತ್ತು ವಿಕಾಸ್ ಬಹ್ಲ್ ಅವರೊಂದಿಗೆ ಸೆಟ್​​ನಲ್ಲಿ ಸೆರೆಹಿಡಿಯಲಾಗಿದ್ದ ಕೆಲವು ಸ್ಟಿಲ್​ಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳಿಗೆ 'ಎಂಥಾ! ತೃಪ್ತಿಕರ ದಿನದಂತೆ ಕಾಣುತ್ತಿದೆ' ಎಂದು ಶೀರ್ಷಿಕೆ ನೀಡಿದ್ದರು. ಜೊತೆಗೆ ಮಾಸ್ಕ್​ ತೆಗೆದಿರುವುದು ಚಿತ್ರದ ಕಾರಣಕ್ಕಾಗಿ ಮಾತ್ರವೆಂದು ಬರೆದುಕೊಂಡಿದ್ದರು. ಸ್ನೇಹಿತರೇ ಯಾವಾಗಲೂ ಮಾಸ್ಕ್ ಧರಿಸಿ ಎಂದು ಸಂದೇಶ ಕೂಡ ನೀಡಿದ್ದರು.


ಇದನ್ನೂ ಓದಿ:Gold Price Today: ಏರಿಕೆ ಕಂಡ ಚಿನ್ನದ ಬೆಲೆ; ಬೆಂಗಳೂರಿನಲ್ಲಿ ಎಷ್ಟಿದೆ ರೇಟು?

ಸಿನಿಮಾದ ಫಸ್ಟ್​​ ಲುಕ್​ ಔಟ್ ಆಗಿದ್ದರೂ ಸಿನಿಮಾ ಬಗ್ಗೆ ಯಾವ ಮಾಹಿತಿಯೂ ಅದರಲ್ಲಿ ಲಭ್ಯವಾಗಿಲ್ಲ.ಬಿಗ್​​ ಬಿ ಫ್ಯಾಂಟಸಿ ಟ್ರೈಲಾಜಿ ಬ್ರಹ್ಮಾಸ್ತ್ರದಲ್ಲೂ ಅಭಿನಯಿಸಿದ್ದಾರೆ. ಅಯಾನ್ ಮುಖರ್ಜಿ ಅವರ ಚಿತ್ರದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ಮೌನಿ ರಾಯ್, ಡಿಂಪಲ್ ಕಪಾಡಿಯಾ, ನಾಗಾರ್ಜುನ ಅಕ್ಕಿನೇನಿ, ಪ್ರತೀಕ್ ಬಬ್ಬರ್ ಸೇರಿದಂತೆ ಸ್ಟಾರ್ ಸಮೂಹವೇ ಇದೆ. ಈ ಸಿನಿಮಾದಲ್ಲಿ ಬಾಲಿವುಡ್ ಬಾದ್​ ಷಾ ಶಾರುಖ್ ಖಾನ್ ಅತಿಥಿ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇಮ್ರಾನ್ ಹಶ್ಮಿ, ರಿಯಾ ಚಕ್ರವರ್ತಿ ಅಭಿನಯದ ಚೆಹ್ರೆ ಚಿತ್ರದಲ್ಲಿ ಕಮಾಲ್ ಮಾಡಲಿದ್ದಾರೆ.




ವಿಕಾಸ್ ಬಹ್ಲ್ ಕಂಗನಾ ಅಭಿನಯದ ಕ್ವೀನ್ ಮತ್ತು ಸೂಪರ್ 30 ಚಿತ್ರಗಳಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

Published by:Latha CG
First published: