Rashmika Mandanna Good Bye First Look: ರಶ್ಮಿಕಾ ಬಾಲಿವುಡ್ ಸಿನಿಮಾ ಗುಡ್​​ಬೈ ಫಸ್ಟ್​ಲುಕ್ ರಿಲೀಸ್

Good Bye: ರಶ್ಮಿಕಾ ಮಂದಣ್ಣ ಅಮಿತಾಭ್ ಬಚ್ಚನ್ ಜೊತೆಗೆ ನಟಿಸಿರುವ ಹಿಂದಿ ಸಿನಿಮಾ ಗುಡ್ ಬೈ ಫಸ್ಟ್ ಲುಕ್ ರಿಲೀಸ್ ಆಗಿದೆ. ಹೇಗಿದೆ ಪೋಸ್ಟರ್?

ಗುಡ್ ಬೈ ಫಸ್ಟ್ ಲುಕ್

ಗುಡ್ ಬೈ ಫಸ್ಟ್ ಲುಕ್

  • Share this:
ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳನ್ನು (Cinema) ಒಪ್ಪಿಕೊಂಡು ಮಾಡುತ್ತಿರುವುದು ಗೊತ್ತೇ ಇದೆ. ಈಗ ನಟಿಯ (Actress) ಬಹುನಿರೀಕ್ಷಿತ ಹಿಂದಿ ಸಿನಿಮಾ ಗುಡ್ ಬೈ (Good Bye) ಫಸ್ಟ್ ಲುಕ್ (First Look) ಪೋಸ್ಟರ್ ರಿಲೀಸ್  (Poster Release) ಆಗಿದೆ. ಅಮಿತಾಭ್ ಬಚ್ಚನ್ (Amitabh Bachchan) ಜೊತೆ ನಟಿ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು ಈ ಬಗ್ಗೆ ಸಾಕಷ್ಟು ಕುತೂಹಲ ಸಿನಿಪ್ರಿಯರಿಗೆ ಇತ್ತು. ಈಗ ಫಸ್ಟ್​ಲುಕ್ ರಿಲೀಸ್ ಆಗಿದ್ದು ರಶ್ಮಿಕಾ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಬೆಳ್ಳಿತೆರೆಯಲ್ಲಿ (Big Screen) ಅಮಿತಾಬ್ ಬಚ್ಚನ್ ಅವರನ್ನು ನೋಡುವುದು ಯಾವಾಗಲೂ ಎಕ್ಸೈಟಿಂಗ್ ವಿಚಾರ. ಇವರ ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಕೂಡಾ ಇದ್ದರೆ ಹೇಗಿರಬಹುದು? ಎನ್ನುವ ಕುತೂಹಲ ಸಹಜ ಅಲ್ಲವೇ?

ಅಭಿಮಾನಿಗಳು ಯಾವಾಗಲೂ ಅವರನ್ನು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನೋಡಲು ಬಯಸುತ್ತಾರೆ. ಅಮಿತಾಭ್ ತಮ್ಮ ಚಿತ್ರ ಗುಡ್‌ಬೈ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರ ಎನೌನ್ಸ್ ಆದಾಗಿನಿಂದ ಅಭಿಮಾನಿಗಳು ಅಪ್ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.






ಬಿಗ್ ಬಿ ಜೊತೆಗೆ, ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಸೆಟ್‌ಗಳಿಂದ ಈಗಾಗಲೇ ಬಹಳಷ್ಟು ಬಿಟಿಎಸ್ ಫೋಟೋಗಳು ವೈರಲ್ ಆಗಿವೆ. ಆದರೆ ಇಂದು ಸಿನಿಮಾದ ಫಸ್ಟ್​ ಲುಕ್ ವೈರಲ್ ಆಗಿದೆ.

ಗುಡ್ ಬೈ ಫಸ್ಟ್ ಲುಕ್

ಅಮಿತಾಭ್ ಬಚ್ಚನ್ ಹಂಚಿಕೊಂಡ ಪೋಸ್ಟರ್‌ನಲ್ಲಿ, ಅವರು ನೀಲಿ ಸ್ಲೀವ್ ಲೆಸ್ ಜಾಕೆಟ್‌ ಧರಿಸಿ ಲೇಯರ್ ಮಾಡಿದ ಬೀಜ್ ಕುರ್ತಾವನ್ನು ಧರಿಸಿರುವುದನ್ನು ಕಾಣಬಹುದು. ಹಿರಿಯ ನಟನ ಮುಖದಲ್ಲಿ ನಗುವನ್ನು ನಾವು ಕಾಣಬಹುದು. ಅವರು ಗಾಳಿಪಟವನ್ನು ಹಾರಿಸುತ್ತಿರುವಾಗ ಉತ್ಸುಕರಾಗಿದ್ದಾರೆ. ಅವರ ಹಿಂದೆ ಹಸಿರು ಬಣ್ಣದ ಕುರ್ತಾ ಮತ್ತು ದುಪಟ್ಟಾ ಧರಿಸಿರುವ ರಶ್ಮಿಕಾ ಮಂದಣ್ಣ ನಿಂತಿದ್ದಾರೆ. ನಟಿ ತನ್ನ ಮುದ್ದಾಗಿ ಗಾಳಿಪಟದ ನೂಲಿನ ಬಂಡಲ್ ಅನ್ನು ಹಿಡಿದಿದ್ದು ಸುಂದರವಾಗಿ ಕಾಣಿಸಿದೆ.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಇವೆಂಟ್ ಮಾಡೋಕೂ ದುಡ್ಡಿಲ್ವಂತೆ! ಪ್ರಚಾರ ಹೇಗೆ?

ಗುಡ್ ಬೈ ಸಿನಿಮಾ ಶೂಟಿಂಗ್ ಕಳೆದ ವರ್ಷ ಪ್ರಾರಂಭವಾಯಿತು. ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಸಾಕುಪ್ರಾಣಿಯೊಂದಿಗೆ ಆಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಚಿತ್ರದಲ್ಲಿ ಅಮಿತಾಭ್ ಮತ್ತು ರಶ್ಮಿಕಾ ಜೊತೆಗೆ ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಕೂಡ ನಟಿಸಿದ್ದಾರೆ.

ಅಮಿತಾಬ್ ಬಚ್ಚನ್ ಪ್ರಾಜೆಕ್ಟ್​​ಗಳು

ಅಮಿತಾಭ್ ಬಚ್ಚನ್ ಅಯಾನ್ ಮುಖರ್ಜಿಯವರ ಬಹುನಿರೀಕ್ಷಿತ ಸಿನಿಮಾ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಗುಡ್‌ಬೈ ಹೊರತುಪಡಿಸಿ ದೀಪಿಕಾ ಪಡುಕೋಣೆ ಅವರೊಂದಿಗೆ ದಿ ಇಂಟರ್ನ್‌ನ ಅಧಿಕೃತ ಹಿಂದಿ ರಿಮೇಕ್ ಅನ್ನು ಸಹ ಮಾಡುತ್ತಿದ್ದಾರೆ.

ಇದನ್ನೂ ಓದಿ: Mahalakshmi Marriage: ಮಿಸ್​ಮ್ಯಾಚ್ ಎಂದೇ ವೈರಲ್ ಆದ ಜೋಡಿ, ಮದುವೆ ನಂತರ ಪತಿಗಾಗಿ ನಟಿಯ ಸ್ಪೆಷಲ್ ಪೋಸ್ಟ್

ರಶ್ಮಿಕಾ ಮಂದಣ್ಣ ಪ್ರಾಜೆಕ್ಟ್

ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ವರಿಸು ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ದಿಲ್ ರಾಜು ಅವರು ವೆಂಕಟೇಶ್ವರ ಕ್ರಿಯೇಷನ್ಸ್‌ನ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್, ಜಯಸುಧಾ, ಶ್ರೀಕಾಂತ್, ಶಾಮ್, ಯೋಗಿ ಬಾಬು, ಸಂಗೀತ ಮತ್ತು ಸಂಯುಕ್ತ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಬಾಲಿವುಡ್‌ನಲ್ಲಿ ಅವರು ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Published by:Divya D
First published: