ಅಮಿತಾಭ್ ಬಚ್ಚನ್ ಮೇಲೆ ಟ್ವಿಟ್ಟಿಗರ ಮುನಿಸು; ಕೌನ್ ಬನೇಗಾ ಕರೋಡ್​ಪತಿ ಬಹಿಷ್ಕರಿಸಲು ಅಭಿಯಾನ

ಬುಧವಾರದ ಎಪಿಸೋಡ್​ನಲ್ಲಿ 'ಈ ನಾಯಕರಲ್ಲಿ ಯಾರು ಮೊಘಲ್ ಸಾಮ್ರಾಟ ಔರಂಗಜೇಬ್​ಗೆ ಸಮಕಾಲೀನರು?' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಮಹಾರಾಜ ಪ್ರತಾಪ್, ರಾಣಾ ಸಂಗ, ಮಹಾರಾಜ ರಂಜಿತ್ ಸಿಂಗ್, ಶಿವಾಜಿ ಎಂಬ 4 ಆಯ್ಕೆಗಳನ್ನು ಕೊಡಲಾಗಿತ್ತು.

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

  • Share this:
ಇತ್ತೀಚೆಗಷ್ಟೆ ಬಾಲಿವುಡ್ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರನ್ನು ಆಹ್ವಾನಿಸಿ ವಿಜೃಂಭಣೆಯಿಂದ ದೀಪಾವಳಿ ಆಚರಿಸಿದ್ದ ಬಿಗ್​ ಬಿ ಅಮಿತಾಭ್ ಬಚ್ಚನ್ ಈಗ ನೆಗೆಟಿವ್ ಕಾರಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.

ಅಮಿತಾಭ್ ಬಚ್ಚನ್ ಖಾಸಗಿ ವಾಹಿನಿಯೊಂದಕ್ಕೆ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್​ಪತಿ' ಕಾರ್ಯಕ್ರಮ ಅತಿಹೆಚ್ಚು ಟಿಆರ್​ಪಿ ಹೊಂದಿರುವ ಶೋ. ಈಗಾಗಲೇ 10 ಸೀಸನ್​ಗಳನ್ನು ಮುಗಿಸಿರುವ ಈ ಶೋದ 11ನೇ ಸೀಸನ್​ನ ನಿರೂಪಣೆಯ ಜವಾಬ್ದಾರಿಯನ್ನು ಅಮಿತಾಭ್ ಬಚ್ಚನ್ ವಹಿಸಿಕೊಂಡಿದ್ದಾರೆ.

ಈ ರಸಪ್ರಶ್ನೆಯ ಗೇಮ್ ಶೋನ ಬುಧವಾರದ ಎಪಿಸೋಡ್​ನಲ್ಲಿ ಕೇಳಲಾದ ಒಂದು ಪ್ರಶ್ನೆ ಈಗ ವಿವಾದಕ್ಕೆ ಕಾರಣವಾಗಿದೆ. ಕೆಬಿಸಿ (ಕೌನ್ ಬನೇಗಾ ಕರೋಡ್​ಪತಿ)ಯಲ್ಲಿ ಕೇಳಲಾದ ಪ್ರಶ್ನೆಯಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಟ್ವಿಟ್ಟರ್​ನಲ್ಲಿ #BoycuttKBC ಎಂಬ ಅಭಿಯಾನ ಶುರುವಾಗಿದೆ.



ಕೆಬಿಸಿಯಲ್ಲಿ ಕೇಳಿದ್ದ ಪ್ರಶ್ನೆಯೇನು?:
ಬುಧವಾರದ ಎಪಿಸೋಡ್​ನಲ್ಲಿ 'ಈ ನಾಯಕರಲ್ಲಿ ಯಾರು ಮೊಘಲ್ ಸಾಮ್ರಾಟ ಔರಂಗಜೇಬ್​ಗೆ ಸಮಕಾಲೀನರು?' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಮಹಾರಾಜ ಪ್ರತಾಪ್, ರಾಣಾ ಸಂಗ, ಮಹಾರಾಜ ರಂಜಿತ್ ಸಿಂಗ್, ಶಿವಾಜಿ ಎಂಬ 4 ಆಯ್ಕೆಗಳನ್ನು ಕೊಡಲಾಗಿತ್ತು.

ಈ ಪ್ರಶ್ನೆಯ ಸ್ಕ್ರೀನ್​ಶಾಟ್ ಹಾಕಿ ಅನೇಕರು ಖಾಸಗಿ ವಾಹಿನಿ ಮತ್ತು ಅಮಿತಾಭ್ ಬಚ್ಚನ್ ವಿರುದ್ಧ ಟ್ವಿಟ್ಟರ್​ನಲ್ಲಿ ಹರಿಹಾಯ್ದಿದ್ದಾರೆ. ಮೊಘಲ್ ರಾಜ ಔರಂಗಜೇಬ್​ಗೆ ಸಾಮ್ರಾಟ ಎಂದು ಕರೆದಿರುವ ಆಯೋಜಕರು ಆಯ್ಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಎಂದು ಬರೆಯುವ ಬದಲು ಕೇವಲ ಶಿವಾಜಿ ಎಂದು ಬರೆದಿರುವುದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಮರಾಠ ಸಮುದಾಯದ ಐತಿಹಾಸಿಕ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜ್​ಗೆ ಅವಮಾನ ಮಾಡಿದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.



'ಛತ್ರಪತಿ ಶಿವಾಜಿ ಮಹಾರಾಜ್ ನಮ್ಮ ದೇಶದ ಹೆಮ್ಮೆಯ ವ್ಯಕ್ತಿ. ಮಾಧ್ಯಮಗಳು ಹಿಂದು ರಾಜರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು' ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.



'ಕೊಲೆಗಡುಕ ಔರಂಗಜೇಬ್ ನಿಮಗೆ ಮೊಘಲ್ ಸಾಮ್ರಾಟ. ಆದರೆ, ಛತ್ರಪತಿ ಶಿವಾಜಿ ಮಹಾರಾಜ್ ನಿಮಗೆ ಕೇವಲ ಶಿವಾಜಿ. ನಿಮಗೆಲ್ಲ ನಾಚಿಕೆಯಾಗಬೇಕು. ಈ ರೀತಿಯ ಶೋ ನಡೆಸುವ ಮೂಲಕ ಇಂದಿನ ಪೀಳಿಗೆಗೆ ಯಾವ ಸಂದೇಶ ಕೊಡಲು ಹೊರಟಿದ್ದೀರ?' ಎಂದು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ.


ತಮ್ಮ ಶೋ ಬಗ್ಗೆ ಟ್ವಿಟ್ಟರ್​ನಲ್ಲಿ ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ಸೋನಿ ಟಿವಿ ಕ್ಷಮೆ ಯಾಚಿಸಿದೆ. 'ಛತ್ರಪತಿ ಶಿವಾಜಿ ಮಹಾರಾಜ್ ಬಗ್ಗೆ ಬುಧವಾರದ ಎಪಿಸೋಡ್​ನಲ್ಲಿ ಸರಿಯಾಗಿ ಸಂಬೋಧಿಸಿಲ್ಲ. ಆ ಕಾರಣಕ್ಕೆ ನಾವು ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇವೆ. ಅದಕ್ಕಾಗಿ ನಿನ್ನೆಯ ಎಪಿಸೋಡ್​ನಲ್ಲಿ ಕ್ಷಮೆಯನ್ನೂ ಯಾಚಿಸಿದ್ದೇವೆ' ಎಂದು ಸೋನಿ ಟಿವಿ ಟ್ವೀಟ್ ಮಾಡಿದೆ.

First published: