ಅವರನ್ನು ತಬ್ಬಿಕೊಳ್ಳುತ್ತೇನೆ; ನನ್ನನ್ನು ಕ್ವಾರಂಟೈನ್ ಮಾಡಿದ್ರು ಪರವಾಗಿಲ್ಲ ಎಂದ ಖ್ಯಾತ ನಟ!

Amit Sadh: ಕೊರೋನಾ ಸಮಯದಲ್ಲಿ ಕ್ವಾರೈಂಟೈನ್​ ಆಗಿರುವ ಸ್ಥಳದ ಹತ್ತಿರಕ್ಕೂ ಜನರು ಓಡಾಡಲು ಹೆದರುತ್ತಿದ್ದಾರೆ. ನನಗೂ ಕೊರೋನಾ ಅಂಟಿದರೆ ಎಂಬ ಭಯದಿಂದ ಹೆಚ್ಚಿನವರು ಮನೆಯಲ್ಲಿಯೇ ಕುಳಿತು ಕಾಲ ಕಳೆಯುತ್ತಿದ್ದಾರೆ.  ಇಂತಹ ಸನ್ನಿವೇಶದಲ್ಲಿ ಕೊರೋನಾ ಸೋಂಕಿನ ವ್ಯಕ್ತಿಯೊಬ್ಬರನ್ನು ತಬ್ಬಿಕೊಳ್ಳಲು ಅಮಿತ್​ ಸಾಧ್​​ ಮುಂದಾಗಿದ್ದಾರೆ. ನನ್ನನ್ನು ಕ್ವಾರಂಟೈನ್​​ ಮಾಡಿದರೂ ಪರವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಅಮಿತ್​ ಸಾಧ್​

ಅಮಿತ್​ ಸಾಧ್​

 • Share this:
  ಬಾಲಿವುಡ್​ ಸಿನಿಮಾ ರಂಗದಲ್ಲಿ ಕೊರೋನಾ ತಾಂಡವ ಆಡುತ್ತಿದೆ. ಈಗಾಗಲೇ ಕೆಲವು ಖ್ಯಾತ ನಟ-ನಟಿಯರಿಗೆ ಕೊರೋನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್​​ ನಟ ಅಮಿತಾಭ್​ ಬಚ್ಚನ್​, ಮಗ ಅಭಿಷೇಕ್​​​ ಬಚ್ಚನ್​, ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯಾ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಇವರೆಲ್ಲರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಕೊರೋನಾ ಸಂದರ್ಭದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತ್​​ ಸಾಧ್​​ ವಿಚಿತ್ರ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ.

  ಕೊರೋನಾ ಸಮಯದಲ್ಲಿ ಕ್ವಾರೈಂಟೈನ್​ ಆಗಿರುವ ಸ್ಥಳದ ಹತ್ತಿರಕ್ಕೂ ಜನರು ಓಡಾಡಲು ಹೆದರುತ್ತಿದ್ದಾರೆ. ನನಗೂ ಕೊರೋನಾ ಅಂಟಿದರೆ ಎಂಬ ಭಯದಿಂದ ಹೆಚ್ಚಿನವರು ಮನೆಯಲ್ಲಿಯೇ ಕುಳಿತು ಕಾಲ ಕಳೆಯುತ್ತಿದ್ದಾರೆ.  ಇಂತಹ ಸನ್ನಿವೇಶದಲ್ಲಿ ಕೊರೋನಾ ಸೋಂಕಿನ ವ್ಯಕ್ತಿಯೊಬ್ಬರನ್ನು ತಬ್ಬಿಕೊಳ್ಳಲು ಅಮಿತ್​ ಸಾಧ್​​ ಮುಂದಾಗಿದ್ದಾರೆ. ನನ್ನನ್ನು ಕ್ವಾರಂಟೈನ್​​ ಮಾಡಿದರೂ ಪರವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

  ಅಮಿತ್​ ಸಾಧ್​ಗೆ​ ಯಾರನ್ನು ತಬ್ಬಿಕೊಳ್ಳುವ ಹಂಬಲ?

  ಅಮಿತ್​ ಸಾಧ್​​​ 2010ರಿಂದ ಬಾಲಿವುಡ್​ ಸಿನಮಾ ರಂಗದಲ್ಲಿ ಕಾಣಿಸಿಕೊಂಡರು. ಸ್ಯಾಂಡಲ್​ವುಡ್​ ನಟ ಅಭಿನಯ ಚಕ್ರವರ್ತಿ ಸುದೀಪ್​​​ ನಟನೆಯ ‘ಫೂಂಕ್​’ ಸಿನಿಮಾದಲ್ಲಿ ಅಮಿತ್​ ಸಾಧ್​ ಬಣ್ಣ ಹಚ್ಚಿದ್ದರು, ಅನಂತರ ‘ಮ್ಯಾಕ್ಸಿಮಮ್’, ‘ಕಾಯ್​ ಪೊ ಚೆ’, ‘ಸುಲ್ತಾನ್’​, ಅಕೀರಾ’, ‘ಗೋಲ್ಡ್’​​, ‘ಸೂಪರ್​ 30’, ‘ಯಾರಾ’ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅಭಿಷೇಕ್​ ಬಚ್ಚನ್​ ನಟನೆಯ ‘ಬ್ರೀದ್​​​  ಇನ್​ ಟು ದಿ ಶ್ಯಾಡೋಸ್​’​ ವೆಬ್​ ಸಿರೀಸ್​ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಈ ವೆಬ್​​ ಸಿರೀಸ್​​​ ಒಟಿಟಿಯಲ್ಲಿ ಜನಪ್ರಿಯತೆಗಳಿಸುತ್ತಿದೆ.


  View this post on Instagram

  This one is for my senior, my brother, @bachchan. The actor whom I've been closely following and looking upto since Guru, Yuva, Bunty & Babli and the list goes on and on. Bro, I just want to thank you. Thank you for being the best senior. For being an actor who treated me like his equal. You never once let me feel that you're more or I'm any less. You're the best listener in between takes. My performance as Kabir Sawant in Breathe is invaluable, incomplete without you. My celebration of Breathe, the happiness of our series reaching the depths of our country will not begin or conclude without this mention. You inspire me & I can't wait to get back on a set to work with you. I love J and I love Avinash. They became great friends. I love the relationship that developed between Kabir & Avinash. As you read this, I just pray to God that you, Mr Bachchan and your entire family (Aishwarya, Aradhya) recover from COVID and come back home healthy. So that you and I can meet and I can give you a tight hug. If they want to quarantine me for that for two weeks, I'm ready to be shut in for a month. I love you so much bro. Can't wait to see you soon! @breatheamazon #BreatheIntoTheShadows


  A post shared by AMIT SADH (@theamitsadh) on


  ಇದೀಗ ಅಮಿತ್​ ಸಾಧ್​ ಅವರು ಅಭಿಷೇಕ್​ ಬಚ್ಚನ್​ ಅವರನ್ನು ತಬ್ಬಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅಮಿತ್​ ಸಾಧ್, ‘ಗುರು, ಬಂಟಿ ಔರ್​​ ಬಬ್ಲಿ, ಯುವ ಮುಂತಾದ ಸಿನಿಮಾಗಳಿಂದ ನಾನು ಅಭಿಷೇಕ್​ ಬಚ್ಚನ್​ ಅವರನ್ನು ಗಮನಿಸುತ್ತಾ ಬಂದಿದ್ದೇನೆ. ನಮ್ಮ ಬೆಸ್ಟ್​​​​ ಸೀನಿಯರ್​​ ಆಗಿರುವುದಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಜೊತೆ ನಟಿಸುವಾಗ ದೊಡ್ಡವರು- ಚಿಕ್ಕವರು ಎಂಬ ಭೇದ ಭಾವವಿಲ್ಲದೆ  ಸಮಾನರಾಗಿ ಕಾಣುತ್ತೀರಿ. ‘ಬ್ರೀದ್​​; ಇನ್​ ಟು ದಿ ಶ್ಯಾಡೋಸ್​’​ ವೆಬ್​ ಸಿರೀಸ್​ನಲ್ಲಿ ನಾನು ಮಾಡಿರುವ  ಕಬೀರ್​ ಸಾವಂತ್​ ಪಾತ್ರ ಅಷ್ಟು ಚೆನ್ನಾಗಿ ಮೂಡಿ ಬರಲು ನೀವೆ ಕಾರಣ. ಈಗ ಆ ಸರಣಿ ಯಶಸ್ಸು ಕಂಡಿದೆ, ನಿಮ್ಮ ಹೆಸರನ್ನು ಪ್ರಸ್ತಾಪಿಸದೆ ಅದರ ಸಂಭ್ರಮಾಚರಣೆ ಅಪೂರ್ಣ ಎನಿಸುತ್ತದೆ’.

  ‘ನಿಮ್ಮೊಂದಿಗೆ ಕೆಲಸ ಮಾಡಬೇಕು ಎಂದು ಕಾಯುತ್ತಿದ್ದೇನೆ. ನಿಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನೀವು ಮತ್ತು ನಿಮ್ಮ ಕುಟುಂಬ ಕೋವಿಡ್​ನಿಂದ ಬೇಗ ಗುಣಮುಖರಾಗಲಿ. ಆದಷ್ಟು ಬೇಗ ನಿಮ್ಮನ್ನು ನಾನು ಭೇಟಿ ಮಾಡಬೇಕು. ನಿಮ್ಮನ್ನು ಗಟ್ಟಿಯಾಗಿ ತಬ್ಬಿಕೊಳ್ಳಬೇಕು. ತಬ್ಬಿಕೊಂಡಿದಕ್ಕೆ ನನ್ನನ್ನು 2 ವಾರ ಕ್ವಾರಂಟೈನ್​ ಮಾಡಿದರೂ ಪರವಾಗಿಲ್ಲ. ಇನ್ನೊಂದು ತಿಂಗಳು ನಾನು ಸುಮ್ಮನೆ ಕುಳಿತುಕೊಳ್ಳು ಸಿದ್ಧ’ ಎಂದು ಇಸ್​​ಸ್ಟಾಗ್ರಾಂನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

  ಸದ್ಯ ಅಮಿತ್​ ಸಾಧ್​​​ ಬರೆದುಕೊಂಡಿರುವ  ಪೋಸ್ಟ್​ ಭಾರೀ ವೈರಲ್​ ಆಗಿದೆ. ಅನೇಕರು ಬ್ರೀದ್​​; ಇನ್​ ಟು ದಿ ಶ್ಯಾಸೋಸ್​ ವೆಬ್​ಸಿರೀಸ್​ನಲ್ಲಿ  ಕಬೀರ್​ ಸಿಂಗ್​ ಪಾತ್ರವನ್ನು ನೋಡಿದ ಅನೇಕರು ಮೆಚ್ಚುಗೆಯ ಕಾಮೆಂಟ್​ ಬರೆದಿದ್ದಾರೆ.  ಇತ್ತೀಚೆಗೆ ಅಮಿತ್​ ಸಾಧ್​​ ಮತ್ತು ಅಭಿಷೇಕ್​ ಬಚ್ಚನ್​​​ ಬ್ರೀದ್​ ಇನ್​ ಟು ದಿ ಶ್ಯಾಡೋ ವೆಬ್​ ಸಿರೀಸ್​​ ಬಾಯ್ಸ್​​ ಡಬ್ಬಿಂಗ್​ ವೇಳೆ ಸ್ಟೂಡಿಯೋದಲ್ಲಿ ಭೇಟಿ ಮಡಿದ್ದರು. ಆನಂತರ ಅಭಿಷೇಕ್​ ಬಚ್ಚನ್​​ ನನಗೆ ಕೊರೋನಾ ಪಾಸಿಟಿವ್​​​​ ಬಂದಿದೆ ಎಂದು ಟ್ವೀಟ್​ ಬರೆಯುವ ಮೂಲಕ ಹೇಳಿಕೊಂಡಿದ್ದರು. ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಕೋವಿಡ್​ ಟೆಸ್ಟ್​ ಮಾಡಿಸಿ ಎಂದು ಹೇಳಿದ್ದರು.

  ಹಾಗಾಗಿ ಅನೇಕರು ಅಮಿತ್​ ಸಾಧ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್​ ಟೆಸ್ಟ್​ ಮಾಡಿಸಿಕೊಂಡಿದ್ದೀರಾ ಎಂದು ಕೇಳಿದ್ದರು. ಆನಂತರ ಅಮಿತ್​​ ಸಾಧ್​ ಕೊರೋನಾ ಟೆಸ್ಟ್​ ಮಾಡಿಸಿಕೊಂಡಿದ್ದಾರೆ. ಆನಂತರ ಸಾಮಾಜಿಕ ಜಾಲತಾಣದಲ್ಲಿ ಕೋವಿಡ್​-19 ಟೆಸ್ಟ್​ ಮಾಡಿಸಿದ್ದೇನೆ ಎಂದು ಬರೆದುಕೊಂಡಿದ್ದರು. ನಾನು ಕ್ಷೇಮವಾಗಿದ್ದೇನೆ ಎಂದು ಹೇಳಿದ್ದರು, ಬಚ್ಚನ್​ ಕುಟುಂಬ ಕೊರೋನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದಿದ್ದರು.
  Published by:Harshith AS
  First published: