Football World Cup 2018

53ನೇ ಪ್ರೇಮಿಗಳ ದಿನದಂದು ನಟ ಅಮೀರ್​ ಖಾನ್​ ಮಾಡಿದ್ದೇನು ಗೋತ್ತಾ?

news18
Updated:February 14, 2018, 5:06 PM IST
53ನೇ ಪ್ರೇಮಿಗಳ ದಿನದಂದು ನಟ ಅಮೀರ್​ ಖಾನ್​ ಮಾಡಿದ್ದೇನು ಗೋತ್ತಾ?
news18
Updated: February 14, 2018, 5:06 PM IST
ನ್ಯೂಸ್​ 18 ಕನ್ನಡ

ಈ ಬಾರಿಯ ಪ್ರೇಮಿಗಳ ದಿನ ಅಮೀರ್​ ಖಾನ್​ಗೆ ತುಂಬಾ ವಿಶೇಷ. ಬೆಳಿಗ್ಗೆ ಎದ್ದ ಕೂಡಲೇ ಅವರು ಒಂದು ರೊಮ್ಯಾಂಟಿಕ್​ ಹಾಡು ಕೇಳುವ ಮೂಲಕ ದಿನದ ಆರಂಭ ಮಾಡಿದ್ದಾರೆ.

ಪ್ರೇಮಿಗಳ ದಿನದಂದು ಅಮೀರ್​ ಮನಸ್ಸಿಗೆ ಮುದ ನೀಡಿದ ಆ ಹಾಡು ಬೇರಾವುದೂ ಅಲ್ಲ, ಅವರೇ ಅಭಿನಯಿಸಿರುವ ‘ಜೋ ಜೀತಾ ವಹೀ ಸಿಕಂದರ್​’ ಸಿನಮಾದ ‘ಪೆಹಲಾ ನಶಾ’ ಹಾಡು. ಈ ಹಾಡು ಎಲ್ಲ ಕಾಲಕ್ಕೂ ಹೆಂಗೆಳೆಯರ ಹಾಟ್ ಫೇವರಿಟ್​.

 




ಈ ಎವರ್​ಗ್ರೀನ್​ ಹಾಡಿನೊಂದಿಗೆ ಇರುವ ನಂಟು ಹಾಗೂ ನೆನಪುಗಳನ್ನು ನೆನಪಿಸಿಕೊಂಡಿರುವ ಅಮೀರ್​ ಎಲ್ಲರಿಗೂ ಪ್ರೇಮಿಗಳ ದಿನ ಶುಭಾಷಯ ಕೋರಿದ್ದಾರೆ. ಅಲ್ಲದೆ ಈ ಹಾಡು ವೈಯಕ್ತಿಕವಾಗಿ ಅವರ ಇಷ್ಟದ ಹಾಡುಗಳಲ್ಲಿ ಒಂದಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

‘ಜೋ ಜೀತಾ ವಹೀ ಸಿಕಂದರ್​’ ಸಿನಿಮಾದಲ್ಲಿ ಅಮೀರ್​ ಹಾಗೂ ನಿರ್ದೇಶಕ ಮನ್ಸೂರ್​ ಖಾನ್ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು. ಕಳೆದ ಕೆಲ ವರ್ಷಗಳಿಂದ ಈ ‘ಪೆಹೆಲಾ ನಶಾ’ ಹಾಡು ಯುವ ಪ್ರೇಮಿಗಳ ನೆಚ್ಚಿನ ಗೀತೆಯಾಗಿದೆ ಎಂದರೆ ತಪ್ಪಾಗಲಾರದು
First published:February 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ