• Home
  • »
  • News
  • »
  • entertainment
  • »
  • Bollywood Movie: 2017ರಲ್ಲಿ ಕಾಂತಾರದಂತೆ ಕಮಾಲ್ ಮಾಡಿತ್ತು ಈ ಸಿನಿಮಾ! ಕಡಿಮೆ ಬಜೆಟ್​​ನಲ್ಲಿ ನಿರ್ಮಾಣವಾಗಿ ಕೋಟಿ ಕೋಟಿ ಬಾಚಿತ್ತು

Bollywood Movie: 2017ರಲ್ಲಿ ಕಾಂತಾರದಂತೆ ಕಮಾಲ್ ಮಾಡಿತ್ತು ಈ ಸಿನಿಮಾ! ಕಡಿಮೆ ಬಜೆಟ್​​ನಲ್ಲಿ ನಿರ್ಮಾಣವಾಗಿ ಕೋಟಿ ಕೋಟಿ ಬಾಚಿತ್ತು

ಕಾಂತಾರ-ಸೀಕ್ರೆಟ್ ಸೂಪರ್​​ಸ್ಟಾರ್

ಕಾಂತಾರ-ಸೀಕ್ರೆಟ್ ಸೂಪರ್​​ಸ್ಟಾರ್

16 ಕೋಟಿಯಲ್ಲಿ ಕಾಂತಾರ ಸಿನಿಮಾ ಸೂಪರ್ ಆಗಿ ಮುಗಿದು ಸಕ್ಸಸ್​ಫುಲ್ ಆಗಿ ರಿಲೀಸ್ ಆಗಿದೆ. ಇದೇ ರೀತಿ ಬಾಲಿವುಡ್ ಸಿನಿಮಾ ಒಂದು ಹಿಟ್ ಆಗಿತ್ತು ಗೊತ್ತೇ? 15 ಕೋಟಿಯಲ್ಲಿ ಸಿದ್ಧವಾದ ಸಿನಿಮಾ 965 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು.

  • News18 Kannada
  • Last Updated :
  • Bangalore, India
  • Share this:

ಕಾಂತಾರ (Kantara) ಸಿನಿಮಾ (Cinema) 400 ಕೋಟಿಗೂ ಹೆಚ್ಚು ಗಳಿಸಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕರ್ನಾಟಕದಲ್ಲಿ (Karnataka) ಮಾತ್ರ ರಿಲೀಸ್ ಆದ ಸಿನಿಮಾ ಈಗ ಬೇರೆ ಭಾಷೆಗಳಲ್ಲಿ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದೆ. ರಿಷಬ್ ಶೆಟ್ಟಿ (Rishab Shetty) ಬರೆದು, ನಿರ್ದೇಶಿಸಿ, ನಟಿಸಿದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಹೊಂಬಾಳೆ ಫಿಲ್ಮ್ಸ್​ನ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಕಾಂತಾರ ಸಿನಿಮಾ ಕಡಿಮೆ ಬಜೆಟ್​​ನಲ್ಲಿ ಸಿದ್ಧವಾದ ಸೂಪರ್ ಸಿನಿಮಾ. 14-16 ಕೋಟಿ ರೂಪಾಯಿಗಳ ಬಜೆಟ್​ನಲ್ಲಿ ಸಿದ್ಧವಾದ ಕಾಂತಾರ ಸಿನಿಮಾಗೆ ಅಸಲಿಗೆ ಅಷ್ಟು ಬಜೆಟ್ ಕೂಡಾ ಲೆಕ್ಕ ಇಟ್ಟಿರಲಿಲ್ಲ. ಆದರೆ ನಂತರದಲ್ಲಿ ಸಿನಿಮಾ ಬೇಡಿದಷ್ಟು ಬಜೆಟ್ ಕೊಡುತ್ತಾ ಹೋಗಲಾಗಿತ್ತು.


ಅಂತೂ 16 ಕೋಟಿಯಲ್ಲಿ ಕಾಂತಾರ ಸಿನಿಮಾ ಸೂಪರ್ ಆಗಿ ಮುಗಿದು ಸಕ್ಸಸ್​ಫುಲ್ ಆಗಿ ರಿಲೀಸ್ ಆಗಿದೆ. ಇದೇ ರೀತಿ ಬಾಲಿವುಡ್ ಸಿನಿಮಾ ಒಂದು ಹಿಟ್ ಆಗಿತ್ತು ಗೊತ್ತೇ? 15 ಕೋಟಿಯಲ್ಲಿ ಸಿದ್ಧವಾದ ಸಿನಿಮಾ 965 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು.




ಕಾಂತಾರದ ಬಜೆಟ್-ಗಳಿಕೆಯೇ ಹೈಲೈಟ್


ಸಿನಿಮಾದ ಕಥೆ, ನಿರ್ದೇಶನ, ಹಾಡು, ನಟನೆಯಿಂದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಾಂತಾರ ಸಿನಿಮಾದಲ್ಲಿ ಇನ್ನೊಂದು ಪ್ರಮುಖ ವಿಚಾರ ಏನೆಂದರೆ ಈ ಸಿನಿಮಾ ಭಾರೀ ಕಡಿಮೆ ಬಜೆಟ್​​ನಲ್ಲಿ ನಿರ್ಮಾಣವಾಗಿದೆ. ಬರೀ 16 ಕೋಟಿಗಳಲ್ಲಿ ರೆಡಿಯಾದ ಮೂವಿ 400 ಕೋಟಿ ಗಳಿಸುವುದರ ಜೊತೆ ಈ ಮಟ್ಟಿಗೆ ಕ್ರೇಜ್ ಸೃಷ್ಟಿಸುವುದೆಂದರೆ ಸಣ್ಣ ವಿಚಾರವಲ್ಲ. ಇಲ್ಲಿ ವರ್ಕೌಟ್ ಆಗಿದ್ದು ಬಜೆಟ್ ಅಲ್ಲ, ಸಿನಿಮಾದ ಕಂಟೆಂಟ್ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.


ದಾಖಲೆ ಬರೆದ ಕಾಂತಾರ ಸಿನಿಮಾ


ಸೀಕ್ರೆಟ್ ಸೂಪರ್ ಸ್ಟಾರ್


ಬಾಲಿವುಡ್​​ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಂತಹ ನಟ ಅಮೀರ್ ಖಾನ್ ಅವರ ಸೀಕ್ರೆಟ್ ಸೂಪರ್​ಸ್ಟಾರ್ ಸಿನಿಮಾ ಮುಖ್ಯವಾದದ್ದು. 15 ಕೋಟಿ ರೂಪಾಯಿಯಲ್ಲಿ ಸಿದ್ಧವಾದ ಈ ಸಿನಿಮಾ ಅಂದು 965 ಕೋಟಿ ರೂಪಾಯಿ ಗಳಿಸಿತ್ತು. ಕಾಂತಾರದಂತೆಯೇ ಮೌತ್ ಟಾಕ್​ನಿಂದ ಪ್ರಚಾರ ಪಡೆದು ಭಾಷೆ ಮೀರಿ ತಲುಪಿದ ಈ ಸಿನಿಮಾ ಅಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.




ಇದನ್ನೂ ಓದಿ: Pan India Film: ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಹೇಗಿರಬೇಕು? ರಿಷಬ್ ಶೆಟ್ರು ಹೇಳ್ತಾರೆ ನೋಡಿ!


ಇದೀಗ ಕಾಂತಾರ ಸಿನಿಮಾದ ಪ್ಲಸ್ ಪಾಯಿಂಟ್ ಕೂಡಾ ಅದೇ. ಸಿನಿಮಾದ ಕಂಟೆಂಟ್ ಎಷ್ಟು ವಿಶೇವಾಗಿದೆ ಎಂದರೆ ಭಾಷೆಯನ್ನು ಮೀರಿ ಈ ಸಿನಿಮಾ ಜನರನ್ನು ತಲುಪಿತು. ಪ್ರಾದೇಶಿಕವಾಗಿ ನಿರ್ಮಿಸಿದ ಸಿನಿಮಾ ಪ್ರಾದೇಶಿಕ ಮಿತಿಯನ್ನು ದಾಟಿ ಪ್ರತಿ ವ್ಯಕ್ತಿಯನ್ನು ತಲುಪಲು ಸಾಧ್ಯವಾಯಿತು. ಇದು ಸಿನಿಮಾ ಸಕ್ಸಸ್​​ನ ಬೇಸ್.




2017ರಲ್ಲಿ ರಿಲೀಸ್ ಆದ ಸಿನಿಮಾ


ಸೀಕ್ರೆಟ್ ಸೂಪರ್‌ಸ್ಟಾರ್ 2017 ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ಆಗಿದ್ದು ಅದ್ವೈತ್ ಚಂದನ್ ಬರೆದು ನಿರ್ದೇಶಿಸಿದ್ದಾರೆ. ಸ್ಟಾರ್ ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ಸ್ಟುಡಿಯೋ ಅಮೀರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಿಸಲಾಗಿದೆ.


Aamir Khan talks about his first love that led to heartbreak stg asp
ಅಮಿರ್ ಖಾನ್


ಈ ಸಿನಿಮಾದಲ್ಲಿ ಝೈರಾ ವಾಸಿಮ್, ಅಮೀರ್ ಖಾನ್, ಮೆಹರ್ ವಿಜ್ ಮತ್ತು ರಾಜ್ ಅರ್ಜುನ್ ನಟಿಸಿದ್ದಾರೆ. ಈ ಸಿನಿಮಾ ಗಾಯಕಿಯಾಗಲು ಹಂಬಲಿಸುವ ಹದಿಹರೆಯದ ಹುಡುಗಿಯ ಕಥೆಯನ್ನು ಹೇಳುತ್ತದೆ. ಸಿನಿಮಾ ಸ್ತ್ರೀವಾದ, ಲಿಂಗ ಸಮಾನತೆ ಮತ್ತು ಕೌಟುಂಬಿಕ ಹಿಂಸಾಚಾರ ಸೇರಿದಂತೆ ಸಾಮಾಜಿಕ ಸಮಸ್ಯೆಗಳನ್ನೂ ತೋರಿಸುತ್ತದೆ.




ಈ ಮೂವಿ ವಿಮರ್ಶಕರಿಂದ ಪಾಸಿಟಿವ್ ವಿಮರ್ಶೆಗಳನ್ನು ಪಡೆಯಿತು. ಸೀಕ್ರೆಟ್ ಸೂಪರ್‌ಸ್ಟಾರ್ 63 ನೇ ಫಿಲ್ಮ್‌ಫೇರ್ ಪ್ರಶಸ್ತಿಗಳಲ್ಲಿ ಹತ್ತು ನಾಮನಿರ್ದೇಶನಗಳನ್ನು ಪಡೆದರು. ಇದರಲ್ಲಿ ಅತ್ಯುತ್ತಮ ಚಲನಚಿತ್ರ, ಚಂದನ್‌ಗೆ ಅತ್ಯುತ್ತಮ ನಿರ್ದೇಶಕ, ವಾಸಿಮ್‌ಗಾಗಿ ಅತ್ಯುತ್ತಮ ನಟಿ ಮತ್ತು ಅಮೀರ್ ಖಾನ್‌ಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ಹಲವು ಪ್ರಶಸ್ತಿ ಪಡೆಯಿತು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು