ಬಹಿರಂಗವಾಗಿ ಅಮೀರ್ ಮಗಳು ಗೆಳೆಯನ ಜೊತೆ ಹೀಗೆ ಮಾಡೋದಾ?; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮಿಶಾಲ್​ ಬಹಿರಂಗವಾಗಿ ಹೀಗೆ ಮಾಡಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ಅವರಿಬ್ಬರು ಪ್ರಣಯ ಪಕ್ಷಿಗಳು. ಅವರಿಗೆ ಇಷ್ಟಬಂದಂತೆ ಮಾಡುತ್ತವೆ ಎಂದಿದ್ದಾರೆ.

ಇರಾ ಖಾನ್​-ಮಿಶಾಲ್​

ಇರಾ ಖಾನ್​-ಮಿಶಾಲ್​

  • News18
  • Last Updated :
  • Share this:
ಅಮೀರ್​ ಖಾನ್​ ಮಗಳು ಇರಾ ಖಾನ್​ ಬಾಯ್​ಫ್ರೆಂಡ್​ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದರು. ಈಗ ಇರಾ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ವೈರಲ್​ ಆದ ವಿಡಿಯೋ.

ಮಿಶಾಲ್​ ಕಿರ್ಪಾಲಾನಿ ಎಂಬುವವರನ್ನು ಪ್ರೀತಿಸುತ್ತಿರುವ ಬಗ್ಗೆ ಸ್ವತಃ ಇರಾ ಇತ್ತೀಚೆಗೆ ಒಪ್ಪಿಕೊಂಡಿದ್ದರು. ಅನೇಕ ಬಾರಿ ಸಾರ್ವಜನಿಕವಾಗಿ ಈ ಜೋಡಿ ಕಾಣಿಸಿಕೊಂಡಿದ್ದರಿಂದ ಇದು ಯಾರಿಗೂ ಅಚ್ಚರಿ ತಂದಿರಲಿಲ್ಲ. ಇಬ್ಬರೂ ಡೇಟಿಂಗ್​ ಮುಂದುವರಿಸಿದ್ದಾರೆ. ಇತ್ತೀಚೆಗೆ ಪಬ್​ ಒಂದರಲ್ಲಿ ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಹಳದಿ ಬಣ್ಣದ ಬಟ್ಟೆಯಲ್ಲಿ ಇರಾ ಕಾಣಿಸಿಕೊಂಡರೆ ಮಿಶಾಲ್​ ಬಿಳಿ ಬಣ್ಣದ ಶರ್ಟ್​ ಧರಿಸಿದ್ದರು. ಇಬ್ಬರೂ ಡಾನ್ಸ್​ ಮಾಡುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲ ಕಾಲ ಇರಾ ಅವರನ್ನು ಮಿಶಾಲ್​ ತಬ್ಬಿಯೇ ಇದ್ದರು. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯ​ ಸುಳಿಯಲ್ಲಿ ಅಮೀರ್ ಖಾನ್​​ ಮಗಳು?; ವೈರಲ್​ ಆಯ್ತು ಇರಾ ಖಾಸಗಿ ಫೋಟೋಗಳು!
ಮಿಶಾಲ್​ ಬಹಿರಂಗವಾಗಿ ಹೀಗೆ ಮಾಡಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, “ಅವರಿಬ್ಬರು ಪ್ರಣಯ ಪಕ್ಷಿಗಳು. ಅವರಿಗೆ ಇಷ್ಟಬಂದಂತೆ ಮಾಡುತ್ತವೆ. ಹಾಗಂತ ಅವರಿಬ್ಬರು ರಸ್ತೆಯಲ್ಲಿ ಏನು ತಬ್ಬಿಕೊಂಡಿಲ್ಲ. ಅವರು ತಬ್ಬಿಕೊಂಡಿದ್ದು ಪಬ್​ನಲ್ಲಿ,” ಎಂದು ಸಮಜಾಯಿಶಿ ಕೊಟ್ಟಿದ್ದಾರೆ.

ಇರಾ ಗೆಳೆಯ ಮಿಶಾಲ್ ಕಿರ್ಪಾಲಾನಿ. ಪ್ರೊಫೈಲ್​ನಲ್ಲಿ ತಾನೋರ್ವ ಕಲಾವಿದ ಹಾಗೂ ಸಂಗೀತ ಸಂಯೋಜಕ ಎಂದು ಅವರು ಬರೆದುಕೊಂಡಿದ್ದಾರೆ. ಒಟ್ಟಿಗೆ ಇರುವ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ​ ಹಂಚಿಕೊಂಡಿದ್ದರು.

ಇದನ್ನೂ ಓದಿ: ಮಗನಿಗಾಗಿ ನಿರ್ದೇಶನ ಮಾಡುವುದರಿಂದ ದೂರ ಉಳಿದಿದ್ದಾರೆ ಬಾಲಿವುಡ್​ನ ಸ್ಟಾರ್​ ನಟ!

First published: