• Home
 • »
 • News
 • »
 • entertainment
 • »
 • Shah Rukh Khan: ಬೇಷರಂ ಹಾಡಿನ ಕೇಸರಿ ವಿವಾದ! ಅಕ್ಷಯ್ ಕುಮಾರ್​ ಮಾಡಿದ್ರೆ ತಪ್ಪಲ್ವಾ ಎಂದ ನೆಟ್ಟಿಗರು

Shah Rukh Khan: ಬೇಷರಂ ಹಾಡಿನ ಕೇಸರಿ ವಿವಾದ! ಅಕ್ಷಯ್ ಕುಮಾರ್​ ಮಾಡಿದ್ರೆ ತಪ್ಪಲ್ವಾ ಎಂದ ನೆಟ್ಟಿಗರು

ಕೇಸರಿಯಲ್ಲಿ ಅಕ್ಷಯ್

ಕೇಸರಿಯಲ್ಲಿ ಅಕ್ಷಯ್

ಇದೀಗ ಬೇಷರಂ ಹಾಡಿನ ಗದ್ದಲದ ನಡುವೆಯೇ ನೆಟಿಜನ್‌ಗಳು ಅಕ್ಷಯ್ ಕುಮಾರ್ ಅವರ ಹಳೆಯ ಹಾಡುಗಳಲ್ಲಿರುವ ಕೇಸರಿ ಬಣ್ಣದ ಸ್ಟಿಲ್‌ಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಇದು ಸರಿಯೇ ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.

 • Trending Desk
 • 4-MIN READ
 • Last Updated :
 • Bangalore, India
 • Share this:

ಶಾರುಖ್‌ ಖಾನ್ (Shah Rukh Khan) ಅಭಿನಯದ ಪಠಾನ್ (Patjhaan) ಚಿತ್ರದ ಬೇಷರಂ (Besharam) ಹಾಡು ಇದೀಗ ವಿವಾದಕ್ಕೊಳಗಾಗಿರುವುದು ತಿಳಿದೇ ಇದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಕೇಸರಿ (Saffron) ಬಣ್ಣದ ಬಿಕಿನಿ ಧರಿಸಿ ಹಸಿಬಿಸಿಯಾಗಿ ಕಂಡುಬಂದಿದ್ದು, ಹಾಡು ಹಾಗೂ ಪಠಾನ್ ಚಿತ್ರವನ್ನು ನಿಷೇಧಿಸಬೇಕೆಂದು ಇಂಟರ್ನೆಟ್‌ನಲ್ಲಿ ಬಾಯ್ಕಾಟ್ (Boycott) ಅಭಿಯಾನ ಆರಂಭವಾಗಿದೆ. ಹಿಂದೂ (Hindu) ಧರ್ಮದ ಪಾವಿತ್ರ್ಯ ಹಾಗೂ ಹಿಂದುತ್ವ ಧ್ವಜದ ಪ್ರತೀಕವಾಗಿರುವ ಕೇಸರಿ ಬಣ್ಣವನ್ನು ಚಿತ್ರದಲ್ಲಿ ಅಸಭ್ಯವಾಗಿ ಪ್ರದರ್ಶಿಸಲಾಗಿದೆ ಎಂಬುದಾಗಿ ಹೆಚ್ಚಿನ ಜನಪರ ನಾಯಕರು ಧ್ವನಿ ಎತ್ತಿದ್ದು, ಹಿಂದುತ್ವಕ್ಕೆ ಅಪಪ್ರಚಾರವಾಗಿದೆ ಎಂಬ ಕೂಗು ಕೇಳಿಬರುತ್ತಿದೆ.


ಮಧ್ಯಪ್ರದೇಶದ ಗೃಹಸಚಿವರಾದ ನರೋತ್ತಮ್ ಮಿಶ್ರಾ ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ ಅಂತೆಯೇ ಹಾಡು ಕೂಡ ಅಶ್ಲೀಲ ಹಾಗೂ ಕೊಳಕು ಮನಸ್ಥಿತಿಯ ಪ್ರತಿಬಿಂಬಿವಾಗಿದೆ ಎಂದು ಟೀಕಿಸಿದ್ದಾರೆ.
ಅಕ್ಷಯ್ ಹಾಡಿನಲ್ಲಿ ಕೂಡ ಕೇಸರಿ ಬಳಕೆ


ಇದೀಗ ಬೇಷರಂ ಹಾಡಿನ ಗದ್ದಲದ ನಡುವೆಯೇ ನೆಟಿಜನ್‌ಗಳು ಅಕ್ಷಯ್ ಕುಮಾರ್ ಅವರ ಹಳೆಯ ಹಾಡುಗಳಲ್ಲಿರುವ ಕೇಸರಿ ಬಣ್ಣದ ಸ್ಟಿಲ್‌ಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಇದು ಸರಿಯೇ ಎಂದು ಪ್ರಶ್ನಿಸಿ ಟ್ರೋಲ್ ಮಾಡುತ್ತಿದ್ದಾರೆ.


ಬಾಯ್ಕಾಟ್ ಅಭಿಯಾನ


ಬೇಷರಂ ಹಾಡಿನಲ್ಲಿ ದೀಪಿಕಾರ ಬಿಕಿನಿ ಬಣ್ಣವು ಕೇಸರಿ ಎಂಬುದನ್ನು ಕೆಲವು ಬಳಕೆದಾರರು ಹೈಲೈಟ್ ಮಾಡಿದಾಗ ಕೇಸರಿ ವಿವಾದ ಇಂಟರ್ನಟ್‌ನಲ್ಲಿ ಕಾವು ಪಡೆದುಕೊಂಡಿತು.


ನರೋತ್ತಮ್ ಮಿಶ್ರಾ ಹಾಡಿನಲ್ಲಿ ದೀಪಿಕಾ ಧರಿಸಿದರುವ ಉಡುಗೆ ಆಕ್ಷೇಪಾರ್ಹ ಎಂದು ಟೀಕಿಸಿದ್ದು ಮಾತ್ರವಲ್ಲದೆ ಚಿತ್ರ ನಿರ್ಮಾಪಕರಿಗೆ ಇದನ್ನು ಸರಿಪಡಿಸಿ ಇಲ್ಲದಿದ್ದರೆ ಚಿತ್ರದ ಬಿಡುಗಡೆಗೆ ತಡೆ ಒಡ್ಡಬೇಕಾಗುತ್ತದೆ ಎಂದು ಎಚ್ಚರಿಸಿದ ನಂತರ ಈ ಪ್ರಕರಣ ಇನ್ನಷ್ಟು ವಿವಾದಕ್ಕೊಳಗಾಯಿತು.
ಇದರ ಬಳಿಕ ಕೆಲವೊಂದು ಹಿಂದೂ ಸಂಘಟನೆಗಳು ಸಿನಿಮಾವನ್ನು ನಿಷೇಧಿಸುವಂತೆ ಒತ್ತಾಯಿಸಿವೆ ಹಾಗೂ ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ದೂರು ಕೂಡ ದಾಖಲಾಗಿದೆ.ಬಳಕೆದಾರರ ಕಾಮೆಂಟ್‌ಗಳೇನು?


ಅಕ್ಷಯ್ ಕುಮಾರ್ ಹಾಡಿನಲ್ಲಿ ಕೂಡ ಕೇಸರಿ ವಿವಾದ ಭುಗಿಲೆದ್ದಿದ್ದು, ಅಕ್ಷಯ್ ಅವರ ಹಳೆಯ ಹಿಂದಿ ಹಾಡುಗಳಲ್ಲಿ ನಟೀಮಣಿಯರು ಕೇಸರಿ ಬಣ್ಣದ ಉಡುಗೆ ಧರಿಸಿ ಅಸಭ್ಯವಾಗಿ ಪ್ರದರ್ಶನಗೊಂಡಿದ್ದರ ಬಗ್ಗೆ ಟೀಕೆಗಳನ್ನು ಆರಂಭಿಸಿದ್ದು ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಿ ವಿವಾದಕ್ಕೆ ಇನ್ನಷ್ಟು ಉಪ್ಪುಖಾರ ಸುರಿಯುತ್ತಿದ್ದಾರೆ.


ಬಳಕೆದಾರರೊಬ್ಬರು ಭೂಲ್ ಭುಲೈಯಾ ಹಾಡಿನ ತುಣುಕಿನೊಂದಿಗೆ ಬಂದಿದ್ದು #BesharamRang ಎಂಬ ಹ್ಯಾಶ್‌ಟ್ಯಾಗ್ ನೀಡಿ ಈ ಹಾಡಿನಲ್ಲಿ ಕೇಸರಿ ಬಣ್ಣವನ್ನು ಬಳಸಿರುವುದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಾರೆ.


ಇನ್ನು ಕೆಲವರು ಇದೇ ಹಾಡಿನ ಕೆಲವೊಂದು ದೃಶ್ಯಗಳನ್ನು ಪೋಸ್ಟ್‌ ಮಾಡಿದ್ದು ಇತರರು ಕತ್ರಿನಾ ಕೇಸರಿ ಸೀರೆ ಧರಿಸಿರುವ ಗಲೇ ಲಗ್ ಜಾ ಹಾಡಿನ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕತ್ರೀನಾ ಗ್ಲಾಮರಸ್ ಆಗಿ ಕಂಡುಬಂದಿದ್ದು ಹಾಡಿನಲ್ಲಿ ಅಕ್ಷಯ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.
ಕೇಸರಿ ಬಣ್ಣದ ಹರೇ ರಾಮ ಬರಹವಿರುವ ಟಾಪ್‌ಗಳನ್ನು ಮಾತ್ರ ಧರಿಸಿರುವ ಮಹಿಳೆಯರೊಂದಿಗೆ ಅಕ್ಷಯ್ ನೃತ್ಯಗೈಯ್ಯುತ್ತಿರುವ ಸ್ಟಿಲ್‌ಗಳನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದು ಇದು ಹಿಂದುತ್ವಕ್ಕೆ ಸರಿಯೆಂದು ಕಾಣುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.


ಹರೇ ರಾಮ ಪ್ರಿಂಟ್ ಇರುವ ಟಾಪ್‌ಗಳನ್ನು ಧರಿಸಿರುವ ಮಹಿಳೆಯರೊಂದಿಗೆ ಅಕ್ಷಯ್ ಕುಮಾರ್ ನೃತ್ಯಗೈಯ್ಯುತ್ತಿರುವಾಗ ಯಾವುದೇ ರಾಜಕೀಯ ಮುಖಂಡರು, ಟೀಕಾಕಾರರು ಯಾವುದೇ ಸದ್ದುಗದ್ದಲವನ್ನು ಮಾಡಿರಲಿಲ್ಲ ಆದರೆ ಪಠಾನ್ ಚಿತ್ರಕ್ಕೆ ಮಾತ್ರವೇ ಈ ನಿಷೇಧ ಏಕೆ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.


ಚಿತ್ರಗಳಲ್ಲಿ ಗುಟ್ಕಾ ಮಸಾಲೆ ಬೇಡ


ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಪಠಾನ್ ಚಿತ್ರದ ನಿರ್ಮಾಪಕರನ್ನು ವ್ಯಂಗ್ಯವಾಡಿದ್ದು ಚಿತ್ರದಲ್ಲಿ ಇನ್ನಷ್ಟು ಮಸಾಲೆಗಳನ್ನು ಸೇರಿಸುವ ಮೂಲಕ ನಿರ್ಮಾಪಕರು ಆರೋಗ್ಯಕ್ಕೆ ಹಾನಿಕಾರಕವಾದ ಗುಟ್ಕಾ ಮಸಾಲೆಯನ್ನು ಪರಿಚಯಿಸಿರಬಹುದು ಎಂದು ತಿಳಿಸಿದ್ದಾರೆ.


ಚಿತ್ರ ನಿರ್ಮಾಪಕರು ಚಿತ್ರದಲ್ಲಿ ಮಸಾಲೆ ದೃಶ್ಯಗಳನ್ನು ಬಳಸುವ ಮೂಲಕ ಸಮಾಜಕ್ಕೆ ಹಾನಿಕಾರಕವಾದ ಅಫೀಮನ್ನು ಪರಿಚಯಿಸುತ್ತಿದ್ದಾರೆ ಎಂದು ಟೀಖಿಸಿದ್ದಾರೆ. ಚಿತ್ರಗಳಿಗೆ ಗ್ಲಾಮರ್ ಸೇರಿಸಿ ಆದರೆ ಗುಟ್ಕಾ ಮಸಾಲೆಯನ್ನು ಸೇರಿಸಬೇಡಿ ಎಂದು ಖಾರವಾಗಿ ನುಡಿದಿದ್ದಾರೆ.

Published by:Divya D
First published: