Vijay Deverakonda: ಲೈಗರ್ ಬಾಯ್ಕಾಟ್ ಅಭಿಯಾನಕ್ಕೆ ‘ರೌಡಿ ಸ್ಟಾರ್’ ತಿರುಗೇಟು; ಟ್ವೀಟ್​ ಮೂಲಕ ವಿಜಯ್ ದೇವರಕೊಂಡ ಸವಾಲ್

ವಿಜಯ್ ದೇವರಕೊಂಡ ತಮ್ಮ ಸಿನಿಮಾ ಮೂಲಕ ಭರ್ಜರಿಯಾಗಿ ಸದ್ದು ಮಾಡಿದ ನಟರಾಗಿದ್ದಾರೆ. ಕಡಿಮೆ ಸಮಯದಲ್ಲಿ ಸಾಕಷ್ಟು ಫಾಲೋವರ್ಸ್ ಗಳಿಸಿದ್ದಾರೆ. ವಿಜಯ್ ಅಭಿನಯದ 'ಲೈಗರ್' ಸಿನಿಮಾ ಈ ವಾರ ಬಿಡುಗಡೆಯಾಗಲಿದೆ.

ವಿಜಯ ದೇವರಕೊಂಡ

ವಿಜಯ ದೇವರಕೊಂಡ

  • Share this:
ವಿಜಯ್ ದೇವರಕೊಂಡ (Vijay Deverakonda) ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ನ ಲೈಗರ್ (Liger) ಸಿನಿಮಾ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾ ಬಿಡುಗಡೆಗೂ ಮುನ್ನ ಈ ಚಿತ್ರವನ್ನು ಯಾರೂ ನೋಡದಂತೆ ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಈಗಾಗಲೇ ಟ್ವಿಟರ್ ನಲ್ಲಿ ಬಾಯ್ಕಾಟ್ ಲೈಗರ್ (Boycott Liger) ಟ್ರೆಂಡ್ ಕೂಡ ಆಗಿದೆ. ವಿಜಯ್ ದೇವರಕೊಂಡ ಟ್ವಿಟರ್‌ನಲ್ಲಿ #ಬಾಯ್‌ಕಾಟ್​​ಲೈಗರ್ ಟ್ರೆಂಡ್​ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಜಯ್ ಮತ್ತು ಅನನ್ಯಾ ಪಾಂಡೆ ಲೈಗರ್ ಚಿತ್ರದ ಭರ್ಜರಿ ಪ್ರಚಾರಕ್ಕೆ ಇಳಿದ್ದಾರೆ.

ಅಲ್ಲದೇ ವಿಜಯ್ ದೇವರಕೊಂಡ ಅವರು ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡುತ್ತಾ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಆಮೀರ್ ಪರವಾಗಿ ಮಾತನಾಡಿದ್ದರಂತೆ.

ಈ ವಿಷಯವಾಗಿಯೂ ಲೈಗರ್ ಸಿನಿಮಾ ಬಾಯ್ಕಾಟ್ ಸಂಕಟವನ್ನು ಅನುಭವಿಸಬೇಕಿದೆ. ಇದೀಗ ತನ್ನದೇ ಸಿನಿಮಾಗೆ ಬೈಯ್ಕಾಟ್​ ಬಿಸಿ ತಟ್ಟಿರುವುದಕ್ಕೆ ಪ್ರತಿಕ್ರಿಯಿಸಿ ವಿಜಯ್ ದೇವರಕೊಂಡ ಹೋರಾಟಕ್ಕೆ ನಾವು ಸಿದ್ಧ ಎಂದಿದ್ದಾರೆ.

ವಿಜಯ್ ದೇವರಕೊಂಡ ಟ್ವೀಟ್

ಅರ್ಜುನ್ ರೆಡ್ಡಿ ಅವರು ತೆಲುಗಿನಲ್ಲಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, ನಮ್ಮ ಧರ್ಮವನ್ನು ಸರಿಯಾಗಿ ಮಾಡಿದ್ದೇವೆ, ಇತರರು ಹಾಗೋ ಮಾತಿಗೆ ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ, ನಾವು ಮತ್ತೆ ಹೋರಾಡುತ್ತೇವೆ." ಅವರು ತಮ್ಮ ಟ್ವೀಟ್‌ಗೆ ಬೆಂಕಿಯ ಎಮೋಜಿಯನ್ನು ಕೂಡ ಸೇರಿಸಿದ್ದಾರೆ.

ವಿಜಯ್​ ಬೆಂಬಲಿಸಿ ಟ್ವೀಟ್

'ಲೈಗರ್' ನಿಷೇಧಕ್ಕೆ ಕರೆ ನೀಡುವ ನೆಟ್ಟಿಗರು ವಿವಿಧ ಕಾರಣಗಳನ್ನು ಉಲ್ಲೇಖಿಸುತ್ತಿದ್ದಾರೆ.  ಹ್ಯಾಶ್‌ಟ್ಯಾಗ್ ಹೆಚ್ಚು ಹೆಚ್ಚು ಟ್ವೀಟ್‌ಗಳನ್ನು ಪಡೆಯುತ್ತಿದ್ದಂತೆ, ನಟನ ಅಭಿಮಾನಿಗಳು , ಹಾಗೂ ನಾಯಕರು ಸಹ ಅವರಿಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. #BoycottLigerMovie #VijayDeverakonda ಒಬ್ಬ ಸ್ವಮೇಕ್ ಸ್ಟಾರ್ ಮತ್ತು ಹಾರ್ಡ್ ವರ್ಕರ್ ಈ ರೀತಿಯ ಟ್ರೆಂಡ್‌ಗಳನ್ನು ಮಾಡಬೇಡಿ , ಅವರು ದೊಡ್ಡದಾಗಿ ಬೆಳೆಯಲಿ ಇದನ್ನು ನಿಲ್ಲಿಸಿ," ಎಂದು ಅನೇಕರು ಅನೇಕರು ಬರೆದುಕೊಂಡಿದ್ದಾರೆ.ಸಿನಿಮಾ ಪ್ರಚಾರದಲ್ಲಿ ಲೈಗರ್​​ ಬ್ಯುಸಿ

ವಿಜಯ್ ದೇವರಕೊಂಡ ತಮ್ಮ ಸಿನಿಮಾ ಮೂಲಕ ಭರ್ಜರಿಯಾಗಿ ಸದ್ದು ಮಾಡಿದ ನಟರಾಗಿದ್ದಾರೆ. ಕಡಿಮೆ ಸಮಯದಲ್ಲಿ ಸಾಕಷ್ಟು ಫಾಲೋವರ್ಸ್ ಗಳಿಸಿದ್ದಾರೆ. ವಿಜಯ್ ಅಭಿನಯದ 'ಲೈಗರ್' ಸಿನಿಮಾ ಈ ವಾರ ಬಿಡುಗಡೆಯಾಗಲಿದೆ. ಹೀಗಾಗಿ ಲೈಗರ್ ಸಿನಿಮಾ ತಂಡ ಸರಣಿ ಪ್ರಚಾರದಲ್ಲಿ ಬ್ಯುಸಿಯಾಗಿದೆ.Published by:Pavana HS
First published: