Chris Noth: ಬೇಡ..ಬೇಡ.. ಅಂದ್ರೂ ಕಿಸ್​ ಮಾಡಿ ಎದೆಗೆ ಕೈ ಹಾಕಿದ್ರು: ನಟನ ವಿರುದ್ಧ ಸಿಂಗರ್​ ಗಂಭೀರ ಆರೋಪ!

ಕ್ರಿಸ್​ ನೋತ್​ ಸಿಂಗರ್ ​ಅನ್ನು ಬಲವಂತವಾಗಿ ಎಳೆದು ಕಿಸ್(Kiss)​ ಮಾಡಿ ಎದೆಗೆ ಕೈ ಹಾಕಿದ್ದಾರೆ ಎಂದು ಲಿಸಾ ಗಂಭೀರ ಆರೋಪ ಮಾಡಿದ್ದಾರೆ.  ಬಳಿಎರಡು ಕೈಗಳಿಂದ ನನ್ನನ್ನು ಎಳೆದು ತಬ್ಬಿಕೊಂಡರು ಎಂದಿದ್ದಾರೆ. ಈ ವಿಚಾರ ಇದೀಗ ಹಾಲಿವುಡ್​ ಅಂಗಳದಲ್ಲಿ  ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಒಬ್ಬ ನಟನಿಂದ ಎಷ್ಟೆಲ್ಲಾ  ಮಹಿಳೆಯರಿಗೆ ತೊಂದರೆಯಾಗಿದೆ ಎಂಬುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಕ್ರಿಸ್​ ನಾತ್​, ಗಾಯಕಿ ಲಿಸಾ

ಕ್ರಿಸ್​ ನಾತ್​, ಗಾಯಕಿ ಲಿಸಾ

  • Share this:


ಹಾಲಿವುಡ್(Hollywood)​ ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳ(Sexual Harrasment) ಪ್ರಕರಣಗಳು ಹೆಚ್ಚು. ಇಲ್ಲಿಂದಲೇ ಮಿಟೂ ಅಭಿಯಾನವೂ ಶುರುವಾಗಿತ್ತು. ಪ್ರತಿದಿನ ಹೆಸರಾಂತ ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿತ್ತು. ಅದು ಈಗ ಮುಂದುವರೆದಿದ. ಒಂದೇ ನಟನ ವಿರುದ್ಧ ಹಲವಾರು ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿದೆ.  ಗಾಯಕಿ ಲಿಸಾ ಜೆಂಟೈಲ್(Lisa Gentile)ಅವರು ಅಮೆರಿಕನ್ ನಟ ಕ್ರಿಸ್ ನಾತ್(American Actor  Chris Noth)ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಇದೀಗ ಖ್ಯಾತ ನಟನ ವಿರುದ್ಧ ನಾಲ್ಕನೇ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತನ್ನ ವಕೀಲೆ ಗ್ಲೋರಿಯಾ ಅಲೆರ್ಡ್ ಜೊತೆ ಮಾತನಾಡಿದ ನಟಿ, ಸೆಕ್ಸ್ & ದಿ ಸಿಟಿ(Sex And The City) ನಟ 2002ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಇದೇ ನಟನ ವಿರುದ್ಧ ಈ ಹಿಂದೆ ಮೂರು ಮಹಿಳೆಯರು ಲೈಂಗಿಕ ಆರೋಪ ಕೇಳಿಬಂದಿತ್ತು. ಇದೀಗ ಖ್ಯಾತ ಸಿಂಗರ್​​ ನಟನ ವಿರುದ್ಧ ಆರೋಪ ಮಾಡಿದ್ದಾರೆ.  ಕ್ರಿಸ್​ ನೋತ್​ ಸಿಂಗರ್ ​ಅನ್ನು ಬಲವಂತವಾಗಿ ಎಳೆದು ಕಿಸ್(Kiss)​ ಮಾಡಿ ಎದೆಗೆ ಕೈ ಹಾಕಿದ್ದಾರೆ ಎಂದು ಲಿಸಾ ಗಂಭೀರ ಆರೋಪ ಮಾಡಿದ್ದಾರೆ.  ಬಳಿಎರಡು ಕೈಗಳಿಂದ ನನ್ನನ್ನು ಎಳೆದು ತಬ್ಬಿಕೊಂಡರು ಎಂದಿದ್ದಾರೆ. ಈ ವಿಚಾರ ಇದೀಗ ಹಾಲಿವುಡ್​ ಅಂಗಳದಲ್ಲಿ  ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಒಬ್ಬ ನಟನಿಂದ ಎಷ್ಟೆಲ್ಲಾ  ಮಹಿಳೆಯರಿಗೆ ತೊಂದರೆಯಾಗಿದೆ ಎಂಬುದರ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. 

ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರಂತೆ ನಟ

ಇನ್ನೂ ನಟ ದುರ್ವತನೆ ತೋರುವಾಗ ನಾನು ಬೇಡ ಎಂದು ಹೇಳಿದರೂ, ಆತ ಬಿಡಲಿಲ್ಲ. ನಾನು ದೂರ ತಳ್ಳಿದರು ಆತ ಮತ್ತೆ ಮರಳಿ ಮರಳಿ ನನ್ನ ಎದೆಯನ್ನು ಮುಟ್ಟಲ್ಲು ಬರುತ್ತಿದ್ದರು ಎಂದು ಸಿಂಗರ್​ ತಿಳಿಸಿದ್ದಾರೆ.  ಘಟನೆಯ ನಂತರ ನೊತ್ ತನಗೆ ಕರೆ ಮಾಡಿ, ತಮ್ಮ ಮುಖಾಮುಖಿಯ ಬಗ್ಗೆ ಯಾರಿಗಾದರೂ ಹೇಳಿದರೆ ನಾನು ನಿನ್ನ ವೃತ್ತಿಜೀವನವನ್ನು ಹಾಳುಮಾಡುತ್ತೇನೆ, ಮತ್ತೆ ನೀನು ಎಂದಿಗೂ ಹಾಡುವುದಿಲ್ಲ ಎಂದು ಬೆದರಿಸಿದ್ದಾಗಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, ಜೆಂಟೈಲ್ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯನ್ನು ಮಾಡುವ ಭರವಸೆಯಲ್ಲಿ ತನಗಾದ ಅನುಭವದೊಂದಿಗೆ ಮುಂದೆ ಬಂದಿರುವುದಾಗಿ ಹೇಳಿದ್ದಾರೆ.

ಇದನ್ನು ಓದಿ : Spider Man ನಟನಿಗೆ ಸೆಕ್ಸ್​ ಚಟವಂತೆ: ಆ್ಯಕ್ಟಿಂಗ್​ ಹೇಳಿಕೊಡುವ ನೆಪದಲ್ಲಿ ಸ್ಟೂಡೆಂಟ್ಸ್​ ಜೊತೆ ಸಂಭೋಗ!

ಲೈಂಗಿಕ ಭಕ್ಷಕ ಎಂದಿದ್ದ ಲಿಸ್ಟರ್​-ಜೋನ್ಸ್​!

ಈ ಹಿಂದೆ ನಟಿ ಜೊಯಿ ಲಿಸ್ಟರ್-ಜೋನ್ಸ್ ಅವರು ನೊತ್ ಅನ್ನು ಲೈಂಗಿಕ ಭಕ್ಷಕ ಎಂದು ಕರೆದರು. ಅವರು ಸೆಟ್‌ನಲ್ಲಿ ಕುಡಿದಿದ್ದರು. ಅವರು 20ರ ಹರೆಯದಲ್ಲಿದ್ದಾಗ ತನಗೆ ಮತ್ತು ಮಹಿಳಾ ಸಹೋದ್ಯೋಗಿಯೊಂದಿಗೆ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿದ್ದರು. ಆತ ಒಬ್ಬ ಸೆಕ್ಸ್​ ಅಡಿಕ್ಟ್​. ಚಿತ್ರೀಕರಣದ ವೇಳೆ ನಮ್ಮ ಪ್ರೈವೇಟ್​ ಪಾರ್ಟ್​ಗಳನ್ನೇ ದಿಟ್ಟಿಸಿ ನೋಡುತ್ತಿದ್ದ. ಕಟ್​ ಹೇಳಿದ ಕೂಡಲೇ ನಮ್ಮ ಮೈ ಮುಟ್ಟಿ ಮಾತನಾಡಿಸುತ್ತಿದ್ದ ಎಂದು ಅವರು ಆರೋಪಿಸಿದ್ದರು. ಆದರೆ,ಕ್ರಿಸ್‌ನ ವಕ್ತಾರರು ಇತ್ತೀಚಿನ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ಇದನ್ನು ಓದಿ: ಕಟ್​ ಹೇಳಿದ್ರೂ ಬಿಡದೇ ಲಿಪ್​ಲಾಕ್ ಮಾಡಿದ ನರ್ಗೀಸ್​: ಕಿಸ್ಸಿಂಗ್​ ವಿಡಿಯೋ ಸಿಕ್ಕಾಪಟ್ಟೆ ವೈರಲ್​!

Spider Man ನಟನಿಗೆ ಸೆಕ್ಸ್​ ಚಟವಂತೆ!

ಹಾಲಿವುಡ್ ಜನಪ್ರಿಯ ನಟ ಜೇಮ್ಸ್ ಫ್ರಾಂಕೋ ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ತಮ್ಮ ನಟನಾ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ತಾವು ಲೈಂಗಿಕ ಸಂಪರ್ಕ ನಡೆಸಿದ್ದು ನಿಜ ಎಂದಿದ್ದಾರೆ.ಮಗೆ ಲೈಂಗಿಕತೆ ಚಟವಾಗಿದ್ದು ಈ ಚಟದಿಂದ ಹೊರಗೆ ಬರುವ ಪ್ರಯತ್ನದಲ್ಲಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಜೇಮ್ಸ್ ಫ್ರಾಂಕೋ.ಕೆಲ ವರ್ಷಗಳ ಹಿಂದೆ ಜೇಮ್ಸ್ ಫ್ರಾಂಕೊ ನಟನಾ ಶಾಲೆ(Acting School)ಯೊಂದನ್ನು ನಡೆಸುತ್ತಿದ್ದರು. ತಮ್ಮದೇ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅವರು ಸತತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು. ಈ ಬಗ್ಗೆ 2019 ರಲ್ಲಿ ದೂರು ದಾಖಲಾಗಿತ್ತು. ಆದರೆ, ಇವರ ಮೇಲಿರುವ ಆರೋಪಗಳೆಲ್ಲ ನಿಜ ಎಂದು ಅವರೇ ಒಪ್ಪಿಕೊಂಡಿದ್ದಾರೆ.

Published by:Vasudeva M
First published: